India vs New Zealand 1st Test: ಮೂವರು ಸ್ಪಿನ್ನರ್​ಗಳನ್ನು ಕಣಕ್ಕಿಳಿಸುತ್ತಾ ಭಾರತ: ಕಾನ್ಪುರ ಪಿಚ್ ಯಾರಿಗೆ ಹೆಚ್ಚು ಸಹಕಾರಿ?

Kanpur Test Pitch Report: ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲ ಟೆಸ್ಟ್​ ಪಂದ್ಯ ನಡೆಯಲಿರುವ ಕಾನ್ಪುರದ ಗ್ರೀನ್ ಪಾರ್ಕ್ ಪಿಚ್‌ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡಲಿದೆ. ಮೊದಲ ಎರಡು ದಿನ ಬ್ಯಾಟ್ಸ್‌ಮನ್‌ಗಳ ಪರವಾಗಿ ವರ್ತಿಸುವ ಸಾಧ್ಯತೆ ದಟ್ಟವಾಗಿದ್ದು, ಚಳಿಗಾಲವಾದ ಕಾರಣ ಆರಂಭಿಕ ಅವಧಿಯಲ್ಲಿ ವೇಗದ ಬೌಲರ್‌ಗಳಿಗೆ ನೆರವಾಗಬಹುದು.

India vs New Zealand 1st Test: ಮೂವರು ಸ್ಪಿನ್ನರ್​ಗಳನ್ನು ಕಣಕ್ಕಿಳಿಸುತ್ತಾ ಭಾರತ: ಕಾನ್ಪುರ ಪಿಚ್ ಯಾರಿಗೆ ಹೆಚ್ಚು ಸಹಕಾರಿ?
India vs New Zealand Kanpur Test
Follow us
TV9 Web
| Updated By: Vinay Bhat

Updated on: Nov 25, 2021 | 8:30 AM

ಕಾನ್ಪುರದಲ್ಲಿಂದು (Kanpur Test) ಭಾರತ ಹಾಗೂ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಚಾಂಪಿಯನ್ ಆಗಿರುವ ನ್ಯೂಜಿಲೆಂಡ್ (India vs New Zealand) ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿ ಆಗುತ್ತಿದೆ. ಟಿ20 ಸರಣಿಯಲ್ಲಿ (T20I Series) ಕಿವೀಸ್ ಪಡೆ ಭಾರೀ ಮುಖಭಂಗಕ್ಕೆ ಒಳಗಾದರೂ ಟೆಸ್ಟ್​ನಲ್ಲಿ ಇವರನ್ನು ಕಡೆಗಣಿಸುವಂತಿಲ್ಲ. ಕೇನ್ ವಿಲಿಯಮ್ಸನ್ (Kane Williomson) ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದು, ರಾಸ್ ಟೇಲರ್ ಸೇರಿದಂತೆ ಅಪಾಯಕಾರಿ ಆಟಗಾರರ ದಂಡೇ ಇದೆ. ಇತ್ತ ಭಾರತ ವಿರಾಟ್ ಕೊಹ್ಲಿ (Virat Kohli), ಜಸ್​ಪ್ರೀತ್ ಬುಮ್ರಾ, ರೋಹಿತ್ ಶರ್ಮಾರಂತಹ (Rohit Sharma) ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿದೆ. ಪಂದ್ಯ ಬೆಳಗ್ಗೆ 9:30ಕ್ಕೆ ಆರಂಭವಾಗಲಿದ್ದು, 9 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಟೀಮ್ ಇಂಡಿಯಾದ (Team India) ಪ್ಲೇಯಿಂಗ್ ಇಲೆವೆನ್ ಯಾವರೀತಿ ಇರಲಿದೆ ಎಂಬುದು ಕುತೂಹಲ ಕೆರಳಿಸಿದೆ. ಇದರ ನಡುವೆ ಕಾನ್ಪುರದ ಗ್ರೀನ್ ಪಾರ್ಕ್​ ಪಿಚ್ (Green Park Pitch) ಹೇಗಿದೆ?, ಈ ಪಿಚ್​ ಯಾರಿಗೆ ಹೆಚ್ಚು ಸಹಕಾರಿಯಾಗಲಿದೆ ಎಂಬುದನ್ನು ನೋಡೋಣ.

