Mohammed Shami: ತಂಡದಲ್ಲಿಲ್ಲ ಚಾನ್ಸ್​…3 ಬಾರಿ ಆತ್ಮಹತ್ಯೆಗೆ ಯೋಚಿಸಿದ್ದ ಶಮಿ..!

Mohammed Shami: ಈ ಸಮಯದಲ್ಲಿ ನನ್ನ ಕುಟುಂಬ ಸದಸ್ಯರು ಮತ್ತು ಕೆಲ ಸ್ನೇಹಿತರು ಬೆಂಬಲಕ್ಕೆ ನಿಂತರು. ಅವೆಲ್ಲರೂ ದೈರ್ಯ ತುಂಬಿದ್ದರಿಂದ ಇಂದು ಸಮಸ್ಯೆಗಳನ್ನು ಎದುರಿಸಿ ಗೆಲ್ಲಲು ಸಾಧ್ಯವಾಗಿದೆ.

Mohammed Shami: ತಂಡದಲ್ಲಿಲ್ಲ ಚಾನ್ಸ್​...3 ಬಾರಿ ಆತ್ಮಹತ್ಯೆಗೆ ಯೋಚಿಸಿದ್ದ ಶಮಿ..!
Mohammed Shami
Follow us
TV9 Web
| Updated By: ಝಾಹಿರ್ ಯೂಸುಫ್

Updated on:Sep 03, 2022 | 12:12 PM

ಪ್ರಸ್ತುತ ಟೀಮ್ ಇಂಡಿಯಾದ ಅತ್ಯುತ್ತಮ ರಿವರ್ಸ್ ಸ್ವಿಂಗ್ ಬೌಲರ್ ಯಾರು ಎಂದು ಕೇಳಿದ್ರೆ ಕಣ್ಮುಚ್ಚಿ ಮೊಹಮ್ಮದ್ ಶಮಿ ಅವರ ಹೆಸರು ಹೇಳಬಹುದು. ಇದಾಗ್ಯೂ ಅವರನ್ನೇಕೆ ಏಷ್ಯಾಕಪ್​​ಗೆ ಆಯ್ಕೆ ಮಾಡಿಲ್ಲ ಎಂದು ನೀವು ಕೇಳಿದ್ರೆ ಫಿಟ್​ನೆಸ್ ಸಮಸ್ಯೆ. ಅಂದರೆ ಟಿ20 ಕ್ರಿಕೆಟ್​ನಲ್ಲಿ ಪ್ರತಿಯೊಂದು ರನ್​ಗಳು ಬಹಳ ಮುಖ್ಯ. ಆದರೆ ಅತ್ಯುತ್ತಮ ಬೌಲರ್ ಎನಿಸಿಕೊಂಡಿರುವ ಶಮಿ, ಅತ್ಯುತ್ತಮ ಫೀಲ್ಡರ್ ಅಲ್ಲ. ಹೀಗಾಗಿಯೇ ಬಿಸಿಸಿಐ ಶಮಿಯನ್ನು ಏಕದಿನ ಹಾಗೂ ಟೆಸ್ಟ್​ ಕ್ರಿಕೆಟ್​ನತ್ತ ಹೆಚ್ಚಿನ ಗಮನಹರಿಸುವಂತೆ ತಿಳಿಸಿದೆ. ಇದಾಗ್ಯೂ ಪ್ರಸ್ತುತ ಟೀಮ್ ಇಂಡಿಯಾ ಬೌಲಿಂಗ್ ಲೈನಪ್ ಗಮನಿಸಿದರೆ ಟಿ20 ವಿಶ್ವಕಪ್​ನಲ್ಲಿ ಮತ್ತೆ ಮೊಹಮ್ಮದ್ ಶಮಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

ಅಂದಹಾಗೆ ಮೊಹಮ್ಮದ್ ಶಮಿ ಅವರ ಬಗ್ಗೆ ಇಷ್ಟೊಂದು ಪೀಠಿಕೆ ಯಾಕೆಂದರೆ ಇಂದು ಅವರ ಹುಟ್ಟುಹಬ್ಬ. 3 ಸೆಪ್ಟೆಂಬರ್ 1990 ರಂದು ಜನಿಸಿದ ಶಮಿ ಇಂದು 32 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಟೀಮ್ ಇಂಡಿಯಾ ಪರ ಶಮಿ ಧೋನಿ ನಾಯಕತ್ವದಲ್ಲಿ ಪದಾರ್ಪಣೆ ಮಾಡಿದ್ದರೂ ಅವರನ್ನು ಗುರುತಿಸಿದ್ದು ಸೌರವ್ ಗಂಗೂಲಿ ಎಂಬುದೇ ಇಲ್ಲಿ ವಿಶೇಷ.

