ICC rankings: ಪಾಕ್ ವಿರುದ್ಧ ಅಬ್ಬರಿಸಿದ ಕಿಂಗ್ ಕೊಹ್ಲಿಗೆ ರ್ಯಾಂಕಿಂಗ್ನಲ್ಲೂ ಮುಂಬಡ್ತಿ! ಟಾಪ್ 9ರಲ್ಲಿ ವಿರಾಟ್
ICC T20 Rankings: ಐಸಿಸಿ ಟಿ20 ಬ್ಯಾಟ್ಸ್‌ಮನ್‌ಗಳ ನೂತನ ಶ್ರೇಯಾಂಕದಲ್ಲಿ ವಿರಾಟ್ ಟಾಪ್ 10 ರೊಳಗೆ ಎಂಟ್ರಿಕೊಟ್ಟಿದ್ದಾರೆ. ಆದರೆ ಟಾಪ್ 3 ರಲ್ಲಿ ಸ್ಥಾನ ಪಡೆದಿದ್ದ ಸೂರ್ಯಕುಮಾರ್ ಯಾದವ್ ಒಂದು ಸ್ಥಾನ ಕುಸಿತ ಕಂಡಿದ್ದಾರೆ.
ಟಿ20 ವಿಶ್ವಕಪ್ನಲ್ಲಿ (T20 World Cup) ಪಾಕಿಸ್ತಾನ ವಿರುದ್ಧ ಅಬ್ಬರಿಸಿದ ಕಿಂಗ್ ಕೊಹ್ಲಿಗೆ (Virat Kohli) ಐಸಿಸಿ ರ್ಯಾಂಕಿಂಗ್ನಲ್ಲೂ (ICC rankings) ಭರ್ಜರಿ ಮುಂಬಡ್ತಿ ಸಿಕ್ಕಿದೆ. ಬುಧವಾರ ಬಿಡುಗಡೆಯಾದ ಐಸಿಸಿ ಟಿ20 ಬ್ಯಾಟ್ಸ್‌ಮನ್‌ಗಳ ನೂತನ ಶ್ರೇಯಾಂಕದಲ್ಲಿ ವಿರಾಟ್ ಟಾಪ್ 10 ರೊಳಗೆ ಎಂಟ್ರಿಕೊಟ್ಟಿದ್ದಾರೆ. ಸೂಪರ್ 12 ಸುತ್ತಿನ ತನ್ನ ಮೊದಲ ಪಂದ್ಯದಲ್ಲೇ ಪಾಕಿಸ್ತಾನವನ್ನು ಎದುರಿಸಿದ್ದ ಟೀಂ ಇಂಡಿಯಾ ಹೀನಾಯವಾಗಿ ಸೋಲುವ ಆತಂಕದಲ್ಲಿತ್ತು. ಆ ವೇಳೆ ಹಾರ್ದಿಕ್ ಪಾಂಡ್ಯ ಜೊತೆ ಸ್ಮರಣೀಯ ಇನ್ನಿಂಗ್ಸ್ ಆಡಿದ್ದ ಚೇಸ್ ಕಿಂಗ್ ಕೊಹ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 82 ರನ್ ಸಿಡಿಸಿದ್ದರು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಕಳೆದ ಬಾರಿಯ ವಿಶ್ವಕಪ್ ಸೋಲಿಗೆ ಸೇಡನ್ನು ಸಹ ತೀರಿಸಿಕೊಂಡಿತ್ತು. ಪಾಕ್ ವಿರುದ್ಧ ವಿಶ್ವವೇ ಮೆಚ್ಚುವ ಇನ್ನಿಂಗ್ಸ್ ಆಡಿದ ವಿರಾಟ್ಗೆ ಐಸಿಸಿ ಕೂಡ ಸೂಕ್ತ ಬಹುಮಾನ ನೀಡಿದ್ದು, ಶ್ರೇಯಾಂಕದ ಪಟ್ಟಿಯಲ್ಲಿ ಐದು ಸ್ಥಾನಗಳ ಮುಂಬಡ್ತಿ ನೀಡಿದೆ. ಇದೀಗ ಕೊಹ್ಲಿ, ಟಿ20 ಬ್ಯಾಟ್ಸ್‌ಮನ್‌ಗಳ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನವನ್ನು ಅಲಂಕರಿಸಿದ್ದಾರೆ.
