IND vs SL: ಸತತ 2 ಇನ್ನಿಂಗ್ಸ್ಗಳಲ್ಲಿ ಶತಕ ವಂಚಿತರಾದ ಪಸಿಂದು ಸೂರ್ಯಬಂಡಾರ
Pasindu Sooriyabandara's Double Miss: ಪಸಿಂದು ಸೂರ್ಯಬಂಡಾರ ಸತತ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ವಂಚಿತರಾಗಿದ್ದಾರೆ. ಭಾರತ ವಿರುದ್ಧದ ಕೊಲಂಬೊ ಟೆಸ್ಟ್‌ನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 80 ರನ್ ಗಳಿಸಿದ್ದ ಪಸಿಂದು, ಎರಡನೇ ಇನ್ನಿಂಗ್ಸ್‌ನಲ್ಲಿ ಎರಡು ಜೀವದಾನ ಪಡೆದರೂ 92 ರನ್‌ಗಳಿಗೆ ಔಟಾದರು. ಉತ್ತಮ ಆರಂಭಗಳನ್ನು ಶತಕವನ್ನಾಗಿ ಪರಿವರ್ತಿಸಲು ವಿಫಲರಾಗಿ, ಅಮೂಲ್ಯ ಶತಕಗಳನ್ನು ಕಳೆದುಕೊಂಡರು. ಭಾರತೀಯ ಬೌಲರ್‌ಗಳ ಒತ್ತಡಕ್ಕೆ ಮಣಿದು ನಿರ್ಣಾಯಕ ಸಮಯದಲ್ಲಿ ವಿಕೆಟ್ ಒಪ್ಪಿಸಿದರು.

ಶ್ರೀಲಂಕಾದ ಯುವ ಬ್ಯಾಟರ್ ಪಸಿಂದು ಸೂರ್ಯಬಂಡಾರ (Pasindu Sooriyabandara) ಸತತ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ವಂಚಿತರಾಗಿದ್ದಾರೆ. ಕೊಲಂಬೊದಲ್ಲಿ ನಡೆಯುತ್ತಿರುವ ಟೀಂ ಇಂಡಿಯಾ (Team India) ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 80 ರನ್‌ಗಳಿಗೆ ಔಟಾಗುವ ಮೂಲಕ ಶತಕ ವಂಚಿತರಾಗಿದ್ದ ಪಸಿಂದು ಸೂರ್ಯಬಂಡಾರ ಇದೀಗ ಎರಡನೇ ಇನ್ನಿಂಗ್ಸ್‌ನಲ್ಲೂ ಕೇವಲ 8 ರನ್ಗಳ ಅಂತರದಿಂದ ಶತಕದಂಚಿನಲ್ಲಿ ಎಡವಿದ್ದಾರೆ.
ಆರಂಭದಲ್ಲೇ ಸಿಕ್ಕ ಎರಡೆರಡು ಜೀವದಾನಗಳನ್ನು ಬಳಸಿಕೊಂಡು ಅರ್ಧಶತಕ ಪೂರೈಸಿದ ಪಸಿಂದು ಅದನ್ನು ಶತಕವನ್ನಾಗಿ ಪರಿವರ್ತಿಸುವಲ್ಲಿ ಎಡವಿದರು. ಆರಂಭದಿಂದಲೂ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದ ಪಸಿಂದು ಮಾನವ್ ಸುತಾರ್ ಬೌಲಿಂಗ್‌ನಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿ ಸ್ಟಂಪ್ ಔಟ್ ಆದರು. ಗಮನಿಸಬೇಕಾದ ಸಂಗತಿಯೆಂದರೆ ಪಸಿಂದುಗೆ ಹಿಂದಿನ ಎಸೆತದಲ್ಲಿ ಡಿಆರ್‌ಎಸ್ ಸಹಾಯದಿಂದ ಜೀವದಾನ ಸಿಕ್ಕಿತ್ತು. ಆದರೆ ಅದರ ಲಾಭ ಪಡೆಯಲು ಸಾಧ್ಯವಾಗದೆ 92 ರನ್ ಬಾರಿಸಿ ತಮ್ಮ ವಿಕೆಟ್ ಕಳೆದುಕೊಂಡರು.
