IND vs SL: 4ನೇ ದಿನದಾಟ ಅಂತ್ಯ; ಶ್ರೀಲಂಕಾಕ್ಕೆ 16 ರನ್​ಗಳ ಮುನ್ನಡೆ

Colombo Test Day 4 highlights: ಕೊಲಂಬೊದಲ್ಲಿ ನಡೆಯುತ್ತಿರುವ ಭಾರತ-ಶ್ರೀಲಂಕಾ 2ನೇ ಟೆಸ್ಟ್‌ನ 4ನೇ ದಿನದಾಟ ಮಳೆಯಿಂದಾಗಿ ಬೇಗ ಅಂತ್ಯಗೊಂಡಿತು. ಶ್ರೀಲಂಕಾ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 229 ರನ್ ಗಳಿಸಿ, ಭಾರತದ ವಿರುದ್ಧ 16 ರನ್‌ಗಳ ಮುನ್ನಡೆ ಸಾಧಿಸಿದೆ. ಕೇಶರ ನುವಂಥ ಮತ್ತು ಸೋನಾಲ್ ದಿನುಷಾ ಅಜೇಯರಾಗಿ ಉಳಿದಿದ್ದು, ಐದನೇ ದಿನದಾಟದ ಮೇಲೆ ಎಲ್ಲರ ಚಿತ್ತವಿದೆ. ಭಾರತದ ಪರ ಮಾನವ್ ಸುತಾರ್ 2 ವಿಕೆಟ್ ಪಡೆದರು.

IND vs SL: 4ನೇ ದಿನದಾಟ ಅಂತ್ಯ; ಶ್ರೀಲಂಕಾಕ್ಕೆ 16 ರನ್​ಗಳ ಮುನ್ನಡೆ
Ind Vs Sl

Updated on: Aug 26, 2026 | 6:43 PM

ಕೊಲಂಬೊದಲ್ಲಿ (Colombo Test) ನಡೆಯುತ್ತಿರುವ ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವಿನ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟವನ್ನು ಸಹ ಬೇಗನೇ ಅಂತ್ಯಗೊಳಿಸಲಾಗಿದೆ. ಕೊನೆಯ ಸೆಷನ್​ ವೇಳೆ ಆಟಕ್ಕೆ ಮಳೆ ಅಡ್ಡಿಪಡಿಸಿತು. ಹೀಗಾಗಿ ಆಟವನ್ನು ಅಂತ್ಯಗೊಳಿಸಲಾಯಿತು. ನಾಲ್ಕನೇ ದಿನದ ಆಟದ ಅಂತ್ಯಕ್ಕೆ, ಆತಿಥೇಯ ಶ್ರೀಲಂಕಾ ತನ್ನ ಎರಡನೇ ಇನ್ನಿಂಗ್ಸ್​ನಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು 229 ರನ್ ಕಲೆಹಾಕಿದೆ. ಇದರೊಂದಿಗೆ 16 ರನ್‌ಗಳ ಮುನ್ನಡೆ ಸಾಧಿಸಿದೆ. ಪ್ರಸ್ತುತ ಕೇಶರ ನುವಂಥ ಮೂರು ರನ್‌ ಮತ್ತು ಸೋನಾಲ್ ಸೋನಾಲ್ ದಿನುಷಾ ಏಳು ರನ್‌ ಬಾರಿಸಿ ಅಜೇಯರಾಗಿ ಉಳಿದಿದ್ದು, ಐದನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಭಾರತದ ಪರ ಎರಡನೇ ಇನ್ನಿಂಗ್ಸ್​ನಲ್ಲಿ ಮಾನವ್ ಸುತಾರ್ 2 ವಿಕೆಟ್ ಪಡೆದರೆ, ಉಳಿದವರು ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.

ಸೋನಲ್ ದಿನುಷಾ ಶತಕ

ನಾಲ್ಕನೇ ದಿನದಂದು ಶ್ರೀಲಂಕಾ ದಿನವಿಡೀ ಬ್ಯಾಟಿಂಗ್ ಮಾಡಿತು. ಶ್ರೀಲಂಕಾದ ಮೊದಲ ಇನ್ನಿಂಗ್ಸ್‌ನಲ್ಲಿ ಸೋನಲ್ ದಿನುಷಾ ತಮ್ಮ ಸರಣಿಯ ಸತತ ಎರಡನೇ ಶತಕ ಬಾರಿಸುವುದರೊಂದಿಗೆ ದಿನ ಆರಂಭವಾಯಿತು. ಆದಾಗ್ಯೂ, ಶ್ರೀಲಂಕಾ 4ನೇ ದಿನದಂದು ತನ್ನ ಒಟ್ಟು ಮೊತ್ತಕ್ಕೆ ಕೇವಲ 22 ರನ್‌ ಸೇರಿಸಲಷ್ಟೇ ಶಕ್ತವಾಯಿತು. ಆಫ್-ಸ್ಪಿನ್ನರ್ ಸರಾಂಶ್ ಜೈನ್ ಕೊನೆಯ ಎರಡು ವಿಕೆಟ್‌ಗಳನ್ನು ಪಡೆದು ಲಂಕಾ ಇನ್ನಿಂಗ್ಸ್ ಅಂತ್ಯ ಹಾಡಿದರು. ಹೀಗಾಗಿ ಶ್ರೀಲಂಕಾ ತಂಡಕ್ಕೆ ಫಾಲೋ-ಆನ್ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

