IND vs IRE: ಐರ್ಲೆಂಡ್ ಪ್ರವಾಸದಲ್ಲಿ ಕೇವಲ 3 ಎಸೆತಗಳಿಗೆ ಸುಸ್ತಾದ ತಿಲಕ್; ಏಷ್ಯಾಕಪ್‌ಗೆ ಡೌಟ್
Tilak Varma: ಐರ್ಲೆಂಡ್ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ತಿಲಕ್ ವರ್ಮಾ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಆ ಪಂದ್ಯದಲ್ಲಿ ತಿಲಕ್ ಮೊದಲ ಎಸೆತದಲ್ಲಿಯೇ ಔಟಾಗಿ ಪೆವಿಲಿಯನ್ ಸೇರಿಕೊಂಡರು. ಎರಡನೇ ಪಂದ್ಯದಲ್ಲಿ ಅವರಿಂದ ಬಲಿಷ್ಠ ಇನ್ನಿಂಗ್ಸ್ ನಿರೀಕ್ಷಿಸಲಾಗಿತ್ತು. ಏಕೆಂದರೆ ಈ ಬಾರಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿತ್ತು. ಆದರೆ ಈ ಬಾರಿಯೂ ಅದು ಸಾಧ್ಯವಾಗಲಿಲ್ಲ. ಈ ವೇಳೆ ತಿಲಕ್ ಕೇವಲ 2 ಎಸೆತಗಳನ್ನು ಆಡಿ ತಮ್ಮ ವಿಕೆಟ್ ಒಪ್ಪಿಸಿದರು.
ಏಷ್ಯಾಕಪ್‌ಗಾಗಿ (Asia Cup 2023) ಭಾರತ ಕ್ರಿಕೆಟ್ ತಂಡದ ಆಯ್ಕೆ ಸೋಮವಾರ, ಆಗಸ್ಟ್ 21 ರಂದು ನಡೆಯಲಿದೆ. ತಂಡವನ್ನು ಆಯ್ಕೆ ಮಾಡುವ ಸಲುವಾಗಿ ಹೊಸದಿಲ್ಲಿಯಲ್ಲಿ ಆಯ್ಕೆ ಸಮಿತಿಯ ಸಭೆ ನಡೆಯಲಿದೆ. ಯಾವ ಆಟಗಾರರು ತಂಡದಲ್ಲಿ ಸ್ಥಾನ ಪಡೆಯುತ್ತಾರೆ ಎಂಬುದೇ ಈಗ ಕುತೂಹಲಕಾರಿ ಸಂಗತಿಯಾಗಿದೆ. ಈಗಾಗಲೇ ಕೆಲವರ ಹೆಸರುಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಇದರಲ್ಲಿ ಟೀಂ ಇಂಡಿಯಾಕ್ಕೆ (Team India) ಬಂದಿರುವ ಯುವ ಬ್ಯಾಟ್ಸ್ಮನ್ ತಿಲಕ್ ವರ್ಮಾ (Tilak Varma) ಹೆಸರೂ ಸೇರಿದೆ. ತಿಲಕ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ಹಲವು ಮಾಜಿ ದಿಗ್ಗಜರು ಆಗ್ರಹಿಸಿದ್ದಾರೆ. ತಿಲಕ್ ತಂಡಕ್ಕೆ ಆಯ್ಕೆಯಾಗುತ್ತಾರೋ, ಇಲ್ಲವೋ ಎಂಬುದು ಸೋಮವಾರವಷ್ಟೇ ಗೊತ್ತಾಗಲಿದೆ. ಆದರೆ ತಂಡದ ಆಯ್ಕೆಗೆ ಒಂದು ದಿನ ಬಾಕಿ ಇರುವಾಗಲೇ ತಿಲಕ್ ವರ್ಮಾ ಬ್ಯಾಟ್ ಲಯ ಕಳೆದುಕೊಂಡಿರುವಂತೆ ತೋರುತ್ತಿದೆ.
