Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೀಯಾಳಿಸಿದ ಬಟ್ಲರ್​ಗೆ ಬ್ಯಾಟ್ ಮೂಲಕ ಉತ್ತರ ನೀಡಿದ ಭಾರತೀಯರು

India vs England, 5th T20I: ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 5ನೇ ಪಂದ್ಯದಲ್ಲಿ ಟೀಮ್ ಇಂಡಿಯಾ 150 ರನ್​ಗಳ ಅಮೋಘ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 247 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಕೇವಲ 97 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡವು 5 ಪಂದ್ಯಗಳ ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿದೆ.

ಹೀಯಾಳಿಸಿದ ಬಟ್ಲರ್​ಗೆ ಬ್ಯಾಟ್ ಮೂಲಕ ಉತ್ತರ ನೀಡಿದ ಭಾರತೀಯರು
Jos Buttler - Team India
Follow us
ಝಾಹಿರ್ ಯೂಸುಫ್
|

Updated on: Feb 03, 2025 | 8:36 AM

ಭಾರತ ಮತ್ತು ಇಂಗ್ಲೆಂಡ್ ನಡುವಣ 5ನೇ ಟಿ20 ಪಂದ್ಯ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಉಭಯ ತಂಡಗಳ ನಾಯಕರುಗಳು ಟಾಸ್​ಗಾಗಿ ಆಗಮಿಸಿದ್ದರು. ರವಿ ಶಾಸ್ತ್ರಿ ನೇತೃತ್ವದಲ್ಲಿ ನಡೆದ ಟಾಸ್ ಪ್ರಕ್ರಿಯೆಯಲ್ಲಿ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಟಾಸ್ ಗೆದ್ದರು. ಟಾಸ್ ಜಯಿಸಿದ ಜೋಸ್ ಬಟ್ಲರ್​ಗೆ ಕಾಮೆಂಟೇಟರ್ ರವಿ ಶಾಸ್ತ್ರಿ ನಿಮ್ಮ ನಿರ್ಧಾರವೇನು? ಎಂದು ಕೇಳಿದ್ದಾರೆ. ಇದಕ್ಕೆ ಬಟ್ಲರ್ ವಿಕೆಟ್ ಚೆನ್ನಾಗಿದೆ, ಹೀಗಾಗಿ ನಾವು ಚೇಸಿಂಗ್ ಮಾಡಲು ಬಯಸುತ್ತೇವೆ ಎಂದಿದ್ದಾರೆ. ಅಲ್ಲದೆ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಸಾಕಿಬ್ ಮಹಮೂದ್ ಬದಲಿಗೆ ಮಾರ್ಕ್​ ವುಡ್ ಆಡುತ್ತಿದ್ದಾರೆ ಎಂದು ತಿಳಿಸಿದರು.

ಆದರೆ ಅಷ್ಟಕ್ಕೆ ನಿಲ್ಲಿಸದ ಜೋಸ್ ಬಟ್ಲರ್, ಇವತ್ತು ನಾಲ್ವರು ಇಂಪ್ಯಾಕ್ಟ್ ಸಬ್​ಗಳಿದ್ದು, ರೆಹಾನ್ ಅಹ್ಮದ್, ಸಾಕಿಬ್ ಮಹಮೂದ್, ಜೇಮಿ ಸ್ಮಿತ್ ಹಾಗೂ ಗಸ್ ಅಟ್ಕಿನ್ಸನ್ ಅವರನ್ನು ​ ಇಂಪ್ಯಾಕ್ಟ್ ಸಬ್‌ಸ್ಟಿಟ್ಯೂಟ್​ ಆಟಗಾರರಾಗಿ ಆಯ್ಕೆ ಮಾಡಿರುವುದಾಗಿ ಬಟ್ಲರ್ ಹೇಳಿದ್ದಾರೆ.