ಮೂರು ತಿಂಗಳಲ್ಲಿ ಇಡೀ ಚಿತ್ರಣವೇ ಬದಲು
ಕಳೆದ ಮೂರು ವರ್ಷಗಳಿಂದ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದ ಕೊಹ್ಲಿ, ಎಲ್ಲರ ಟೀಕೆಗೆ ಒಳಗಾಗಬೇಕಾಯಿತು. ಅಲ್ಲದೆ ಅಖಾಡಕ್ಕಿಳಿದರೆ ಶತಕ ಸಿಡಿಸುವುದನ್ನೇ ಅಭ್ಯಾಸ ಮಾಡಿಕೊಂಡಿದ್ದ ವಿರಾಟ್, ಕಳೆದ 3 ವರ್ಷಗಳಲ್ಲಿ ಒಂದೇ ಒಂದು ಶತಕ ಸಿಡಿಸಿರಲಿಲ್ಲ. ಹೀಗಾಗಿ ಇದು ಕೊಹ್ಲಿ ವೃತ್ತಿಬದುಕಿನ ಅಂತಿಮ ದಿನಗಳು ಎಂದು ಹೇಳಲಾಗುತ್ತಿತ್ತು. ಆದರೆ 2022 ರ ಏಷ್ಯಾಕಪ್‌ನಲ್ಲಿ ತಮ್ಮ ಹಳೆಯ ಫಾರ್ಮ್ಗೆ ಮರಳಿದ್ದ ಕೊಹ್ಲಿ ಭರ್ಜರಿ ಶತಕ ಸಿಡಿಸಿದಲ್ಲದೆ ಟೀಕಕಾರರ ಬಾಯಿ ಮುಚ್ಚಿಸಿದ್ದರು.
ಅಲ್ಲದೆ ಆಗಸ್ಟ್ ತಿಂಗಳಿನ್ನಲ್ಲಿ ಪ್ರಕಟವಾಗಿದ್ದ ಐಸಿಸಿ ಟಿ20 ಬ್ಯಾಟ್ಸ್‌ಮನ್‌ಗಳ ರ‍್ಯಾಂಕಿಂಗ್‌ನಲ್ಲಿ ಕೊಹ್ಲಿ 35ನೇ ಸ್ಥಾನದಲ್ಲಿದ್ದರು. ಆದರೆ ಇದೀಗ ಕೇವಲ ಮೂರು ತಿಂಗಳಲ್ಲಿ ವಿರಾಟ್ ಟಾಪ್-10ರೊಳಗೆ ಎಂಟ್ರಿಕೊಟ್ಟಿದ್ದಾರೆ. ಈ ವೇಳೆ ಏಷ್ಯಾಕಪ್‌ನಲ್ಲಿ ಶತಕ ಬಾರಿಸಿದ್ದ ಅವರು ಆ ಬಳಿಕ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲೂ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದರು.
Virat Kohli on the rise ?
The Indian star’s sensational innings against Pakistan sees him surge up in the latest @MRFWorldwide ICC Men’s T20I Player Rankings ?
