IND vs ENG: ಓವಲ್ ಟೆಸ್ಟ್ ಗೆದ್ದ ಭಾರತ; ಆಂಗ್ಲ ಬ್ಯಾಟ್ಸ್‌ಮನ್​ಗಳ ಹೆಡೆಮುರಿ ಕಟ್ಟಿದ ಕೊಹ್ಲಿ ಬೌಲರ್ಸ್

IND vs ENG: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ನಾಲ್ಕನೇ ಓವಲ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಗೆದ್ದುಬೀಗಿದೆ. ಕೊಹ್ಲಿ ಬೌಲರ್​ಗಳ ಹೋರಾಟಕ್ಕೆ ಈ ಗೆಲುವು ಭಾರತಕ್ಕೆ ಒಲಿದಿದೆ.

IND vs ENG: ಓವಲ್ ಟೆಸ್ಟ್ ಗೆದ್ದ ಭಾರತ; ಆಂಗ್ಲ ಬ್ಯಾಟ್ಸ್‌ಮನ್​ಗಳ ಹೆಡೆಮುರಿ ಕಟ್ಟಿದ ಕೊಹ್ಲಿ ಬೌಲರ್ಸ್
Virat Kohli Team India
TV9kannada Web Team

| Edited By: pruthvi Shankar

Sep 06, 2021 | 9:08 PM

ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ನಾಲ್ಕನೇ ಓವಲ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಗೆದ್ದುಬೀಗಿದೆ. ಕೊಹ್ಲಿ ಬೌಲರ್​ಗಳ ಹೋರಾಟಕ್ಕೆ ಈ ಗೆಲುವು ಭಾರತಕ್ಕೆ ಒಲಿದಿದೆ. ಒಂದು ಹಂತದಲ್ಲಿ ಇಂಗ್ಲೆಂಡ್​ನತ್ತ ವಾಲಿದ್ದ ಪಂದ್ಯವನ್ನು ಟೀಂ ಇಂಡಿಯಾ ಬೌಲರ್​ಗಳು ತಮ್ಮ ಬಿಗಿಯಾದ ಬೌಲಿಂಗ್​ನಿಂದ ಭಾರತದ ಕಡೆಗೆ ತಿರುಗಿಸಿದರು. ಅದರಲ್ಲೂ ಯಾರ್ಕರ್ ಕಿಂಗ್ ಬುಮ್ರಾ ತೆಗೆದುಕೊಂಡ ಎರಡು ವಿಕೆಟ್​ಗಳಾದ ಓಲಿ ಪೋಪ್ ಹಾಗೂ ಜಾನಿ ಬೈರ್​ಸ್ಟೋ ವಿಕೆಟ್​ಗಳು ಪಂದ್ಯದ ದಿಕ್ಕನೆ ಬದಲಿಸಿದವು. ಇದು ಸಾಲದೆಂಬಂತೆ ಭಾರತಕ್ಕೆ ಮುಳುವಾಗಿದ್ದ ಇಂಗ್ಲೆಂಡ್ ನಾಯಕ ಜೋ ರೂಟ್​ನನ್ನು ಶಾರ್ದೂಲ್ ಠಾಕೂರ್ ಬಲಿ ಪಡೆದ ನಂತರ ಗೆಲುವು ಬಾಗಶಃ ಭಾರತದ ಬತ್ತಳಿಕೆಗೆ ಬಂದು ಬಿದ್ದಿತು.

ಭಾರತದ ಇನ್ನಿಂಗ್ಸ್‌ ಹೀಗಿತ್ತು ಈ ಮೊದಲು, ರೋಹಿತ್ ಶರ್ಮಾ (127) ಮತ್ತು ಚೇತೇಶ್ವರ ಪೂಜಾರ (61) ಅವರ ಇನ್ನಿಂಗ್ಸ್ ಮೂರನೇ ದಿನದ ಭಾರತೀಯ ಇನ್ನಿಂಗ್ಸ್‌ನ ಹೈಲೈಟ್ ಆಗಿದ್ದರೆ, ನಾಲ್ಕನೇ ದಿನ, ಶಾರ್ದೂಲ್ ಠಾಕೂರ್ ಮತ್ತು ರಿಷಭ್ ಪಂತ್ ಏಳನೇ ವಿಕೆಟ್ ಗೆ 100 ರನ್ ಜೊತೆಯಾಟವನ್ನು ಹಂಚಿಕೊಂಡರು. ತಂಡವನ್ನು ಪ್ರಬಲ ಮುನ್ನಡೆಗೆ ಕೊಂಡೊಯ್ಯದರು. ಭಾರತವನ್ನು ಬಲಿಷ್ಠ ಸ್ಥಾನದಲ್ಲಿ ನಿಲ್ಲಿಸುವಲ್ಲಿ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಕೊಡುಗೆ ಪ್ರಮುಖವಾಗಿತ್ತು. ಮೊದಲ ಇನ್ನಿಂಗ್ಸ್​ನಲ್ಲಿ 57 ರನ್ ಗಳಿಸಿದ ಠಾಕೂರ್ 72 ಎಸೆತಗಳಲ್ಲಿ 60 ರನ್ ಗಳಿಸಿದ್ದು ಇದರಲ್ಲಿ ಏಳು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿತ್ತು.

ಪಂತ್ 106 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ಸಹಾಯದಿಂದ 50 ರನ್ ಗಳಿಸಿದರು. ಇಬ್ಬರೂ ಏಳನೇ ವಿಕೆಟ್​ಗೆ 100 ರನ್ ಜೊತೆಯಾಟವನ್ನು ಹಂಚಿಕೊಂಡರು. ಉಮೇಶ್ ಯಾದವ್ 25 ಮತ್ತು ಜಸ್ಪ್ರೀತ್ ಬುಮ್ರಾ 24 ರನ್​ಗಳ ಉಪಯುಕ್ತ ಕೊಡುಗೆ ನೀಡಿದರು. ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್ ಮೂರು ವಿಕೆಟ್ ಪಡೆದರೆ, ಒಲ್ಲಿ ರಾಬಿನ್ಸನ್ ಮತ್ತು ಮೊಯೀನ್ ಅಲಿ ತಲಾ ಎರಡು ವಿಕೆಟ್ ಪಡೆದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada