ಟಿ20 ವಿಶ್ವಕಪ್ನ (T20 World Cup) ಮುಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ನೆದರ್ಲೆಂಡ್ಸ್ (India Vs Netherlands) ತಂಡವನ್ನು ಎದುರಿಸುತ್ತಿದೆ. ಈ ಮೊದಲು ನಡೆದ ರೋಚಕ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ರೋಹಿತ್ ಪಡೆ ಚುಟುಕು ಸಮರಕ್ಕೆ ಎಂಟ್ರಿಕೊಟ್ಟಿತ್ತು. ಹೀಗಾಗಿ 2ನೇ ಪಂದ್ಯವನ್ನು ಗೆಲ್ಲುವ ಮೂಲಕ ಸೆಮಿಫೈನಲ್ ಹಾದಿಯನ್ನು ಇನ್ನಷ್ಟು ಸುಗಮಗೊಳಿಸಿವುದು ಟೀಂ ಇಂಡಿಯಾದ ಉದ್ದೇಶವಾಗಿದೆ. ನೆದರ್ಲೆಂಡ್ಸ್ ವಿರುದ್ಧ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (Sydney Cricket Ground) ಕಣಕ್ಕಿಳಿಯಲ್ಲಿರುವ ಟೀಂ ಇಂಡಿಯಾಕ್ಕೆ ಈ ಪಂದ್ಯ ಸುಲಭದ ತುತ್ತಲ್ಲ. ಏಕೆಂದರೆ ಈ ಬಾರಿಯ ವಿಶ್ವಕಪ್ನಲ್ಲಿ ಇದುವರೆಗೆ ಹಲವು ಅಚ್ಚರಿಯ ಪಲಿತಾಂಶಗಳು ಹೊರಬಿದ್ದಿರುವುದರಿಂದ ರೋಹಿತ್ ಪಡೆ ಕ್ರಿಕೆಟ್ ಶಿಶುಗಳನ್ನು ಲಘುವಾಗಿ ಪರಿಗಣಿಸುವ ತಪ್ಪನ್ನು ಮಾಡಬಾರದು.
ಈ ಪಂದ್ಯದಲ್ಲಿ ಏಕಪಕ್ಷೀಯ ಗೆಲುವು ಸಾಧಿಸಲು ಟೀಂ ಇಂಡಿಯಾ ಪ್ರಯತ್ನಿಸಲಿದ್ದು, ಮುಂಬರುವ ಪಂದ್ಯಗಳಿಗೆ ತನ್ನ ಹಾದಿಯನ್ನು ಸುಲಭವಾಗಿಸಿಕೊಳ್ಳಲು ಪ್ರಯತ್ನಿಸಲಿದೆ. ಮತ್ತೊಂದೆಡೆ, ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶದೆದುರು ಸೋತಿರುವ ನೆದರ್ಲೆಂಡ್ಸ್ ತಂಡವು ಸಹ ಗೆಲುವಿನ ಹಾದಿಗೆ ಮರಳಲು ಪ್ರಯತ್ನಿಸಲಿದೆ.
ಇದನ್ನೂ ಓದಿ: ICC rankings: ಪಾಕ್ ವಿರುದ್ಧ ಅಬ್ಬರಿಸಿದ ಕಿಂಗ್ ಕೊಹ್ಲಿಗೆ ರ್ಯಾಂಕಿಂಗ್ನಲ್ಲೂ ಮುಂಬಡ್ತಿ! ಟಾಪ್ 9ರಲ್ಲಿ ವಿರಾಟ್
ಟೀಂ ಇಂಡಿಯಾದಲ್ಲಿ ಬದಲಾವಣೆಯಾಗಲಿದೆಯೇ?
ಈಗ ಪ್ರಶ್ನೆ ಏನೆಂದರೆ, ಟೀಂ ಇಂಡಿಯಾ ನೆದರ್ಲೆಂಡ್ಸ್ ವಿರುದ್ಧದ ಪಂದ್ಯಕ್ಕೆ ತನ್ನ ಆಡುವ 11 ರಲ್ಲಿ ಯಾವುದಾದರೂ ಬದಲಾವಣೆಗಳನ್ನು ಮಾಡುತ್ತದೆಯೇ? ಎಂಬುದಾಗಿದೆ. ಉಳಿದ ತಂಡಗಳಿಗೆ ಹೊಲಿಸಿದರೆ ನೆದರ್ಲೆಂಡ್ಸ್ ತಂಡ ಅಷ್ಟು ಬಲಿಷ್ಠವಲ್ಲ. ಹೀಗಿರುವಾಗ ಈ ಪಂದ್ಯದಲ್ಲಿ ಟೀಂ ಇಂಡಿಯಾ ಕೆಲ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ ಬೆಂಚ್ ಮೇಲೆ ಕುಳಿತ ಆಟಗಾರರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಆದರೆ ಈ ಎಲ್ಲಾ ಊಹಾಪೋಹಗಳಿಗು ತೆರೆ ಎಳೆದಿರುವ ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ, ಟೀಂ ಇಂಡಿಯಾ ಭಾನುವಾರ ಪಾಕಿಸ್ತಾನದ ವಿರುದ್ಧ ಆಡಿದ ಅದೇ ತಂಡದೊಂದಿಗೆ ನೆದರ್ಲ್ಯಾಂಡ್ಸ್ ವಿರುದ್ಧ ಆಡಲಿದೆ ಎಂದು ಬುಧವಾರ ಖಚಿತಪಡಿಸಿದ್ದಾರೆ. ನಾವು ಯಾರಿಗೂ ವಿಶ್ರಾಂತಿ ನೀಡುತ್ತಿಲ್ಲ ಎಂದು ಬೌಲಿಂಗ್ ಕೋಚ್ ಪಂದ್ಯದ ಮುನ್ನಾ ದಿನ ಹೇಳಿದ್ದು, ತಂಡ ಗೆಲುವಿನ ಟ್ರ್ಯಾಕ್ನಲ್ಲಿದ್ದಾಗ ಅದರ ಆಡುವ ಇಲೆವೆನ್ನಲ್ಲಿ ಬದಲಾವಣೆ ತರುವುದು ಸರಿಯಲ್ಲ ಎಂದಿದ್ದಾರೆ.
ಬೌಲಿಂಗ್ ಕೋಚ್ ಹೇಳಿಕೆ ಬಳಿಕ ನಾಯಕ ರೋಹಿತ್ ಶರ್ಮಾ ತಮ್ಮ ಪ್ಲೇಯಿಂಗ್-11ರಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂಬುದು ಖಚಿತವಾಗಿದೆ. ಹೀಗಾಗಿ ಒಂದು ವೇಳೆ ಆಟ ಆರಂಭಕ್ಕೂ ಮುನ್ನ ತಂಡದ 11 ರ ಬಳಗದಲ್ಲಿ ಯಾರಾದರೂ ಇಂಜುರಿಗೊಂಡರೆ ಮಾತ್ರ ಆ ಆಟಗಾರನ ಬದಲು ಮತ್ತೊಬ್ಬ ಆಟಗಾರ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇರಲಿದೆ.
ಟೀಂ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ 11
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಆರ್. ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:55 pm, Wed, 26 October 22