Virat Kohli: ಕೊಹ್ಲಿ ಮುಟ್ಟಿದ್ದೆಲ್ಲ ಚಿನ್ನ! ನಾಯಕತ್ವದಿಂದ ಕೆಳಗಿಳಿಸಿದ ಬಿಸಿಸಿಐಗೆ ಗೆಲುವಿನ ಉತ್ತರ ಕೊಟ್ಟ ವಿರಾಟ್

Virat Kohli: ಈ ವರ್ಷ ಭಾರತ ತಂಡವು 14 ಟೆಸ್ಟ್‌ಗಳಲ್ಲಿ 8 ರಲ್ಲಿ ಗೆದ್ದಿದೆ ಮತ್ತು 3 ರಲ್ಲಿ ಸೋತಿದೆ. 3 ಟೆಸ್ಟ್ ಡ್ರಾಗಳಾಗಿವೆ. ಸಂಕಷ್ಟದ ಸಮಯದಲ್ಲೂ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿದೆ.

Virat Kohli: ಕೊಹ್ಲಿ ಮುಟ್ಟಿದ್ದೆಲ್ಲ ಚಿನ್ನ! ನಾಯಕತ್ವದಿಂದ ಕೆಳಗಿಳಿಸಿದ ಬಿಸಿಸಿಐಗೆ ಗೆಲುವಿನ ಉತ್ತರ ಕೊಟ್ಟ ವಿರಾಟ್
ಕೊಹ್ಲಿ
Follow us
TV9 Web
| Updated By: ಪೃಥ್ವಿಶಂಕರ

Updated on:Dec 30, 2021 | 6:04 PM

ಸೆಂಚುರಿಯನ್…ಏಷ್ಯನ್ ತಂಡಗಳಿಗೆ ತೂರಲಾಗದ ಕೋಟೆಯಾಗಿತ್ತು. ಪಾಕಿಸ್ತಾನ, ಶ್ರೀಲಂಕಾದಂತಹ ತಂಡಗಳಿಗೂ ಈ ಮೈದಾನದಲ್ಲಿ ಪಂದ್ಯ ಗೆಲ್ಲಲಾಗಲಿಲ್ಲ. ಕಳೆದ ಎರಡು ಪ್ರವಾಸಗಳಲ್ಲಿ ಟೀಂ ಇಂಡಿಯಾ ಇದೇ ಸ್ಥಿತಿ ಹೊಂದಿತ್ತು, ಆದರೆ ಈ ಬಾರಿ ಸೆಂಚುರಿಯನ್ ಹೆಮ್ಮೆ ಮುರಿದಿದೆ. ಗುರುವಾರ ನಡೆದ ಸೆಂಚುರಿಯನ್ ಟೆಸ್ಟ್‌ನಲ್ಲಿ ವಿರಾಟ್ ಅಂಡ್ ಕಂಪನಿ 113 ರನ್‌ಗಳಿಂದ ಜಯಗಳಿಸಿತ್ತು. ಈ ಗೆಲುವಿನ ನಂತರ ನಾಯಕ ವಿರಾಟ್ ಕೊಹ್ಲಿ ಅವರ ಸ್ಥಾನಮಾನ ಮತ್ತಷ್ಟು ಹೆಚ್ಚಾಯಿತು. ವಿರಾಟ್ ಅವರ ಟೆಸ್ಟ್ ನಾಯಕತ್ವದಲ್ಲಿ ಟೀಂ ಇಂಡಿಯಾದ ಪ್ರದರ್ಶನವು ವಿಭಿನ್ನ ಹಂತವನ್ನು ತಲುಪಿದೆ. ಭಾರತ ತಂಡ ವಿದೇಶದಲ್ಲಿ ಗೆಲ್ಲುವ ಚಟಕ್ಕೆ ಬಿದ್ದಿದೆ. ಸೆಂಚುರಿಯನ್ ಟೆಸ್ಟ್ ಗೆದ್ದ ನಂತರ ವಿರಾಟ್ ಕೊಹ್ಲಿ ಯಾವ ದಾಖಲೆ ಮಾಡಿದ್ದಾರೆ ಎಂಬುದನ್ನು ನಾವೀಗ ನಿಮಗೆ ಹೇಳಲಿದ್ದೇವೆ.

ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಕನಿಷ್ಠ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದ ದಾಖಲೆ ಹೊಂದಿರುವ ಭಾರತದ ಏಕೈಕ ನಾಯಕ ವಿರಾಟ್ ಕೊಹ್ಲಿ. ಈ ಮೂರು ಸ್ಥಳಗಳಲ್ಲಿ ಪಂದ್ಯವನ್ನು ಗೆಲ್ಲುವುದು ಕಷ್ಟ ಆದರೆ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ಎರಡು ಟೆಸ್ಟ್ ಸರಣಿಗಳನ್ನು ಗೆದ್ದಿದ್ದಾರೆ. ಇಂಗ್ಲೆಂಡಿನಲ್ಲೂ ಕೋವಿಡ್‌ನಿಂದಾಗಿ ಸ್ಥಗಿತಗೊಂಡಿದ್ದ ಟೆಸ್ಟ್‌ ಸರಣಿಯಲ್ಲಿ 2-1ರ ಮುನ್ನಡೆಯಲ್ಲಿದ್ದು, ಇದೀಗ ದಕ್ಷಿಣ ಆಫ್ರಿಕಾದಲ್ಲೂ ಮೊದಲ ಪಂದ್ಯ ಗೆಲ್ಲುವ ಮೂಲಕ ಸರಣಿ ಗೆಲುವಿಗೆ ಅಡಿಪಾಯ ಹಾಕಿದ್ದಾರೆ.

ವಿರಾಟ್ ನಾಯಕತ್ವದಲ್ಲಿ ಏಷ್ಯಾದ ಹೊರಗೆ ಟೆಸ್ಟ್ ಗೆಲ್ಲುವ ಚಟ! 2018 ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಜೋಹಾನ್ಸ್‌ಬರ್ಗ್ ಟೆಸ್ಟ್ ಗೆದ್ದಿತ್ತು. ಈಗ ಸೆಂಚುರಿಯನ್‌ನಲ್ಲೂ ಮೊದಲ ಟೆಸ್ಟ್​ ಗೆದ್ದಿದ್ದಾರೆ. ಇಂಗ್ಲೆಂಡ್ ಬಗ್ಗೆ ಮಾತನಾಡುವುದಾದರೆ, 2018 ರಲ್ಲಿ, ಟೀಮ್ ಇಂಡಿಯಾ ಟ್ರೆಂಟ್ ಬ್ರಿಡ್ಜ್‌ನಲ್ಲಿ ಟೆಸ್ಟ್ ಗೆದ್ದಿತು ಮತ್ತು ನಂತರ 2021 ರಲ್ಲಿ ತಂಡವು ಲಾರ್ಡ್ಸ್ ಮತ್ತು ಓವಲ್‌ನಲ್ಲಿ ಟೆಸ್ಟ್ ಗೆದ್ದಿತು. ಆಸ್ಟ್ರೇಲಿಯಾದಲ್ಲಿ, 2018 ರಲ್ಲಿ ಭಾರತ ತಂಡವು ಮೆಲ್ಬೋರ್ನ್ ಮತ್ತು ಅಡಿಲೇಡ್ ಟೆಸ್ಟ್‌ಗಳನ್ನು ಗೆದ್ದಿದೆ.

ಈ ವರ್ಷ ಭಾರತ ತಂಡವು 14 ಟೆಸ್ಟ್‌ಗಳಲ್ಲಿ 8 ರಲ್ಲಿ ಗೆದ್ದಿದೆ ಮತ್ತು 3 ರಲ್ಲಿ ಸೋತಿದೆ. 3 ಟೆಸ್ಟ್ ಡ್ರಾಗಳಾಗಿವೆ. ಸಂಕಷ್ಟದ ಸಮಯದಲ್ಲೂ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿದೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಟೆಸ್ಟ್ ಮಾದರಿಯಲ್ಲಿ ಅದ್ಭುತ ಯಶಸ್ಸನ್ನು ಕಂಡಿದೆ. ಅದರಲ್ಲೂ ಸೆಂಚುರಿಯನ್ ಟೆಸ್ಟ್‌ನ ಈ ಗೆಲುವು ವಿರಾಟ್ ಕೊಹ್ಲಿಗೆ ಬಹಳ ಮುಖ್ಯವಾಗಿದೆ. ಏಕೆಂದರೆ ಈ ಪ್ರವಾಸಕ್ಕೆ ಮುನ್ನವೇ ವಿರಾಟ್ ಕೊಹ್ಲಿಯನ್ನು ಏಕದಿನ ನಾಯಕತ್ವದಿಂದ ತೆಗೆದುಹಾಕಲಾಗಿತ್ತು. ಆ ಹಿನ್ನಡೆಯ ನಂತರ ಅಂತಹ ಶ್ರೇಷ್ಠ ಗೆಲುವು ಪಡೆಯುವುದು ಅವರ ನೈತಿಕತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

Published On - 6:03 pm, Thu, 30 December 21

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