T20 World Cup 2022: ಟಿ20 ವಿಶ್ವಕಪ್​ ಮೇಲೂ ಕೊರೊನಾ ದಾಳಿ; ಸೋಂಕಿನ ನಡುವೆಯೂ ಮೈದಾನಕ್ಕಿಳಿದ ಆಟಗಾರ..!

T20 World Cup 2022: ಐಸಿಸಿ ನಿಯಮಗಳ ಪ್ರಕಾರ, ಯಾವುದೇ ಆಟಗಾರ ಪಂದ್ಯಕ್ಕೂ ಮುನ್ನ ಕೊರೊನಾ ಸೋಂಕಿಗೆ ಒಳಗಾಗಿದ್ದರೂ ಆತನಿಗೆ ತಂಡದಲ್ಲಿ ಆಡಲು ಅವಕಾಶ ನೀಡಲಾಗುತ್ತದೆ.

T20 World Cup 2022: ಟಿ20 ವಿಶ್ವಕಪ್​ ಮೇಲೂ ಕೊರೊನಾ ದಾಳಿ; ಸೋಂಕಿನ ನಡುವೆಯೂ ಮೈದಾನಕ್ಕಿಳಿದ ಆಟಗಾರ..!
ಸೋಂಕಿನ ನಡುವೆಯೂ ಬ್ಯಾಟಿಂಗ್ ಮಾಡಿದ ಐರ್ಲೆಂಡ್ ಆಟಗಾರ
Follow us
TV9 Web
| Updated By: ಪೃಥ್ವಿಶಂಕರ

Updated on:Oct 23, 2022 | 12:37 PM

2022 ರ ಟಿ20 ವಿಶ್ವಕಪ್ (T20 World Cup 2022) ಮೇಲೂ ಕೊರೊನಾ ಮಹಾಮಾರಿ ದಾಳಿ ಮಾಡಿದೆ. ಐರ್ಲೆಂಡ್ ತಂಡದ ಸ್ಟಾರ್ ಆಲ್‌ರೌಂಡರ್ ಜಾರ್ಜ್ ಡಾಕ್ರೆಲ್ (George Dockrell) ಕೊರೊನಾ ಸೋಂಕಿಗೆ (Corona positive) ತುತ್ತಾಗಿದ್ದಾರೆ ಎಂದು ಸ್ವತಃ ಐರ್ಲೆಂಡ್ ಕ್ರಿಕೆಟ್ ಮಂಡಳಿಯೇ ಹೇಳಿಕೆ ನೀಡಿದೆ. ಆದರೆ, ಇದರ ಹೊರತಾಗಿಯೂ ಭಾನುವಾರ ಶ್ರೀಲಂಕಾ ವಿರುದ್ಧದ ಸೂಪರ್ 12 ಪಂದ್ಯದಲ್ಲಿ ಅವರು ತಂಡದ ಪರ ಕಣಕ್ಕಿಳಿದಿದ್ದರು. ಐರ್ಲೆಂಡ್ ಕ್ರಿಕೆಟ್ ಮಂಡಳಿಯು ಟ್ವೀಟ್ ಮಾಡುವ ಮೂಲಕ ಈ ಮಾಹಿತಿ ನೀಡಿದ್ದು, ಡಾಕ್ರೆಲ್ ಕೊರೊನಾ ಸೋಂಕಿಗೆ. ಆದರೆ, ಅವರಲ್ಲಿ ಸೋಂಕಿನ ಸಣ್ಣಪುಟ್ಟ ಲಕ್ಷಣಗಳು ಕಂಡುಬಂದಿರುವುದರಿಂದ ಅವರನ್ನು ಆಡುವ ಇಲೆವೆನ್​ನಲ್ಲಿ ಸೇರಿಸಲಾಗಿದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಪಂದ್ಯದಲ್ಲಿ 16 ಎಸೆತಗಳನ್ನು ಎದುರಿಸಿದ ಡಾಕ್ರೆಲ್ 14 ರನ್ ಗಳಿಸಿದರು.

