IND vs SA T20i: ಟೆಸ್ಟ್-ಏಕದಿನ ನಂತರ ಈಗ ಟಿ20 ಸರದಿ: ಭಾರತ vs ದಕ್ಷಿಣ ಆಫ್ರಿಕಾ ಟಿ20 ಯಾವಾಗ, ಎಲ್ಲಿ?
Ind vs SA T20i series live streaming details: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು ಭಾರತ 2-1 ಅಂತರದಿಂದ ಗೆದ್ದುಕೊಂಡಿತು. ಎರಡೂ ತಂಡಗಳು ಈಗ ಡಿಸೆಂಬರ್ 9 ರಿಂದ ಪ್ರಾರಂಭವಾಗುವ ಐದು ಪಂದ್ಯಗಳ ಟಿ20ಐ ಸರಣಿಗೆ ಸಜ್ಜಾಗಿವೆ, ಇದು 2026 ರ ಟಿ20 ವಿಶ್ವಕಪ್‌ಗೆ ಅವರ ತಯಾರಿಯ ನಿರ್ಣಾಯಕ ಭಾಗವಾಗಿದೆ.

ಬೆಂಗಳೂರು (ಡಿ. 07): ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು ಭಾರತ (Indian Cricket Team) 2-1 ಅಂತರದಿಂದ ಗೆದ್ದುಕೊಂಡಿದೆ. ಈಗ, ಎರಡೂ ತಂಡಗಳು ಡಿಸೆಂಬರ್ 9 ರಿಂದ ಪ್ರಾರಂಭವಾಗುವ ಐದು ಪಂದ್ಯಗಳ ಟಿ20ಐ ಸರಣಿಗೆ ಸಜ್ಜಾಗುತ್ತಿವೆ. ಮುಂಬರುವ ಟಿ20 ವಿಶ್ವಕಪ್ 2026 ರ ತಯಾರಿಯಲ್ಲಿ ಈ ಸರಣಿಯು ಎರಡೂ ದೇಶಗಳಿಗೆ ನಿರ್ಣಾಯಕವಾಗಿದೆ, ಏಕೆಂದರೆ ಇದು ಯುವ ಮತ್ತು ಅನುಭವಿ ಆಟಗಾರರಿಂದ ಕೂಡಿರುವ ತಂಡವಾಗಿದ್ದು, ಆಯ್ಕೆದಾರರು ಈ ಸರಣಿ ಮೇಲೆ ಕೂಡ ಕಣ್ಣಿಟ್ಟಿದ್ದಾರೆ.
ಏಕದಿನ ಸರಣಿಯಲ್ಲಿ ತವರಿನಲ್ಲಿ ಪ್ರಾಬಲ್ಯ ಕಾಯ್ದುಕೊಂಡಿದ್ದ ಭಾರತ ತಂಡ ಈಗ ಟಿ20 ಮಾದರಿಯಲ್ಲಿ ತನ್ನ ಬಲವನ್ನು ಪ್ರದರ್ಶಿಸಲು ಸಿದ್ಧವಾಗಿದೆ. ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಈ ಟಿ20 ಸರಣಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಶುಭ್ಮನ್ ಗಿಲ್ ಉಪನಾಯಕನಾಗಿ ಮರಳಲಿದ್ದು, ಬ್ಯಾಟಿಂಗ್ ಕ್ರಮಾಂಕದಲ್ಲಿ ಮತ್ತಷ್ಟು ಬಲಬರಲಿದೆ.
2026 ರ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ಕಾರ್ಯತಂತ್ರ ಮತ್ತು ಆಟಗಾರರನ್ನು ಪರೀಕ್ಷಿಸಲು ಈ ಸರಣಿಯು ಒಂದು ನಿರ್ಣಾಯಕವಾಗಿದೆ. ಭಾರತೀಯ ತಂಡವು ಅಭಿಷೇಕ್ ಶರ್ಮಾ, ತಿಲಕ್ ವರ್ಮಾ ಮತ್ತು ಹರ್ಷಿತ್ ರಾಣಾ ಅವರಂತಹ ಯುವ ಆಟಗಾರರನ್ನು ಒಳಗೊಂಡಿದ್ದರೆ, ದಕ್ಷಿಣ ಆಫ್ರಿಕಾವು ಐಡೆನ್ ಮಾರ್ಕ್ರಮ್, ಕ್ವಿಂಟನ್ ಡಿ ಕಾಕ್ ಮತ್ತು ಡೇವಿಡ್ ಮಿಲ್ಲರ್‌ರಂತಹ ಅನುಭವಿ ಆಟಗಾರರನ್ನು ಹೊಂದಿದೆ.
IND vs SA: ವಿರಾಟ್ ಕೊಹ್ಲಿಯ ನೋ-ಲುಕ್ ಸಿಕ್ಸ್ಗೆ ದಂಗಾದ ಇಡೀ ಸ್ಟೇಡಿಯಂ: ವಿಡಿಯೋ ನೋಡಿ
ಎಲ್ಲಾ ಪಂದ್ಯಗಳ ಟಾಸ್ ಸಂಜೆ 6:30 ಕ್ಕೆ ನಡೆಯಲಿದೆ. ಈ ರೋಮಾಂಚಕಾರಿ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ ಮತ್ತು ಲೈವ್ ಸ್ಟ್ರೀಮಿಂಗ್ ಜಿಯೋ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿರುತ್ತದೆ.
ಭಾರತ vs ದಕ್ಷಿಣ ಆಫ್ರಿಕಾ T20I ಸರಣಿಯ ವೇಳಾಪಟ್ಟಿ:
- ಮೊದಲ ಟಿ20ಐ – ಡಿಸೆಂಬರ್ 9, ಕಟಕ್
- ಎರಡನೇ ಟಿ20ಐ – ಡಿಸೆಂಬರ್ 11 – ನ್ಯೂ ಚಂಡೀಗಢ
- ಮೂರನೇ ಟಿ20ಐ – ಡಿಸೆಂಬರ್ 14 – ಧರ್ಮಶಾಲಾ
- 4ನೇ ಟಿ20ಐ – ಡಿಸೆಂಬರ್ 17 – ಲಕ್ನೋ
- ಐದನೇ ಟಿ20ಐ – ಡಿಸೆಂಬರ್ 19, ಅಹಮದಾಬಾದ್
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
