AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Team India: 2021 ಭಾರತ ಟೆಸ್ಟ್​ ಕ್ರಿಕೆಟ್​ನ ಸುವರ್ಣ ಯುಗ! ದೇಶ- ವಿದೇಶಗಳಲ್ಲೂ ಟೀಂ ಇಂಡಿಯಾದ್ದೇ ಪಾರುಪತ್ಯ

Team India: ಭಾರತ ತಂಡ ಈ ವರ್ಷ ವಿದೇಶಿ ನೆಲದಲ್ಲಿ 4 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ - ಬ್ರಿಸ್ಬೇನ್, ಲಾರ್ಡ್ಸ್, ಓವಲ್ ಮತ್ತು ಸೆಂಚುರಿಯನ್. ಈ ಹಿಂದೆ 2018ರಲ್ಲಿ ಭಾರತ ಇತಿಹಾಸದಲ್ಲೇ ವಿದೇಶದಲ್ಲಿ 4 ಪಂದ್ಯಗಳನ್ನು ಗೆದ್ದಿತ್ತು.

Team India: 2021 ಭಾರತ ಟೆಸ್ಟ್​ ಕ್ರಿಕೆಟ್​ನ ಸುವರ್ಣ ಯುಗ! ದೇಶ- ವಿದೇಶಗಳಲ್ಲೂ ಟೀಂ ಇಂಡಿಯಾದ್ದೇ ಪಾರುಪತ್ಯ
ಟೀಂ ಇಂಡಿಯಾ
TV9 Web
| Updated By: ಪೃಥ್ವಿಶಂಕರ|

Updated on:Dec 30, 2021 | 9:01 PM

Share

ಭಾರತ ಕ್ರಿಕೆಟ್ ತಂಡ 2021 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತ ತಂಡ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಸೆಂಚುರಿಯನ್ ಕೋಟೆಯನ್ನು ಮುರಿದಿದೆ. ಆತಿಥೇಯ ದಕ್ಷಿಣ ಆಫ್ರಿಕಾವನ್ನು 113 ರನ್‌ಗಳಿಂದ ಸೋಲಿಸಿದ ಟೀಂ ಇಂಡಿಯಾ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸೆಂಚುರಿಯನ್ ಮೈದಾನದಲ್ಲಿ ಟೀಂ ಇಂಡಿಯಾದ ಮೊದಲ ಗೆಲುವು ಇದಾಗಿದ್ದು, ಐತಿಹಾಸಿಕವಾಗಿದೆ. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಈ ವರ್ಷ ಮತ್ತೊಂದು ಇತಿಹಾಸ ನಿರ್ಮಿಸಿದೆ. ವರ್ಷದ ಆರಂಭದಲ್ಲಿ ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ ಟೀಂ ಇಂಡಿಯಾ(ಭಾರತ- ಆಸ್ಟ್ರೇಲಿಯಾ ಟೆಸ್ಟ್ ಸರಣಿ 2020 ಡಿಸೆಂಬರ್​ನಲ್ಲಿ ಆರಂಭವಾಗಿತ್ತು. ಇದರಲ್ಲಿ ಟೀಂ ಇಂಡಿಯಾ ಮೊದಲ ಟೆಸ್ಟ್​ನಲ್ಲಿ ಗೆದ್ದಿದ್ದರೆ, 2ನೇ ಟೆಸ್ಟ್​ನಲ್ಲಿ ಸೋಲು ಕಂಡಿತ್ತು. 2021 ರ ಗೆಲುವಿನ ಲೆಕ್ಕಚಾರದಲ್ಲಿ ಆ ಒಂದು ಗೆಲುವನ್ನ ಇಲ್ಲಿ ಸೇರಿಸಲಾಗಿಲ್ಲ) , ಈ ವರ್ಷ ಅನೇಕ ಅದ್ಭುತಗಳನ್ನು ಮಾಡಿದೆ. ಈ ವರ್ಷ ಟೀಂ ಇಂಡಿಯಾ ಮಾಡಿದ ಹಲವು ದಾಖಲೆಗಳ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ.

ಟೀಂ ಇಂಡಿಯಾ ಈ ವರ್ಷ ಯಾವುದೇ ತಂಡಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. ಅದೇ ಸಮಯದಲ್ಲಿ, ವಿದೇಶಿ ನೆಲದಲ್ಲಿಯೂ, ಟೀಂ ಇಂಡಿಯಾ ಈ ವರ್ಷ ಗರಿಷ್ಠ ಸಂಖ್ಯೆಯ ಪಂದ್ಯಗಳನ್ನು ಗೆದ್ದಿದೆ. ಅದೇ ಹೊತ್ತಿಗೆ ಈ ಗೆಲುವಿನೊಂದಿಗೆ ಭಾರತದ ನಾಯಕ ವಿರಾಟ್ ಕೊಹ್ಲಿ ಅವರ ಶ್ರೇಷ್ಠ ಟೆಸ್ಟ್ ದಾಖಲೆಗೆ ಹೊಸ ದಾಖಲೆ ಸೇರ್ಪಡೆಯಾಗಿದೆ. ಸೆಂಚುರಿಯನ್‌ನಲ್ಲಿ ಟೀಮ್ ಇಂಡಿಯಾದ ಗೆಲುವಿನಿಂದ ಹೊರಬಂದ ಕೆಲವು ಅತ್ಯುತ್ತಮ ಅಂಕಿಅಂಶಗಳು ಮತ್ತು ದಾಖಲೆಗಳನ್ನು ನೋಡೋಣ.