ಶ್ರೀಲಂಕಾ ವಿರುದ್ಧ ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಿತು. ಕೊರೊನಾ ಪಾಸಿಟಿವ್ ಆಗಿದ್ದರೂ ಸಹ ಜಾರ್ಜ್ ಡಾಕ್ರೆಲ್ ತಂಡದ ಮೈದಾನಕ್ಕಿಳಿದಿದ್ದರು. ಇದನ್ನು ಕಂಡು ಅಭಿಮಾನಿಗಳು ಸಹ ಕೊಂಚ ಗೊಂದಲಕ್ಕೀಡಾಗಿದ್ದರು. ಏಕೆಂದರೆ ಈ ಮೊದಲು ಒಬ್ಬ ಆಟಗಾರ ಸೋಂಕಿಗೆ ತುತ್ತಾದರೆ ಆತನನ್ನು ತಂಡದಿಂದ ಪ್ರತ್ಯೇಕಿಸಿ ಕ್ವಾರಂಟೈನ್​ನಲ್ಲಿ ಇಡಲಾಗುತ್ತಿತ್ತು. ಆದರೆ ಈಗ ಕೊರೊನಾ ತಗುಲಿರುವುದು ಖಚಿತವಾಗಿದ್ದರೂ ಡಾಕ್ರೆಲ್ ಪಂದ್ಯವನ್ನಾಡಿದ್ದರು. ವಾಸ್ತವವಾಗಿ ಇದರ ಹಿಂದಿನ ಕಾರಣವೆಂದರೆ ಪಂದ್ಯಾವಳಿ ಆರಂಭಕ್ಕೂ ಮುನ್ನವೇ ಐಸಿಸಿ ತನ್ನ ಕೊರೊನಾ ನಿಯಮಾವಳಿಗಳನ್ನು ಬದಲಾವಣೆ ಮಾಡಿದೆ.

ಇದನ್ನೂ ಓದಿ: India Vs Pakistan, T20 Live Score: ಭಾರತ- ಪಾಕ್ ಮುಖಾಮುಖಿಗೆ ಕ್ಷಣಗಣನೆ ಆರಂಭ

ನಿಯಮಗಳನ್ನು ಬದಲಾಯಿಸಿರುವ ಐಸಿಸಿ

ಐಸಿಸಿ ನಿಯಮಗಳ ಪ್ರಕಾರ, ಯಾವುದೇ ಆಟಗಾರ ಪಂದ್ಯಕ್ಕೂ ಮುನ್ನ ಕೊರೊನಾ ಸೋಂಕಿಗೆ ಒಳಗಾಗಿದ್ದರೂ ಆತನಿಗೆ ತಂಡದಲ್ಲಿ ಆಡಲು ಅವಕಾಶ ನೀಡಲಾಗುತ್ತದೆ. ಆಸ್ಟ್ರೇಲಿಯಾ ಸರ್ಕಾರವು ಸಹ ಈ ಹಿಂದೆ ತನ್ನ ಕೊರೊನಾ ನಿಯಮಗಳನ್ನು ಬದಲಾಯಿಸಿದ್ದು, ಆ ಪ್ರಕಾರ ಕಡ್ಡಾಯವಾಗಿ ಕ್ವಾರಂಟೈನ್​ನಲ್ಲಿರಬೇಕಿದ್ದ ನಿಯಮವನ್ನು ಸಡಿಲಗೊಳಿಸಿತ್ತು. ಅದರ ನಂತರ ಐಸಿಸಿ ಕೂಡ ತನ್ನ ನಿಯಮವನ್ನು ಬದಲಾಯಿಸಿತು.