ಕಾನ್ಪುರ ಪಿಚ್‌ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡಲಿದೆ. ಮೊದಲ ಎರಡು ದಿನ ಬ್ಯಾಟ್ಸ್‌ಮನ್‌ಗಳ ಪರವಾಗಿ ವರ್ತಿಸುವ ಸಾಧ್ಯತೆ ದಟ್ಟವಾಗಿದ್ದು, ಚಳಿಗಾಲವಾದ ಕಾರಣ ಆರಂಭಿಕ ಅವಧಿಯಲ್ಲಿ ವೇಗದ ಬೌಲರ್‌ಗಳಿಗೆ ನೆರವಾಗಬಹುದು. ಮೊದಲು ಬ್ಯಾಟ್‌ ಮಾಡಿರುವ ತಂಡಗಳೇ ಹೆಚ್ಚಿನ ಗೆಲುವ ಸಾಧಿಸಿದ್ದು, ಟಾಸ್‌ ಗೆಲ್ಲುವ ತಂಡ ಬ್ಯಾಟಿಂಗ್‌ ಆಯ್ಕೆ ಮಾಡಿಕೊಳ್ಳುವುದು ಉತ್ತಮ ಆಯ್ಕೆ. ಭಾರತ ತಂಡ ಕೊನೇ ಬಾರಿ 2016ರಲ್ಲಿ ಕಾನ್ಪುರದಲ್ಲಿ ಕಿವೀಸ್ ವಿರುದ್ಧ ಆಡಿದಾಗ ಅಶ್ವಿನ್-ಜಡೇಜಾ ಜೋಡಿ 16 ವಿಕೆಟ್ ಹಂಚಿಕೊಂಡಿತ್ತು. ಗ್ರೀನ್ ಪಾರ್ಕ್ ಪಿಚ್ ಎಷ್ಟರ ಮಟ್ಟಿಗೆ ಸ್ಪಿನ್ ಸ್ನೇಹಿ ಎಂಬುದನ್ನು ಈ ಅಂಕಿ-ಅಂಶವೇ ಸಾರುತ್ತಿದೆ.

ಈ ಪಿಚ್ ಸ್ಪಿನ್ನರ್​ಗಳಿಗೆ ಹೆಚ್ಚು ನೆರವಾಗುವುದರಿಂದ ಟೀಮ್ ಇಂಡಿಯಾ ಪರ ಮೂವರು ಸ್ಪಿನ್ನರ್​ಗಳು ಕಣಕ್ಕಿಳಿಯುವ ಅಂದಾಜಿದೆ. ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್ ಒಂದುಕಡೆಯಾದರೆ ಅಕ್ಷರ್ ಪಟೇಲ್ ಕೂಡ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು. ಯಾಕಂದ್ರೆ ಅಕ್ಷರ್ ಕೂಡ ಬೊಂಬಾಟ್ ಫಾರ್ಮ್​ನಲ್ಲಿದ್ದಾರೆ. ಇವರು ಕಳೆದ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ 27 ವಿಕೆಟ್ ಕಬಳಿಸಿ ಮಿಂಚಿದ್ದರು. ಹೀಗಾಗಿ ರಹಾನೆ ಮೂವರು ಸ್ಪಿನ್ನರ್​ಗಳನ್ನು ಆಡಿಸುವುದು ಬಹುತೇಕ ಖಚಿತ.

