IND vs SL: ಕಿಶನ್ ಜೊತೆ ಇನ್ನಿಂಗ್ಸ್ ಆರಂಭಿಸುವವರು ಯಾರು? ಮೊದಲ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ

IND vs SL: ಶ್ರೀಲಂಕಾ ವಿರುದ್ಧದ ತವರು ಸರಣಿಯೊಂದಿಗೆ ತನ್ನ ವರ್ಷದ ಪ್ರಯಾಣವನ್ನು ಆರಂಭಿಸುತ್ತಿರುವ ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಮಂಗಳವಾರ ಆಡುತ್ತಿದೆ.

IND vs SL: ಕಿಶನ್ ಜೊತೆ ಇನ್ನಿಂಗ್ಸ್ ಆರಂಭಿಸುವವರು ಯಾರು? ಮೊದಲ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ
ಟೀಂ ಇಂಡಿಯಾ
Follow us
| Updated By: ಪೃಥ್ವಿಶಂಕರ

Updated on:Jan 02, 2023 | 4:28 PM

ಶ್ರೀಲಂಕಾ ವಿರುದ್ಧದ ತವರು ಸರಣಿಯೊಂದಿಗೆ ತನ್ನ ವರ್ಷದ ಪ್ರಯಾಣವನ್ನು ಆರಂಭಿಸುತ್ತಿರುವ ಟೀಂ ಇಂಡಿಯಾ (India vs Sri lanka) ತನ್ನ ಮೊದಲ ಪಂದ್ಯವನ್ನು ಮಂಗಳವಾರ ಆಡುತ್ತಿದೆ. 3 ಟಿ20 ಪಂದ್ಯಗಳ ಸರಣಿಯ ಮೊದಲ ಪಂದ್ಯ ವಾಂಖೆಡೆಯಲ್ಲಿ (Wankhede Stadium) ನಡೆಯಲಿದೆ. ಹೊಸ ತಂಡದೊಂದಿಗೆ ಭವಿಷ್ಯದ ಟಿ20 ತಂಡವನ್ನು ಕಟ್ಟುವ ಮೊದಲ ಹೆಜ್ಜೆಯನ್ನಿಟ್ಟಿರುವ ಬಿಸಿಸಿಐಗೆ ಈ ಸರಣಿ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಈ ಸರಣಿಯಿಂದ ಮುಂದಿನ ಟಿ20 ವಿಶ್ವಕಪ್ ತಯಾರಿಯನ್ನು ಬಿಸಿಸಿಐ (BCCI) ಆರಂಭಿಸಿದೆ. ಇದಕ್ಕಾಗಿಯೇ ಈ ಟಿ20 ಸರಣಿಯಿಂದ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ತಂಡದ ನಾಯಕತ್ವವನ್ನು ಹಾರ್ದಿಕ್ ಪಾಂಡ್ಯ ((Hardik Pandya)) ವಹಿಸಿಕೊಂಡಿದ್ದರೆ, ಉಪನಾಯಕನಾಗಿ ಸೂರ್ಯಕುಮಾರ್ ಯಾದವ್ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಮೊದಲ ಟಿ20 ಪಂದ್ಯ ಸಾಕಷ್ಟು ರೋಚಕತೆಯನ್ನು ಸೃಷ್ಟಿಸಿದೆ. ಅಲ್ಲದೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯುತ್ತಿರುವುದು ಮತ್ತಷ್ಟು ವಿಶೇಷವಾಗಿದೆ. ಏಕೆಂದರೆ ಇಲ್ಲಿ ಟಾಸ್ ಗೆದ್ದವರೆ ಬಾಸ್ ಎನ್ನುವುದು ವಾಡಿಕೆ. ಹೀಗಾಗಿ ವರ್ಷದ ಮೊದಲ ಸರಣಿಯನ್ನು ಗೆಲುವಿನೊಂದಿಗೆ ಆರಂಭಿಸುವ ಗುರಿ ಇಟ್ಟುಕೊಂಡಿರುವ ಭಾರತಕ್ಕೆ ಲಂಕಾ ತಂಡ ಕಠಿಣ ಸವಾಲು ನೀಡುವುದಂತೂ ಖಚಿತ.

ವರ್ಷದ ಮೊದಲ ಸರಣಿಯಲ್ಲಿಯೇ ಟೀಂ ಇಂಡಿಯಾ ತನ್ನ 3 ಸೂಪರ್‌ಸ್ಟಾರ್ ಆಟಗಾರರಿಲ್ಲದೆ ಕಣಕ್ಕಿಳಿಯುತ್ತಿದೆ. ಅಂದರೆ, ಈ ತಂಡದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಆಡುತ್ತಿಲ್ಲ. ಹೀಗಿರುವಾಗ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾದ ಆಡುವ ಇಲೆವೆನ್ ಹೇಗಿರಬೇಕು ಎಂಬುದನ್ನು ನಿರ್ಧರಿಸುವುದೇ ಮ್ಯಾನೇಜ್ ಮೆಂಟ್​ಗೆ ದೊಡ್ಡ ತಲೆನೋವಾಗಿದೆ.

ರಾಹುಲ್ ಹಾಗೂ ರೋಹಿತ್ ಇಲ್ಲ

ಹೀಗಾಗಿ ಬಲಿಷ್ಠ ಲಂಕಾ ತಂಡದೆದುರು ಉತ್ತಮ ತಂಡವನ್ನೇ ಕಣಕ್ಕಿಳಿಸುವ ಯೋಜನೆ ಹಾಕಿಕೊಂಡಿರುವ ಆಯ್ಕೆ ಮಂಡಳಿಗೆ ತಂಡದ ಸಂಯೋಜನೆಯ ದೊಡ್ಡ ತಲೆನೋವಾಗಿದೆ. ಏಕೆಂದರೆ ತಂಡದ ಆರಂಭಿಕ ಜವಬ್ದಾರಿವಹಿಸಿಕೊಳ್ಳುತ್ತಿದ್ದ ರಾಹುಲ್ ಹಾಗೂ ರೋಹಿತ್ ಈ ಸರಣಿಯಲಿಲ್ಲ. ಹೀಗಾಗಿ ಅವರ ಬದಲು ಆರಂಭಿಕರಾಗಿ ಯಾರನ್ನು ಕಣಕ್ಕಿಳಿಸುವುದು ಎಂಬುದು ಬಿಸಿಸಿಐ ಮುಂದಿರುವ ಸವಾಲಾಗಿದೆ. ಅಲ್ಲದೆ ಈ ಸ್ಥಾನಕ್ಕೆ 4 ಆಟಗಾರರ ನಡುವೆ ಸ್ಪರ್ಧೆ ಕೂಡ ಏರ್ಪಟ್ಟಿರುವುದು ಬಿಸಿಸಿಐಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

IND vs SL, 1st T20I, LIVE Streaming: ವರ್ಷದ ಮೊದಲ ಸರಣಿಗೆ ಹಾರ್ದಿಕ್ ಪಡೆ ಸಜ್ಜು; ಪಂದ್ಯದ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ

ಆದರೆ ಈಗ ಪಿಟಿಐ ಮಾಡಿರುವ ವರದಿ ಪ್ರಕಾರ, ಓಪನಿಂಗ್‌ಗೆ ಇಶಾನ್ ಕಿಶನ್ ಮೊದಲ ಆಯ್ಕೆಯಾಗಲಿದ್ದಾರೆ. ಅದೇ ಸಮಯದಲ್ಲಿ, ಅವರೊಂದಿಗೆ ಒಂದೇ ಓವರ್‌ನಲ್ಲಿ 7 ಸಿಕ್ಸರ್ ಬಾರಿಸಿದ ರುತುರಾಜ್ ಗಾಯಕ್ವಾಡ್ ಅವರನ್ನು ಎರಡನೇ ಓಪನರ್ ಆಗಿ ಕಣಕ್ಕಿಳಿಸುವ ಸಾಧ್ಯತೆಗಳಿವೆ. ಕಳೆದ ಕೆಲವು ದಿನಗಳ ಹಿಂದೆ ದೇಶೀ ಟೂರ್ನಿಯಲ್ಲಿ ಉತ್ತರ ಪ್ರದೇಶ ವಿರುದ್ಧದ ಲಿಸ್ಟ್ ಎ ಪಂದ್ಯದಲ್ಲಿ ರುತುರಾಜ್ 16 ಸಿಕ್ಸರ್ ಮತ್ತು 10 ಬೌಂಡರಿಗಳನ್ನು ಬಾರಿಸುವ ಮೂಲಕ ದ್ವಿಶತಕ ಬಾರಿಸಿದರು. ಈ ಇನ್ನಿಂಗ್ಸ್‌ನಲ್ಲಿ ಸಿಡಿದಿದ್ದ 16 ಸಿಕ್ಸರ್‌ಗಳಲ್ಲಿ, ಅವರು ಒಂದೇ ಓವರ್‌ನಲ್ಲಿ 7 ಸಿಕ್ಸರ್‌ಗಳನ್ನು ಹೊಡೆದಿದ್ದರು. ಹೀಗಾಗಿ ಅವರಿಗೆ ಮತ್ತೊಬ್ಬ ಓಪನರ್ ಆಗಿ ಕಾಣಕ್ಕಿಳಿಯುವ ಅವಕಾಶಗಳು ಹೆಚ್ಚಿವೆ.

ಗಿಲ್ ಮತ್ತು ಗಾಯಕ್ವಾಡ್ ನಡುವೆ ಪೈಪೋಟಿ

ಯುಪಿ ವಿರುದ್ಧದ ಆ ದ್ವಿಶತಕದ ನಂತರ, ಗಾಯಕ್ವಾಡ್ ಲಿಸ್ಟ್ ಎ ಪಂದ್ಯದಲ್ಲಿ ಮತ್ತೆ ಎರಡು ಶತಕಗಳನ್ನು ಬಾರಿಸಿದರು. ಈ ಕಾರಣದಿಂದಾಗಿ ಅವರಿಗೆ ಮತ್ತೊಮ್ಮೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕಿದೆ. ಆದಾಗ್ಯೂ, ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟವಾದ ಸುದ್ದಿ ಪ್ರಕಾರ, ಶುಭಮನ್ ಗಿಲ್‌ಗೆ ಟಿ20 ತಂಡಕ್ಕೆ ಪಾದಾರ್ಪಣೆ ಮಾಡುವ ಅವಕಾಶ ಸಿಗುವ ಸಾಧ್ಯತೆಗಳಿವೆ. ಅಂದರೆ ಗಿಲ್, ಇಶಾನ್ ಕಿಶನ್ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಎಂದು ವರದಿಯಾಗಿದೆ. ಒಂದು ವೇಳೆ ಈಗ ಹೊರಬಿದ್ದಿರುವ ಸುದ್ದಿ ಸತ್ಯವಾದರೆ ದೇಶಿ ಕ್ರಿಕೆಟ್​ನಲ್ಲಿ ರನ್ ಗಳಿಸಿದ್ದ ರುತುರಾಜ್ ಬೆಂಚ್ ಕಾಯಬೇಕಾಗುತ್ತದೆ.

ಮಧ್ಯಮ ಕ್ರಮಾಂಕ ಮತ್ತು ಕೆಳ ಕ್ರಮಾಂಕದಲ್ಲಿ ಯಾರಿದ್ದಾರೆ?

ಮಧ್ಯಮ ಕ್ರಮಾಂಕದ ಮಟ್ಟಿಗೆ ಹೇಳುವುದಾದರೆ, ಅಲ್ಲಿ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ಸಂಜು ಸ್ಯಾಮ್ಸನ್ ಮತ್ತು ಅಕ್ಷರ್ ಪಟೇಲ್ ಅವಕಾಶ ಪಡೆಯುವ ಸಾಧ್ಯತೆಗಳು ದಟ್ಟವಾಗಿವೆ. ಇವರಲ್ಲದೆ, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್ ಮತ್ತು ಹರ್ಷಲ್ ಪಟೇಲ್ ವೇಗದ ಬೌಲಿಂಗ್ ಜವಬ್ದಾರಿ ಹೊರಲಿದ್ದಾರೆ. ಇವರೊಂದಿಗೆ ತಂಡದಲ್ಲಿ ಸ್ಪೆಷಲಿಸ್ಟ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಕೂಡ ಇರಲಿದ್ದಾರೆ.

ಮೊದಲ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI

ಇಶಾನ್ ಕಿಶನ್, ಶುಬ್ಮನ್ ಗಿಲ್/ರುತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಯುಜ್ವೇಂದ್ರ ಚಾಹಲ್