ವೈದ್ಯಕೀಯ ಸಿಬ್ಬಂದಿಯ ಹೇಳಿಕೆ ಅಗತ್ಯ

ಟಿ20 ವಿಶ್ವಕಪ್ ವೇಳೆ ಕೋವಿಡ್ ಪರೀಕ್ಷೆಯನ್ನು ಕಡ್ಡಾಯಗೊಳಿಸಿಲ್ಲ. ಆಟಗಾರನಿಗೆ ಕೊರೊನಾ ಪಾಸಿಟಿವ್ ಕಂಡುಬಂದರೆ, ತಂಡದ ವೈದ್ಯಕೀಯ ಸಿಬ್ಬಂದಿ ಅವರ ಆಟದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದರೆ ಈಗ ಐರ್ಲೆಂಡ್ ತಂಡದಲ್ಲಿ ಸೋಂಕು ಕಾಣಿಸಿಕೊಂಡಿರುವುದರಿಂದ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಐರ್ಲೆಂಡ್ ಮಂಡಳಿ, ತಂಡದ ಉಳಿದ ಆಟಗಾರರನ್ನು ಸುರಕ್ಷಿತವಾಗಿಡಲಾಗುವುದು ಎಂದಿದೆ. ಅಲ್ಲದೆ ಪಂದ್ಯ ನಡೆಯುವ ದಿನದಂದು ಮತ್ತು ಅಭ್ಯಾಸದ ವೇಳೆಯಲ್ಲಿ ಡಾಕ್ರೆಲ್ ಅವರನ್ನು ತಂಡದಿಂದ ಬೇರ್ಪಡಿಸಲಾಗುತ್ತದೆ ಎಂದಿದೆ.

ಟಿ20 ವಿಶ್ವಕಪ್‌ನ ಮೊದಲ ಸುತ್ತಿನಲ್ಲಿ ಸ್ಕಾಟ್ಲೆಂಡ್ ವಿರುದ್ಧ ಡಾಕ್ರೆಲ್ ಅಜೇಯ 39 ರನ್ ಗಳಿಸಿದರು. ಆದಾಗ್ಯೂ, ವೆಸ್ಟ್ ಇಂಡೀಸ್ ವಿರುದ್ಧ ಅವರಿಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಗಲಿಲ್ಲ. ಆ ಪಂದ್ಯದಲ್ಲಿ ಐರ್ಲೆಂಡ್ 9 ವಿಕೆಟ್‌ಗಳಿಂದ ಗೆದ್ದು ಸೂಪರ್ 12 ಸುತ್ತಿಗೆ ಪ್ರವೇಶಿಸಿತ್ತು.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:36 pm, Sun, 23 October 22

