IND vs SL 2ನೇ ಟಿ-20: ಭಾರತದ ಪ್ಲೇಯಿಂಗ್ XI ನಲ್ಲಿ ಅಲ್ಲೋಲ ಕಲ್ಲೋಲ: ಇಂದು ಕಣಕ್ಕಿಳಿಯುವವರು ಯಾರೆಲ್ಲ?

| Updated By: Vinay Bhat

Updated on: Jul 28, 2021 | 11:21 AM

India's playing XI: ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್​ನಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಪ್ರಮುಖ ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ಭಾರತ ಇಂದು ಕಣಕ್ಕಿಳಿಯಬೇಕಿದೆ.

IND vs SL 2ನೇ ಟಿ-20: ಭಾರತದ ಪ್ಲೇಯಿಂಗ್ XI ನಲ್ಲಿ ಅಲ್ಲೋಲ ಕಲ್ಲೋಲ: ಇಂದು ಕಣಕ್ಕಿಳಿಯುವವರು ಯಾರೆಲ್ಲ?
Sri Lanka vs India 2nd T20
Follow us on

ಎಲ್ಲ ಅಂದುಕೊಂಡಂತೆ ಆಗಿದ್ದರೆ ನಿನ್ನೆ ಮಂಗಳವಾರ ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವೆ ಎರಡನೇ ಟಿ-20 ಪಂದ್ಯ (2nd T20I) ನಡೆಯಬೇಕಿತ್ತು. ಆದರೆ, ಪಂದ್ಯ ಆರಂಭಕ್ಕೆ ಕೆಲವು ಗಂಟೆಗಳಿರುವಾಗ ಟೀಮ್ ಇಂಡಿಯಾದ ಪ್ರಮುಖ ಆಲ್ರೌಂಡರ್ ಕ್ರುನಾಲ್ ಪಾಂಡ್ಯ (Krunal Pandya) ಅವರಿಗೆ ಕೊರೊನಾ ಪಾಸಿಟಿವ್ (Corona Positive) ಇರುವುದು ಕಂಡುಬಂದಿದೆ. ಹೀಗಾಗಿ ಎರಡನೇ ಟಿ-20 ಪಂದ್ಯವನ್ನು ಇಂದು ಬುಧವಾರಕ್ಕೆ ಮುಂದೂಡಲಾಗಿದೆ. ಕ್ರುನಾಲ್ ಜೊತೆ ಸಂಪರ್ಕದಲ್ಲಿದ್ದ 9 ಆಟಗಾರರು ಐಸೋಲೇಶನ್​ನಲ್ಲಿದ್ದು ಮುಂದಿನ ಎರಡೂ ಪಂದ್ಯದಲ್ಲಿ ಕಣಕ್ಕಿಳಿಯುವಂತಿಲ್ಲ.

ಇದರಿಂದಾಗಿ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್​ನಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಪ್ರಮುಖ ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ಭಾರತ ಇಂದು ಕಣಕ್ಕಿಳಿಯಬೇಕಿದೆ. ಸದ್ಯದ ಮಾಹಿತಿ ಪ್ರಕಾರ ಟೀಮ್ ಇಂಡಿಯಾದ ಪೃಥ್ವಿ ಶಾ, ಸೂರ್ಯಕುಮಾರ್, ಹಾರ್ದಿಕ್ ಪಾಂಡ್ಯ, ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಇಶಾನ್ ಕಿಶನ್, ದೇವದತ್ ಪಡಿಕ್ಕಲ್ ಮತ್ತು ಕೃಷ್ಣಪ್ಪ ಗೌತಮ್ ಸೇರಿದಂತೆ ಒಟ್ಟು 9 ಆಟಗಾರರನ್ನು ಸಂಪೂರ್ಣವಾಗಿ ಐಸೋಲೇಶನ್‌ ಮಾಡಲಾಗಿದೆ. ಇವರು ಎರಡನೇ ಹಾಗೂ ಮೂರನೇ ಟಿ-20 ಯಲ್ಲಿ ಆಡುವುದಿಲ್ಲ ಎಂದು ಹೇಳಲಾಗಿದೆ.

ಹೀಗಾದಲ್ಲಿ ಎರಡನೇ ಟಿ-20 ಪಂದ್ಯಕ್ಕೆ ಭಾರತದ ಪ್ಲೇಯಿಂಗ್ XI ಕಷ್ಟಕರವಾಗಲಿದೆ. ನಾಯಕ ಶಿಖರ್ ಧವನ್ ಜೊತೆ ಪೃಥ್ವಿ ಶಾ ಇನ್ನಿಂಗ್ಸ್ ಆರಂಭಿಸಲು ಸಾಧ್ಯವಿಲ್ಲ. ದೇವದತ್ ಪಡಿಕ್ಕಲ್ ಕೂಡ ಐಸೋಲೇಶನ್​ನಲ್ಲಿದ್ದಾರೆ. ಹೀಗಾಗಿ ಧವನ್ ಜೊತೆ ರುತುರಾಜ್ ಗಾಯಕ್ವಾಡ್ ಕಣಕ್ಕಿಳಿದು ಅಂತರರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಲಿದ್ದಾರೆ.

ಮೂರನೇ ಕ್ರಮಾಂಕದಲ್ಲಿ ಮನೀಶ್ ಪಾಂಡೆ ಆಡುವ ಸಾಧ್ಯತೆ ಇದ್ದು, ವಿಕೆಟ್ ಕೀಪರ್ ಜವಾಬ್ದಾರಿ ಸಂಜು ಸ್ಯಾಮ್ಸನ್ ಹೊರಲಿದ್ದಾರೆ. ನಿತೀಶ್ ರಾಣಗೆ ಕೂಡ ಪದಾರ್ಪನೆ ಪಂದ್ಯವಾಗುವ ಸಾಧ್ಯತೆ ಇದೆ. ಇವರು ಬ್ಯಾಟ್ಸ್​ಮನ್​ಗಳಾಗಿದ್ದರೆ ದೀಪಕ್ ಚಹಾರ್ ಹಾಗೂ ಭುವನೇಶ್ವರ್ ಕುಮಾರ್ ನಂತರದ ಸ್ಥಾನದಲ್ಲಿ ಆಡಬಹುದು. ಯುಜ್ವೇಂದ್ರ ಚಹಲ್, ವರುಣ್ ಚಕ್ರವರ್ತಿ, ರಾಹುಲ್ ಚಹಾರ್ ಮತ್ತು ಚೇತನ್ ಸಕರಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

ಇತ್ತ ಶ್ರೀಲಂಕಾ ತಂಡದಲ್ಲೂ ಕೆಲ ಆಟಗಾರರು ಇಂಜುರಿಯಿಂದ ಬಳಲುತ್ತಿದ್ದು ಆಡುವುದು ಅನುಮಾನವಾಗಿದೆ. ಪ್ರಮುಖ ಆಟಗಾರರ ಅಲಭ್ಯತೆಯಲ್ಲಿ ಉಭಯ ತಂಡಗಳು ಎರಡನೇ ಟಿ-20 ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಹೀಗಾಗಿ ಇಂದಿನ ಮ್ಯಾಚ್ ಸಾಕಷ್ಟು ಕುತೂಹಲ ಕೆರಳಿಸಿದೆ.

ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಸಂಜೆ 7:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಸರಿಯಾಗಿ 8 ಗಂಟೆಗೆ ಪಂದ್ಯ ಆರಂಭವಾಗಲಿದೆ.

IND vs SL: ಟೀಮ್ ಇಂಡಿಯಾದ ಈ 9 ಆಟಗಾರರು ಮುಂದಿನ ಎರಡೂ ಟಿ-20ಯಲ್ಲಿ ಕಣಕ್ಕಿಳಿಯಲ್ಲ: ಯಾರೆಲ್ಲ ಗೊತ್ತೇ?

ಹಾರ್ದಿಕ್ ಪಾಂಡ್ಯ ಜಾಗಕ್ಕೆ ಇಬ್ಬರು ಆಟಗಾರರನ್ನು ಆಯ್ಕೆ ಮಾಡಿದ ಸುನಿಲ್ ಗವಾಸ್ಕರ್

(Ind vs sl 2nd t20 Predicted playing XI for second T20I if Krunal Pandyas close contacts are isolated)