IND vs ENG: ರಿಷಬ್ ಪಂತ್ ಆಟಕ್ಕೆ 69 ವರ್ಷಗಳ ಹಳೆಯ ದಾಖಲೆ ಉಡೀಸ್! ಆದರೆ..?

| Updated By: ಪೃಥ್ವಿಶಂಕರ

Updated on: Jul 04, 2022 | 7:32 PM

IND vs ENG: ಪಂತ್ ಎಡ್ಜ್‌ಬಾಸ್ಟನ್ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಒಟ್ಟು 203 ರನ್ ಗಳಿಸಿದರು. ಈ ಮೂಲಕ ವಿದೇಶಿ ನೆಲದಲ್ಲಿ 200 ಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಭಾರತೀಯ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

IND vs ENG: ರಿಷಬ್ ಪಂತ್ ಆಟಕ್ಕೆ 69 ವರ್ಷಗಳ ಹಳೆಯ ದಾಖಲೆ ಉಡೀಸ್! ಆದರೆ..?
ಪಂತ್
Follow us on

ಎಡ್ಜ್‌ಬಾಸ್ಟನ್ ಟೆಸ್ಟ್‌ (Edgbaston Test)ನಲ್ಲಿ ಟೀಂ ಇಂಡಿಯಾ ಗೆಲುವಿನತ್ತ ಸಾಗುತ್ತಿರುವಂತೆ ತೋರುತ್ತಿದೆ ಮತ್ತು ಇದಕ್ಕೆ ದೊಡ್ಡ ಕಾರಣ ರಿಷಬ್ ಪಂತ್ (Rishabh Pant). ಪಂತ್ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಅರ್ಧ ಶತಕ ಗಳಿಸಿ ಟೀಂ ಇಂಡಿಯಾ (Team India)ವನ್ನು ಬಲಿಷ್ಠ ಸ್ಥಿತಿಗೆ ತಂದಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ 146 ರನ್ ಗಳಿಸಿದ್ದ ಈ ಬ್ಯಾಟ್ಸ್‌ಮನ್ ಎರಡನೇ ಇನ್ನಿಂಗ್ಸ್‌ನಲ್ಲಿ 57 ರನ್ ಗಳಿಸಿ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ಪಂತ್ ಎಡ್ಜ್‌ಬಾಸ್ಟನ್ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಒಟ್ಟು 203 ರನ್ ಗಳಿಸಿದರು. ಈ ಮೂಲಕ ವಿದೇಶಿ ನೆಲದಲ್ಲಿ 200 ಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಭಾರತೀಯ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ವಿದೇಶದಲ್ಲಿ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ವಿಕೆಟ್ ಕೀಪರ್

203 ರನ್ – ರಿಷಬ್ ಪಂತ್, ಎದುರಾಳಿ ಇಂಗ್ಲೆಂಡ್, 2022
161 ರನ್ – ವಿಜಯ್ ಮಂಜ್ರೇಕರ್, ಎದುರಾಳಿ ವೆಸ್ಟ್ ಇಂಡೀಸ್, 1953
159 ರನ್ – ರಿಷಬ್ ಪಂತ್, ಎದುರಾಳಿ ಆಸ್ಟ್ರೇಲಿಯಾ, 2019
151 ರನ್ – ಎಂಎಸ್ ಧೋನಿ, ಎದುರಾಳಿ ಇಂಗ್ಲೆಂಡ್, 2011

ಇದನ್ನೂ ಓದಿ
IND vs ENG: 2ನೇ ಇನ್ನಿಂಗ್ಸ್​ನಲ್ಲಿ 245 ರನ್​ಗಳಿಗೆ ಭಾರತ ಆಲೌಟ್; ಇಂಗ್ಲೆಂಡ್​ ಗೆಲುವಿಗೆ ಬೇಕು 378 ರನ್
IND VS ENG: 90 ವರ್ಷಗಳ ಭಾರತದ ಟೆಸ್ಟ್ ಇತಿಹಾಸದಲ್ಲಿ ಯಾರೂ ಮಾಡದ ಸಾಧನೆ ಮಾಡಿದ ರಿಷಬ್ ಪಂತ್..!
IND vs SL: ಶೆಫಾಲಿ- ಮಂಧಾನ 174 ರನ್‌ಗಳ ಜೊತೆಯಾಟ; ಸರಣಿಯೊಂದಿಗೆ ಭಾರತಕ್ಕೆ 10 ವಿಕೆಟ್‌ ಜಯ

ಇದನ್ನೂ ಓದಿ: IND VS ENG: 90 ವರ್ಷಗಳ ಭಾರತದ ಟೆಸ್ಟ್ ಇತಿಹಾಸದಲ್ಲಿ ಯಾರೂ ಮಾಡದ ಸಾಧನೆ ಮಾಡಿದ ರಿಷಬ್ ಪಂತ್..!