ಅಂದರೆ ಮೊಹಮ್ಮದ್ ಶಮಿ ಮೂಲತಃ ಉತ್ತರ ಪ್ರದೇಶದ ಕ್ರಿಕೆಟಿಗ. ಬಾಲ್ಯದಲ್ಲೇ ಅತ್ಯುತ್ತಮವಾಗಿ ಬೌಲಿಂಗ್ ಮಾಡುತ್ತಿದ್ದ ಅವರು ಯುಪಿ ಪರ ಮಾತ್ರ ಆಡಬೇಕೆಂದು ಬಯಸಿದ್ದರು. ಅದರಂತೆ ಕೋಚ್ ಸೇರಿದಂತೆ ಎಲ್ಲರೂ ಶಮಿಗೆ ಯುಪಿ ಅಂಡರ್-19 ತಂಡದಲ್ಲಿ ಅವಕಾಶ ಸಿಗುವುದನ್ನು ಖಚಿತಪಡಿಸಿಕೊಂಡಿದ್ದರು. ಆದರೆ ತಂಡಗಳ ಆಯ್ಕೆಯಲ್ಲಿನ ಒಳ ರಾಜಕೀಯದ ಕಾರಣ ಅವರಿಗೆ ಅಂದು ಅವಕಾಶ ಸಿಕ್ಕಿರಲಿಲ್ಲ.

ಇದನ್ನೂ ಓದಿ
Image
Team India: ಟೀಮ್ ಇಂಡಿಯಾ ಆಟಗಾರರ ಜೊತೆ ಕಾಣಿಸಿಕೊಂಡ ಸ್ಟಾರ್ ಕ್ರಿಕೆಟಿಗನ ಮಗ..!
Image
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Image
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಇದರಿಂದ ನೊಂದಿದ್ದ ಶಮಿಗೆ ಕೋಚ್ ದೈರ್ಯ ತುಂಬಿದರು. ಅಷ್ಟೇ ಅಲ್ಲದೆ ಉತ್ತರ ಪ್ರದೇಶ ಬಿಟ್ಟು ಪಶ್ಚಿಮ ಬಂಗಾಳದತ್ತ ಮುಖ ಮಾಡುವಂತೆ ತಿಳಿಸಿದ್ದರು. ಅದರಂತೆ ಬಂಗಾಳದ ಮೋಹನ್ ಬಗಾನ್ ಕ್ಲಬ್ ಪರ ಆಡಲು ಪ್ರಾರಂಭಿಸಿದರು. ಇದೇ ವೇಳೆ ನೆಟ್ಸ್‌ನಲ್ಲಿ ಸೌರವ್ ಗಂಗೂಲಿಗೆ ಬೌಲಿಂಗ್ ಮಾಡುವ ಅವಕಾಶವನ್ನು ಪಡೆದರು. ಇದು ಅವರ ವೃತ್ತಿಜೀವನದ ದೊಡ್ಡ ಟರ್ನಿಂಗ್ ಪಾಯಿಂಟ್ ಆಯಿತು.