ತಿಲಕ್ ವರ್ಮಾ ಎರಡು ವಾರಗಳ ಹಿಂದೆ ವೆಸ್ಟ್ ಇಂಡೀಸ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆ ಟಿ20 ಸರಣಿಯಲ್ಲಿ ತಿಲಕ್ ವರ್ಮಾ ಅದ್ಭುತ ಪ್ರದರ್ಶನ ನೀಡುವ ಮೂಲಕ ಎಲ್ಲರ ಮನಗೆದ್ದಿದ್ದರು. ಆ ಸರಣಿಯಲ್ಲಿ ಟೀಂ ಇಂಡಿಯಾ ಪರ ಅತಿ ಹೆಚ್ಚು ರನ್ ಗಳಿಸಿದವರು ತಿಲಕ್. ಅಂತಹ ಪರಿಸ್ಥಿತಿಯಲ್ಲಿ, ಅವರು ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲೂ ಇದೇ ರೀತಿಯ ಪ್ರದರ್ಶನವನ್ನು ಮುಂದುವರೆಸುತ್ತಾರೆ ಎಂದು ಎಲ್ಲರು ನಿರೀಕ್ಷಿಸಿದ್ದರು. ಆದರೆ ಐರ್ಲೆಂಡ್ ಸರಣಿಯ ಎರಡೂ ಪಂದ್ಯಗಳಲ್ಲೂ ತಿಲಕ್ ಕೇವಲ 3 ಎಸೆತಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿ ನಿರಾಸೆಗೊಳಿಸಿದರು.
IND vs WI: ಉಳಿದಿರುವ 2 ಟಿ20 ಪಂದ್ಯಗಳಲ್ಲಿ ಕಿಂಗ್ ಕೊಹ್ಲಿ ದಾಖಲೆ ಮುರಿಯಲು ಸಜ್ಜಾದ ತಿಲಕ್ ವರ್ಮಾ!
ಎರಡೂ ಪಂದ್ಯಗಳಲ್ಲೂ ವಿಫಲ
ಐರ್ಲೆಂಡ್ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ತಿಲಕ್ ವರ್ಮಾ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಆ ಪಂದ್ಯದಲ್ಲಿ ತಿಲಕ್ ಮೊದಲ ಎಸೆತದಲ್ಲಿಯೇ ಔಟಾಗಿ ಪೆವಿಲಿಯನ್ ಸೇರಿಕೊಂಡರು. ಎರಡನೇ ಪಂದ್ಯದಲ್ಲಿ ಅವರಿಂದ ಬಲಿಷ್ಠ ಇನ್ನಿಂಗ್ಸ್ ನಿರೀಕ್ಷಿಸಲಾಗಿತ್ತು. ಏಕೆಂದರೆ ಈ ಬಾರಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿತ್ತು. ಆದರೆ ಈ ಬಾರಿಯೂ ಅದು ಸಾಧ್ಯವಾಗಲಿಲ್ಲ. ಈ ವೇಳೆ ತಿಲಕ್ ಕೇವಲ 2 ಎಸೆತಗಳನ್ನು ಆಡಿ ತಮ್ಮ ವಿಕೆಟ್ ಒಪ್ಪಿಸಿದರು. ಕ್ರೀಸ್ಗೆ ಬಂದ ತಕ್ಷಣ ಎರಡನೇ ಎಸೆತದಲ್ಲಿ ಪುಲ್ ಶಾಟ್ ಬಾರಿಸಿದರೂ ಚೆಂಡು ದೂರ ಹೋಗುವ ಬದಲು ಎತ್ತರಕ್ಕೆ ಏರಿ ಕ್ಯಾಚ್ಗೆ ಹೋಯಿತು.
ಈ ಮೂಲಕ ಐರ್ಲೆಂಡ್ ಪ್ರವಾಸದಲ್ಲಿ ಸತತ ಎರಡು ಪಂದ್ಯಗಳಲ್ಲಿ ತಿಲಕ್ ಕೇವಲ ಮೂರು ಎಸೆತಗಳನ್ನಾಡಲಷ್ಟೇ ಶಕ್ತರಾದರು. ಹೀಗಾಗಿ ತಿಲಕ್ ಏಷ್ಯಾಕಪ್‌ಗೆ ತಂಡದಲ್ಲಿ ಆಯ್ಕೆಯಾಗುತ್ತಾರಾ ಎಂಬ ಪ್ರಶ್ನೆ ಮೂಡಿದೆ. ವೆಸ್ಟ್ ಇಂಡೀಸ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದ ತಿಲಕ್ರನ್ನು ಅನೇಕ ಅನುಭವಿಗಳು ಏಷ್ಯಾಕಪ್ ಮತ್ತು ವಿಶ್ವಕಪ್‌ಗೆ ತಂಡದಲ್ಲಿ ಆಯ್ಕೆ ಮಾಡಲು ಒತ್ತಾಯಿಸಲು ಪ್ರಾರಂಭಿಸಿದ್ದರು. ಆದರೀಗ ತಿಲಕ್ ತಮ್ಮ ಲಯ ಕಳೆದುಕೊಂಡಿರುವುದು ಅವರ ಆಯ್ಕೆ ಮೇಲೆ ತೂಗುಗತ್ತಿ ಇರಿಸಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:02 am, Mon, 21 August 23