IND vs ENG: ಕೊರೊನಾ ಗೆದ್ದ ರೋಹಿತ್​ ಶರ್ಮಾಗೆ ಎದುರಾಯ್ತು ಅಗ್ನಿ ಪರೀಕ್ಷೆ..!

| Updated By: ಪೃಥ್ವಿಶಂಕರ

Updated on: Jul 05, 2022 | 7:05 AM

IND vs ENG: ಈ ಹೃದಯರಕ್ತನಾಳದ ಪರೀಕ್ಷೆಯಿಂದ ಆ ಸೋಂಕಿತನ ಶ್ವಾಸಕೋಶದ ಸಾಮರ್ಥ್ಯ ತಿಳಿದು ಬರುತ್ತದೆ. ಅಲ್ಲದೆ ಸೋಂಕಿನಿಂದ ಚೇತರಿಸಿಕೊಂಡ ನಂತರ ಆ ವ್ಯಕ್ತಿಯ ಶ್ವಾಸಕೋಶಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ತೋರಿಸುತ್ತದೆ.

IND vs ENG: ಕೊರೊನಾ ಗೆದ್ದ ರೋಹಿತ್​ ಶರ್ಮಾಗೆ ಎದುರಾಯ್ತು ಅಗ್ನಿ ಪರೀಕ್ಷೆ..!
ರೋಹಿತ್ ಶರ್ಮಾ
Follow us on

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಕೊನೆಗೂ ಕ್ವಾರಂಟೈನ್​ನಿಂದ ಹೊರಬಂದಿದ್ದಾರೆ. ರೋಹಿತ್ ಅವರ ಕೋವಿಡ್ 19 ಪರೀಕ್ಷೆಯ ವರದಿ ನೆಗೆಟಿವ್ ಬಂದಿದ್ದು, ಕೋವಿಡ್‌ನಿಂದ ಚೇತರಿಸಿಕೊಂಡ ನಂತರ ಅವರು ಭಾನುವಾರ ಮೊದಲ ಬಾರಿಗೆ ಅಭ್ಯಾಸದ ಸೆಷನ್​ನಲ್ಲಿ ಭಾಗವಹಿಸಿದ್ದರು. ಆದರೆ ರೋಹಿತ್ ಟಿ20 ತಂಡಕ್ಕೆ ಮರಳುವುದಕ್ಕೂ ಮುನ್ನ ಈಗ ಕಡ್ಡಾಯವಾಗಿ ಹೃದಯರಕ್ತನಾಳದ ಪರೀಕ್ಷೆಗೆ (cardiovascular tests) ಒಳಗಾಗಬೇಕಾಗುತ್ತದೆ. ಜುಲೈ 7 ರಿಂದ ಸೌತಾಂಪ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಆರಂಭವಾಗಲಿದ್ದು, ರೋಹಿತ್ ಈ ಸರಣಿ ಆಡಲು ಫಿಟ್ ಆಗಿದ್ದಾರೆಯೇ? ಎಂಬುದು ಹೃದಯರಕ್ತನಾಳದ ಪರೀಕ್ಷೆಯಿಂದ ತಿಳಿಯುತ್ತದೆ. ಟೆಸ್ಟ್ ಪಂದ್ಯಕ್ಕೂ ಮುನ್ನ ನಡೆದ ಅಭ್ಯಾಸ ಪಂದ್ಯದ ಮೂರನೇ ದಿನ ರೋಹಿತ್ ಶರ್ಮಾಗೆ ಕೊರೊನಾ ಸೋಂಕು ತಗುಲಿತ್ತು. ಹಾಗಾಗಿ ರೋಹಿತ್​ಗೆ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ.

ಚೇತರಿಕೆಗೆ ಸಮಯ ಬೇಕಾಗುತ್ತದೆ

ರೋಹಿತ್ ಅವರ ಪರೀಕ್ಷಾ ವರದಿಯು ನೆಗೆಟಿವ್ ಆಗಿದ್ದು, ವೈದ್ಯಕೀಯ ಪ್ರೋಟೋಕಾಲ್ ಪ್ರಕಾರ ಅವರು ಕ್ವಾರಂಟೈನ್‌ನಿಂದ ಹೊರ ಬಂದಿದ್ದಾರೆ. ಆದರೆ ರೋಹಿತ್​ಗೆ ಟಿ20 ಅಭ್ಯಾಸ ಪಂದ್ಯದಲ್ಲಿ ಆಡಲು ಅವಕಾಶ ಸಿಗಲಿಲ್ಲ. ಅವರಿಗೆ ಚೇತರಿಸಿಕೊಳ್ಳಲು ಮತ್ತು ಮೊದಲ ಟಿ 20 ಪಂದ್ಯದ ಮೊದಲು ತರಬೇತಿಗೆ ಸಮಯ ಬೇಕಾಗುತ್ತದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ
IND vs ENG: ರಿಷಬ್ ಪಂತ್ ಆಟಕ್ಕೆ 69 ವರ್ಷಗಳ ಹಳೆಯ ದಾಖಲೆ ಉಡೀಸ್! ಆದರೆ..?
IND vs ENG: 2ನೇ ಇನ್ನಿಂಗ್ಸ್​ನಲ್ಲಿ 245 ರನ್​ಗಳಿಗೆ ಭಾರತ ಆಲೌಟ್; ಇಂಗ್ಲೆಂಡ್​ ಗೆಲುವಿಗೆ ಬೇಕು 378 ರನ್

ಇದನ್ನೂ ಓದಿ: IND vs ENG: ಕೊರೊನಾದಿಂದ ಚೇತರಿಸಿಕೊಂಡ ಹಿಟ್‌ಮ್ಯಾನ್ ರೋಹಿತ್; ಸೀಮಿತ ಓವರ್‌ಗಳ ಸರಣಿಗೆ ಸಿದ್ಧತೆ

ಹೃದಯರಕ್ತನಾಳದ ಪರೀಕ್ಷೆಯನ್ನು ಏಕೆ ನಡೆಸಲಾಗುತ್ತದೆ?

