AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Breaking: ಶುಭ್​ಮನ್​ ಗಿಲ್​ಗೆ ಇಂಜುರಿ! ಆಟದ ಮಧ್ಯದಲ್ಲೇ ಮೈದಾನ ತೊರೆದ ಯುವ ಬ್ಯಾಟರ್

Shubman Gill Injury: ಭಾರತ ತಂಡಕ್ಕೆ ಆಘಾತ ಎದುರಾಗಿದ್ದು, ರೋಹಿತ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ್ದ ಶುಭ್​ಮನ್ ಗಿಲ್, ಸ್ನಾಯು ಸೆಳೆತದಿಂದಾಗಿ ಆಟದ ಮಧ್ಯದಲ್ಲೇ ಮೈದಾನವನ್ನು ತೊರೆದಿದ್ದಾರೆ.

Breaking: ಶುಭ್​ಮನ್​ ಗಿಲ್​ಗೆ ಇಂಜುರಿ! ಆಟದ ಮಧ್ಯದಲ್ಲೇ ಮೈದಾನ ತೊರೆದ ಯುವ ಬ್ಯಾಟರ್
ಶುಭ್​ಮನ್ ಗಿಲ್
ಪೃಥ್ವಿಶಂಕರ
|

Updated on:Nov 15, 2023 | 4:21 PM

Share

ನ್ಯೂಜಿಲೆಂಡ್ ವಿರುದ್ಧ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ವಿಶ್ವಕಪ್ (World Cup 2023) ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾ (India Vs New Zealand) ಉತ್ತಮ ಸ್ಥಿತಿಯಲ್ಲಿದೆ. ತಂಡ, ಆರಂಭಿಕ ರೋಹಿತ್ ಶರ್ಮಾ (Rohit Sharma) ಅವರ ಏಕೈಕ ವಿಕೆಟ್ ಕಳೆದುಕೊಂಡು 180 ಕ್ಕೂ ಹೆಚ್ಚು ರನ್ ಕಲೆಹಾಕಿದೆ. ಆದರೆ ಈ ನಡುವೆ ತಂಡಕ್ಕೆ ಆಘಾತ ಎದುರಾಗಿದ್ದು, ರೋಹಿತ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ್ದ ಶುಭ್​ಮನ್ ಗಿಲ್ (Shubman Gill), ಸ್ನಾಯು ಸೆಳೆತದಿಂದಾಗಿ ಆಟದ ಮಧ್ಯದಲ್ಲೇ ಮೈದಾನವನ್ನು ತೊರೆದಿದ್ದಾರೆ. ಹೀಗಾಗಿ ರಿಟೈರ್ಡ್​ ಹರ್ಟ್​ ಆಗಿರುವ ಗಿಲ್ ಬದಲಿಗೆ ಶ್ರೇಯಸ್ ಅಯ್ಯರ್, ವಿರಾಟ್ ಕೊಹ್ಲಿ (Virat Kohli) ಅವರೊಂದಿಗೆ ಕ್ರೀಸ್​ನಲ್ಲಿದ್ದಾರೆ.

ಅರ್ಧಶತಕ ಬಾರಿಸಿದ ಗಿಲ್

ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಶುಭ್​ಮನ್​ ಗಿಲ್ ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್​ಗೆ ಮುಂದಾಗಿದ್ದರು. ಈ ಮೂಲಕ ಮೊದಲ ವಿಕೆಟ್​ಗೆ ರೋಹಿತ್ ಅವರೊಂದಿಗೆ ಅರ್ಧಶತಕದ ಜೊತೆಯಾಟವನ್ನು ಹಂಚಿಕೊಂಡರು. ಆ ವೇಳೆ 47 ರನ್ ಸಿಡಿಸಿ ನಾಯಕ ಅರ್ಧಶತಕ ವಂಚಿತರಾಗಿ ಪೆವಿಲಿಯನ್ ಸೇರಿಕೊಂಡರು. ನಂತರ ವಿರಾಟ್ ಕೊಹ್ಲಿ ಅವರೊಂದಿಗೆ ಬಿಗ್ ಇನ್ನಿಂಗ್ಸ್ ಕಟ್ಟಿದ ಗಿಲ್, ಅರ್ಧಶತಕವನ್ನು ಸಹ ಪೂರೈಸಿದರು.

79 ರನ್ ಸಿಡಿಸಿರುವ ಗಿಲ್

ಆದರೆ ಈ ವೇಳೆ ಮುಂಬೈನ ಬಿಸಿಲಿನಿಂದಾಗಿ ವಿರಾಟ್ ಕೊಹ್ಲಿ ಅವರೊಂದಿಗೆ ವಿಕೆಟ್ ಮಧ್ಯದಲ್ಲಿ ಓಡಲು ಕಷ್ಟ ಪಡುತ್ತಿದ್ದ ಗಿಲ್ ಅವರನ್ನು ಮೈದಾನದಿಂದ ಹೊರಬರುವಂತೆ ನಾಯಕ ರೋಹಿತ್ ಶರ್ಮಾ ಸೂಚನೆ ನೀಡಿದರು. ಆ ಬಳಿಕ ನಾಯಕನ ಸಲಹೆ ಮೇರೆಗೆ ಗಿಲ್, 65 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 79 ರನ್ ಸಿಡಿಸಿ, ಪೆವಿಲಿಯನ್ ಸೇರಿಕೊಂಡಿದ್ದಾರೆ. ಇದೀಗ ಇಂಜುರಿಯಿಂದ ಪೆವಿಲಿಯನ್ ಸೇರಿಕೊಂಡಿರುವ ಗಿಲ್, ಮತ್ತೊಂದು ವಿಕೆಟ್ ಬಿದ್ದ ಬಳಿಕವೂ ಬ್ಯಾಟಿಂಗ್​ಗೆ ಬರಬಹುದಾಗಿದೆ.

ಈ ಸುದ್ದಿ ಬರೆಯುವ ವೇಳೆಗೆ ಟೀಂ ಇಂಡಿಯಾ 30 ಓವರ್​ಗಳ ಬ್ಯಾಟಿಂಗ್ ಮಾಡಿ ಒಂದೇ ಒಂದು ವಿಕೆಟ್ ಕಳೆದುಕೊಂಡು 220 ರನ್ ಕಲೆಹಾಕಿದೆ. ವಿರಾಟ್ ಕೊಹ್ಲಿ 74 ಎಸೆತಗಳಲ್ಲಿ 70 ರನ್​ಗಳಿಸಿ ಬ್ಯಾಟಿಂಗ್​ನಲ್ಲಿದ್ದರೆ, ಲೋಕಲ್ ಬಾಯ್ ಶ್ರೇಯಸ್ ಅಯ್ಯರ್ 20 ರನ್ ಬಾರಿಸಿ ಕೊಹ್ಲಿಗೆ ಉತ್ತಮ ಸಾಥ್ ನೀಡುತ್ತಿದ್ದಾರೆ.

Published On - 4:00 pm, Wed, 15 November 23

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