5+5+2: ಟೀಮ್ ಇಂಡಿಯಾದ ಮುಂದಿನ ಸರಣಿ ವೇಳಾಪಟ್ಟಿ ಇಲ್ಲಿದೆ

ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಸರಣಿಯು ಅಕ್ಟೋಬರ್ 22 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಒಟ್ಟು 5 ಟಿ20, 5 ಏಕದಿನ ಹಾಗೂ 2 ಟೆಸ್ಟ್ ಪಂದ್ಯಗಳನ್ನಾಡಲಿದೆ. ಇದರಲ್ಲಿನ 2 ಟೆಸ್ಟ್ ಪಂದ್ಯಗಳು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಯ ಭಾಗವಾಗಿವೆ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ನಲ್ಲಿ ಉಳಿಯಲು ಟೀಮ್ ಇಂಡಿಯಾ ಪಾಲಿಗೆ ಈ ಟೆಸ್ಟ್ ಪಂದ್ಯಗಳು ಅತ್ಯಂತ ಮಹತ್ವದ್ದಾಗಿವೆ.

5+5+2: ಟೀಮ್ ಇಂಡಿಯಾದ ಮುಂದಿನ ಸರಣಿ ವೇಳಾಪಟ್ಟಿ ಇಲ್ಲಿದೆ
Team India
Image Credit source: GettyImages

Updated on: Oct 18, 2026 | 10:13 AM

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಸರಣಿ ಮುಕ್ತಾಯಗೊಂಡಿದೆ. ಮೂರು ಮ್ಯಾಚ್​ಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಟೀಮ್ ಇಂಡಿಯಾ ಗೆದ್ದುಕೊಂಡರೆ, ಐದು ಪಂದ್ಯಗಳ ಟಿ20 ಸರಣಿಯು 2-2 ಅಂತರದಿಂದ ಡ್ರಾನಲ್ಲಿ ಅಂತ್ಯ ಕಂಡಿದೆ. ಇದೀಗ ಭಾರತ ತಂಡವು ಮುಂದಿನ ಸರಣಿಗಾಗಿ ಸಜ್ಜಾಗಬೇಕಿದೆ. ಈ ಸರಣಿಯು ಆರಂಭವಾಗುವುದು ಅಕ್ಟೋಬರ್ 22 ರಿಂದ. ಅದು ಕೂಡ ದೂರದ ನ್ಯೂಝಿಲೆಂಡ್​ನಲ್ಲಿ ಎಂಬುದು ವಿಶೇಷ.

ಭಾರತ ತಂಡವು ನ್ಯೂಝಿಲೆಂಡ್ ವಿರುದ್ಧ ಒಟ್ಟು 12 ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಪ್ರವಾಸದಲ್ಲಿ ಮೊದಲಿಗೆ 5 ಪಂದ್ಯಗಳ ಟಿ20 ಸರಣಿ ಜರುಗಲಿದ್ದು, ಇದಾದ ಬಳಿಕ 5 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಈ ಎರಡೂ ಸೀಮಿತ ಓವರ್‌ಗಳ ಸರಣಿಗಳ ಮುಕ್ತಾಯದ ನಂತರ, ಟೀಮ್ ಇಂಡಿಯಾ ಆತಿಥೇಯರ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಲಿದೆ. ಈ ಸರಣಿಗಳ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…

Loading...

ಟಿ20 ಸರಣಿ ವೇಳಾಪಟ್ಟಿ:

ಪಂದ್ಯ ದಿನಾಂಕ (2026) ಕ್ರೀಡಾಂಗಣ ಮತ್ತು ಸ್ಥಳ ಸಮಯ (IST)
1ನೇ ಟಿ20 ಅಕ್ಟೋಬರ್ 22 ಹಾಗ್ಲಿ ಓವಲ್, ಕ್ರೈಸ್ಟ್‌ಚರ್ಚ್ ಮಧ್ಯಾಹ್ನ 1:30
2ನೇ ಟಿ20 ಅಕ್ಟೋಬರ್ 24 ಹಾಗ್ಲಿ ಓವಲ್, ಕ್ರೈಸ್ಟ್‌ಚರ್ಚ್ ಮಧ್ಯಾಹ್ನ 1:30
3ನೇ ಟಿ20 ಅಕ್ಟೋಬರ್ 27 ಹೆನ್ರಿ ಸ್ಟೇಡಿಯಂ, ವೆಲ್ಲಿಂಗ್ಟನ್ ಮಧ್ಯಾಹ್ನ 1:30
4ನೇ ಟಿ20 ಅಕ್ಟೋಬರ್ 30 ಈಡನ್ ಪಾರ್ಕ್, ಆಕ್ಲೆಂಡ್ ಮಧ್ಯಾಹ್ನ 1:30
5ನೇ ಟಿ20 ನವೆಂಬರ್ 01 ಸೆಡನ್ ಪಾರ್ಕ್, ಹ್ಯಾಮಿಲ್ಟನ್ ಮಧ್ಯಾಹ್ನ 1:30

