ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ದೊಡ್ಡ ಮೊತ್ತ ಕಲೆಹಾಕಿದರೂ ಗೆಲುವು ಕಾಣುವಲ್ಲಿ ವಿಫಲವಾದ ಟೀಮ್ ಇಂಡಿಯಾ (Team India) ಇದೀಗ ದ್ವಿತೀಯ ಟಿ20 ಕದನಕ್ಕೆ ಸಜ್ಜಾಗುತ್ತಿದೆ. ಇದಕ್ಕಾಗಿ ರಿಷಭ್ ಪಂತ್ (Rishabh Pant) ಪಡೆ ಈಗಾಗಲೇ ಒಡಿಶಾದ ಸುಂದರ ನಗರಿ ಕಟಕ್‌ಗೆ ಆಗಮಿಸಿದೆ. ದೆಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇರವಾಗಿ ಒಡಿಶಾದ ಕಟಕ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಭಾರತ ತಂಡದ ಆಟಗಾರರು ನೇರವಾಗಿ ಹೋಟೆಲ್‌ಗೆ ತೆರಳಿದ್ದು, ಹೋಟೆಲ್ ಸಿಬ್ಬಂದಿ ಭರ್ಜರಿ ಸ್ವಾಗತ ಕೋರಿದ್ದಾರೆ. ವಿಶೇಷ ಎಂದರೆ ಟೀಮ್ ಇಂಡಿಯಾ ಜೊತೆಗೆಯೇ ದಕ್ಷಿಣ ಆಫ್ರಿಕಾ ಆಟಗಾರರು ಕೂಡ ಆಗಮನಿಸಿದರು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಈ ಬಗ್ಗೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದು ವೈರಲ್ ಆಗುತ್ತಿದೆ.
ಹೌದು, ಜೂನ್ 12 ರಂದು ನಡೆಯಲಿರುವ ಎರಡನೇ ಟಿ20 ಪಂದ್ಯಕ್ಕೆ ಒಂದೇ ವಿಮಾನದಲ್ಲಿ ಭಾರತ ಹಾಗೂ ಆಫ್ರಿಕಾ ಆಟಗಾರರು ಕಟಕ್‌ಗೆ ಬಂದಿಳಿದರು. ನಂತರ ಅಲ್ಲಿಂದ ಬೇರೆ ಬೇರೆ ಬಸ್ ಮೂಲಕ ಹೋಟೆಲ್‌ಗೆ ಬಂದಿದ್ದಾರೆ. ಐಪಿಎಲ್ 2022ರ ಸೀಸನ್‌ನಲ್ಲಿ ಗುಜರಾತ್ ಟೈಟನ್ಸ್ ಪರ ಒಟ್ಟಾಗಿ ಆಡಿದ ಹಾರ್ದಿಕ್ ಪಾಂಡ್ಯ ಮತ್ತು ಡೇವಿಡ್ ಮಿಲ್ಲರ್ ಒಟ್ಟಾಗಿ ಆಗಮಿಸುತ್ತಿರುವ, ಮತ್ತು ಮಾತನಾಡುತ್ತಿರುವ ದೃಶ್ಯಗಳು ಇದರಲ್ಲಿದೆ. ಅಲ್ಲದೆ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿಕಾಕ್, ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಜೊತೆಗಿನ ಸಂಭಾಷಣೆ ಸೇರಿದಂತೆ ಉಭಯ ತಂಡಗಳ ಸ್ನೇಹ ಮತ್ತು ಕ್ರೀಡಾಸ್ಫೂರ್ತಿ ವಿಡಿಯೋದಲ್ಲಿ ಎದ್ದು ಕಾಣುವಂತಿತ್ತು.
ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸಾಂಡರ್ ಎಲ್ಲಿಸ್ ರ‍್ಯಾಪಿಡ್ ಫೈರ್ ಪ್ರಶ್ನೆಗಳಿಗೆ ಅನಿಲ್ ಕುಂಬ್ಳೆ ನೀಡಿದ ಉತ್ತರಗಳಿವು
Hello Cuttack ?#TeamIndia | #INDvSA | @Paytm pic.twitter.com/928W93aWXs
— BCCI (@BCCI) June 10, 2022
ಕಟಕ್ನ ಭಾರಾಮತಿ ಕ್ರೀಡಾಂಗಣದಲ್ಲಿ ಕಣಕ್ಕಿಳಿಯುವ ಮುನ್ನ ಟೀಮ್ ಇಂಡಿಯಾ ತನ್ನ ಬೌಲಿಂಗ್ ವಿಭಾಗದಲ್ಲಿ ಲಯ ಕಂಡುಕೊಳ್ಳಬೇಕಿದೆ. ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ತಂಡದಲ್ಲಿ ಉಳಿಸಿಕೊಳ್ಳುವ ಪ್ಲಾನ್ ಮಾಡಿದರೆ ಔಟ್ ಅಂಡ್ ಔಟ್ ವೇಗಕ್ಕಾಗಿ ಆವೇಶ್ ಖಾನ್ ಬದಲಿಗೆ ಉಮ್ರನ್ ಮಲಿಕ್ರನ್ನು ಆಡಿಸಿಕೊಳ್ಳಬೇಕಿದೆ. ಹಾರ್ದಿಕ್ ಪಾಂಡ್ಯಾ ಬೌಲಿಂಗ್ ಶಕ್ತಿಯನ್ನು ಬಳಸಿಕೊಂಡರೆ ಉತ್ತಮ. ಅಂತೆಯೆ ಗೂಗ್ಲಿ ಸ್ಪೆಷಲಿಸ್ಟ್ ರವಿ ಬಿಷ್ಣೋಯಿಗೆ ಸ್ಥಾನ ಕೊಡಬಹುದು. ಬ್ಯಾಟಿಂಗ್ ವಿಭಾಗದಲ್ಲಿ ಬದಲಾವಣೆ ಅನುಮಾನ.
ಮೊದಲ ಟಿ20 ಪಂದ್ಯ ಏನಾಗಿತ್ತು?:
ಅರುಣ್ ಜೇಟ್ಲೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಆರಂಭಿಕ ಇಶಾನ್ ಕಿಶನ್ (76 ರನ್, 48 ಎಸೆತ, 11 ಬೌಂಡರಿ, 3 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಫಲವಾಗಿ 4 ವಿಕೆಟ್‌ಗೆ 211 ರನ್ ಪೇರಿಸಿತು. ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ರಾಸಿ ವನ್ ಡರ್ ಡುಸೆನ್ (75*ರನ್, 46 ಎಸೆತ, 7 ಬೌಂಡರಿ, 5 ಸಿಕ್ಸರ್) ಹಾಗೂ ಡೇವಿಡ್ ಮಿಲ್ಲರ್ (64*ರನ್, 31ಎಸೆತ, 4 ಬೌಂಡರಿ, 5 ಸಿಕ್ಸರ್) ಜೋಡಿಯ ಸ್ಫೋಟಕ ಬ್ಯಾಟಿಂಗ್ ಎದುರು ಸಂಪೂರ್ಣ ಮಂಕಾದ ಭಾರತ ತಂಡ ಮೊದಲ ಟಿ20 ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಶರಣಾಯಿತು. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆಯ ಸತತ 13ನೇ ಜಯದ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ದೊಡ್ಡ ಆಘಾತ ಉಂಟಾಯಿತು.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:40 am, Sat, 11 June 22