India Playing XI vs SouthAfrica: ಇಬ್ಬರು ಆಲ್​ರೌಂಡರ್​ಗಳು ಅಲಭ್ಯ: ಹೀಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ 11

Probable India Playing XI vs SouthAfrica: ಟಿ20 ವಿಶ್ವಕಪ್ ತಂಡದಲ್ಲಿ ಈ ಇಬ್ಬರು ಆಟಗಾರರು ಸ್ಥಾನ ಪಡೆದಿಲ್ಲ. ಹೀಗಾಗಿ ಚುಟುಕು ವಿಶ್ವಕಪ್​ನಲ್ಲಿ ಅವಕಾಶ ಪಡೆದಿರುವ ಆಟಗಾರರೇ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

India Playing XI vs SouthAfrica: ಇಬ್ಬರು ಆಲ್​ರೌಂಡರ್​ಗಳು ಅಲಭ್ಯ: ಹೀಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ 11
Team India
TV9kannada Web Team

| Edited By: Zahir PY

Sep 27, 2022 | 8:32 PM

India vs South Africa 1st T20: ಭಾರತ – ಸೌತ್ ಆಫ್ರಿಕಾ ನಡುವಣ ಟಿ20 ಸರಣಿಯು ಬುಧವಾರದಿಂದ (ಸೆ.28) ಶುರುವಾಗಲಿದೆ. ತಿರುವನಂತಪುರದ ಗ್ರೀನ್​ಫೀಲ್ಡ್​ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್​ನಲ್ಲಿ ಮಹತ್ವದ ಬದಲಾವಣೆ ಕಂಡು ಬರಲಿದೆ. ಏಕೆಂದರೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾದಲ್ಲಿದ್ದ ಇಬ್ಬರು ಆಟಗಾರರು ಈ ಸರಣಿಯಿಂದ ಹೊರಗುಳಿದಿದ್ದಾರೆ. ಹಾರ್ದಿಕ್ ಪಾಂಡ್ಯ ವಿಶ್ರಾಂತಿಯ ಕಾರಣ ತಂಡದಿಂದ ಹೊರಗುಳಿದರೆ, ದೀಪಕ್ ಹೂಡಾ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಹೀಗಾಗಿ ಆಲ್​ರೌಂಡರ್​ಗಳಾದ ಪಾಂಡ್ಯ ಹಾಗೂ ಹೂಡಾ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇವರ ಬದಲಿ ಆಟಗಾರರಾಗಿ ತಂಡಕ್ಕೆ ಶ್ರೇಯಸ್ ಅಯ್ಯರ್ ಹಾಗೂ ಶಹಬಾಜ್ ಅಹ್ಮದ್ ಆಯ್ಕೆಯಾಗಿದ್ದಾರೆ. ಆದರೆ ಈ ಇಬ್ಬರಿಗೂ ಪ್ಲೇಯಿಂಗ್ ಇಲೆವೆನ್​ನಲ್ಲಿ ಅವಕಾಶ ಸಿಗುವುದು ಅನುಮಾನ.

ಏಕೆಂದರೆ ಟಿ20 ವಿಶ್ವಕಪ್ ತಂಡದಲ್ಲಿ ಈ ಇಬ್ಬರು ಆಟಗಾರರು ಸ್ಥಾನ ಪಡೆದಿಲ್ಲ. ಹೀಗಾಗಿ ಚುಟುಕು ವಿಶ್ವಕಪ್​ನಲ್ಲಿ ಅವಕಾಶ ಪಡೆದಿರುವ ಆಟಗಾರರೇ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ವೇಳೆ ಬೆಂಚ್ ಕಾದಿದ್ದ ರಿಷಭ್ ಪಂತ್​ಗೆ ಈ ಬಾರಿ ಅವಕಾಶ ಸಿಗಲಿದೆ. ಹಾಗೆಯೇ ಆಸೀಸ್ ವಿರುದ್ಧ ದುಬಾರಿಯಾಗಿದ್ದ ಭುವನೇಶ್ವರ್​ ಕುಮಾರ್​ಗೆ ಈ ಸಲ ಚಾನ್ಸ್​ ಸಿಗುವುದು ಅನುಮಾನ. ಏಕೆಂದರೆ ತಂಡಕ್ಕೆ ಎಡಗೈ ವೇಗಿ ಅರ್ಷದೀಪ್ ಸಿಂಗ್ ಆಗಮನವಾಗಿದೆ. ಹೀಗಾಗಿ ಇಬ್ಬರು ಬಲಗೈ ವೇಗಿಗಳು ಹಾಗೂ ಓರ್ವ ಎಡಗೈ ವೇಗಿಯೊಂದಿಗೆ ಟೀಮ್ ಇಂಡಿಯಾ ಕಣಕ್ಕಿಳಿಯಬಹುದು.

