ಹಾರ್ದಿಕ್ ಪಾಂಡ್ಯ ಜಾಗಕ್ಕೆ ಇಬ್ಬರು ಆಟಗಾರರನ್ನು ಆಯ್ಕೆ ಮಾಡಿದ ಸುನಿಲ್ ಗವಾಸ್ಕರ್

ಸದ್ಯ ಪಾಂಡ್ಯ ಜಾಗಕ್ಕೆ ಕುತ್ತು ಬಂದಿದೆ. ಇವರಗಿಂತ ಅತ್ಯುತ್ತಮವಾಗಿ ಬ್ಯಾಟಿಂಗ್-ಬೌಲಿಂಗ್ ಮಾಡಬಲ್ಲ ಇಬ್ಬರು ಆಟಗಾರರನ್ನು ಟೀಮ್ ಇಂಡಿಯಾ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಹೆಸರಿಸಿದ್ದಾರೆ.

ಹಾರ್ದಿಕ್ ಪಾಂಡ್ಯ ಜಾಗಕ್ಕೆ ಇಬ್ಬರು ಆಟಗಾರರನ್ನು ಆಯ್ಕೆ ಮಾಡಿದ ಸುನಿಲ್ ಗವಾಸ್ಕರ್
Sunil Gavaskar and Hardik Pandya
TV9kannada Web Team

| Edited By: Vinay Bhat

Jul 28, 2021 | 8:04 AM

ಹಾರ್ದಿಕ್ ಪಾಂಡ್ಯ (Hardik Pandya) ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡ್ ಪ್ಲೇಯರ್. ಭಾರತವನ್ನು ಅನೇಕ ಪಂದ್ಯಗಳಲ್ಲಿ ತಮ್ಮ ಬ್ಯಾಟಿಂಗ್-ಬೌಲಿಂಗ್ ಪ್ರದರ್ಶನದಿಂದ ಗೆಲ್ಲಿಸಿಕೊಟ್ಟಿದ್ದಾರೆ. ಆದರೆ, ಕೆಲ ಕಾಲ ಇಂಜುರಿಗೆ ತುತ್ತಾಗಿ ತಂಡದಿಂದ ಹೊರಬಿದ್ದು ಮತ್ತೆ ಟೀಮ್ ಇಂಡಿಯಾ (Team India) ಸೇರಿಕೊಂಡಿದ್ದಾರಾದರು ಹಿಂದಿನ ಲಯದಲ್ಲಿಲ್ಲ. ಹಾರ್ದಿಕ್ ಬ್ಯಾಟ್​ನಿಂದ ಈಗ ಬಿಗ್ ಶಾಟ್ ಕಾಣದೆ ತುಂಬಾ ಸಮಯವಾಗಿದೆ. ಬೌಲಿಂಗ್​ನಲ್ಲೂ ಪರಿಣಾಮಕಾರಿಯಾಗಿ ಗೋಚರಿಸುತ್ತಿಲ್ಲ.

ಸದ್ಯ ಸಾಗುತ್ತಿರುವ ಶ್ರೀಲಂಕಾ ವಿರುದ್ಧದ ಸರಣಿಯಲ್ಲೂ ಪಾಂಡ್ಯ ಸದ್ದು ಮಾಡುತ್ತಿಲ್ಲ. ಏಕದಿನ ಸರಣಿಯ ಎರಡು ಇನ್ನಿಂಗ್ಸ್​ನಲ್ಲಿ ಬ್ಯಾಟ್ ಮಾಡಿದ್ದ ಇವರು ಮೊದಲ ಪಂದ್ಯದಲ್ಲಿ ಸೊನ್ನೆ ಸುತ್ತಿದರೆ, ಎರಡನೇ ಪಂದ್ಯದಲ್ಲೂ ಬೇಗನೆ ಔಟ್ ಆದರು. ಮೊದಲ ಟಿ-20 ಪಂದ್ಯದಲ್ಲೂ 10 ರನ್​ಗೆ ಸುಸ್ತಾದರು. ಹೀಗಾಗಿ ಸದ್ಯ ಪಾಂಡ್ಯ ಜಾಗಕ್ಕೆ ಕುತ್ತು ಬಂದಿದೆ. ಇವರಗಿಂತ ಅತ್ಯುತ್ತಮವಾಗಿ ಬ್ಯಾಟಿಂಗ್-ಬೌಲಿಂಗ್ ಮಾಡಬಲ್ಲ ಇಬ್ಬರು ಆಟಗಾರರನ್ನು ಟೀಮ್ ಇಂಡಿಯಾ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಹೆಸರಿಸಿದ್ದಾರೆ.

