VIDEO: ಅಖಂಡ ಭಾರತ: ಪಾಕ್ ಅಭಿಮಾನಿಗಳಿಂದ ಭಾರತಕ್ಕೆ ಜೈಕಾರ
T20 World Cup 2024: ಟಿ20 ವಿಶ್ವಕಪ್ನ 25ನೇ ಪಂದ್ಯದಲ್ಲಿ ಭಾರತ ಮತ್ತು ಯುಎಸ್ಎ ತಂಡಗಳು ಮುಖಾಮುಖಿಯಾಗಲಿದೆ. ಬುಧವಾರ ನಡೆಯಲಿರುವ ಈ ಪಂದ್ಯದಲ್ಲಿ ಜಯಿಸಿದರೆ, ಟೀಮ್ ಇಂಡಿಯಾ ಮುಂದಿನ ಹಂತಕ್ಕೇರಲಿದೆ. ಅತ್ತ 2 ಗೆಲುವು ದಾಖಲಿಸಿರುವ ಯುಎಸ್ಎ ತಂಡ ಕೂಡ ಗೆಲುವಿನ ವಿಶ್ವಾಸದಲ್ಲಿದ್ದು, ಈ ಮೂಲಕ ಸೂಪರ್-8 ಹಂತಕ್ಕೇರುವ ನಂಬಿಕೆಯಲ್ಲಿದೆ.
T20 World Cup 2024: ಭಾರತ-ಪಾಕಿಸ್ತಾನ್ (India vs Pakistan) ನಡುವಣ ಹೈವೋಲ್ಟೇಜ್ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಜಯಭೇರಿ ಬಾರಿಸಿದೆ. ಭಾನುವಾರ ನ್ಯೂಯಾರ್ಕ್ನ ನಸ್ಸೌ ಕೌಂಟಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಜಯಿಸಿದ ಪಾಕ್ ತಂಡದ ನಾಯಕ ಬಾಬರ್ ಆಝಂ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 19 ಓವರ್ಗಳಲ್ಲಿ 119 ರನ್ಗಳಿಸಿ ಆಲೌಟ್ ಆಗಿತ್ತು.
120 ರನ್ಗಳ ಸುಲಭ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡವು ಭಾರತೀಯ ಬೌಲರ್ಗಳ ಮಿಂಚಿನ ದಾಳಿಗೆ ದಂಗಾಗಿ ನಿಂತರು. ಪರಿಣಾಮ 20 ಓವರ್ಗಳ ಮುಕ್ತಾಯದ ವೇಳೆಗೆ 7 ವಿಕೆಟ್ ಕಳೆದುಕೊಂಡು 113 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಟೀಮ್ ಇಂಡಿಯಾ 6 ರನ್ಗಳ ರೋಚಕ ಜಯ ಸಾಧಿಸಿತ್ತು.
ಈ ಗೆಲುವಿನ ಬಳಿಕ ಪಾಕಿಸ್ತಾನ್ ತಂಡದ ಅಭಿಮಾನಿಗಳು ಭಾರತದ ಪರ ಘೋಷಣೆ ಕೂಗಿದ್ದು ವಿಶೇಷ. ಪಂದ್ಯದ ಮುಗಿದ ಬಳಿಕ ನ್ಯೂಯಾರ್ಕ್ನ ಸ್ಟೇಡಿಯಂನ ಹೊರಗೆ ಭಾರತೀಯ ಅಭಿಮಾನಿಗಳೊಂದಿಗೆ ಪಾಕಿಸ್ತಾನಿಯೊಬ್ಬರು ಕುಣಿಯುತ್ತಿದ್ದರು.
ಇದೇ ವೇಳೆ ನೀವು ಡ್ಯಾನ್ಸ್ ಮಾಡಲು ಕಾರಣವೇನು ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಪಾಕಿಸ್ತಾನ್ ತಂಡದ ಅಭಿಮಾನಿ, ಡ್ಯಾನ್ಸ್ ಮಾಡಲು ಒಂದು ಕಾರಣ ಬೇಕಷ್ಟೇ. ದಿನದ ಅಂತ್ಯದಲ್ಲಿ ನಾವೆಲ್ಲರೂ ಭಾರತೀಯರು… ಅಖಂಡ ಭಾರತ… ಜೈ ಹಿಂದ್ ಎಂದಿದ್ದಾರೆ.
ಪಾಕಿಸ್ತಾನ್ ತಂಡದ ಜೆರ್ಸಿಯಲ್ಲಿ ಕಾಣಿಸಿಕೊಂಡ ಮತ್ತೊಬ್ಬ ಅಭಿಮಾನಿ ಕೂಡ ಭಾರತಕ್ಕೆ ಜೈಕಾರ ಹಾಕುತ್ತಾ ಸಾಗುತ್ತಿರುವುದು ಕಂಡು ಬಂದಿದೆ. ಈ ವಿಡಿಯೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ಪಡೆದುಕೊಂಡಿದೆ.
ಭಾರತದ ಪರ ಘೋಷಣೆ ಕೂಗಿದ ವೈರಲ್ ವಿಡಿಯೋ ಇಲ್ಲಿದೆ:
Bumrah established Akhand Bharat 🇮🇳 pic.twitter.com/zTsZks3rCk
— Johns (@JohnyBravo183) June 10, 2024
ಭಾರತ ತಂಡದ ಮುಂದಿನ ಪಂದ್ಯ ಯಾವಾಗ?
ಟೀಮ್ ಇಂಡಿಯಾ ಬುಧವಾರ (ಜೂ.12) ತನ್ನ ಮೂರನೇ ಪಂದ್ಯವಾಡಲಿದೆ. ನ್ಯೂಯಾರ್ಕ್ನ ನಸ್ಸೌ ಕೌಂಟಿ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭಾರತ ತಂಡ ಯುಎಸ್ಎ ಅನ್ನು ಎದುರಿಸಲಿದೆ.
ಇದನ್ನೂ ಓದಿ: India vs Pakistan: ಟೀಮ್ ಇಂಡಿಯಾ ಗೆಲುವಿಗೆ ಸಿರಾಜ್ ಕಾರಣ… ಹೇಗೆ ಗೊತ್ತಾ?
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದರೆ ಸೂಪರ್-8 ಹಂತಕ್ಕೇರಲಿದೆ. ಇದಾದ ಬಳಿಕ ಜೂನ್ 15 ರಂದು ಟೀಮ್ ಇಂಡಿಯಾ ಕೆನಡಾ ತಂಡದ ವಿರುದ್ಧ ಸೆಣಸಲಿದೆ. ಈ ಪಂದ್ಯದೊಂದಿಗೆ ಭಾರತ ತಂಡದ ಲೀಗ್ ಹಂತದ ಪಂದ್ಯಗಳು ಮುಗಿಯಲಿದೆ.