ಟೀಂ ಇಂಡಿಯಾದ ದಾಖಲೆಯ ಪ್ರದರ್ಶನ – ಸೆಂಚುರಿಯನ್‌ನಲ್ಲಿ ಭಾರತ ಮೊದಲ ಬಾರಿಗೆ ಟೆಸ್ಟ್ ಪಂದ್ಯವನ್ನು ಗೆದ್ದಿದೆ. ಇದಕ್ಕೂ ಮುನ್ನ ಸೆಂಚುರಿಯನ್ ಮೈದಾನದಲ್ಲಿ ಟೀಂ ಇಂಡಿಯಾ ಎರಡೂ ಬಾರಿ ಸೋಲನ್ನು ಎದುರಿಸಬೇಕಾಯಿತು. ಇದರೊಂದಿಗೆ, ಈ ತಂಡವು ಈ ಮೈದಾನದಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದ ಮೊದಲ ಏಷ್ಯಾದ ತಂಡವಾಗಿದೆ.

– ದಕ್ಷಿಣ ಆಫ್ರಿಕಾದಲ್ಲಿ ಭಾರತ ಕೇವಲ ನಾಲ್ಕನೇ ಬಾರಿಗೆ ಟೆಸ್ಟ್ ಪಂದ್ಯವನ್ನು ಗೆದ್ದಿದೆ. ಇದಕ್ಕೂ ಮುನ್ನ 2006 ಮತ್ತು 2010ರಲ್ಲಿ ಟೀಂ ಇಂಡಿಯಾ ಡರ್ಬನ್‌ನಲ್ಲಿ ಗೆಲುವು ಸಾಧಿಸಿದ್ದರೆ, 2018ರಲ್ಲಿ ಭಾರತ ಜೊಹಾನ್ಸ್‌ಬರ್ಗ್‌ನಲ್ಲಿ ಗೆಲುವು ಸಾಧಿಸಿತ್ತು.

– ಭಾರತವು ಈ ವರ್ಷ 14 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ತಂಡವು 8 ಪಂದ್ಯಗಳನ್ನು ಗೆದ್ದಿದ್ದರೆ, 3 ಪಂದ್ಯಗಳಲ್ಲಿ ಸೋತಿದೆ. 3 ಪಂದ್ಯಗಳು ಡ್ರಾ ಆಗಿದ್ದವು.

– ಭಾರತ ತಂಡವು ಈ ವರ್ಷ ಒಟ್ಟು 8 ಟೆಸ್ಟ್‌ಗಳನ್ನು ಗೆದ್ದಿದೆ ಮತ್ತು ಈ ಮೂಲಕ 2018 ರ ಯಶಸ್ಸನ್ನು ಪುನರಾವರ್ತಿಸಿದೆ. 2016 ರಲ್ಲಿ ಮಾತ್ರ ಭಾರತವು ಇದಕ್ಕಿಂತ ಹೆಚ್ಚಿನ ಟೆಸ್ಟ್‌ಗಳನ್ನು ಗೆದ್ದಿದೆ. ಆಗ ಟೀಂ ಇಂಡಿಯಾ 9 ಪಂದ್ಯಗಳಲ್ಲಿ ಯಶಸ್ಸು ಕಂಡಿತ್ತು.

– ಭಾರತ ತಂಡ ಈ ವರ್ಷ ವಿದೇಶಿ ನೆಲದಲ್ಲಿ 4 ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ – ಬ್ರಿಸ್ಬೇನ್, ಲಾರ್ಡ್ಸ್, ಓವಲ್ ಮತ್ತು ಸೆಂಚುರಿಯನ್. ಈ ಹಿಂದೆ 2018ರಲ್ಲಿ ಭಾರತ ಇತಿಹಾಸದಲ್ಲೇ ವಿದೇಶದಲ್ಲಿ 4 ಪಂದ್ಯಗಳನ್ನು ಗೆದ್ದಿತ್ತು.

– ವಿರಾಟ್ ಕೊಹ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಎರಡು ಅಥವಾ ಹೆಚ್ಚಿನ ಟೆಸ್ಟ್ ಪಂದ್ಯಗಳನ್ನು ಗೆದ್ದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು 2018 ರಲ್ಲಿ, ಕೊಹ್ಲಿ ನಾಯಕತ್ವದಲ್ಲಿ, ಭಾರತವು ಜೋಹಾನ್ಸ್‌ಬರ್ಗ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿತು.

– ಈ ಪಂದ್ಯವನ್ನು ಬಾಕ್ಸಿಂಗ್ ದಿನದಂದು ಅಂದರೆ ಡಿಸೆಂಬರ್ 26 ರಂದು ಆಡಲಾಗುತ್ತದೆ. ಭಾರತವು ಸತತ ಮೂರು ಬಾಕ್ಸಿಂಗ್ ಡೇ ಟೆಸ್ಟ್‌ಗಳನ್ನು ಗೆದ್ದಿದೆ. ಭಾರತ 2018 ಮತ್ತು 2020ರಲ್ಲಿ ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿತ್ತು ಮತ್ತು ಈಗ ಸೆಂಚುರಿಯನ್‌ನಲ್ಲಿ ಗೆಲುವು ದಾಖಲಿಸಿದೆ.

– ಅದೇ ಸಮಯದಲ್ಲಿ, ಕೊಹ್ಲಿ ಎರಡು ಬಾಕ್ಸಿಂಗ್ ಡೇ ಟೆಸ್ಟ್ ಗೆದ್ದ ಮೊದಲ ಭಾರತೀಯ ನಾಯಕರಾದರು. ಸೆಂಚುರಿಯನ್ ಮೊದಲು, ಭಾರತ 2018 ರಲ್ಲಿ ಮೆಲ್ಬೋರ್ನ್‌ನಲ್ಲಿ ಕೊಹ್ಲಿ ನಾಯಕತ್ವದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿತು.

Published On - 6:43 pm, Thu, 30 December 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