ಗವಾಸ್ಕರ್ ಹೇಳುವ ಪ್ರಕಾರ, “ಹಾರ್ದಿಕ್ ಪಾಂಡ್ಯ ಬದಲು ಬ್ಯಾಕ್​ಅಪ್ ಆಟಗಾರರು ಭಾರತ ತಂಡದಲ್ಲಿದ್ದಾರೆ. ಇತ್ತೀಚೆಗಷ್ಟೆ ನಾವು ದೀಪಕ್ ಚಹಾರ್ ಅವರ ಅಮೋಘ ಆಟವನ್ನು ಕಂಡಿದ್ದೇವೆ. ಇವರ ಜೊತೆಗೆ ಭುವನೇಶ್ವರ್ ಕುಮಾರ್ ಕೂಡ ಒಬ್ಬ ಒಳ್ಳೆಯ ಆಲ್ರೌಂಡರ್ ಎಂಬುದನ್ನು ನಾವು ಮರೆತೇ ಬಿಟ್ಟಿದ್ದೇವೆ” ಎಂದಿದ್ದಾರೆ.

“ಮೂರು ವರ್ಷಗಳ ಹಿಂದೆ ಇದೇ ಶ್ರೀಲಂಕಾ ವಿರುದ್ಧ ಭಾರತ ಪಂದ್ಯವನ್ನು ಆಡುತ್ತಿದ್ದಾಗ ಧೋನಿ ಜೊತೆ ನಿಂತು ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದು ಭುವನೇಶ್ವರ್ ಕುಮಾರ್. ಭಾರತ ಆಗ 7-8 ವಿಕೆಟ್ ಕಳೆದುಕೊಂಡಿತ್ತು. ಭುವಿ ಹಾಗೂ ಧೋನಿ ಕ್ರೀಸ್​ನಲ್ಲಿ ನಿಂತು ಪಂದ್ಯ ಗೆಲ್ಲಿಸಿಕೊಟ್ಟರು. ಇದೇ ಆಟವನ್ನು ನಾವು ಎರಡನೇ ಏಕದಿನದಲ್ಲೂ ಕಂಡೆವು” ಎಂದು ಗವಾಸ್ಕರ್ ಹೇಳಿದ್ದಾರೆ.

ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ದೀಪಕ್ ಚಹಾರ್ ಅಜೇಯ 69 ರನ್ ಸಿಡಿಸಿ ಭಾರತಕ್ಕೆ ರೋಚಕ ಜಯ ತಂದುಕೊಟ್ಟಿದ್ದರು. ಇವರಿಗೆ ಸಾಥ್ ನೀಡಿದ್ದು ಭುವನೇಶ್ವರ್. ಭುವಿ ಟೆಸ್ಟ್​ನಲ್ಲಿ 3 ಹಾಗೂ ಏಕದಿನದಲ್ಲಿ ಒಂದು ಅರ್ಧಶತಕ ಬಾರಿಸಿದ್ದಾರೆ. ಹೀಗಾಗಿ ದೀಪಕ್ ಮತ್​ತು ಭುವನೇಶ್ವರ್ ಕೂಡ ಭಾರತದ ಅತ್ಯುತ್ತಮ ಆಲ್ರೌಂಡರ್ ಎಂದು ಹೇಳಿದ್ದಾರೆ.

IND vs ENG: ಗಾಯದಿಂದ ಚೇತರಿಸಿಕೊಂಡ ರಹಾನೆ, ಅಭ್ಯಾಸದಲ್ಲಿ ನಿರತ; ಮೊದಲ ಟೆಸ್ಟ್​ ಆಡುವುದು ಅನುಮಾನ

Krunal Pandya: ಲಂಕಾ ವಿರುದ್ಧದ ಸರಣಿಯಿಂದ ಕ್ರುನಾಲ್ ಪಾಂಡ್ಯ ಔಟ್: ಸಂಪರ್ಕದಲ್ಲಿದ್ದ 8 ಆಟಗಾರರು..?

(Hardik Pandya Sunil Gavaskar names 2 players who can take Hardik Pandya place)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada