IND vs NZ: ಭಾರತದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆದ್ದು ಇತಿಹಾಸ ಸೃಷ್ಟಿಸಿದ ನ್ಯೂಜಿಲೆಂಡ್

IND vs NZ: ಪುಣೆಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು 114 ರನ್​ಗಳಿಂದ ಗೆದ್ದುಕೊಂಡಿರುವ ನ್ಯೂಜಿಲೆಂಡ್ ತಂಡ ಇದೇ ಮೊದಲ ಬಾರಿಗೆ ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದ ದಾಖಲೆ ನಿರ್ಮಿಸಿದೆ.

IND vs NZ: ಭಾರತದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆದ್ದು ಇತಿಹಾಸ ಸೃಷ್ಟಿಸಿದ ನ್ಯೂಜಿಲೆಂಡ್
ಭಾರತ- ನ್ಯೂಜಿಲೆಂಡ್
Follow us
|

Updated on:Oct 26, 2024 | 4:10 PM

ಪುಣೆಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು 113 ರನ್​ಗಳಿಂದ ಗೆದ್ದುಕೊಂಡಿರುವ ನ್ಯೂಜಿಲೆಂಡ್ ತಂಡ ಇದೇ ಮೊದಲ ಬಾರಿಗೆ ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದ ದಾಖಲೆ ನಿರ್ಮಿಸಿದೆ. ವಾಸ್ತವವಾಗಿ 1955 ರಿಂದ ಟೆಸ್ಟ್ ಸರಣಿಗಾಗಿ ಭಾರತ ಪ್ರವಾಸ ಮಾಡುತ್ತಿರುವ ನ್ಯೂಜಿಲೆಂಡ್ ತಂಡ, ಇದುವರೆಗೆ ಭಾರತದ ನೆಲದಲ್ಲಿ ಈ ಸರಣಿಯನ್ನು ಹೊರತುಪಡಿಸಿ 12 ಟೆಸ್ಟ್ ಸರಣಿಗಳನ್ನುನ ಆಡಿತ್ತು. ಆದರೆ ಈ ಯಾವ ಸರಣಿಯಲ್ಲೂ ಕಿವೀಸ್ ತಂಡ ಗೆಲ್ಲುವುದಕ್ಕೆ ಟೀಂ ಇಂಡಿಯಾ ಅವಕಾಶ ಮಾಡಿಕೊಟ್ಟಿರಲಿಲ್ಲ. ಆದರೀಗ ರೋಹಿತ್ ಪಡೆ ತವರಿನಲ್ಲಿ ಮೊದಲ ಬಾರಿಗೆ ಕಿವೀಸ್ ವಿರುದ್ಧ ಸೋತ ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ. ಈ ಮೊದಲು ಬೆಂಗಳೂರಿನಲ್ಲಿ ನಡೆದ ಟೆಸ್ಟ್ ಪಂದ್ಯವನ್ನು 8 ವಿಕೆಟ್​ಗಳಿಂದ ಗೆದ್ದುಕೊಂಡಿದ್ದ ಕಿವೀಸ್ ತಂಡ, ಇದೀಗ ಎರಡನೇ ಟೆಸ್ಟ್ ಪಂದ್ಯವನ್ನು ಸುಲಭವಾಗಿ ಗೆದ್ದು ಭಾರತದ ನೆಲದಲ್ಲಿ ಇತಿಹಾಸ ನಿರ್ಮಿಸಿದೆ. ಇತ್ತ ಈ ಸೋಲಿನೊಂದಿಗೆ ತವರಿನಲ್ಲಿ ಟೀಂ ಇಂಡಿಯಾದ ಅಜೇಯ ಟೆಸ್ಟ್ ಸರಣಿಯ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ.

ಭಾರತಕ್ಕೆ 359 ರನ್ ಗುರಿ

ಪುಣೆ ಟೆಸ್ಟ್​ನ ಸೋಲಿಗೆ ಟೀಂ ಇಂಡಿಯಾದ ಕಳಪೆ ಬ್ಯಾಟಿಂಗ್ ಪ್ರಮುಖ ಕಾರಣ ಎಂದರೆ ತಪ್ಪಾಗಲಾರದು. ಏಕೆಂದರೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 259 ರನ್ ಕಲೆಹಾಕಿತು. ನಂತರ ಬ್ಯಾಟಿಂಗ್ ಆರಂಭಿಸಿದ ಟೀಂ  ಇಂಡಿಯಾ ಕೇವಲ 156 ರನ್​ಗಳಿಗೆ ಆಲೌಟ್ ಆಯಿತು. ಹೀಗಾಗಿ 103 ರನ್​ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ತಂಡ  255 ರನ್​ಗಳಿಗೆ ಆಲೌಟ್ ಆಗುವ ಮೂಲಕ ಭಾರತಕ್ಕೆ 359 ರನ್​ಗಳ ಗುರಿ ನೀಡಿತು.

