IND vs PAK: ಭಾರತ ತಂಡಕ್ಕೆ ಖಡಕ್ ಎಚ್ಚರಿಕೆ ನೀಡಿದ 19ರ ಯುವ ವೇಗಿ..!
IND vs PAK: ಟೀಮ್ ಇಂಡಿಯಾ ವಿರುದ್ದದ ಪಂದ್ಯಕ್ಕೂ ಮುನ್ನ ಸಂಪೂರ್ಣ ಫಿಟ್ನೆಸ್ ಹೊಂದಿದ್ದೇನೆ ಎಂದು ನಸೀಮ್ ಶಾ ತಿಳಿಸಿದ್ದಾರೆ. ಇದುವೇ ಈಗ ಟೀಮ್ ಇಂಡಿಯಾದ ಚಿಂತೆಗೆ ಕಾರಣವಾಗಿದೆ.
Asia Cup 2022: ಭಾರತ-ಪಾಕಿಸ್ತಾನ್ (India vs Pakistan) ನಡುವಣ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಸೂಪರ್-4 ಹಂತದ 2ನೇ ಪಂದ್ಯದಲ್ಲಿ ಇಂಡೊ-ಪಾಕ್ ಮತ್ತೆ ಮುಖಾಮುಖಿಯಾಗಲಿದೆ. ಭಾನುವಾರ ನಡೆಯಲಿರುವ ಈ ಪಂದ್ಯಕ್ಕೂ ಮುನ್ನ ಪಾಕಿಸ್ತಾನ್ ತಂಡಕ್ಕೆ ಶುಭ ಸುದ್ದಿಯೊಂದು ಸಿಕ್ಕಿದೆ. ಅದೇನೆಂದರೆ ಯುವ ವೇಗಿ ನಸೀಮ್ ಶಾ ಸಂಪೂರ್ಣ ಫಿಟ್ ಆಗಿದ್ದಾರೆ. ಅಂದರೆ ಭಾರತ-ಪಾಕ್ ನಡುವಣ ಮೊದಲ ಮುಖಾಮುಖಿಯಲ್ಲಿ ನಸೀಮ್ ಶಾ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದರು. ಅದರಲ್ಲೂ ನಿರ್ಣಾಯಕವಾಗಿದ್ದ ಅಂತಿಮ ಓವರ್ಗಳನ್ನು ನೋವಿನಲ್ಲೇ ಎಸೆದಿದ್ದರು.
ಇದೀಗ ಟೀಮ್ ಇಂಡಿಯಾ ವಿರುದ್ದದ ಪಂದ್ಯಕ್ಕೂ ಮುನ್ನ ಸಂಪೂರ್ಣ ಫಿಟ್ನೆಸ್ ಹೊಂದಿದ್ದೇನೆ ಎಂದು ನಸೀಮ್ ಶಾ ತಿಳಿಸಿದ್ದಾರೆ. ಇದುವೇ ಈಗ ಟೀಮ್ ಇಂಡಿಯಾದ ಚಿಂತೆಗೆ ಕಾರಣವಾಗಿದೆ. ಏಕೆಂದರೆ ಭಾರತದ ವಿರುದ್ದ ಚೊಚ್ಚಲ ಟಿ20 ಪಂದ್ಯವಾಡಿದ್ದ ನಸೀಮ್ ಶಾ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ಓವರ್ನಲ್ಲೇ ಕೆಎಲ್ ರಾಹುಲ್ ಅವರನ್ನು ಶೂನ್ಯಕ್ಕೆ ಬೌಲ್ಡ್ ಮಾಡಿದ್ದರು. ಇನ್ನು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾರನ್ನು ಕೂಡ ಕಾಡಿದ್ದರು. ಆ ಬಳಿಕ ಸೂರ್ಯಕುಮಾರ್ ಯಾದವ್ ಅವರನ್ನೂ ಕ್ಲೀನ್ ಬೌಲ್ಡ್ ಮಾಡಿ ಸಂಚಲನ ಸೃಷ್ಟಿಸಿದ್ದರು.
ಇದೀಗ ಸಂಪೂರ್ಣ ಫಿಟ್ನೆಸ್ನೊಂದಿಗೆ ಕಣಕ್ಕಿಳಿಯುತ್ತಿರುವುದಾಗಿ 19ರ ಯುವ ವೇಗಿ ಘೋಷಿಸಿದ್ದಾರೆ. ನಾನು ಈಗ ಫಿಟ್ ಆಗಿದ್ದೇನೆ. ಕಳೆದ ಬಾರಿ ಗಾಯದಿಂದಾಗಿ ನನ್ನ ಕೆಲಸವನ್ನು ಅರ್ಧಕ್ಕೆ ಬಿಟ್ಟಿದ್ದೆ. ಆದರೆ ಭಾರತದ ವಿರುದ್ಧದ ಅಪೂರ್ಣವಾಗಿದ್ದ ಕೆಲಸವನ್ನು ಈ ಭಾನುವಾರ ಪೂರ್ಣಗೊಳಿಸುತ್ತೇನೆ ಎಂದು ನಸೀಮ್ ಶಾ ತಿಳಿಸಿದ್ದಾರೆ.
ಈ ಮೂಲಕ ಮೊದಲ ಪಂದ್ಯದಲ್ಲಿನ ಸೋಲಿನ ಸೇಡನ್ನು ತೀರಿಸಿಕೊಳ್ಳುವುದಾಗಿ ಪರೋಕ್ಷವಾಗಿ ಯುವ ವೇಗಿ ತಿಳಿಸಿದ್ದಾರೆ. ಅದರಲ್ಲೂ ಈ ಬಾರಿಯ ಮುಖಾಮುಖಿಯಲ್ಲಿ ಕಳೆದ ಬಾರಿ ಅಪೂರ್ಣವಾಗಿದ್ದ ಕೆಲಸವನ್ನು ಪೂರ್ಣಗೊಳಿಸುವುದಾಗಿ ತಿಳಿಸಿರುವ ನಸೀಮ್ ಶಾ, ಟೀಮ್ ಇಂಡಿಯಾಗೆ ಪರೋಕ್ಷವಾಗಿ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಪಾಕಿಸ್ತಾನ್ ತಂಡ ಹೀಗಿದೆ:
ಬಾಬರ್ ಆಜಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್, ನಸೀಮ್ ಶಾ, ಹಸನ್ ಅಲಿ, ಶಾನವಾಜ್ ದಹಾನಿ ಮತ್ತು ಉಸ್ಮಾನ್ ಖಾದಿರ್.
ಏಷ್ಯಾಕಪ್ಗಾಗಿ ಟೀಮ್ ಇಂಡಿಯಾ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಆರ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.
ಮೀಸಲು ಆಟಗಾರರು: ಶ್ರೇಯಸ್ ಅಯ್ಯರ್ ಹಾಗೂ ದೀಪಕ್ ಚಹರ್.
Published On - 1:54 pm, Sat, 3 September 22