ಇದನ್ನೂ ಓದಿ: ಕೇವಲ 30ನೇ ವಯಸ್ಸಿಗೆ ನಿವೃತ್ತಿ ಘೋಷಿಸಿದ ಬ್ರಾಡ್ ವೀಲ್!

ಏಕದಿನ ಸರಣಿ ವೇಳಾಪಟ್ಟಿ:

ಪಂದ್ಯ ದಿನಾಂಕ (2026) ಕ್ರೀಡಾಂಗಣ ಮತ್ತು ಸ್ಥಳ ಸಮಯ (IST)
1ನೇ ಏಕದಿನ ನವೆಂಬರ್ 04 ಈಡನ್ ಪಾರ್ಕ್, ಆಕ್ಲೆಂಡ್ ಮುಂಜಾನೆ 6:30
2ನೇ ಏಕದಿನ ನವೆಂಬರ್ 07 ಹೆನ್ರಿ ಸ್ಟೇಡಿಯಂ, ವೆಲ್ಲಿಂಗ್ಟನ್ ಮುಂಜಾನೆ 6:30
3ನೇ ಏಕದಿನ ನವೆಂಬರ್ 10 ಸೆಡನ್ ಪಾರ್ಕ್, ಹ್ಯಾಮಿಲ್ಟನ್ ಮುಂಜಾನೆ 6:30
4ನೇ ಏಕದಿನ ನವೆಂಬರ್ 13 ಬೇ ಓವಲ್, ತೌರಂಗಾ ಮುಂಜಾನೆ 6:30
5ನೇ ಏಕದಿನ ನವೆಂಬರ್ 15 ಬೇ ಓವಲ್, ತೌರಂಗಾ ಮುಂಜಾನೆ 6:30

ಇದನ್ನೂ ಓದಿ: ಸರಣಿ ಕೈ ತಪ್ಪಲು ಇವರೇ ಕಾರಣ: ಪಂದ್ಯದ ಬಳಿಕ ಶ್ರೇಯಸ್ ಅಯ್ಯರ್ ಹೇಳಿದ್ದೇನು?

ಟೆಸ್ಟ್ ಸರಣಿ ವೇಳಾಪಟ್ಟಿ:

ಪಂದ್ಯ ದಿನಾಂಕ (2026) ಕ್ರೀಡಾಂಗಣ ಮತ್ತು ಸ್ಥಳ ಸಮಯ (IST)
1ನೇ ಟೆಸ್ಟ್ ನವೆಂಬರ್ 19 – 23 ಬೆಸಿನ್ ರಿಸರ್ವ್, ವೆಲ್ಲಿಂಗ್ಟನ್ ಮುಂಜಾನೆ 3:30
2ನೇ ಟೆಸ್ಟ್ ನವೆಂಬರ್ 27 – ಡಿ 01 ಹಾಗ್ಲಿ ಓವಲ್, ಕ್ರೈಸ್ಟ್‌ಚರ್ಚ್ ಮುಂಜಾನೆ 3:30

ನ್ಯೂಝಿಲೆಂಡ್ ಪ್ರವಾಸದ ಸರಣಿಯ ಬಳಿಕ, ಭಾರತ ತಂಡವು ತಾಯ್ನಾಡಿಗೆ ಮರಳಿ ಶ್ರೀಲಂಕಾ ವಿರುದ್ಧ ಸ್ವದೇಶಿ ಸರಣಿಯನ್ನು ಆಡಲಿದೆ. ಡಿಸೆಂಬರ್ 13 ರಿಂದ ಶುರುವಾಗಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾ 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನಾಡಲಿದೆ.
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us