ಅದರಂತೆ ಟೀಮ್ ಇಂಡಿಯಾದ ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಬೀಸಲಿದ್ದಾರೆ. ಹಾಗೆಯೇ ನಾಲ್ಕನೇ ಕ್ರಮಾಂಕ ಸೂರ್ಯಕುಮಾರ್ ಯಾದವ್​ಗೆ ಫಿಕ್ಸ್​. ಇನ್ನು ಐದನೇ ಕ್ರಮಾಂಕದಲ್ಲಿ ಎಡಗೈ ದಾಂಡಿಗನಾಗಿ ರಿಷಭ್ ಪಂತ್ ಅವರನ್ನು ಕಣಕ್ಕಿಳಿಸಬಹುದು. 6ನೇ ಕ್ರಮಾಂಕದಲ್ಲಿ ಫಿನಿಶರ್ ಪಾತ್ರದಲ್ಲಿ ದಿನೇಶ್ ಕಾರ್ತಿಕ್ ಆಡಬಹುದು. ಇನ್ನು 7ನೇ ಕ್ರಮಾಂಕದಲ್ಲಿ ಆಲ್​ರೌಂಡರ್ ಅಕ್ಷರ್ ಪಟೇಲ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಹಾಗೆಯೇ ವೇಗಿಗಳಾಗಿ ಜಸ್​ಪ್ರೀತ್ ಬುಮ್ರಾ, ಹರ್ಷಲ್ ಪಟೇಲ್ ಹಾಗೂ ಅರ್ಷದೀಪ್ ಸಿಂಗ್ ಕಾಣಿಸಿಕೊಳ್ಳಬಹುದು. ಇನ್ನು ಸ್ಪಿನ್ನರ್ ಆಗಿ ಯುಜ್ವೇಂದ್ರ ಚಹಾಲ್ ಇರಲಿದ್ದಾರೆ. ಅಂದರೆ ಈ ಬಾರಿ ಟೀಮ್ ಇಂಡಿಯಾ ಮೂವರು ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್​ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಅದರಂತೆ ಟೀಮ್ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ ಇಲೆವೆನ್​ ಹೀಗಿರಲಿದೆ.

 1. ರೋಹಿತ್ ಶರ್ಮಾ
 2. ಕೆಎಲ್ ರಾಹುಲ್
 3. ವಿರಾಟ್ ಕೊಹ್ಲಿ
 4. ಸೂರ್ಯಕುಮಾರ್ ಯಾದವ್
 5. ರಿಷಭ್ ಪಂತ್
 6. ದಿನೇಶ್ ಕಾರ್ತಿಕ್
 7. ಅಕ್ಷರ್ ಪಟೇಲ್
 8. ಜಸ್​ಪ್ರೀತ್ ಬುಮ್ರಾ
 9. ಹರ್ಷಲ್ ಪಟೇಲ್
 10. ಅರ್ಷದೀಪ್ ಸಿಂಗ್
 11. ಯುಜ್ವೇಂದ್ರ ಚಹಾಲ್

ಭಾರತ-ಸೌತ್ ಆಫ್ರಿಕಾ ಟಿ20 ಸರಣಿಯ ವೇಳಾಪಟ್ಟಿ ಹೀಗಿದೆ:

 1. ಸೆಪ್ಟೆಂಬರ್ 28- ಮೊದಲ ಟಿ20 ಪಂದ್ಯ (ತಿರುವನಂತಪುರ)
 2. ಅಕ್ಟೋಬರ್ 2- 2ನೇ ಟಿ20 ಪಂದ್ಯ (ಗೌಹಾಟಿ)
 3. ಅಕ್ಟೋಬರ್ 4- 3ನೇ ಟಿ20 ಪಂದ್ಯ (ಇಂದೋರ್)

ಭಾರತ ಟಿ20 ತಂಡ:

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ದೀಪಕ್ ಚಹಾರ್, ಶಹಬಾಜ್ ಅಹ್ಮದ್, ಜಸ್​​ಪ್ರೀತ್ ಬುಮ್ರಾ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada