ಕೇಪ್ ಟೌನ್ ಟೆಸ್ಟ್ (India vs South Africa 3rd Test) ಮೂರನೇ ದಿನದಂದು ಚೇತೇಶ್ವರ ಪೂಜಾರ ಅವರಿಂದ ಟೀಮ್ ಇಂಡಿಯಾ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸಿತ್ತು. ಆದರೆ ಮೂರನೇ ದಿನದಾಟದಲ್ಲಿ ಕೇವಲ ಒಂದು ರನ್ ಗಳಿಸಲು ಕೂಡ ಸಾಧ್ಯವಾಗಲಿಲ್ಲ. ಅಷ್ಟರಲ್ಲಾಗಲೇ ಕೀಗನ್ ಪೀಟರ್ಸನ್ ಹಿಡಿದ ಅಧ್ಬುತ ಕ್ಯಾಚ್ಗೆ ಚೇತೇಶ್ವರ ಪೂಜಾರ ಬಲಿಯಾಗಿದ್ದರು. ಮಾರ್ಕೊ ಜಾನ್ಸನ್ ಎಸೆದ ಎಸೆತವನ್ನು ಪೂಜಾರ ಬ್ಯಾಟ್‌ಗೆ ಬದಲಾಗಿ ಗ್ಲೌಸ್‌ಗೆ ಬಡಿಯಿತು. ಚೆಂಡು ಲೆಗ್ ಸ್ಲಿಪ್ ಕಡೆಗೆ ಚಿಮ್ಮಿತ್ತು. ಆದರೆ ಅಲ್ಲೇ ಫೀಲ್ಡಿಂಗ್ನಲ್ಲಿ ಕೀಗನ್ ಪೀಟರ್ಸನ್ ಕ್ಷಣಾರ್ಧದಲ್ಲೇ ಬಲಕ್ಕೆ ಜಿಗಿದು ಅದ್ಭುತವಾಗಿ ಕ್ಯಾಚ್ ಹಿಡಿದರು. ಪೀಟರ್ಸನ್ ಅವರ ಈ ಕ್ಯಾಚ್ ನೋಡಿ ಕಾಮೆಂಟೇಟರ್ಸ್ ಕೂಡ ನಿಬ್ಬೆರಗಾದರು.
2ನೇ ದಿನದಾಟದ ವೇಳೆ ಕ್ರೀಸ್ ಕಚ್ಚಿ ನಿಂತಿದ್ದ ಪೂಜಾರ 33 ಎಸೆತಗಳನ್ನು ಎದುರಿಸಿ 9 ರನ್ ಕಲೆಹಾಕಿದ್ದರು. ಪೂಜಾರ ಔಟಾದ ಬೆನ್ನಲ್ಲೇ ಅಜಿಂಕ್ಯ ರಹಾನೆ (1) ಕೂಡ ವಿಕೆಟ್ ಒಪ್ಪಿಸಿದರು. ಇದರಿಂದಾಗಿ ದಕ್ಷಿಣ ಆಫ್ರಿಕಾ ಮೂರನೇ ದಿನದಾಟದ ಆರಂಭದಲ್ಲೇ ಮೇಲುಗೈ ಪಡೆಯಿತು. 40 ಓವರ್ ಮುಕ್ತಾಯದ ವೇಳೆಗೆ ಟೀಮ್ ಇಂಡಿಯಾ 4 ವಿಕೆಟ್ ಕಳೆದುಕೊಂಡು 120 ರನ್ ಕಲೆಹಾಕಿದೆ. ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್ ಬ್ಯಾಟ್ ಮಾಡುತ್ತಿದ್ದಾರೆ.
Keegan Petersen with a magnificent catch on the second ball of the day? #SAvIND #FreedomTestSeries #BePartOfIt | @Betway_India pic.twitter.com/zqcAtMahSi
— Cricket South Africa (@OfficialCSA) January 13, 2022
ಮುಂದುವರೆದ ಪೂಜಾರ ಕಳಪೆ ಫಾರ್ಮ್:
ಚೇತೇಶ್ವರ ಪೂಜಾರ ವೃತ್ತಿಜೀವನದ ಅತ್ಯಂತ ಕೆಟ್ಟ ಹಂತವನ್ನು ಎದುರಿಸುತ್ತಿದ್ದಾರೆ. ಪ್ರಸಕ್ತ ಟೆಸ್ಟ್ ಸರಣಿಯಲ್ಲಿ ಇದು ಅವರ ಆರನೇ ಇನ್ನಿಂಗ್ಸ್ ಆಗಿತ್ತು. ಈ ಸರಣಿಯಲ್ಲಿ ಅವರು ಕೇವಲ ಒಂದು ಅರ್ಧಶತಕ ಗಳಿಸಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ 3 ಟೆಸ್ಟ್‌ಗಳ 6 ಇನ್ನಿಂಗ್ಸ್‌ಗಳಲ್ಲಿ ಪೂಜಾರ ಕಲೆಹಾಕಿದ ಒಟ್ಟು ರನ್ 124. ಹೀಗಾಗಿ ಮತ್ತೊಮ್ಮೆ ಟೆಸ್ಟ್ ತಂಡಕ್ಕೆ ಚೇತೇಶ್ವರ ಪೂಜಾರ ಆಯ್ಕೆಯ ಬಗ್ಗೆ ಟೀಕೆಗಳು ಕೇಳಿ ಬರುತ್ತಿವೆ.
ಇದನ್ನೂ ಓದಿ: IPL 2022: ಮತ್ತೆ RCB ಪರ ಆಡಬೇಕೆಂದ ಸ್ಟಾರ್ ಬೌಲರ್
ಇದನ್ನೂ ಓದಿ: Sachin Tendulkar: ಆಲ್ ಟೈಮ್ ಬೆಸ್ಟ್ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ
ಇದನ್ನೂ ಓದಿ: IPL 2022 Mega Auction: ಐಪಿಎಲ್ ಮೆಗಾ ಹರಾಜು ಡೇಟ್ ಫಿಕ್ಸ್..!
ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!
(IND vs SA test: Cheteshwar Pujara out on stunning catch by Keegan Petersen)
Published On - 4:28 pm, Thu, 13 January 22