ಇಲ್ಲಿ ಇಂಪ್ಯಾಕ್ಟ್ ಸಬ್‌ಸ್ಟಿಟ್ಯೂಟ್ ಆಯ್ಕೆಯಿಲ್ಲದಿದ್ದರೂ, ಭಾರತ ತಂಡವು 4ನೇ ಪಂದ್ಯದಲ್ಲಿ ಶಿವಂ ದುಬೆ ಅವರ ಬದಲಿಗೆ ಹರ್ಷಿತ್ ರಾಣಾ ಅವರನ್ನು ಕಣಕ್ಕಿಳಿಸಿರುವುದನ್ನು ಹೀಯಾಳಿಸಿ ಜೋಸ್ ಬಟ್ಲರ್ ಹೀಗೆ ಹೇಳಿದ್ದರು.

ಏಕೆಂದರೆ ‘ಕನ್ಕಶನ್ ಸಬ್‌’ ನಿಯಮದ ಪ್ರಕಾರ ಲೈಕ್ ಟು ಲೈಕ್ ಪ್ಲೇಯರ್ ಕಣಕ್ಕಿಳಿಯಬೇಕು. ಆದರೆ ಟೀಮ್ ಇಂಡಿಯಾ 4ನೇ ಟಿ20 ಪಂದ್ಯದಲ್ಲಿ ಆಲ್​ರೌಂಡರ್ ಶಿವಂ ದುಬೆ ಬದಲಿಗೆ ಪರಿಪೂರ್ಣ ಬೌಲರ್ ಹರ್ಷಿತ್ ರಾಣಾ ಅವರನ್ನು ಕಣಕ್ಕಿಳಿಸಿದ್ದರು.

ಇದು ಲೈಕ್ ಟು ಲೈಕ್ ರಿಪ್ಲೇಸ್​ಮೆಂಟ್ ಅಲ್ಲ ಎಂದು ಜೋಸ್ ಬಟ್ಲರ್ 4ನೇ ಪಂದ್ಯದ ಬಳಿಕ ಹೇಳಿದ್ದರು. ಅಲ್ಲದೆ ಟೀಮ್ ಇಂಡಿಯಾ ನಡೆಗೆ ಅಸಮಾಧಾನವನ್ನು ಕೂಡ ವ್ಯಕ್ತಪಡಿಸಿದ್ದರು.

ಇದೀಗ 4ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ‘ಕನ್ಕಶನ್ ಸಬ್‌ಸ್ಟಿಟ್ಯೂಟ್’ ಆಟಗಾರರನ್ನು ಕಣಕ್ಕಿಳಿಸಿಲ್ಲ, ಬದಲಾಗಿ ಬದಲಾಗಿ ಇಂಪ್ಯಾಕ್ಟ್ ಸಬ್‌ಸ್ಟಿಟ್ಯೂಟ್ ಆಯ್ಕೆಯ ಮೂಲಕ ಆಟಗಾರನ ಕಣಕ್ಕಿಳಿಸಿದ್ದಾರೆ ಎಂದು ಜೋಸ್ ಬಟ್ಲರ್ 5ನೇ ಪಂದ್ಯದ ಟಾಸ್ ವೇಳೆ ಪರೋಕ್ಷವಾಗಿ ಟ್ರೋಲ್ ಮಾಡಿದ್ದಾರೆ.

ಬ್ಯಾಟ್ ಮೂಲಕ ಉತ್ತರ ನೀಡಿದ ಟೀಮ್ ಇಂಡಿಯಾ:

ಜೋಸ್ ಬಟ್ಲರ್ ಅವರ ಈ ಟ್ರೋಲ್​ ಬೆನ್ನಲ್ಲೇ ಇನಿಂಗ್ಸ್ ಆರಂಭಿಸಿದ ಭಾರತ ತಂಡವು ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದು ವಿಶೇಷ. ಮೊದಲ ಓವರ್​ನಿಂದಲೇ ಆರ್ಭಟಿಸಿ ಟೀಮ್ ಇಂಡಿಯಾ ಪವರ್​ಪ್ಲೇನಲ್ಲೇ 95 ರನ್​ ಚಚ್ಚಿದ್ದರು.