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:25 pm, Mon, 2 January 23

ಬೆಂಗಳೂರಿನ ಕೆಆರ್ ಪುರಂನ ಮುರುಗನ್ ದೇವಸ್ಥಾನದಲ್ಲಿ ದರೋಡೆ; ವಿಡಿಯೋ ಇಲ್ಲಿದೆ
ಬೆಂಗಳೂರಿನ ಕೆಆರ್ ಪುರಂನ ಮುರುಗನ್ ದೇವಸ್ಥಾನದಲ್ಲಿ ದರೋಡೆ; ವಿಡಿಯೋ ಇಲ್ಲಿದೆ
‘ಯಾವಾಗಲೂ ದರ್ಶನ್ ನನ್ನ ಮಗ, ಅದು ಬದಲಾಗಲ್ಲ’: ಸುಮಲತಾ ಅಂಬರೀಷ್
‘ಯಾವಾಗಲೂ ದರ್ಶನ್ ನನ್ನ ಮಗ, ಅದು ಬದಲಾಗಲ್ಲ’: ಸುಮಲತಾ ಅಂಬರೀಷ್
ಮಗನಂತೆ ಬೆಳೆಸಿದ ಚನ್ನಪಟ್ಟಣ ಜನರ ವಿಶ್ವಾಸಕ್ಕೆ ದ್ರೋಹ ಬಗೆಯಲ್ಲ: ಹೆಚ್ಡಿಕೆ
ಮಗನಂತೆ ಬೆಳೆಸಿದ ಚನ್ನಪಟ್ಟಣ ಜನರ ವಿಶ್ವಾಸಕ್ಕೆ ದ್ರೋಹ ಬಗೆಯಲ್ಲ: ಹೆಚ್ಡಿಕೆ
ಚನ್ನಪಟ್ಟಣ ಕಾರ್ಯಕರ್ತರಿಗಾಗಿ ನಿಖಿಲ್ ಸ್ಪರ್ಧಿಸಲೇಬೇಕಿತ್ತು:ಕುಮಾರಸ್ವಾಮಿ
ಚನ್ನಪಟ್ಟಣ ಕಾರ್ಯಕರ್ತರಿಗಾಗಿ ನಿಖಿಲ್ ಸ್ಪರ್ಧಿಸಲೇಬೇಕಿತ್ತು:ಕುಮಾರಸ್ವಾಮಿ
ಶಿವಕುಮಾರ್ ಪಾದಯಾತ್ರೆ ಮಾಡಿದ್ದನ್ನು ಮಿಮಿಕ್ರಿ ಮಾಡಿ ತೋರಿಸಿದ ಯತ್ನಾಳ್
ಶಿವಕುಮಾರ್ ಪಾದಯಾತ್ರೆ ಮಾಡಿದ್ದನ್ನು ಮಿಮಿಕ್ರಿ ಮಾಡಿ ತೋರಿಸಿದ ಯತ್ನಾಳ್
ಕೋವಿಡ್ ಸಮಯದಲ್ಲಿ ಕುಮಾರಸ್ವಾಮಿ ಮನೇಲಿ ಹೊದ್ದು ಮಲಗಿದ್ದರು: ಶಿವಕುಮಾರ್
ಕೋವಿಡ್ ಸಮಯದಲ್ಲಿ ಕುಮಾರಸ್ವಾಮಿ ಮನೇಲಿ ಹೊದ್ದು ಮಲಗಿದ್ದರು: ಶಿವಕುಮಾರ್
ವಿಧಾನಸೌಧದ ಗಾರ್ಡನ್​ನಲ್ಲಿ ಬಿಯರ್ ಬಾಟಲ್ ಪತ್ತೆ
ವಿಧಾನಸೌಧದ ಗಾರ್ಡನ್​ನಲ್ಲಿ ಬಿಯರ್ ಬಾಟಲ್ ಪತ್ತೆ
ಬೀದರ್ ಜಿಲ್ಲೆಯ ಮುಸಲ್ಮಾನರು ಕಂಡವರ ಜಮೀನು ತಮ್ಮದು ಅಂತಿದ್ದಾರೆ: ಯತ್ನಾಳ್
ಬೀದರ್ ಜಿಲ್ಲೆಯ ಮುಸಲ್ಮಾನರು ಕಂಡವರ ಜಮೀನು ತಮ್ಮದು ಅಂತಿದ್ದಾರೆ: ಯತ್ನಾಳ್
ಕಳಪೆ ಆಗಿ ಜೈಲು ಸೇರಿದ ಗೋಲ್ಡ್ ಸುರೇಶ್; ಈ ವಾರ ಡಬಲ್ ಶಾಕ್
ಕಳಪೆ ಆಗಿ ಜೈಲು ಸೇರಿದ ಗೋಲ್ಡ್ ಸುರೇಶ್; ಈ ವಾರ ಡಬಲ್ ಶಾಕ್
ನರೇಂದ್ರ ಮೋದಿಯವರಿಗೆ ಸರಿಸಾಟಿಯಾಗುವ ನಾಯಕ ಇಂಡಿಯಾದಲ್ಲಿಲ್ಲ: ದೇವೇಗೌಡ
ನರೇಂದ್ರ ಮೋದಿಯವರಿಗೆ ಸರಿಸಾಟಿಯಾಗುವ ನಾಯಕ ಇಂಡಿಯಾದಲ್ಲಿಲ್ಲ: ದೇವೇಗೌಡ