ನೆಟ್ಸ್​ ಅಭ್ಯಾಸದಲ್ಲಿ ಗಂಗೂಲಿಯನ್ನೇ ಇಕ್ಕಟಿಗೆ ಸಿಲುಕಿಸಿದ ಶಮಿಯ ಮೇಲೆ ಒಂದು ಕಣ್ಣಿಡುವಂತೆ ಪಶ್ಚಿಮ ಬಂಗಾಳದ ಆಯ್ಕೆದಾರರಿಗೆ ದಾದಾ ತಿಳಿಸಿದ್ದರು. ಪರಿಣಾಮ 2010 ರಲ್ಲಿ ಬಂಗಾಳ ರಣಜಿ ತಂಡದಲ್ಲಿ ಶಮಿಗೆ ಅವಕಾಶ ಸಿಕ್ಕಿತ್ತು. ಅಷ್ಟೇ ಯಾಕೆ ಕೇವಲ ಮೂರು ವರ್ಷಗಳಲ್ಲಿ ಟೀಮ್ ಇಂಡಿಯಾ ಕದ ತಟ್ಟಿದರು. 2013ರ ಜನವರಿಯಲ್ಲಿ ಪಾಕಿಸ್ತಾನ ವಿರುದ್ಧದ ಏಕದಿನ ಪಂದ್ಯದೊಂದಿಗೆ ಮೊಹಮ್ಮದ್ ಶಮಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು. ಆ ಬಳಿಕ ನಡೆದಿದ್ದೆಲ್ಲವೂ ಇತಿಹಾಸ.

ಇದರ ನಡುವೆ ಮೊಹಮ್ಮದ್ ಶಮಿ ಅವರ ಕ್ರಿಕೆಟ್​ ಕೆರಿಯರ್ ಹಲವು ಏರಿಳಿತವನ್ನು ಕಂಡಿದೆ. ಅದರಲ್ಲೂ ಒಂದು ಹಂತದಲ್ಲಿ ಟೀಮ್ ಇಂಡಿಯಾದಿಂದ ಹೊರಬಿದ್ದ ಬಳಿಕ ಅವರು ಸಂಪೂರ್ಣ ಖಿನ್ನತೆಗೆ ಒಳಗಾಗಿದ್ದರು. ಈ ವೇಳೆ ಕೆಟ್ಟ ನಿರ್ಧಾರಗಳಿಗೆ ಮುಂದಾಗಿದ್ದೆ ಎಂಬುದನ್ನು  ರೋಹಿತ್ ಶರ್ಮಾ ಜೊತೆಗಿನ ಚಿಟ್​ ಚಾಟ್​ನಲ್ಲಿ ಈ ಹಿಂದೆ ಬಹಿರಂಗಪಡಿಸಿದ್ದರು.

ಈ ಬಗ್ಗೆ ಮಾತನಾಡಿದ್ದ ಶಮಿ, 2015ರ ವಿಶ್ವಕಪ್ ಬಳಿಕ ನನಗೆ ಜೀವನವೇ ಬೇಡ ಎನಿಸಿತ್ತು. ಅಂದು ಗಾಯಗೊಂಡಿದ್ದ ಕಾರಣ ನನಗೆ ವಿಶ್ವಕಪ್​ನಲ್ಲಿ ಅವಕಾಶ ಸಿಕ್ಕಿರಲಿಲ್ಲ. ಮತ್ತೆ ತಂಡಕ್ಕೆ ಮರಳಲು 18 ತಿಂಗಳು ಬೇಕಾಯಿತು. ಇದು ನನ್ನ ವೃತ್ತಿಜೀವನದ ಅತ್ಯಂತ ನೋವಿನ ಸಮಯವಾಗಿತ್ತು. ಅದರೊಂದಿಗೆ ಕೌಟುಂಬಿಕ ಸಮಸ್ಯೆ ಕೂಡ ಎದುರಾಯಿತು. ಐಪಿಎಲ್ ಆರಂಭವಾಗಲು 10-12 ದಿನಗಳಿರುವಾಗ ಆರೋಪಗಳು ಕೇಳಿ ಬಂದವು. ಈ ವೇಳೆ ಮಾಧ್ಯಮಗಳಲ್ಲೂ ನನ್ನ ಬಗ್ಗೆ ಹಲವು  ಅಂತೆಕಂತೆಗಳು ಬರುತ್ತಿದ್ದವು.

ಇವೆಲ್ಲದರಿಂದ ಖಿನ್ನತೆ, ಒತ್ತಡದಿಂದ ನಾನು ಬಳಲಾರಂಭಿಸಿದೆ. ಈ ವೇಳೆ ಮೂರು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದೆ. ಅಂದಿನ ನನ್ನ ವರ್ತನೆ, ದಿನನಿತ್ಯದ ಚಟುವಟಿಕೆ ಕಂಡು ಮನೆಯ ಒಬ್ಬರು ಯಾವಾಗಲೂ ನನ್ನ ಮೇಲೆ ಕಣ್ಣಿಟ್ಟಿರುತ್ತಿದ್ದರು. ನಮ್ಮ ಅಪಾರ್ಟ್​ಮೆಂಟ್​ 24ನೇ ಮಹಡಿಯಿಂದ ನಾನು ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂದು ಕುಟುಂಬದವರು ಆ ವೇಳೆ ಭಯಪಡುತ್ತಿದ್ದರು.

ಖಿನ್ನತೆಯ ಸಮಯದಲ್ಲಿ ನನ್ನ ಕುಟುಂಬ ಸದಸ್ಯರು ಮತ್ತು ಕೆಲ ಸ್ನೇಹಿತರು ಬೆಂಬಲಕ್ಕೆ ನಿಂತರು. ಅವೆಲ್ಲರೂ ದೈರ್ಯ ತುಂಬಿದ್ದರಿಂದ ಇಂದು ಸಮಸ್ಯೆಗಳನ್ನು ಎದುರಿಸಿ ಗೆಲ್ಲಲು ಸಾಧ್ಯವಾಗಿದೆ. ನನ್ನ ಕುಟುಂಬದವರ ಮತ್ತು ಸ್ನೇಹಿತರ ಪ್ರೋತ್ಸಾಹ ಸಿಗದಿದ್ದರೆ ಖಂಡಿತ ನಾನು ಮತ್ತೆ ಕ್ರಿಕೆಟ್​ಗೆ ಮರಳಲು ಸಾಧ್ಯವಾಗುತ್ತಿರಲಿಲ್ಲ ಎಂದು ಮೊಹಮ್ಮದ್ ಶಮಿ ಹೇಳಿದ್ದಾರೆ.

ವಿಶೇಷ ಎಂದರೆ 2015 ರ ಬಳಿಕ ಕಂಬ್ಯಾಕ್ ಮಾಡಿದ ಮೊಹಮ್ಮದ್ ಶಮಿ ಮತ್ತೆ ಹಿಂತಿರುಗಿ ನೋಡಿರಲಿಲ್ಲ. ತಂಡದ ಖಾಯಂ ವೇಗಿಯಾಗಿ ಕಾಣಿಸಿಕೊಂಡ ಶಮಿ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟರು. ಅಷ್ಟೇ ಅಲ್ಲದೆ ಕಳೆದ ಬಾರಿಯ ಐಪಿಎಲ್​ನಲ್ಲಿ ಗುಜರಾತ್ ಟೈಟಾನ್ಸ್ ಪರ 20 ವಿಕೆಟ್ ಕಬಳಿಸುವ ಮೂಲಕ ಪಾಂಡ್ಯ ಪಡೆಯನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿಯೂ ಪ್ರಮುಖ ಪಾತ್ರವಹಿಸಿದ್ದರು.

ಇದೀಗ ಟೀಮ್ ಇಂಡಿಯಾ ಟಿ20 ತಂಡದಿಂದ ಹೊರಗುಳಿದಿರುವ ಶಮಿ ಮತ್ತೆ ಚುಟುಕು ಕ್ರಿಕೆಟ್​ನಲ್ಲಿ ಕಾಣಿಸಿಕೊಳ್ಳುವ ಇರಾದೆಯಲ್ಲಿದ್ದಾರೆ. ಹೀಗಾಗಿ ಟಿ20 ವಿಶ್ವಕಪ್​ ವೇಳೆ ಮತ್ತೆ ತಂಡದಲ್ಲಿ ಅವಕಾಶ ಪಡೆದರೂ ಅಚ್ಚರಿಪಡಬೇಕಿಲ್ಲ. ಎನಿವೇ ಟೀಮ್ ಇಂಡಿಯಾದ ರಿವರ್ಸ್ ಸ್ವಿಂಗರ್​ಗೆ ಹುಟ್ಟುಹಬ್ಬದ ಶುಭಾಶಯಗಳು.

Published On - 12:06 pm, Sat, 3 September 22