Jasprit Bumrah: ಕಪಿಲ್ ದೇವ್ ಹೆಸರಲ್ಲಿದ್ದ ಮತ್ತೊಂದು ದಾಖಲೆ ಪುಡಿ ಪುಡಿ ಮಾಡಿದ ಜಸ್‌ಪ್ರೀತ್ ಬುಮ್ರಾ
ಭಾರತ ಹಾಗೂ ಇಂಗ್ಲೆಂಡ್ ನಡುವಣ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ಜಸ್‌ಪ್ರೀತ್ ಬುಮ್ರಾ (Jasprit Bumrah) ವಿಶೇಷ ದಾಖಲೆ ಬರೆದಿದ್ದಾರೆ. ಅದು ಭಾರತ ಲೆಜೆಂಡ್ ಕಪಿಲ್ ದೇವ್ ಅವರ ದಾಖಲೆ ಅಳಿಸಿ ಹಾಕಿ ಎಂಬುದು ಅಚ್ಚರಿ.
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಕೊನೆಯ ಐದನೇ ಟೆಸ್ಟ್ ಪಂದ್ಯದಲ್ಲಿ ಭಾರತ (India vs England) ಸೋಲಿನತ್ತ ಮುಖ ಮಾಡಿದ್ದು, ಆಂಗ್ಲರು ಸುಲಭ ಗೆಲುವು ದಾಖಲು ಮಾಡುವ ಮುನ್ಸೂಚನೆ ನೀಡಿದೆ. ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಸ್ಟೋಕ್ಸ್ ಪಡೆ, ಇದೀಗ ಎರಡನೇ ಇನ್ನಿಂಗ್ಸ್ನಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿ ಭಾರತೀಯ ಬೌಲರ್ಗಳ ಬೆವರಿಳಿಸುತ್ತಿದೆ. ಗೆಲುವಿಗೆ 378 ರನ್‌ಗಳ ಗುರಿ ಬೆನ್ನತ್ತಿರುವ ಇಂಗ್ಲೆಂಡ್ ನಾಲ್ಕನೇ ದಿನದಾಟದ ಜೋ ರೂಟ್ (Joe Root) ಹಾಗೂ ಬೈರ್ಸ್ಟೋ ಕ್ರೀಸ್ ಕಚ್ಚಿ ಆಡುತ್ತಿದ್ದಾರೆ. ಹೀಗಾಗಿ ಅಂತಿಮ ಐದನೇ ದಿನದಾಟ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಇದರ ನಡುವೆ ಟೀಮ್ ಇಂಡಿಯಾ ನಾಯಕ ಜಸ್‌ಪ್ರೀತ್ ಬುಮ್ರಾ (Jasprit Bumrah) ವಿಶೇಷ ದಾಖಲೆ ಬರೆದಿದ್ದಾರೆ. ಅದು ಭಾರತ ಲೆಜೆಂಡ್ ಕಪಿಲ್ ದೇವ್ ಅವರ ದಾಖಲೆ ಅಳಿಸಿ ಹಾಕಿ ಎಂಬುದು ಅಚ್ಚರಿ.
ಹೌದು, ಇತ್ತೀಚೆಗಷ್ಟೆ ಕಪಿಲ್ ದೇವ್ ಬಳಿಕ ಟೀಮ್ ಇಂಡಿಯಾ ಕ್ಯಾಪ್ಟನ್ ಆದ ಮೊದಲ ವೇಗದ ಬೌಲರ್ ಎಂಬ ಸಾಧನೆ ಮಾಡಿದ್ದ ಬುಮ್ರಾ, ಇದೀಗ ಕಪಿಲ್ ದೇವ್ ಅವರ ಹೆಸರಲ್ಲಿದ್ದ ಮತ್ತೊಂದು ದಾಖಲೆ ಉಡೀಸ್ ಮಾಡಿದ್ದಾರೆ. ಸದ್ಯ ಸಾಗುತ್ತಿರುವ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್ ಪಡೆದ ಜಸ್‌ಪ್ರೀತ್ ಬುಮ್ರಾ, ಬಳಿಕ ಎರಡನೇ ಇನಿಂಗ್ಸ್‌ನಲ್ಲಿ ಬೌಲಿಂಗ್ ಚಮತ್ಕಾರ ತೋರಿದರು. ಇಂಗ್ಲೆಂಡ್ ಓಪನರ್ ಜಾಕ್ ಕ್ರಾವ್ಲೀ ಮತ್ತು ಓಲ್ಲೀ ಪೋಪ್ ಅವರನ್ನು ಔಟ್ ಮಾಡುವ ಮೂಲಕ ನೂತನ ಸಾಧನೆ ಮಾಡಿದ್ದಾರೆ.
