IND vs ENG: ‘ಸೋಮಾರಿ ರೋಹಿತ್’; ಹಿಟ್​ಮ್ಯಾನ್​ ಕಾಲೆಳೆದ ಮಾಜಿ ಆಂಗ್ಲ ನಾಯಕ

IND vs ENG: ಬಶೀರ್ ಬೌಲ್ ಮಾಡಿದ ಸಾಧಾರಣ ಎಸೆತದಲ್ಲಿ ಲೆಗ್ ಸ್ಲಿಪ್‌ನಲ್ಲಿ ನಿಂತಿದ್ದ ಆಲಿ ಪೋಪ್‌ಗೆ ಕ್ಯಾಚ್ ನೀಡುವ ಮೂಲಕ ರೋಹಿತ್ ತಮ್ಮ ಇನ್ನಿಂಗ್ಸ್​ಗೆ ಕೊನೆ ಹಾಡಿದರು. ಇದೀಗ ರೋಹಿತ್ ಅವರ ಕಳಪೆ ಫಾರ್ಮ್​ಗೆ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ. ಅದರಲ್ಲೂ ಟೀಂ ಇಂಡಿಯಾ ನಾಯಕನನ್ನು ಮಾತಿನಲ್ಲೇ ಕುಟುಕಿರುವ ಇಂಗ್ಲೆಂಡ್‌ನ ಮಾಜಿ ನಾಯಕ ಕೆವಿನ್ ಪೀಟರ್ಸನ್, ರೋಹಿತ್ ಅವರನ್ನು ಸೋಮಾರಿ ಎಂದು ಜರಿದಿದ್ದಾರೆ.

IND vs ENG: ‘ಸೋಮಾರಿ ರೋಹಿತ್’; ಹಿಟ್​ಮ್ಯಾನ್​ ಕಾಲೆಳೆದ ಮಾಜಿ ಆಂಗ್ಲ ನಾಯಕ
ರೋಹಿತ್ ಶರ್ಮಾ
Follow us
ಪೃಥ್ವಿಶಂಕರ
|

Updated on: Feb 02, 2024 | 7:03 PM

ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮುಕ್ತಾಯಗೊಂಡಿದೆ. ದಿನದಾಟದಂತ್ಯಕ್ಕೆ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ 6 ವಿಕೆಟ್ ಕಳೆದುಕೊಂಡು 336 ರನ್ ಕಲೆಹಾಕಿದೆ. ತಂಡದ ಪರ ಅಜೇಯ 179 ರನ್ ಕಲೆಹಾಕಿರುವ ಜೈಸ್ವಾಲ್​ರನ್ನು (Yashasvi Jaiswal) ಬಿಟ್ಟರೆ ಉಳಿದ ಆಟಗಾರರದ್ದು ಹೊದ ಪುಟ್ಟ ಬಂದ ಪುಟ್ಟ ಎಂಬಂತ ಪ್ರದರ್ಶನವಾಗಿತ್ತು. ಅದರಲ್ಲೂ ತಂಡದ ನಾಯಕನಾಗಿ ರನ್​ಗಾಗಿ ಪರದಾಡುತ್ತಿರುವ ರೋಹಿತ್ ಶರ್ಮಾ (Rohit Sharma) ಅವರ ಬ್ಯಾಟಿಂಗ್​ ಸಹ ಇದಕ್ಕೆ ಹೊರತಾಗಿರಲಿಲ್ಲ. ಟೆಸ್ಟ್​ನಲ್ಲಿ ರನ್ ಬರ ಎದುರಿಸುತ್ತಿರುವ ನಾಯಕ ರೋಹಿತ್ ಶರ್ಮಾ ಈ ಬಾರಿಯೂ ಅಲ್ಪ ಇನ್ನಿಂಗ್ಸ್​ಗೆ ಸುಸ್ತಾಗಿದ್ದಾರೆ. ಆರಂಭಿಕರಾಗಿ ಕಣಕ್ಕಿಳಿದಿದ್ದ ರೋಹಿತ್ ಕೇವಲ 14 ರನ್ ಕಲೆಹಾಕಿ ತಮ್ಮ ವೃತ್ತಿಜೀವನದ ಮೊದಲ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಯುವ ಸ್ಪಿನ್ನರ್​ ಶೋಯೆಬ್ ಬಶೀರ್​ಗೆ ಬಲಿಯಾದರು.

ಬಶೀರ್ ಬೌಲ್ ಮಾಡಿದ ಸಾಧಾರಣ ಎಸೆತದಲ್ಲಿ ಲೆಗ್ ಸ್ಲಿಪ್‌ನಲ್ಲಿ ನಿಂತಿದ್ದ ಆಲಿ ಪೋಪ್‌ಗೆ ಕ್ಯಾಚ್ ನೀಡುವ ಮೂಲಕ ರೋಹಿತ್ ತಮ್ಮ ಇನ್ನಿಂಗ್ಸ್​ಗೆ ಕೊನೆ ಹಾಡಿದರು. ಇದೀಗ ರೋಹಿತ್ ಅವರ ಕಳಪೆ ಫಾರ್ಮ್​ಗೆ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ. ಅದರಲ್ಲೂ ಟೀಂ ಇಂಡಿಯಾ ನಾಯಕನನ್ನು ಮಾತಿನಲ್ಲೇ ಕುಟುಕಿರುವ ಇಂಗ್ಲೆಂಡ್‌ನ ಮಾಜಿ ನಾಯಕ ಕೆವಿನ್ ಪೀಟರ್ಸನ್, ರೋಹಿತ್ ಅವರನ್ನು ಸೋಮಾರಿ ಎಂದು ಜರಿದಿದ್ದಾರೆ.