ಬ್ಯಾಟಿಂಗ್ ವೈಫಲ್ಯ ಸೋಲಿಗೆ ಕಾರಣ

ಆದರೆ ಗುರಿ ಬೆನ್ನಟ್ಟಿದ ಟೀಂ ಇಂಡಿಯಾದ ಬ್ಯಾಟಿಂಗ್ ಮೊದಲ ಇನ್ನಿಂಗ್ಸ್​ನಂತೆ ಎರಡನೇ ಇನ್ನಿಂಗ್ಸ್​ನಲ್ಲೂ ಕೈಕೊಟ್ಟಿತು. ಹೀಗಾಗಿ ಇಡೀ ತಂಡ ಎರಡನೇ ಇನ್ನಿಂಗ್ಸ್​ನಲ್ಲಿ ಕೇವಲ 245 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ನಾಯಕ ರೋಹಿತ್ ಶರ್ಮಾ ಕೇವಲ 8 ರನ್ ಗಳಿಸಿ ಔಟಾದರೆ, ವಿರಾಟ್ ಕೊಹ್ಲಿ ಕೇವಲ 17 ರನ್​ಗೆ ಸುಸ್ತಾದರು. ವಾಷಿಂಗ್ಟನ್ ಸುಂದರ್ 21 ರನ್ ಕೊಡುಗೆ ನೀಡಿದರೆ, ಇಲ್ಲದೆ ರನ್ ಕದಿಯಲು ಹೋದ ರಿಷಬ್ ಪಂತ್​ಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ತಂಡದ ಪರ ಗರಿಷ್ಠ ಇನ್ನಿಂಗ್ಸ್ ಆಡಿದ ರವೀಂದ್ರ ಜಡೇಜಾ 42 ರನ್ ಗಳಿಸಿದರೂ ತಂಡದ ಸೋಲನ್ನು ತಡೆಯಲು ಸಾಧ್ಯವಾಗಲಿಲ್ಲ.

ಮಿಂಚಿದ ಸ್ಯಾಂಟ್ನರ್

ನ್ಯೂಜಿಲೆಂಡ್ ಪರ ಎರಡನೇ ಇನ್ನಿಂಗ್ಸ್‌ನಲ್ಲೂ ಮಾರಕ ಬೌಲಿಂಗ್ ಪ್ರದರ್ಶಿಸಿದ ಮಿಚೆಲ್ ಸ್ಯಾಂಟ್ನರ್ ತಂಡದ ಗೆಲುವಿನ ಪ್ರಮುಖ ರೂವಾರಿ ಎನಿಸಿಕೊಂಡರು.  ಮೊದಲ ಇನ್ನಿಂಗ್ಸ್​ನಲ್ಲಿ ಪ್ರಮುಖ 7 ವಿಕೆಟ್ ಉರುಳಿಸಿದ್ದ ಸ್ಯಾಂಟ್ನರ್, ಎರಡನೇ ಇನ್ನಿಂಗ್ಸ್​ನಲ್ಲೂ 6 ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಕಿವೀಸ್ ತಂಡ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದ್ದು, ಭಾರತದಲ್ಲಿ ಚೊಚ್ಚಲ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:55 pm, Sat, 26 October 24

ಬಿಜೆಪಿ ಜೊತೆ ಮೈತ್ರಿ ಬೆಳಸುವಂತೆ ಕುಮಾರಸ್ವಾಮಿಗೆ ಹೇಳಿದ್ದೇ ನಾನು: ಸಿಪಿವೈ
ಬಿಜೆಪಿ ಜೊತೆ ಮೈತ್ರಿ ಬೆಳಸುವಂತೆ ಕುಮಾರಸ್ವಾಮಿಗೆ ಹೇಳಿದ್ದೇ ನಾನು: ಸಿಪಿವೈ
ಬಿಜೆಪಿ ಶಾಸಕರು ಕಾಂಗ್ರೆಸ್ ಸೇರುವ ಬಗ್ಗೆ ಸೋಮಶೇಖರ್​ರನ್ನೇ ಕೇಳಬೇಕು: ಸಚಿವ
ಬಿಜೆಪಿ ಶಾಸಕರು ಕಾಂಗ್ರೆಸ್ ಸೇರುವ ಬಗ್ಗೆ ಸೋಮಶೇಖರ್​ರನ್ನೇ ಕೇಳಬೇಕು: ಸಚಿವ
ಅಧಿಕೃತ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವಂತೆ ಖಾದ್ರಿಗೆ ಸಿಎಂ ತಾಕೀತು
ಅಧಿಕೃತ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವಂತೆ ಖಾದ್ರಿಗೆ ಸಿಎಂ ತಾಕೀತು
ಪಹಣಿಯಲ್ಲಿ ವಕ್ಫ್​​ ಹೆಸರು: ವಿಜಯಪುರ ರೈತರ ಪ್ರತಿಭಟನೆ
ಪಹಣಿಯಲ್ಲಿ ವಕ್ಫ್​​ ಹೆಸರು: ವಿಜಯಪುರ ರೈತರ ಪ್ರತಿಭಟನೆ
ಮುಚ್ಚಿದ ಹೋಟೆಲ್​​ಗೆ ರಾತ್ರಿ ನುಗ್ಗಿದ ಹೆಲ್ಮೆಟ್​ಧಾರಿ ಕಳ್ಳ ಚಿಲ್ರೆ ಕದ್ದ
ಮುಚ್ಚಿದ ಹೋಟೆಲ್​​ಗೆ ರಾತ್ರಿ ನುಗ್ಗಿದ ಹೆಲ್ಮೆಟ್​ಧಾರಿ ಕಳ್ಳ ಚಿಲ್ರೆ ಕದ್ದ
ನಸುಕಿನ ಜಾವ 4ಗಂಟೆಯಿಂದ ರಾತ್ರಿ 11 ಗಂಟೆಯರೆಗೆ ಭಕ್ತರ ದರ್ಶನಕ್ಕೆ ಅವಕಾಶ
ನಸುಕಿನ ಜಾವ 4ಗಂಟೆಯಿಂದ ರಾತ್ರಿ 11 ಗಂಟೆಯರೆಗೆ ಭಕ್ತರ ದರ್ಶನಕ್ಕೆ ಅವಕಾಶ
ಹೆಚ್​ಡಿ ದೇವೇಗೌಡ ಮನೆಗೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಭೇಟಿ
ಹೆಚ್​ಡಿ ದೇವೇಗೌಡ ಮನೆಗೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಭೇಟಿ
ಬೇರೆ ಜಿಲ್ಲೆಯ ಕುಮಾರಸ್ವಾಮಿ ಮಂಡ್ಯದಿಂದ ಯಾಕೆ ಸ್ಪರ್ಧಿಸುತ್ತಾರೆ: ಗೌಡ
ಬೇರೆ ಜಿಲ್ಲೆಯ ಕುಮಾರಸ್ವಾಮಿ ಮಂಡ್ಯದಿಂದ ಯಾಕೆ ಸ್ಪರ್ಧಿಸುತ್ತಾರೆ: ಗೌಡ
ಮಂಡ್ಯ ಜನ ಗಂಡಸರಾಗ್ರಪ್ಪ, ಕೈಗೆ ಬಳೆ‌ ತೊಟ್ಟುಕೊಳ್ಳಬೇಡಿ ಎಂದ ಶಿವರಾಮೇಗೌಡ
ಮಂಡ್ಯ ಜನ ಗಂಡಸರಾಗ್ರಪ್ಪ, ಕೈಗೆ ಬಳೆ‌ ತೊಟ್ಟುಕೊಳ್ಳಬೇಡಿ ಎಂದ ಶಿವರಾಮೇಗೌಡ
ಬಿಗ್​ಬಾಸ್ ಮನೆಗೆ ಕಾಲಿಟ್ಟ ಯೋಗರಾಜ್ ಭಟ್, ಮನೆಯಲ್ಲಿ ನಗುವೋ ನಗು
ಬಿಗ್​ಬಾಸ್ ಮನೆಗೆ ಕಾಲಿಟ್ಟ ಯೋಗರಾಜ್ ಭಟ್, ಮನೆಯಲ್ಲಿ ನಗುವೋ ನಗು