ವಿದೇಶಿ ಟೆಸ್ಟ್‌ನಲ್ಲಿ ಶತಕ ಮತ್ತು ಅರ್ಧಶತಕ ಗಳಿಸಿದ ಮೊದಲ ವಿಕೆಟ್‌ಕೀಪರ್

ವಿದೇಶಿ ನೆಲದಲ್ಲಿ ಒಂದೇ ಟೆಸ್ಟ್‌ನಲ್ಲಿ ಶತಕ ಮತ್ತು ಅರ್ಧ ಶತಕ ಗಳಿಸಿದ ಭಾರತೀಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ರಿಷಬ್ ಪಂತ್ ಮೊದಲ ವಿಕೆಟ್ ಕೀಪರ್ ಆಗಿದ್ದಾರೆ.

1973 ರಲ್ಲಿ ಇಂಗ್ಲೆಂಡ್ ವಿರುದ್ಧ ಬ್ರಬೋರ್ನ್ ಟೆಸ್ಟ್‌ನಲ್ಲಿ ಫಾರೂಕ್ ಶತಕ ಗಳಿಸಿದರು. ಅವರು 121 ಮತ್ತು 66 ರನ್‌ಗಳ ಇನ್ನಿಂಗ್ಸ್‌ ಆಡಿದ್ದರು.

ರಿಷಬ್ ಪಂತ್ ಇಂಗ್ಲೆಂಡ್ ವಿರುದ್ಧ ಎಡ್ಜ್‌ಬಾಸ್ಟನ್‌ನಲ್ಲಿ 146 ಮತ್ತು 57 ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡುವ ಮೂಲಕ ಇತಿಹಾಸ ನಿರ್ಮಿಸಿದರು.

ಪಂತ್​ಗೆ ರೋಹಿತ್ ದಾಖಲೆ ಮುರಿಯಲಾಗಲಿಲ್ಲ

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರಿಷಬ್ ಪಂತ್ 349 ರನ್ ಗಳಿಸುವಲ್ಲಿ ಯಶಸ್ವಿಯಾದರು. ಆದರೆ, ಈ ಸರಣಿಯಲ್ಲಿ 368 ರನ್ ಗಳಿಸಿದ್ದ ನಾಯಕ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಲು ಸಾಧ್ಯವಾಗಲಿಲ್ಲ. 315 ರನ್ ಗಳಿಸಿರುವ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಚೇತೇಶ್ವರ ಪೂಜಾರ 306 ಮತ್ತು ಜಡೇಜಾ 287 ರನ್ ಗಳಿಸಿ, ನಂತರದ ಸ್ಥಾನಗಳಲ್ಲಿದ್ದಾರೆ.

ಎಡ್ಜ್‌ಬಾಸ್ಟನ್‌ನಲ್ಲಿ ಟೀಮ್ ಇಂಡಿಯಾದ ಬಿಗ್ ಸ್ಕೋರ್

ವಿಕೆಟ್ ಕೀಪರ್ ರಿಷಭ್ ಪಂತ್ ಅವರ ಅತ್ಯುತ್ತಮ ಇನ್ನಿಂಗ್ಸ್‌ನಿಂದಾಗಿ ಟೀಂ ಇಂಡಿಯಾ ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಪ್ರಬಲ ಸ್ಥಾನವನ್ನು ತಲುಪಲು ಸಾಧ್ಯವಾಯಿತು. ಇಂಗ್ಲೆಂಡ್ ತಂಡಕ್ಕೆ ಭಾರತ 378 ರನ್​ಗಳ ಬೃಹತ್ ಗುರಿ ನೀಡಿದೆ. ಎಡ್ಜ್‌ಬಾಸ್ಟನ್ ಪಿಚ್‌ನಲ್ಲಿ ಇಷ್ಟು ದೊಡ್ಡ ಸ್ಕೋರ್ ಹಿಂದೆಂದೂ ಚೇಸ್ ಆಗಿರಲಿಲ್ಲ. ಈ ಮೈದಾನದಲ್ಲಿ ಇಂಗ್ಲೆಂಡ್ ಕೂಡ 208 ರನ್‌ಗಳ ಗರಿಷ್ಠ ಗುರಿ ಬೆನ್ನಟ್ಟಿದೆ. ಎಡ್ಜ್‌ಬಾಸ್ಟನ್‌ನಲ್ಲಿ ಇಷ್ಟು ದೊಡ್ಡ ಸ್ಕೋರ್ ಬೆನ್ನಟ್ಟುವುದು ಸುಲಭವಲ್ಲ ಎಂಬುದು ಸ್ಪಷ್ಟ. ಆದಾಗ್ಯೂ, ಆಂಗ್ಲರ ನಾಯಕ ಮತ್ತು ಬ್ಯಾಟ್ಸ್‌ಮನ್‌ಗಳು ಅತ್ಯುತ್ತಮ ಫಾರ್ಮ್‌ನಲ್ಲಿರುವ ಕಾರಣ ಭಾರತದ ಬೌಲರ್‌ಗಳು ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಇನ್ನೂ ಉತ್ತಮವಾಗಿ ಬೌಲಿಂಗ್ ಮಾಡಬೇಕಾಗುತ್ತದೆ.

Published On - 7:32 pm, Mon, 4 July 22