Details ⬇https://t.co/Up2Id40ri0
— ICC (@ICC) October 26, 2022
ಜಾರಿದ ಸೂರ್ಯ
ಇನ್ನುಳಿದಂತೆ ಬಿಡುಗಡೆಯಾಗಿರುವ ಈ ನೂತನ ಪಟ್ಟಿಯಲ್ಲಿ 849 ಅಂಕಗಳನ್ನು ಗಳಿಸಿರುವ ಪಾಕಿಸ್ತಾನದ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ ನಂಬರ್ ಒನ್ ಸ್ಥಾನದಲ್ಲಿಯೇ ಮುಂದುವರೆದಿದ್ದಾರೆ. ಅವರ ನಂತರ 831 ಅಂಕಗಳನ್ನು ಗಳಿಸಿರುವ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಡೆವೊನ್ ಕಾನ್ವೇ ಎರಡನೇ ಸ್ಥಾನದಲ್ಲಿದ್ದಾರೆ. ಈ ಮೊದಲು 2ನೇ ಸ್ಥಾನದಲ್ಲಿದ್ದ ಸೂರ್ಯಕುಮಾರ್ ಯಾದವ್ ನೂತನ ಪಟ್ಟಿಯಲ್ಲಿ 828 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 89 ರನ್ ಗಳಿಸಿದ್ದ ಕಾನ್ವೆ ಸೂರ್ಯರನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಪಾಕ್ ವಿರುದ್ಧದ ಪಂದ್ಯದಲ್ಲಿ ಎರಡಂಕ್ಕಿಗೆ ಸುಸ್ತಾಗಿದ್ದ ಸೂರ್ಯ ಒಂದು ಸ್ಥಾನ ಕುಸಿತ ಕಂಡಿದ್ದಾರೆ.
ಇದನ್ನೂ ಓದಿ: India vs Netherlands Live Streaming: ಭಾರತ- ನೆದರ್ಲೆಂಡ್ಸ್ ಮುಖಾಮುಖಿ; ಪಂದ್ಯ ಆರಂಭ ಎಷ್ಟು ಗಂಟೆಗೆ?
ನಾಲ್ಕನೇ ಸ್ಥಾನದಲ್ಲಿ ಪಾಕ್ ನಾಯಕ ಬಾಬರ್ ಆಜಮ್ ಇದ್ದರೆ, ದಕ್ಷಿಣ ಆಫ್ರಿಕಾದ ಏಡೆನ್ ಮಾರ್ಕ್ರಾಮ್ ಐದನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್‌ನ ಫಿನ್ ಅಲೆನ್ ಕೂಡ ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಇನ್ನಿಂಗ್ಸ್ ಆಡಿದ್ದು, ಅವರು ಕೂಡ 17 ಸ್ಥಾನ ಮೇಲೇರಿ 13ನೇ ಸ್ಥಾನಕ್ಕೆ ಬಂದು ಕುಳಿತಿದ್ದಾರೆ.
ಟಾಪ್-10 ಟಿ20 ಬ್ಯಾಟರ್‌ಗಳ ವಿವರ ಹೀಗಿದೆ
1- ಮೊಹಮ್ಮದ್ ರಿಜ್ವಾನ್ (849 ಅಂಕ)
2- ಡೆವೊನ್ ಕಾನ್ವೇ (831 ಅಂಕ)
3- ಸೂರ್ಯಕುಮಾರ್ ಯಾದವ್ (828 ಅಂಕ)
4- ಬಾಬರ್ ಆಜಮ್ (799 ಅಂಕ)
5- ಐಡೆನ್ ಮಾರ್ಕ್ರಾಮ್ (762 ಅಂಕ)
6- ಡೇವಿಡ್ ಮಲನ್ (754 ಅಂಕ)
7- ಆರನ್ ಫಿಂಚ್ (681 ಅಂಕ)
8- ಪಾತುಮ್ ನಿಸ್ಸಾಂಕ (658 ಅಂಕ)
9- ವಿರಾಟ್ ಕೊಹ್ಲಿ (635 ಅಂಕ)
10- ಮುಹಮ್ಮದ್ ವಾಸೀಂ (626 ಅಂಕ)
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:11 pm, Wed, 26 October 22