IND vs ENG: ರೋಚಕ ಘಟ್ಟದತ್ತ ಭಾರತ-ಇಂಗ್ಲೆಂಡ್ ಟೆಸ್ಟ್: ಟೀಮ್ ಇಂಡಿಯಾ ಗೆಲುವಿಗೆ ಬೇಕು ಆಂಗ್ಲರ 7 ವಿಕೆಟ್ಸ್
ಪ್ರಸಕ್ತ ಸರಣಿಯಲ್ಲಿ ಇಂಗ್ಲೆಂಡ್ ಎದುರು ಒಟ್ಟು 23 ವಿಕೆಟ್‌ಗಳನ್ನು ಪಡೆದ ಸಾಧನೆ ಬುಮ್ರಾ ಹೆಸರಿಗಾಗಿದೆ. ಈ ಮೂಲಕ ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯಲ್ಲಿ ವೇಗದ ಬೌಲರ್ ಪಡೆದ ಅತಿ ಹೆಚ್ಚು ವಿಕೆಟ್‌ಗಳ ದಾಖಲೆ ಇದಾಗಿದೆ. ಇದಕ್ಕೂ ಮುನ್ನ 1981-82ರಲ್ಲಿ ನಡೆದ ಸರಣಿಯಲ್ಲಿ ಕಪಿಲ್ ದೇವ್ ಒಟ್ಟು 22 ವಿಕೆಟ್‌ಗಳನ್ನು ಪಡೆದು ದಾಖಲೆ ನಿರ್ಮಿಸಿದ್ದರು. ಈಗ ಈ ದಾಖಲೆ ಬುಮ್ರಾ ಮುರಿದಿದ್ದಾರೆ.
ರಿಷಭ್ ಪಂತ್ ದಾಖಲೆ:
ರಿಷಭ್ ಪಂತ್ ಸದ್ಯ ಸಾಗುತ್ತಿರುವ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಒಟ್ಟು 203 ರನ್ ಗಳಿಸಿದ್ದಾರೆ. ಈ ಮೂಲಕ ವಿದೇಶಿ ನೆಲದಲ್ಲಿ 200 ಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಭಾರತೀಯ ವಿಕೆಟ್‌ಕೀಪರ್-ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಜೊತೆಗೆ ವಿದೇಶಿ ನೆಲದಲ್ಲಿ ಒಂದೇ ಟೆಸ್ಟ್‌ನಲ್ಲಿ ಶತಕ ಮತ್ತು ಅರ್ಧ ಶತಕ ಗಳಿಸಿದ ಭಾರತೀಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ರಿಷಬ್ ಪಂತ್ ಮೊದಲ ವಿಕೆಟ್ ಕೀಪರ್ ಆಗಿದ್ದಾರೆ. 1973 ರಲ್ಲಿ ಇಂಗ್ಲೆಂಡ್ ವಿರುದ್ಧ ಬ್ರಬೋರ್ನ್ ಟೆಸ್ಟ್‌ನಲ್ಲಿ ಫಾರೂಕ್ ಶತಕ ಗಳಿಸಿದರು. ಅವರು 121 ಮತ್ತು 66 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ರಿಷಬ್ ಪಂತ್ ಇಂಗ್ಲೆಂಡ್ ವಿರುದ್ಧ ಎಡ್ಜ್‌ಬಾಸ್ಟನ್‌ನಲ್ಲಿ 146 ಮತ್ತು 57 ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
IND vs ENG: ಕೊರೊನಾ ಗೆದ್ದ ರೋಹಿತ್ ಶರ್ಮಾಗೆ ಎದುರಾಯ್ತು ಅಗ್ನಿ ಪರೀಕ್ಷೆ..!