ಆಂಗ್ಲರ ನೆಲದಲ್ಲಿ ಐತಿಹಾಸಿಕ ಸಾಧನೆ ಮಾಡಿದ ಬುಮ್ರಾ; ಟೆಸ್ಟ್​ನಲ್ಲಿ 100 ವಿಕೆಟ್ ಪೂರೈಸಿದ ಯಾರ್ಕರ್ ಕಿಂಗ್!

IND vs ENG: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್​ನಲ್ಲಿ ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅದ್ಭುತ ಸಾಧನೆ ಮಾಡಿದ್ದಾರೆ. ಈ ಟೆಸ್ಟ್‌ನಲ್ಲಿ ಅವರು ತಮ್ಮ 100 ವಿಕೆಟ್‌ಗಳನ್ನು ಪೂರೈಸಿದರು.

ಆಂಗ್ಲರ ನೆಲದಲ್ಲಿ ಐತಿಹಾಸಿಕ ಸಾಧನೆ ಮಾಡಿದ ಬುಮ್ರಾ; ಟೆಸ್ಟ್​ನಲ್ಲಿ 100 ವಿಕೆಟ್ ಪೂರೈಸಿದ ಯಾರ್ಕರ್ ಕಿಂಗ್!
Jasprit Bumrah

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್​ನಲ್ಲಿ ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅದ್ಭುತ ಸಾಧನೆ ಮಾಡಿದ್ದಾರೆ. ಈ ಟೆಸ್ಟ್‌ನಲ್ಲಿ ಅವರು ತಮ್ಮ 100 ವಿಕೆಟ್‌ಗಳನ್ನು ಪೂರೈಸಿದರು. ಓಲಿ ಪೋಪ್, ಬುಮ್ರಾಗೆ 100 ನೇ ಟೆಸ್ಟ್ ಬಲಿಯಾದರು. ಜಸ್‌ಪ್ರೀತ್ ಬುಮ್ರಾ 24 ನೇ ಟೆಸ್ಟ್‌ನಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ಬುಮ್ರಾ, ಕಡಿಮೆ ಟೆಸ್ಟ್​ನಲ್ಲಿ 100 ಟೆಸ್ಟ್ ವಿಕೆಟ್ ಪಡೆದ ಭಾರತದ ಮೊದಲ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೊತೆಗೆ 25 ಟೆಸ್ಟ್‌ಗಳಲ್ಲಿ 100 ವಿಕೆಟ್ ಪಡೆದ ಕಪಿಲ್ ದೇವ್ ಅವರನ್ನು ಹಿಂದಿಕ್ಕಿದ್ದಾರೆ. ಅಂದಹಾಗೆ, ಒಟ್ಟಾರೆ ಅತಿ ವೇಗದ 100 ಟೆಸ್ಟ್‌ ವಿಕೆಟ್​ಗಳನ್ನು ತೆಗೆದುಕೊಂಡ ಎಂಟನೇ ಭಾರತೀಯ ಅವರು. ರವಿಚಂದ್ರನ್ ಅಶ್ವಿನ್ ಮುಂಚೂಣಿಯಲ್ಲಿದ್ದು, 18 ಟೆಸ್ಟ್​ಗಳಲ್ಲಿ 100 ವಿಕೆಟ್ ಪಡೆದಿದ್ದಾರೆ.

ಭಾರತದ ಪರ ವೇಗವಾಗಿ 100 ವಿಕೆಟ್ ಪಡೆದ ಬೌಲರ್‌ಗಳಲ್ಲಿ ಸ್ಪಿನ್ನರ್‌ಗಳು ಅಗ್ರ ಏಳು ಸ್ಥಾನದಲ್ಲಿದ್ದಾರೆ. ಅಶ್ವಿನ್ ನಂತರ ಎರಪಳ್ಳಿ ಪ್ರಸನ್ನ (20 ಟೆಸ್ಟ್), ಅನಿಲ್ ಕುಂಬ್ಳೆ (21 ಟೆಸ್ಟ್), ಭಗವತ್ ಚಂದ್ರಶೇಖರ್ (22 ಟೆಸ್ಟ್), ಸುಭಾಷ್ ಗುಪ್ತೆ (22 ಟೆಸ್ಟ್), ಪ್ರಜ್ಞಾನ್ ಓಜಾ (22 ಟೆಸ್ಟ್), ವಿನೂ ಮಂಕಡ್ (23 ಟೆಸ್ಟ್) ಮತ್ತು ರವೀಂದ್ರ ಜಡೇಜಾ (24) ಇದ್ದಾರೆ. ಜಸ್‌ಪ್ರೀತ್ ಬುಮ್ರಾ 2018 ರಲ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರು. ಅಂದಿನಿಂದ ಅವರು ಅದ್ಭುತ ಪ್ರಗತಿ ಸಾಧಿಸಿದ್ದಾರೆ. ಈಗ ಅವರು ಟೆಸ್ಟ್​ನಲ್ಲಿ ಭಾರತದ ನಂಬರ್ ಒನ್ ವೇಗದ ಬೌಲರ್.

100 ವಿಕೆಟ್​ಗಳಲ್ಲಿ 96 ವಿಕೆಟ್ ವಿದೇಶದಲ್ಲಿ ಬಂದಿವೆ
ತಮಾಷೆಯೆಂದರೆ ಬುಮ್ರಾ ಇಂಗ್ಲೆಂಡ್, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ನ್ಯೂಜಿಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ 100 ರಲ್ಲಿ 96 ಟೆಸ್ಟ್ ವಿಕೆಟ್ ಪಡೆದಿದ್ದಾರೆ. ಇದರ ಅಡಿಯಲ್ಲಿ, ಆಸ್ಟ್ರೇಲಿಯಾದಲ್ಲಿ 32, ಇಂಗ್ಲೆಂಡ್‌ನಲ್ಲಿ 32, ದಕ್ಷಿಣ ಆಫ್ರಿಕಾದಲ್ಲಿ 14, ವೆಸ್ಟ್ ಇಂಡೀಸ್‌ನಲ್ಲಿ 13 ಮತ್ತು ನ್ಯೂಜಿಲೆಂಡ್‌ನಲ್ಲಿ ಆರು ವಿಕೆಟ್ಗಳನ್ನು ಸೇರಿಸಲಾಗಿದೆ. ಭಾರತದಲ್ಲಿ ಆಡಿದ ಟೆಸ್ಟ್ ಪಂದ್ಯಗಳಲ್ಲಿ ಅವರು ನಾಲ್ಕು ವಿಕೆಟ್ ಪಡೆದಿದ್ದಾರೆ. 27 ವರ್ಷದ ಬುಮ್ರಾ 2018 ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರು. ನಂತರ ಅವರು ತಮ್ಮ ಮೊದಲ ವಿಕೆಟ್ ಅನ್ನು ಬೋಲ್ಡ್ ಮೂಲಕ ಪಡೆದರು. ಎಬಿ ಡಿವಿಲಿಯರ್ಸ್ ಅವರನ್ನು ಬೌಲ್ ಮಾಡಿದರು. ಈಗ 100 ನೇ ವಿಕೆಟ್ ಕೂಡ ಬೌಲ್ ಮೂಲಕ ಬಂದಿದೆ. ಈ ಬಾರಿ ಓಲಿ ಪೋಪ್ ಬೌಲ್ಡ್ ಆದರು.

Click on your DTH Provider to Add TV9 Kannada