ಮೊದಲ ಇನ್ನಿಂಗ್ಸ್‌ನಲ್ಲೂ ಶತಕ ವಂಚಿತ
ಮೇಲೆ ಹೇಳಿದಂತೆ ಮೊದಲ ಇನ್ನಿಂಗ್ಸ್‌ನಲ್ಲಿ ಪಸಿಂದು ಸೂರ್ಯಬಂಡಾರ 80 ರನ್ ಬಾರಿಸಿ ಸ್ವಲ್ಪದರಲ್ಲೇ ಶತಕ ವಂಚಿತರಾಗಿದ್ದರು. ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ತಂಡಕ್ಕೆ ಅಗತ್ಯವಿದ್ದಾಗ ಮತ್ತೊಂದು ಬಲವಾದ ಇನ್ನಿಂಗ್ಸ್ ಆಡಿದ ಪಸಿಂದು ಶತಕದ ಸಮೀಪ ಬಂದರು. ಆದರೆ ಮೂರನೇ ಸೆಷನ್‌ನಲ್ಲಿ ಭಾರತೀಯ ಬೌಲರ್‌ಗಳ ನಿಖರವಾದ ದಾಳಿ ಪಸಿಂದು ಮೇಲೆ ಒತ್ತಡ ಹೇರಲು ಪ್ರಾರಂಭಿಸಿತು. ಹೀಗಾಗಿ ತಮ್ಮ ಲಯ ಕಳೆದುಕೊಂಡ ಪಸಿಂದು, ಮಾನವ್ ಸುತಾರ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದಿದ್ದರು. ಇತ್ತ ಅಂಪೈರ್ ಕೂಡ ಔಟ್ ಎಂದು ತೀರ್ಪು ನೀಡಿದರು. ಆದರೆ ಪಸಿಂದು ಡಿಆರ್‌ಎಸ್ ಬಳಸಿ ಔಟಾಗುವುದರಿಂದ ತಪ್ಪಿಸಿಕೊಂಡಿದ್ದರು. ಹೀಗಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಸಿಕ್ಕ ಮೂರನೇ ಜೀವದಾನದ ಲಾಭ ಪಡೆದು ಪಸಿಂದು ಶತಕ ಬಾರಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಮುಂದಿನ ಎಸೆತದಲ್ಲಿಯೇ ದೊಡ್ಡ ಹೊಡೆತಕ್ಕೆ ಕೈಹಾಕಿ ಪಸಿಂದು ಸ್ಟಂಪ್ ಔಟ್ ಆದರು.
‘ವೈಭವ್, ಜೈಸ್ವಾಲ್ರಂತವರಿಗೆ ಕಠಿಣ ಶಿಕ್ಷೆಯಾಗಬೇಕು’; ಸಂಜಯ್ ಮಂಜ್ರೆಕರ್
ಎರಡೆರಡು ಜೀವದಾನ
ವಾಸ್ತವವಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಪಸಿಂದು ಸೂರ್ಯಬಂಡಾರಗೆ ಎರಡೆರಡು ಜೀವದಾನ ಸಿಕ್ಕಿತು. ಪ್ರಸಿದ್ಧ್ ಕೃಷ್ಣ ಅಥವಾ ಸಿರಾಜ್, ಪಸಿಂದು ನೀಡಿದ ಕ್ಯಾಚ್ ಹಿಡಿದಿದ್ದರೆ ಅವರು ಅರ್ಧಶತಕದ ಸನಿಹವೂ ಬರುತ್ತಿರಲಿಲ್ಲ. ಶ್ರೀಲಂಕಾದ ಎರಡನೇ ಇನ್ನಿಂಗ್ಸ್‌ನ 11 ನೇ ಓವರ್‌ನಲ್ಲಿ ಮೊಹಮ್ಮದ್ ಸಿರಾಜ್ ಮೊದಲ ಕ್ಯಾಚ್ ಕೈಬಿಟ್ಟರೆ, 13 ನೇ ಓವರ್‌ನಲ್ಲಿ ಪ್ರಸಿದ್ಧ್ ಕೃಷ್ಣ ಎರಡನೇ ಕ್ಯಾಚ್ ಕೈಬಿಟ್ಟರು. ಆ ಸಮಯದಲ್ಲಿ ಪಸಿಂದು 21 ರನ್ ಬಾರಿಸಿ ಆಡುತ್ತಿದ್ದರು. ಆ ಎರಡು ಜೀವದಾನಗಳ ಲಾಭ ಪಡೆದ ಪಸಿಂದು 92 ರನ್ಗಳ ಇನ್ನಿಂಗ್ಸ್ ಆಡಿದರು. ಅಂದರೆ ಕ್ಯಾಚ್ ಕೈಚೆಲ್ಲಿದ ತಪ್ಪಿಗೆ ತಂಡಕ್ಕೆ 71 ರನ್ಗಳು ದುಬಾರಿಯಾದವು.