ಇತ್ತ ನ್ಯೂಜಿಲೆಂಡ್ ತ್ರಿವಳಿ ಸ್ಪಿನ್ನರ್‌ಗಳನ್ನು ದಾಳಿಗೆ ಇಳಿಸಲಿದೆ ಎಂಬ ಮಾಹಿತಿ ಲಭಿಸಿದೆ. ಆದರೆ ಭಾರತದ ಬ್ಯಾಟ್ಸ್‌ಮನ್‌ಗಳು ಸ್ಪಿನ್ನನ್ನು ಚೆನ್ನಾಗಿಯೇ ನಿಭಾಯಿಸಬಲ್ಲ ಸಾಮರ್ಥ್ಯ ಹೊಂದಿರುವುದರಿಂದ ಇದೇನೂ ಆತಂಕದ ಸಂಗತಿಯಲ್ಲ. ಕಿವೀಸ್ ಪಡೆ ಭಾರತವನ್ನು ಸೋಲಿಸುವ ಮೂಲಕವೇ ಚೊಚ್ಚಲ ಐಸಿಸಿ ಟೆಸ್ಟ್‌ ಚಾಂಪಿಯನ್‌ ಆಗಿತ್ತೆಂಬುದನ್ನು ಮರೆಯುವಂತಿಲ್ಲ. ಡ್ರಾ ಮಾಡಿಕೊಳ್ಳಬಹುದಾದ ಈ ಪಂದ್ಯದಲ್ಲಿ ಕೊಹ್ಲಿ ಪಡೆ ಹೀನಾಯ ಸೋಲನುಭವಿಸಿತ್ತು. ಇದಕ್ಕೀಗ ಸೇಡು ತೀರಿಸಿಕೊಳ್ಳಬೇಕಿದೆ.

ಶ್ರೇಯಸ್ ಅಯ್ಯರ್ ಪದಾರ್ಪಣೆ

ಆಡುವ 11ರ ಬಳಗದಲ್ಲಿ ಶ್ರೇಯಸ್‌ ಅಯ್ಯರ್‌ ಇರಲಿದ್ದಾರೆ ಎಂದು ನಾಯಕ ರಹಾನೆ ಹೇಳಿದ್ದು, ಈ ಮೂಲಕ ಟೀಮ್ ಇಂಡಿಯಾ ಪರವಾಗಿ ಅಯ್ಯರ್‌ ಟೆಸ್ಟ್‌ಗೆ ಪದಾರ್ಪಣೆ ಮಾಡುವುದು ಖಚಿತವಾಗಿದೆ. ಶ್ರೇಯಸ್‌ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುವ ಸಾಧ್ಯತೆ ಹೆಚ್ಚಿದೆ. ಕೆಎಲ್ ರಾಹುಲ್ ಗಾಯದಿಂದಾಗಿ ಶ್ರೇಯಸ್‌ಗೆ ಈ ಅವಕಾಶ ಒಲಿದಿದೆ. ಇಲ್ಲದಿದ್ದರೆ ಶುಭ್ಮನ್ ಗಿಲ್ ಮಧ್ಯಮ ಕ್ರಮಾಂಕದಲ್ಲಿ ಆಡುವ ನಿರೀಕ್ಷೆ ಇತ್ತು. ಇದೀಗ ರೋಹಿತ್-ರಾಹುಲ್ ಗೈರಲ್ಲಿ ಮಯಾಂಕ್ ಅಗರ್ವಾಲ್- ಗಿಲ್ ಭಾರತದ ಹೊಸ ಆರಂಭಿಕ ಜೋಡಿಯಾಗಲಿದ್ದಾರೆ.

ಭಾರತ ಸಂಭಾವ್ಯ ಪ್ಲೇಯಿಂಗ್ XI:

ಶುಭ್ಮನ್ ಗಿಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಶ್ರೇಯಸ್ ಅಯ್ಯರ್, ಅಜಿಂಕ್ಯಾ ರಹಾನೆ (ನಾಯಕ), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಇಶಾಂತ್ ಶರ್ಮಾ, ಉಮೇಶ್ ಯಾದವ್.

India vs New Zealand 1st Test: ಇಂದು ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್ ಆರಂಭ: ಶ್ರೇಯಸ್ ಅಯ್ಯರ್ ಪದಾರ್ಪಣೆ

(IND vs NZ 1st Test Here is the Green Park pitch for the first Test between India vs New Zealand)