ಅಷ್ಟೇ ಅಲ್ಲದೆ ಅಭಿಷೇಕ್ ಶರ್ಮಾ ಕೇವಲ 17 ಎಸೆತಗಳಲ್ಲಿ ಅರ್ಧಶತಕ ಪೂರೈಸಿ, 37 ಎಸೆತಗಳಲ್ಲಿ ಸೆಂಚುರಿ ಸಿಡಿಸಿದರು. ಅಭಿಷೇಕ್ (135) ಅವರ ಈ ಸ್ಪೋಟಕ ಸೆಂಚುರಿಯೊಂದಿಗೆ ಟೀಮ್ ಇಂಡಿಯಾ 20 ಓವರ್​ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 247 ರನ್​ಗಳು. ಇದು ಇಂಗ್ಲೆಂಡ್ ವಿರುದ್ಧದ ಟೀಮ್ ಇಂಡಿಯಾದ ಗರಿಷ್ಠ ಸ್ಕೋರ್ ಎಂಬುದು ವಿಶೇಷ.

ಈ 247 ರನ್​ಗಳೊಂದಿಗೆ ಟೀಮ್ ಇಂಡಿಯಾ ಬ್ಯಾಟರ್​​ಗಳು ಜೋಸ್ ಬಟ್ಲರ್​ ಅವರ ಟ್ರೋಲ್​ಗೆ ಲೆಕ್ಕ ಚುಕ್ತಾ ಮಾಡಿದ್ದರು. ಇದಾದ ಬಳಿಕ ಭಾರತೀಯ ಬೌಲರ್​ಗಳು ಆಂಗ್ಲರನ್ನು 97 ರನ್​ಗಳಿಗೆ ಆಲೌಟ್ ಮಾಡಿದ್ದಾರೆ. ಈ ಮೂಲಕ ಇಂಗ್ಲೆಂಡ್ ತಂಡಕ್ಕೆ 150 ರನ್​ಗಳ ಹೀನಾಯ ಸೋಲುಣಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಪಂದ್ಯದ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾವನ್ನು ಟ್ರೋಲ್ ಮಾಡಿ ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡವು ಅತ್ಯಂತ ಹೀನಾಯ ಸೋಲುಂಡಿದೆ.

ಭಾರತ ಪ್ಲೇಯಿಂಗ್ 11: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್) , ಅಭಿಷೇಕ್ ಶರ್ಮಾ , ತಿಲಕ್ ವರ್ಮಾ , ಸೂರ್ಯಕುಮಾರ್ ಯಾದವ್ (ನಾಯಕ) , ರಿಂಕು ಸಿಂಗ್ , ಶಿವಂ ದುಬೆ , ಹಾರ್ದಿಕ್ ಪಾಂಡ್ಯ , ಅಕ್ಷರ್ ಪಟೇಲ್ , ರವಿ ಬಿಷ್ಣೋಯ್ , ಮೊಹಮ್ಮದ್ ಶಮಿ , ವರುಣ್ ಚಕ್ರವರ್ತಿ.

ಇದನ್ನೂ ಓದಿ: ಅಭಿಷೇಕ್ ಶರ್ಮಾ ಆರ್ಭಟಕ್ಕೆ ವಿರಾಟ್ ಕೊಹ್ಲಿ ದಾಖಲೆ ಧೂಳೀಪಟ

ಇಂಗ್ಲೆಂಡ್ ಪ್ಲೇಯಿಂಗ್ 11: ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್) , ಬೆನ್ ಡಕೆಟ್ , ಜೋಸ್ ಬಟ್ಲರ್ (ನಾಯಕ) , ಹ್ಯಾರಿ ಬ್ರೂಕ್ , ಲಿಯಾಮ್ ಲಿವಿಂಗ್​ಸ್ಟೋನ್ , ಜೇಕಬ್ ಬೆಥೆಲ್ , ಬ್ರೈಡನ್ ಕಾರ್ಸ್​ , ಜೇಮೀ ಓವರ್ಟನ್ , ಜೋಫ್ರಾ ಆರ್ಚರ್ , ಆದಿಲ್ ರಶೀದ್ , ಮಾರ್ಕ್ ವುಡ್.