35 ವರ್ಷದ ರೋಹಿತ್ ಶರ್ಮಾ ಅವರು ಭಾನುವಾರ ನೆಟ್ ಸೆಷನ್‌ಗೆ ಹಾಜರಿದ್ದರು. ಆದರೆ ಈ ಸೆಷನ್​ ಕೇವಲ 30 ನಿಮಿಷಗಳಿಗೆ ಕೊನೆಯಾಯಿತು. ವೈದ್ಯಕೀಯ ಪ್ರೋಟೋಕಾಲ್ ಪ್ರಕಾರ, ಕ್ವಾರಂಟೈನ್‌ ಮುಗಿಸಿ ಬಂದ ಯಾವುದೇ ಆಟಗಾರ ಹೃದಯರಕ್ತನಾಳದ ಪರೀಕ್ಷೆಗೆ ಒಳಗಾಗಬೇಕು. ಈ ಪರೀಕ್ಷೆ ಪ್ರತಿಯೊಬ್ಬ ಕೊರೊನಾ ಸೋಂಕಿತ ಆಟಗಾರನಿಗೆ ಕಡ್ಡಾಯವಾಗಿದೆ. ಈ ಹೃದಯರಕ್ತನಾಳದ ಪರೀಕ್ಷೆಯಿಂದ ಆ ಸೋಂಕಿತನ ಶ್ವಾಸಕೋಶದ ಸಾಮರ್ಥ್ಯ ತಿಳಿದು ಬರುತ್ತದೆ. ಅಲ್ಲದೆ ಸೋಂಕಿನಿಂದ ಚೇತರಿಸಿಕೊಂಡ ನಂತರ ಆ ವ್ಯಕ್ತಿಯ ಶ್ವಾಸಕೋಶಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ತೋರಿಸುತ್ತದೆ.

15 ವರ್ಷಗಳ ನಂತರ ಭಾರತಕ್ಕೆ ಗೆಲ್ಲುವ ಅವಕಾಶವಿದೆ

ರೋಹಿತ್ ಶರ್ಮಾ ಲಭ್ಯವಿಲ್ಲದ ಕಾರಣ, ಐದನೇ ಟೆಸ್ಟ್‌ಗೆ ಜಸ್ಪ್ರೀತ್ ಬುಮ್ರಾ ಅವರನ್ನು ನಾಯಕರನ್ನಾಗಿ ಮಾಡಲಾಗಿದೆ. ಇಂದು ಟೆಸ್ಟ್​ನ ನಾಲ್ಕನೇ ದಿನ. ಕಳೆದ ವರ್ಷ ಉಳಿದಿರುವ ಟೆಸ್ಟ್ ಸರಣಿಯ ಪಂದ್ಯ ಇದಾಗಿದ್ದು, ಈ ಸರಣಿಯಲ್ಲಿ ಇದುವರೆಗೆ ನಾಲ್ಕು ಪಂದ್ಯಗಳು ನಡೆದಿವೆ. ಭಾರತ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಹೀಗಾಗಿ 15 ವರ್ಷಗಳ ನಂತರ ಭಾರತಕ್ಕೆ ಇಂಗ್ಲೆಂಡ್‌ನಲ್ಲಿ ಸರಣಿ ಗೆಲ್ಲುವ ಅವಕಾಶ ಸಿಕ್ಕಿದೆ.

ಜುಲೈ 7 ರಿಂದ ಸೀಮಿತ ಓವರ್ ಸರಣಿ ಪ್ರಾರಂಭ

ಜುಲೈ 7 ರಂದು ಸೌತಾಂಪ್ಟನ್‌ನಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯವನ್ನು ಆಡಲಿದೆ. ಇದಾದ ಬಳಿಕ ಜುಲೈ 9ರಂದು ಬರ್ಮಿಂಗ್‌ಹ್ಯಾಮ್‌ನಲ್ಲಿ ಪಂದ್ಯ ನಡೆಯಲಿದೆ. ಮೂರನೇ ಟಿ20 ಜುಲೈ 10 ರಂದು ನಾಟಿಂಗ್‌ಹ್ಯಾಮ್‌ನಲ್ಲಿ ನಡೆಯಲಿದೆ. ODI ಸರಣಿಯ ಮೊದಲ ಪಂದ್ಯ ಜುಲೈ 12 ರಂದು ಓವಲ್‌ನಲ್ಲಿ ನಡೆಯಲಿದೆ. ಎರಡನೇ ಏಕದಿನ ಪಂದ್ಯ ಜುಲೈ 14 ರಂದು ಲಾರ್ಡ್ಸ್‌ನಲ್ಲಿ ನಡೆಯಲಿದೆ. ಮೂರನೇ ಏಕದಿನ ಪಂದ್ಯವು ಜುಲೈ 17 ರಂದು ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ.

ಇಂಗ್ಲೆಂಡ್ ವಿರುದ್ಧದ ಮೊದಲನೇ ಟಿ20ಗೆ ಪಂದ್ಯ- ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಭುವೇಶ್ವರಿ ಕುಮಾರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್.