IND vs SA: ಓಮಿಕ್ರಾನ್ ಆತಂಕ; ಪ್ರೇಕ್ಷಕರಿಲ್ಲದೆ ನಡೆಯಲಿದೆ ಭಾರತ- ಆಫ್ರಿಕಾ ಬಾಕ್ಸಿಂಗ್ ಡೇ ಟೆಸ್ಟ್
IND vs SA: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಡಿಸೆಂಬರ್ 26 ರಿಂದ ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯಲಿದೆ. ಮೊದಲ ಟೆಸ್ಟ್ ಪಂದ್ಯ ಪ್ರೇಕ್ಷಕರಿಲ್ಲದೆ ನಡೆಯಲಿದೆ ಎಂದು ತಿಳಿದುಬಂದಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಡಿಸೆಂಬರ್ 26 ರಿಂದ ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯಲಿದೆ. ಮೊದಲ ಟೆಸ್ಟ್ ಪಂದ್ಯ ಪ್ರೇಕ್ಷಕರಿಲ್ಲದೆ ನಡೆಯಲಿದೆ ಎಂದು ತಿಳಿದುಬಂದಿದೆ. ಕೊರೊನಾ ಓಮಿಕ್ರಾನ್‌ನ ಹೊಸ ರೂಪಾಂತರದ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾದ ಕ್ರಿಕೆಟ್ ಮಂಡಳಿಯು ಟಿಕೆಟ್‌ಗಳನ್ನು ಮಾರಾಟ ಮಾಡಲು ಸಿದ್ಧವಾಗಿಲ್ಲ ಎಂದು ವರದಿಯಾಗಿದೆ. ಕೆಲವು ಅಧಿಕಾರಿಗಳು ಮತ್ತು 2,000 ಅಭಿಮಾನಿಗಳು ಕ್ರೀಡಾಂಗಣದಲ್ಲಿ ನೇರವಾಗಿ ಪಂದ್ಯವನ್ನು ವೀಕ್ಷಿಸಲು ಅವಕಾಶ ನೀಡಬಹುದು ಎಂದು ದಕ್ಷಿಣ ಆಫ್ರಿಕಾದ ಪತ್ರಿಕೆ ರಾಪೋರ್ಟ್ ವರದಿ ಮಾಡಿದೆ.
ಕಳೆದ ತಿಂಗಳಲ್ಲಿ, ಓಮೈಕ್ರಾನ್ ರೂಪಾಂತರದ ಸೋಂಕಿತ ರೋಗಿಗಳು ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದಿದ್ದಾರೆ. ಓಮಿಕ್ರಾನ್ ಡೆಲ್ಟಾಕ್ಕಿಂತ ಹೆಚ್ಚು ಅಪಾಯಕಾರಿ ರೂಪಾಂತರವಾಗಿದೆ ಮತ್ತು ಇದು ವೈರಸ್ ಅನ್ನು ವೇಗವಾಗಿ ಹರಡಬಹುದು ಎಂದು ತಜ್ಞರು ಹೇಳುತ್ತಾರೆ. ಕೋವಿಡ್‌ನ ಹೊಸ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಪ್ರೇಕ್ಷಕರಿಗೆ ಅವಕಾಶ ನೀಡುವುದು ಅನುಮಾನವಾಗಿದೆ. ಕೊರೊನಾದಿಂದಾಗಿ ಇತ್ತೀಚಿಗೆ ವೆಸ್ಟ್ ಇಂಡೀಸ್ ಪಾಕಿಸ್ತಾನ ಪ್ರವಾಸವನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ವಿಂಡೀಸ್ ಆಟಗಾರರು ಸೇರಿದಂತೆ ಬೆಂಬಲ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿತು. ಹೀಗಾಗಿ ಪ್ರವಾಸವನ್ನು ಮುಂದೂಡಲು ನಿರ್ಧರಿಸಲಾಗಿದೆ. ನಿನ್ನೆಯಷ್ಟೇ ಆಶಸ್ ಸರಣಿಗೂ ಕೊರೊನಾ ಎಂಟ್ರಿ ಕೊಟ್ಟಿದೆ. ಪ್ರಸಾರ ತಂಡದ ಸದಸ್ಯರೊಬ್ಬರು ಕೊರೊನಾಗೆ ತುತ್ತಾಗಿದ್ದಾರೆ.
ಒಮಿಕ್ರಾನ್ ರೂಪಾಂತರವು ಪ್ರವಾಸದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿತ್ತು. ಆದರೆ ಎರಡೂ ದೇಶಗಳ ಮಂಡಳಿಗಳು ಸರಣಿ ಆಡಲು ನಿರ್ಧರಿಸಿವೆ. ಕೊರೊನಾ ಸೋಂಕನ್ನು ತಡೆಗಟ್ಟಲು ಸರಣಿಯಲ್ಲಿ ಆಡುವ ಕ್ರಿಕೆಟಿಗರು ಮತ್ತು ಸಹಾಯಕ ಸಿಬ್ಬಂದಿಗಳನ್ನು ಬಯೋಬಬಲ್‌ನಲ್ಲಿ ಇರಿಸಲಾಗಿದೆ. ಭಾರತ ತಂಡ ಡಿಸೆಂಬರ್ 16 ರಂದು ದಕ್ಷಿಣ ಆಫ್ರಿಕಾಕ್ಕೆ ಆಗಮಿಸಿದ್ದು, ಟೀಮ್ ಇಂಡಿಯಾ ರೆಸಾರ್ಟ್‌ನಲ್ಲಿ ವಿಶ್ರಮಿಸಿದೆ. ಇಡೀ ರೆಸಾರ್ಟ್ ಅನ್ನು ಭಾರತ ತಂಡಕ್ಕಾಗಿ ಕ್ರಿಕೆಟ್ ಸೌತ್ ಆಫ್ರಿಕಾ ಬುಕ್ ಮಾಡಿದೆ. ಮೂರನೇ ಟೆಸ್ಟ್ ಜನವರಿ 11 ರಂದು ಕೇಪ್ ಟೌನ್‌ನಲ್ಲಿ ಆರಂಭವಾಗಲಿದೆ.
ಇದನ್ನೂ ಓದಿ:IND vs SA: ಹರಿಣಗಳ ನಾಡಲ್ಲಿ ಟೀಂ ಇಂಡಿಯಾ ಗುರು ರಾಹುಲ್ ದ್ರಾವಿಡ್ ಮುಂದಿರುವ 5 ಸವಾಲುಗಳಿವು
