IND vs ENG: ಪಾಕ್ ಮೂಲದ ಇಂಗ್ಲೆಂಡ್ ಆಟಗಾರನಿಗೆ ಸಿಗದ ವೀಸಾ; ಬ್ರಿಟನ್ ಸರ್ಕಾರ ಅಸಮಾಧಾನ

IND vs ENG: ವೀಸಾ ಸಮಸ್ಯೆಯಿಂದ ತಂಡದೊಂದಿಗೆ ದುಬೈನಿಂದ ಭಾರತಕ್ಕೆ ಬರದ ಪಾಕ್ ಮೂಲಕ ಇಂಗ್ಲೆಂಡ್ ತಂಡದ ಯುವ ಸ್ಪಿನ್ನರ್ ಶೋಯೆಬ್ ಬಶೀರ್, ಸಮಸ್ಯೆ ಇತ್ಯರ್ಥವಾಗದೆ ಇದೀಗ ಇಂಗ್ಲೆಂಡ್​ಗೆ ವಾಪಸ್ಸಾಗಿದ್ದಾರೆ. ಇದು ಇಂಗ್ಲೆಂಡ್‌ ತಂಡ ಹಾಗೂ ಬ್ರಿಟನ್ ಸರ್ಕಾರವನ್ನು ಅಸಮಾಧಾನಗೊಳ್ಳುವಂತೆ ಮಾಡಿದೆ.

IND vs ENG: ಪಾಕ್ ಮೂಲದ ಇಂಗ್ಲೆಂಡ್ ಆಟಗಾರನಿಗೆ ಸಿಗದ ವೀಸಾ; ಬ್ರಿಟನ್ ಸರ್ಕಾರ ಅಸಮಾಧಾನ
ಶೋಯೆಬ್ ಬಶೀರ್, ರಿಷಿ ಸುನಕ್
Follow us
ಪೃಥ್ವಿಶಂಕರ
|

Updated on:Jan 24, 2024 | 4:40 PM

ಭಾರತ ಮತ್ತು ಇಂಗ್ಲೆಂಡ್ (India vs England ) ನಡುವಿನ 5 ಟೆಸ್ಟ್ ಪಂದ್ಯಗಳ ಸರಣಿಯು ಜನವರಿ 25 ರಿಂದ ಪ್ರಾರಂಭವಾಗಲಿದ್ದು, ಸರಣಿಯ ಮೊದಲ ಪಂದ್ಯ ಹೈದರಾಬಾದ್‌ನಲ್ಲಿ ನಡೆಯಲ್ಲಿದೆ. ಇದಕ್ಕಾಗಿ ಉಭಯ ತಂಡಗಳು ಕೂಡ ಈಗಾಗಲೇ ಹೈದರಾಬಾದ್‌ ತಲುಪಿದ್ದು, ಅಭ್ಯಾಸದಲ್ಲಿ ನಿರತವಾಗಿವೆ. ಆದರೆ ಈ ನಡುವೆ ಇಂಗ್ಲೆಂಡ್‌ ತಂಡಕ್ಕೆ ಆಘಾತ ಎದುರಾಗಿದ್ದು ವೀಸಾ ಸಮಸ್ಯೆಯಿಂದ ತಂಡದೊಂದಿಗೆ ದುಬೈನಿಂದ ಭಾರತಕ್ಕೆ ಬರದ ಪಾಕ್ ಮೂಲಕ ಇಂಗ್ಲೆಂಡ್ ತಂಡದ ಯುವ ಸ್ಪಿನ್ನರ್ ಶೋಯೆಬ್ ಬಶೀರ್ (Shoaib Bashir), ಸಮಸ್ಯೆ ಇತ್ಯರ್ಥವಾಗದೆ ಇದೀಗ ಇಂಗ್ಲೆಂಡ್​ಗೆ ವಾಪಸ್ಸಾಗಿದ್ದಾರೆ. ಇದು ಇಂಗ್ಲೆಂಡ್‌ ತಂಡ ಹಾಗೂ ಬ್ರಿಟನ್ ಸರ್ಕಾರವನ್ನು ಅಸಮಾಧಾನಗೊಳ್ಳುವಂತೆ ಮಾಡಿದೆ.

ವಾಸ್ತವವಾಗಿ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಇಂಗ್ಲಂಡ್ ತಂಡ ಭಾರತದ ಪರಿಸ್ಥಿತಿಗೆ ಒಗ್ಗಿಕೊಳ್ಳುವ ಸಲುವಾಗಿ ದುಬೈನಲ್ಲಿ ಅಭ್ಯಾಸ ನಡೆಸಲು ಇಂಗ್ಲೆಂಡ್​ನಿಂದ ದುಬೈಗೆ ಬಂದಿಳಿದಿತ್ತು. ಅಲ್ಲಿ ಅಭ್ಯಾಸ ಮುಗಿಸಿದ ಆಂಗ್ಲ ಪಡೆ ಕಳೆದ ಭಾನುವಾರ ಭಾರತಕ್ಕೆ ವಿಮಾನ ಹತ್ತಿತ್ತು. ಆದರೆ ಆ ವೇಳೆ ವೀಸಾ ಸಮಸ್ಯೆಯಿಂದಾಗಿ ಶೋಯೆಬ್ ಬಶೀರ್ ತಂಡದೊಂದಿಗೆ ಭಾರತಕ್ಕೆ ಬಂದಿರಲಿಲ್ಲ. ಈ ಬಗ್ಗೆ ಮಾತನಾಡಿದ್ದ ನಾಯಕ ಸ್ಟೋಕ್ಸ್, ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಬಶೀರ್ ತಂಡವನ್ನು ಸೇರಿಕೊಳ್ಳುವ ಭರವಸೆಯನ್ನು ವ್ಯಕ್ತಪಡಿಸಿದ್ದರು. ಆದರೀಗ ಸರಣಿಯ ಮೊದಲ ಪಂದ್ಯಕ್ಕೆ ಇನ್ನೊಂದು ದಿನ ಬಾಕಿ ಇರುವಾಗ ಬಶೀರ್ ಅವರ ವೀಸಾ ಸಮಸ್ಯೆ ಬಗೆಹರಿದಿಲ್ಲ. ಹೀಗಾಗಿ ಬಶೀರ್ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದು, ತಮ್ಮ ತಾಯ್ನಾಡಿಗೆ ವಾಪಸ್ಸಾಗಿದ್ದಾರೆ.

ಶೋಯೆಬ್ ಬಶೀರ್ ಇನ್ನೂ ವೀಸಾ ಪಡೆದಿಲ್ಲ

ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತನ್ನ ಟೆಸ್ಟ್ ತಂಡವನ್ನು ಡಿಸೆಂಬರ್‌ನಲ್ಲಿಯೇ ಪ್ರಕಟಿಸಿತ್ತು. ಇದರಲ್ಲಿ ಯುವ ಬೌಲರ್ ಶೋಯೆಬ್ ಬಶೀರ್ ಕೂಡ ಸ್ಥಾನ ಪಡೆದಿದ್ದರು. ವಾಸ್ತವವಾಗಿ, ಶೋಯೆಬ್ ಬಶೀರ್ ಅವರ ಪೋಷಕರು ಪಾಕಿಸ್ತಾನ ಮೂಲದವರು. ಆದರೆ ಬಶೀರ್ ಇಂಗ್ಲೆಂಡ್‌ನಲ್ಲಿಯೇ ಜನಿಸಿದ್ದು, ಅಲ್ಲಿಯ ಪಾಸ್‌ಪೋರ್ಟ್ ಹೊಂದಿದ್ದಾರೆ. ಅದಾಗ್ಯೂ ಭಾರತ ಹಾಗೂ ಪಾಕಿಸ್ತಾನ ನಡುವಿನ ಹದಗೆಟ್ಟ ಸಂಬಂಧದಿಂದಾಗಿ ಪಾಕ್ ಮೂಲದವರಿಗೆ ವೀಸಾ ಸಿಗುವುದು ಅಷ್ಟು ಸುಲಭವಲ್ಲ. ಹೀಗಾಗಿಯೇ ಬಶೀರ್​ಗೆ ವೀಸಾ ಸಿಗುವುದು ಕಷ್ಟಕರವಾಗಿದೆ. ಈ ಹಿಂದೆ ಆಸ್ಟ್ರೇಲಿಯ ತಂಡ ಭಾರತಕ್ಕೆ ಬಂದಾಗ ತಂಡದ ಆರಂಭಿಕ ಬ್ಯಾಟ್ಸ್​ಮನ್ ಉಸ್ಮಾನ್ ಖವಾಜಾ ಕೂಡ ಇದೇ ಸಮಸ್ಯೆ ಎದುರಿಸಿದ್ದರು. ಆದರೆ ಕೊಂಚ ವಿಳಂಬವಾದರೂ ಅವರು ತಂಡವನ್ನು ಸೇರಿಕೊಂಡಿದ್ದರು.

ಹೇಳಿಕೆ ಬಿಡುಗಡೆ ಮಾಡಿದ ಬ್ರಿಟನ್ ಸರ್ಕಾರ

ಇದೀಗ ಬಶೀರ್ ವೀಸಾ ಸಿಗದೆ ಇಂಗ್ಲೆಂಡ್​ಗೆ ವಾಪಸ್ಸಾದ ಬಳಿಕ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಯುಕೆ ಪ್ರಧಾನಿ ರಿಷಿ ಸುನಕ್ ಅವರ ವಕ್ತಾರರು, ‘ಭಾರತದ ವೀಸಾ ಪ್ರಕ್ರಿಯೆಯಲ್ಲಿ ಬ್ರಿಟಿಷ್ ನಾಗರಿಕರನ್ನು ನ್ಯಾಯಯುತವಾಗಿ ನಡೆಸಿಕೊಳ್ಳಬೇಕೆಂದು ಸರ್ಕಾರ ನಿರೀಕ್ಷಿಸುತ್ತದೆ. ನಾವು ಈ ಪ್ರಕರಣದ ನಿರ್ದಿಷ್ಟತೆಗಳ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ಆದರೆ ನಾವು ಈ ರೀತಿಯ ಸಮಸ್ಯೆಗಳನ್ನು ಈ ಹಿಂದೆಯೇ ಹೈಕಮಿಷನ್‌ ಮುಂದಿಟ್ಟಿದ್ದೇವೆ. ಭಾರತವು ತನ್ನ ವೀಸಾ ಪ್ರಕ್ರಿಯೆಗಳಲ್ಲಿ ಎಲ್ಲಾ ಸಮಯದಲ್ಲೂ ಬ್ರಿಟಿಷ್ ನಾಗರಿಕರನ್ನು ನ್ಯಾಯಯುತವಾಗಿ ಪರಿಗಣಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ನಾವು ಸ್ಪಷ್ಟಪಡಿಸಿದ್ದೇವೆ. ಆದರೆ ಭಾರತದ ವೀಸಾ ಪಡೆಯುವ ವೇಳೆ ಪಾಕಿಸ್ತಾನಿ ಮೂಲದ ಬ್ರಿಟಿಷ್ ನಾಗರಿಕರು ಅನುಭವಿಸಿದ ಸಮಸ್ಯೆಗಳನ್ನು ನಾವು ಈ ಹಿಂದೆಯೇ ಪ್ರಸ್ತಾಪಿಸಿದ್ದೇವೆ. ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನರ್ ಬಳಿ ವೀಸಾಗಳಿಗೆ ಅರ್ಜಿ ಸಲ್ಲಿಸಿದ ಅನುಭವದ ಬಗ್ಗೆ ನಾವು ಸಮಸ್ಯೆಗಳನ್ನು ಎತ್ತಿದ್ದೇವೆ ಎಂದು ವಕ್ತಾರರು ವೀಸಾ ವಿಳಂಬದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಬಶೀರ್ ವೀಸಾ ವಿಚಾರವಾಗಿ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಕೂಡ ನಿರಾಸೆ ವ್ಯಕ್ತಪಡಿಸಿದ್ದಾರೆ. ಇದಲ್ಲದೆ, ಬಶೀರ್ ಅವರ ವೀಸಾ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಬೇಕು ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಮನವಿ ಮಾಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:39 pm, Wed, 24 January 24

ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು