Virat Kohli: ವಿಕೆಟ್ ಬಿದ್ದಾಗ ಯಾರ ಜೊತೆಗೂ ಸೇರದೆ ಒಬ್ಬರೇ ಸೆಲೆಬ್ರೇಷನ್ ಮಾಡಿದ ವಿರಾಟ್ ಕೊಹ್ಲಿ: ವಿಡಿಯೋ

IND vs ENG: ಜೋ ರೂಟ್ ಜೊತೆಗೆ ರನ್ ಓಡುವಲ್ಲಿ ಎಡವಿದ ಅಲೆಕ್ಸ್ ಲೀಸ್ ಅವರು ಜಡೇಜಾ ಓವರ್​ನಲ್ಲಿ ರನೌಟ್ ಆದರು. ಈ ಸಂದರ್ಭ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಸಂಭ್ರಮಿಸಿದ ಪರಿ ತುಂಬಾ ವಿಶೇಷವಾಗಿತ್ತು.

Virat Kohli: ವಿಕೆಟ್ ಬಿದ್ದಾಗ ಯಾರ ಜೊತೆಗೂ ಸೇರದೆ ಒಬ್ಬರೇ ಸೆಲೆಬ್ರೇಷನ್ ಮಾಡಿದ ವಿರಾಟ್ ಕೊಹ್ಲಿ: ವಿಡಿಯೋ
Virat Kohli celebration IND vs ENG
Follow us
TV9 Web
| Updated By: Vinay Bhat

Updated on: Jul 05, 2022 | 11:06 AM

ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ಅಂತಿಮ ಐದನೇ ಟೆಸ್ಟ್​ ಪಂದ್ಯ ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯುತ್ತಿದ್ದ ರೋಚಕ ಘಟ್ಟದತ್ತ ತಲುಪಿದೆ. ಕೊನೆಯ ದಿನದಾಟ ಮಾತ್ರ ಬಾಕಿ ಉಳಿದಿದ್ದು ಇಂಗ್ಲೆಂಡ್​ಗೆ ಗೆಲುವಿನ ಅವಕಾಶ ಹೆಚ್ಚಿದೆ. ಟೀಮ್ ಇಂಡಿಯಾ (Team India) ಜಯ ಸಾಧಿಸಬೇಕಾದರೆ ಆಂಗ್ಲರು 119 ರನ್​ ಕಲೆಹಾಕುವ ಮುನ್ನ 7 ವಿಕೆಟ್​ಗಳನ್ನು ಪಡೆದುಕೊಳ್ಳಬೇಕಿದೆ. ಹೀಗಾಗಿ ಅಂತಿಮ ದಿನದಾಟ ಸಾಕಷ್ಟು ಕುತೂಹಲ ಕೆರಳಿಸಿದೆ. ಭಾರತ ಎರಡನೇ ಇನ್ನಿಂಗ್ಸ್​ನಲ್ಲಿ ಹೆಚ್ಚಿನ ರನ್ ಗಳಿಸಲು ಸಾಧ್ಯವಾಗಲಿಲ್ಲ. ಚೇತೇಶ್ವರ್ ಪೂಜಾರ ಹಾಗೂ ರಿಷಭ್ ಪಂತ್ (Risbah Pant) ಅರ್ಧಶತಕ ಗಳಿಸಿದ್ದು ಬಿಟ್ಟರೆ ಉಳಿದವರ ಕೊಡುಗೆ ಅಷ್ಟೇನು ಇರಲಿಲ್ಲ. ಹೀಗಾಗಿ ಭಾರತ 245 ರನ್​ಗೆ ಆಲೌಟ್ ಆಗುವ ಮೂಲಕ ಇಂಗ್ಲೆಂಡ್​ಗೆ 378 ರನ್​ಗಳ ಟಾರ್ಗೆಟ್ ನೀಡಿತು. ಗುರಿ ಬೆನ್ನಟ್ಟಲು ಬಂದ ಇಂಗ್ಲೆಂಡ್ ಬೊಂಬಾಟ್ ಬ್ಯಾಟಿಂಗ್ ನಡೆಸಿತು.

ಹೌದು, ಓಪನರ್​ಗಳಾದ ಅಲೆಕ್ಸ್‌ ಲೀಸ್‌ ಮತ್ತು ಜಾಕ್‌ ಕ್ರಾಲಿ ಭದ್ರ ಬುನಾದಿ ನಿರ್ಮಿಸಿದರು. ಇವರ ಜತೆಯಾಟದಲ್ಲಿ 107 ರನ್‌ ಹರಿದು ಬಂತು. ಏಕದಿನ ಶೈಲಿಯಲ್ಲಿ ಬ್ಯಾಟ್‌ ಬೀಸಿದ ಈ ಓಪನರ್ 21.4 ಓವರ್‌ಗಳನ್ನು ಯಶಸ್ವಿಯಾಗಿ ನಿಭಾಯಿಸಿದರು. ತಂಡದ ಮೊತ್ತ 100ರ ಗಡಿ ದಾಟಿದ್ದರೂ ಭಾರತ ಒಂದು ವಿಕೆಟ್ ಕೂಡ ಪಡೆದುಕೊಂಡಿರಲಿಲ್ಲ. ಈ ಸಂದರ್ಭ ಬುಮ್ರಾ ಮೊದಲ ಬ್ರೇಕ್‌ ಒದಗಿಸಿದರು. 46 ರನ್‌ ಮಾಡಿದ ಕ್ರಾಲಿ ಬೌಲ್ಡ್‌ ಆದರು. ಟೀ ಬಳಿಕ ಓಲೀ ಪೋಪ್‌ ವಿಕೆಟ್‌ ಉರುಳಿತು. ಇವರು ಖಾತೆ ತೆರೆಯುವ ಮೊದಲೇ ಬುಮ್ರಾ ಮೋಡಿಗೆ ಸಿಲುಕಿದರು.

ಇದನ್ನೂ ಓದಿ
Image
IND vs ENG: ರೋಚಕ ಘಟ್ಟದತ್ತ ಭಾರತ-ಇಂಗ್ಲೆಂಡ್ ಟೆಸ್ಟ್: ಟೀಮ್ ಇಂಡಿಯಾ ಗೆಲುವಿಗೆ ಬೇಕು ಆಂಗ್ಲರ 7 ವಿಕೆಟ್ಸ್
Image
IND vs ENG: ಕೊರೊನಾ ಗೆದ್ದ ರೋಹಿತ್​ ಶರ್ಮಾಗೆ ಎದುರಾಯ್ತು ಅಗ್ನಿ ಪರೀಕ್ಷೆ..!
Image
IND vs ENG: ಶ್ರೇಯಸ್​ಗೆ ಮುಳುವಾಯ್ತ ಐಪಿಎಲ್? ಮೆಕಲಮ್ ತೋಡಿದ ಖೆಡ್ಡಾಕ್ಕೆ ಸುಲಭವಾಗಿ ಬಿದ್ದ ಅಯ್ಯರ್; ವಿಡಿಯೋ
Image
IND vs ENG: ರಿಷಬ್ ಪಂತ್ ಆಟಕ್ಕೆ 69 ವರ್ಷಗಳ ಹಳೆಯ ದಾಖಲೆ ಉಡೀಸ್! ಆದರೆ..?

Shafali Verma: ಲೇಡಿ ಎಬಿಡಿ: ಥೇಟ್ ಡಿವಿಲಿಯರ್ಸ್​ ರೀತಿ ಶಾಟ್ ಹೊಡೆದು ನೆಟ್ಟಿಗರ ಹುಬ್ಬೇರಿಸಿದ ಶಫಾಲಿ

ಅತ್ತ ಅರ್ಧಶತಕ ಸಿಡಿಸಿ ಸೆಟಲ್ ಆಗಿದ್ದ ಅಲೆಕ್ಸ್ ಲೀಸ್ ವಿಕೆಟ್ ಕೂಡ ಭಾರತಕ್ಕೆ ಬಹುಮುಖ್ಯವಾಗಿತ್ತು. ಆದರೆ, ಇದು ಅತ್ಯಂತ ಸುಲಭವಾಗಿ ಒದಗಿಬಂತು. ಜೋ ರೂಟ್ ಜೊತೆಗೆ ರನ್ ಓಡುವಲ್ಲಿ ಎಡವಿದ ಲೀಸ್ ಅವರು ಜಡೇಜಾ ಓವರ್​ನಲ್ಲಿ ರನೌಟ್ ಆದರು. ಈ ಸಂದರ್ಭ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಸಂಭ್ರಮಿಸಿದ ಪರಿ ತುಂಬಾ ವಿಶೇಷವಾಗಿತ್ತು. ಲೀಸ್ ರನೌಟ್ ಆಗುತ್ತಿದ್ದಂತೆ ಅತ್ತ ಭಾರತದ ಯಾವ ಆಟಗಾರರ ಜೊತೆಗೂ ಸೆಲೆಬ್ರೇಷನ್ ಮಾಡದೆ ಕೊಹ್ಲಿ ಅವರು ವಿಕೆಟ್ ಸುತ್ತ ತಿರುಗಿ ಪಿಚ್ ಮಧ್ಯೆ ಹಾರಿ ಓಡುತ್ತಾ ಒಬ್ಬರೇ ಸಂಭ್ರಮಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಬಳಿಕ 4ನೇ ವಿಕೆಟ್​ಗೆ ಜೊತೆಯಾಗಿರುವ ಜೋ ರೂಟ್(76*) ಹಾಗೂ ಜಾನಿ ಬೈರ್ಸ್ಟೋವ್(72*) ಶ್ರೇಷ್ಠ ಬ್ಯಾಟಿಂಗ್ ಮೂಲಕ ಅಬ್ಬರಿಸಿದರು. ಭಾರತೀಯ ಬೌಲರ್​​ಗ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಈ ಜೋಡಿ 4ನೇ ವಿಕೆಟ್​​ಗೆ ಅಜೇಯ 150 ರನ್​ಗಳ ಜೊತೆಯಾಟದ ಕಾಣಿಕೆ ನೀಡಿದ್ದಾರೆ. ಪಂದ್ಯದ 5ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿರುವ ಇವರಿಬ್ಬರು, ಇಂಗ್ಲೆಂಡ್ ತಂಡವನ್ನ ಗೆಲುವಿನ ಹಾದಿಯಲ್ಲಿ ತಂದು ನಿಲ್ಲಿಸಿದ್ದಾರೆ. ಇವರ ಬಳಿಕ ನಾಯಕ ಬೆನ್ ಸ್ಟೋಕ್ಸ್​ ಕೂಡ ಇದ್ದು, ಭಾರತದ ಗೆಲುವು ಕಬ್ಬಿಣದ ಕಡಲೆಯಂತಾಗಿದೆ.

ಇದಕ್ಕೂ ಮುನ್ನ ಮೂರನೇ ದಿನದಂತ್ಯಕ್ಕೆ ಕಲೆಹಾಕಿದ್ದ 125/3 ರನ್​ಗಳಿಂದ ದಿನದಾಟ ಆರಂಭಿಸಿದ ಭಾರತ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಪೂಜಾರ 66 ರನ್​​ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಕಣಕ್ಕಿಳಿದ ಶ್ರೇಯಸ್ ಅಯ್ಯರ್(19) ಜವಾಬ್ದಾರಿಯ ಆಟವಾಡುವಲ್ಲಿ ಎಡವಿದರೆ ರಿಷಬ್ ಪಂತ್(57) ಆಕರ್ಷಕ ಅರ್ಧಶತಕ ಸಿಡಿಸಿ ಪೆವಿಲಿಯನ್ ಸೇರಿದರು. ಪರಿಣಾಮ ಭಾರತ 2ನೇ ಇನ್ನಿಂಗ್ಸ್​ನಲ್ಲಿ 245ಕ್ಕೆ ಸರ್ವಪತನ ಕಂಡಿತು.

Jasprit Bumrah: ಕಪಿಲ್ ದೇವ್ ಹೆಸರಲ್ಲಿದ್ದ ಮತ್ತೊಂದು ದಾಖಲೆ ಪುಡಿ ಪುಡಿ ಮಾಡಿದ ಜಸ್​ಪ್ರೀತ್ ಬುಮ್ರಾ

ಈ ರಾಶಿಯವರು ಇಂದು ಆರ್ಥಿಕ ಸಂಕಷ್ಟ ಎದುರಿಸುವ ಸಾಧ್ಯತೆ ಇದೆ
ಈ ರಾಶಿಯವರು ಇಂದು ಆರ್ಥಿಕ ಸಂಕಷ್ಟ ಎದುರಿಸುವ ಸಾಧ್ಯತೆ ಇದೆ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