IND vs ENG: ಅಜೇಯ 179 ರನ್ ಸಿಡಿಸಿದ ಜೈಸ್ವಾಲ್; ಮೊದಲ ದಿನದಾಟಕ್ಕೆ ಭಾರತ 336/6

ಸುಲಭವಾಗಿ ವಿಕೆಟ್ ಒಪ್ಪಿಸಿದ ರೋಹಿತ್

ಮೊದಲ ಟೆಸ್ಟ್ ಪಂದ್ಯವನ್ನು ಭಾರತ ಸೋತಿರುವುದರಿಂದ ನಾಯಕ ರೋಹಿತ್ ಶರ್ಮಾ ಮೇಲೆ ಸಾಕಷ್ಟು ಜವಬ್ದಾರಿಗಳಿದ್ದವು. ಅದರಂತೆ ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಇಳಿದ ರೋಹಿತ್ ತಾಳ್ಮೆಯ ಆಟಕ್ಕೆ ಮುಂದಾದರು. ಹೀಗಾಗಿ ಔಟಾಗುವ ಮೊದಲು ಬರೋಬ್ಬರಿ 41 ಎಸೆತಗಳನ್ನು ಎದುರಿಸಿದ್ದ ರೋಹಿತ್, ಶೋಯೆಬ್ ಬಶೀರ್ ಬೌಲ್ ಮಾಡಿದ ಸಾಧಾರಣ ಎಸೆತದಲ್ಲಿ ವಿಕೆಟ್ ಕೈಚೆಲ್ಲಿದರು. ರೋಹಿತ್ ಔಟಾದ ಕುರಿತು ಮಾತನಾಡಿರುವ ಮಾಜಿ ಇಂಗ್ಲೆಂಡ್ ನಾಯಕ ಕೆವಿನ್ ಪೀಟರ್ಸನ್, “ರೋಹಿತ್ ಮೊದಲ ಇನ್ನಿಂಗ್ಸ್‌ನಲ್ಲಿ ಬಹಳ ಚಿಂತನಶೀಲವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ರೋಹಿತ್ ಔಟಾಗಲು ಕಾರಣವಾದ ಶಾಟ್‌ನಲ್ಲಿ ಯಾವುದೇ ತುರ್ತು ಇರಲಿಲ್ಲ. ಶೋಯೆಬ್ ಬಶೀರ್ ವಿರುದ್ಧ ರೋಹಿತ್ ಆಡಿದ ಶಾಟ್ ತುಂಬಾ ‘ಸೋಮಾರಿಯಾದ ಶಾಟ್’ ಆಗಿತ್ತು ಎಂದಿದ್ದಾರೆ.

ಬಶೀರ್​ಗೆ ಮೊದಲ ಬಲಿಯಾದ ರೋಹಿತ್

ಈ ಹಿಂದೆ ಶೋಯೆಬ್ ಬಶೀರ್ ವೀಸಾ ವಿವಾದದಿಂದಾಗಿ ಭಾರತಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅವರು ಮೊದಲ ಟೆಸ್ಟ್​ ಪಂದ್ಯವನ್ನು ಆಡಲು ಸಾಧ್ಯವಾಗಿರಲಿಲ್ಲ. ಆದರೆ ಎರಡನೇ ಟೆಸ್ಟ್​ಗೂ ಮುನ್ನ ತಂಡವನ್ನು ಸೇರಿಕೊಂಡಿದ್ದ ಬಶೀರ್, ತಮ್ಮ ಟೆಸ್ಟ್ ವೃತ್ತಿಜೀವನದ ಮೊದಲ ವಿಕೆಟ್ ರೂಪದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ವಿಕೆಟ್ ಪಡೆದರು.

ಗಿಲ್ ಕೂಡ ಫ್ಲಾಪ್

ರೋಹಿತ್ ಶರ್ಮಾ ಹೊರತುಪಡಿಸಿ, ಶುಭ್​ಮನ್ ಗಿಲ್ ಕೂಡ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಅಲ್ಪ ರನ್​ಗಳಿಗೆ ಸುಸ್ತಾದರು. ಆರಂಭದಿಂದ ಉತ್ತಮ ಫಾರ್ಮ್‌ನಲ್ಲಿ ಕಾಣಿಸಿಕೊಂಡ ಗಿಲ್ ಅವರನ್ನು ಅನುಭವಿ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಬಲಿಪಶು ಮಾಡಿದರು. ಈ ಪಂದ್ಯದಲ್ಲಿ ಗಿಲ್ 46 ಎಸೆತಗಳಲ್ಲಿ 34 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಕಳೆದ ಕೆಲವು ಇನ್ನಿಂಗ್ಸ್‌ಗಳಿಂದ ಶುಭ್​ಮನ್ ಗಿಲ್ ಅವರ ಕಳಪೆ ಫಾರ್ಮ್ ಮುಂದುವರಿದಿದೆ. ಗಿಲ್ ಟೆಸ್ಟ್​ನಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಆರಂಭಿಸಿದ ನಂತರ ಅವರು ಸತತವಾಗಿ ರನ್ ಗಳಿಸಲು ಹೆಣಗಾಡುತ್ತಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