ಮುಸ್ಲಿಮರ ಕೊಲ್ಲುವಂತಹ ದಿನ ಬರುತ್ತದೆ ಎಂದ ಈಶ್ವರಪ್ಪ ವಿರುದ್ಧ ಕೇಸ್ ಬುಕ್​!
ಮುಸ್ಲಿಮರ ಕೊಲ್ಲುವಂತಹ ದಿನ ಬರುತ್ತದೆ ಎಂದ ಈಶ್ವರಪ್ಪ ವಿರುದ್ಧ ಕೇಸ್ ಬುಕ್​!
ಚನ್ನಪಟ್ಟಣದಲ್ಲಿ ಯೋಗೇಶ್ವರ್​​ರನ್ನು ಎದುರಿಸುವವರಿಲ್ಲ: ಬಂಡಿಸಿದ್ದೇಗೌಡ
ಚನ್ನಪಟ್ಟಣದಲ್ಲಿ ಯೋಗೇಶ್ವರ್​​ರನ್ನು ಎದುರಿಸುವವರಿಲ್ಲ: ಬಂಡಿಸಿದ್ದೇಗೌಡ
ಸಿಎಂ ಹೀಗೆಲ್ಲ ಮಾತಾಡುತಿದ್ದರೆ ಜನ ತಲೆ ಕೆಟ್ಟಿದೆ ಅಂತಾರೆ: ಕುಮಾರಸ್ವಾಮಿ
ಸಿಎಂ ಹೀಗೆಲ್ಲ ಮಾತಾಡುತಿದ್ದರೆ ಜನ ತಲೆ ಕೆಟ್ಟಿದೆ ಅಂತಾರೆ: ಕುಮಾರಸ್ವಾಮಿ
ಟಿವಿ9 ಸ್ವೀಟ್ ಹೋಂ ರಿಯಲ್ ಎಸ್ಟೇಟ್ ಎಕ್ಸ್​ಪೋಗೆ ಚಾಲನೆ
ಟಿವಿ9 ಸ್ವೀಟ್ ಹೋಂ ರಿಯಲ್ ಎಸ್ಟೇಟ್ ಎಕ್ಸ್​ಪೋಗೆ ಚಾಲನೆ
‘ಸಾರಿ ಹನುಮಂತು’, ಅಳುತ್ತ ಕ್ಷಮೆ ಕೇಳಿದ ಗೌತಮಿ
‘ಸಾರಿ ಹನುಮಂತು’, ಅಳುತ್ತ ಕ್ಷಮೆ ಕೇಳಿದ ಗೌತಮಿ
ಜಾಗೃತಿ ಅಭಿಯಾನದಲ್ಲಿ ರಾಜ್ಯಾಧ್ಯಕ್ಷರೂ ಭಾಗವಹಿಸುತ್ತಾರೆ: ಅರವಿಂದ ಲಿಂಬಾವಳಿ
ಜಾಗೃತಿ ಅಭಿಯಾನದಲ್ಲಿ ರಾಜ್ಯಾಧ್ಯಕ್ಷರೂ ಭಾಗವಹಿಸುತ್ತಾರೆ: ಅರವಿಂದ ಲಿಂಬಾವಳಿ
ಪ್ರಧಾನಿ ಮೋದಿಯನ್ನು ಬುಡಕಟ್ಟು ಸಂಪ್ರದಾಯದಂತೆ ವಿಶಿಷ್ಟವಾಗಿ ಬರಮಾಡಿಕೊಂಡ ಜನ
ಪ್ರಧಾನಿ ಮೋದಿಯನ್ನು ಬುಡಕಟ್ಟು ಸಂಪ್ರದಾಯದಂತೆ ವಿಶಿಷ್ಟವಾಗಿ ಬರಮಾಡಿಕೊಂಡ ಜನ
ಯೋಗೇಶ್ವರ್ ನಿರಾಶೆಗೆ ಡಿಕೆ ಸುರೇಶ್ ಸಮಂಜಸ ಪ್ರತಿಕ್ರಿಯೆ ನೀಡಲಿಲ್ಲ
ಯೋಗೇಶ್ವರ್ ನಿರಾಶೆಗೆ ಡಿಕೆ ಸುರೇಶ್ ಸಮಂಜಸ ಪ್ರತಿಕ್ರಿಯೆ ನೀಡಲಿಲ್ಲ
ಜಮೀರ್ ಅಹ್ಮದ್ ಜನಾಂಗೀಯ ನಿಂದನೆ ಮಾಡುವ ಜೊತೆ ಸುಳ್ಳನ್ನೂ ಹೇಳಿದರೇ?
ಜಮೀರ್ ಅಹ್ಮದ್ ಜನಾಂಗೀಯ ನಿಂದನೆ ಮಾಡುವ ಜೊತೆ ಸುಳ್ಳನ್ನೂ ಹೇಳಿದರೇ?
ಬಸವರಾಜ ಹೊರಟ್ಟಿನ ಹೊಡೆಯಲು ಹೋಗಿದ್ದ ಜಮೀರ್
ಬಸವರಾಜ ಹೊರಟ್ಟಿನ ಹೊಡೆಯಲು ಹೋಗಿದ್ದ ಜಮೀರ್