92 ರನ್​ಗಳಿಗೆ ಪಸಿಂದು ಔಟ್

ಆದ್ದರಿಂದ ನಾಯಕ ಶುಭ್​ಮನ್ ಗಿಲ್ ಶ್ರೀಲಂಕಾ ತಂಡದ ಮೇಲೆ ಫಾಲೋ-ಆನ್ ಹೇರಿದರು. ಹೀಗಾಗಿ ಎರಡನೇ ಇನ್ನಿಂಗ್ಸ್ ಆರಂಭಿಸಿದ ಶ್ರೀಲಂಕಾಕ್ಕೆ ಮತ್ತೊಮ್ಮೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಬ್ಯಾಟ್ಸ್‌ಮನ್ ಲಹಿರು ಉದಾರ ಬೇಗನೆ ಔಟಾದರು. ಆದಾಗ್ಯೂ, ಪಸಿಂದು ಸೂರ್ಯಬಂಡಾರ ಸತತ ಎರಡನೇ ಇನ್ನಿಂಗ್ಸ್​ನಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಮೊದಲ ಇನ್ನಿಂಗ್ಸ್​ನಲ್ಲಿ 80 ರನ್​ಗಳಿಗೆ ಔಟಾಗಿದ್ದ ಪಸಿಂದು ಎರಡನೇ ಇನ್ನಿಂಗ್ಸ್​ನಲ್ಲಿ 92 ರನ್​ಗಳಿಗೆ ಔಟಾಗುವ ಮೂಲಕ ಶತಕ ವಂಚಿತರಾದರು. ಆದಾಗ್ಯೂ ಕಮಿಂದು ಮೆಂಡಿಸ್ ಅವರೊಂದಿಗೆ 115 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡು ತಂಡವನ್ನು ಆರಂಭಿಕ ಆಘಾತದಿಂದ ಹೊರ ತಂದರು.

4ನೇ ದಿನದಾಟ ಬೇಗನೇ ಅಂತ್ಯ

ಕಮಿಂದು ಮೆಂಡಿಸ್ ಸರಣಿಯ ಮೊದಲ ಅರ್ಧಶತಕ ಬಾರಿಸಿ ತಂಡವನ್ನು 200 ರನ್​ಗಳ ಗಡಿ ದಾಟಿಸಿ ಔಟಾದರು. ಇತ್ತ ಪಸಿಂದು ಸೂರ್ಯಬಂಡಾರ 92 ರನ್​ಗಳ ಇನ್ನಿಂಗ್ಸ್ ಆಡಿ ವಿಕೆಟ್ ಒಪ್ಪಿಸುವ ಮೂಲಕ ಶತಕ ವಂಚಿತರಾದರು. ಹೀಗಾಗಿ ಶ್ರೀಲಂಕಾ 209 ಮತ್ತು 218 ರನ್‌ಗಳ ನಡುವೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಮಳೆಯಿಂದಾಗಿ ದಿನದ ಆಟ ಸುಮಾರು 45 ನಿಮಿಷಗಳ ಮೊದಲೇ ಮುಕ್ತಾಯವಾಯಿತು.

IND vs SL: ಸತತ 2 ಇನ್ನಿಂಗ್ಸ್​ಗಳಲ್ಲಿ ಶತಕ ವಂಚಿತರಾದ ಪಸಿಂದು ಸೂರ್ಯಬಂಡಾರ

24 ಪಂದ್ಯಗಳಲ್ಲಿ ಸೋಲು

ಹೀಗಾಗಿ ಟೀಂ ಇಂಡಿಯಾ ಗೆಲುವಿನ ಸನಿಹದಲ್ಲಿದೆಯಾದರೂ ಅಂತಿಮ ದಿನದಂದು ಹವಾಮಾನ ಹೇಗಿರುತ್ತದೆ ಎಂಬುದರ ಮೇಲೆ ಪಂದ್ಯದ ಫಲಿತಾಂಶ ನಿಂತಿದೆ. ಪ್ರಸ್ತುತ ಟೀಂ ಇಂಡಿಯಾ ಪಂದ್ಯದಲ್ಲಿ ಮೇಲುಗೈ ಸಾಧಿಸಿರುವುದರಿಂದ ಶ್ರೀಲಂಕಾ ಸೋಲಿನಿಂದ ಪಾರಾಗಲು ಪವಾಡವೇ ನಡೆಯಬೇಕು. ಏಕೆಂದರೆ ಶ್ರೀಲಂಕಾ ಟೆಸ್ಟ್ ಕ್ರಿಕೆಟ್‌ನಲ್ಲಿ 27 ಬಾರಿ ಫಾಲೋ ಆನ್‌ ಹೊತ್ತಿದ್ದು ಅದರಲ್ಲಿ 24 ಪಂದ್ಯಗಳಲ್ಲಿ ಸೋತಿದೆ. ಉಳಿದಂತೆ ಮೂರು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:32 pm, Wed, 26 August 26

Loading...
Unable to load recommendations.
Follow Us