IND vs SL: 3ನೇ ಟಿ20 ಪಂದ್ಯದಿಂದ ಟೀಂ ಇಂಡಿಯಾದ ಆರಂಭಿಕ ಆಟಗಾರ ಔಟ್! ಬಿಸಿಸಿಐ ಅಧಿಕೃತ ಮಾಹಿತಿ

| Updated By: ಪೃಥ್ವಿಶಂಕರ

Updated on: Feb 27, 2022 | 5:30 PM

IND vs SL: ಟೀಂ ಇಂಡಿಯಾದ ಯುವ ಆರಂಭಿಕ ಹಾಗೂ ವಿಕೆಟ್ ಕೀಪರ್ ಇಶಾನ್ ಕಿಶನ್ ಈ ಕೊನೆಯ ಪಂದ್ಯದಿಂದ ಹೊರಗುಳಿದಿದ್ದಾರೆ. ಧರ್ಮಶಾಲಾದಲ್ಲಿ ನಡೆದ ಎರಡನೇ ಟಿ20 ಪಂದ್ಯದ ವೇಳೆ ಇಶಾನ್ ತಲೆಗೆ ಪೆಟ್ಟಾಗಿತ್ತು.

IND vs SL: 3ನೇ ಟಿ20 ಪಂದ್ಯದಿಂದ ಟೀಂ ಇಂಡಿಯಾದ ಆರಂಭಿಕ ಆಟಗಾರ ಔಟ್! ಬಿಸಿಸಿಐ ಅಧಿಕೃತ ಮಾಹಿತಿ
ಕಿಶನ್
Follow us on

ಶ್ರೀಲಂಕಾ ವಿರುದ್ಧದ ((India vs Sri Lanka)) ಟಿ20 ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡ 2-0 ಮುನ್ನಡೆ ಸಾಧಿಸಿದ್ದು, ಫೆಬ್ರವರಿ 27 ಭಾನುವಾರದ ಕೊನೆಯ ಪಂದ್ಯದಲ್ಲಿ ಗೆಲುವಿನೊಂದಿಗೆ ಟೀಮ್ ಇಂಡಿಯಾ (Team India)ದ ಕಣ್ಣು ಕ್ಲೀನ್ ಸ್ವೀಪ್ ಮೇಲೆದೆ. ಆದರೆ, ಮತ್ತೊಬ್ಬ ಆಟಗಾರನ ಇಂಜುರಿ ಸಮಸ್ಯೆಯನ್ನು ಟೀಂ ಇಂಡಿಯಾ ಎದುರಿಸಬೇಕಾಗಿದೆ. ಟೀಂ ಇಂಡಿಯಾದ ಯುವ ಆರಂಭಿಕ ಹಾಗೂ ವಿಕೆಟ್ ಕೀಪರ್ ಇಶಾನ್ ಕಿಶನ್ (Ishan Kishan) ಈ ಕೊನೆಯ ಪಂದ್ಯದಿಂದ ಹೊರಗುಳಿದಿದ್ದಾರೆ. ಧರ್ಮಶಾಲಾದಲ್ಲಿ ನಡೆದ ಎರಡನೇ ಟಿ20 ಪಂದ್ಯದ ವೇಳೆ ಇಶಾನ್ ತಲೆಗೆ ಪೆಟ್ಟಾಗಿತ್ತು. ಪಂದ್ಯದ ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹೀಗಾಗಿ ಚಿಕಿತ್ಸೆಯ ಬಳಿಕ ಕಿಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಆದರೆ ಮುಂಜಾಗೃತ ಕ್ರಮವಾಗಿ ಇಶಾನ್ ಮೂರನೇ ಟಿ20ಯಿಂದ ಹೊರಗುಳಿದಿದ್ದಾರೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾನುವಾರ ಪ್ರಕಟಿಸಿದೆ.

ಫೆಬ್ರವರಿ 26 ಶನಿವಾರ ಧರ್ಮಶಾಲಾದಲ್ಲಿ ನಡೆದ ಎರಡನೇ ಟಿ20 ಪಂದ್ಯದ ವೇಳೆ ಇಶಾನ್ ಕಿಶನ್ ತಲೆಗೆ ಪೆಟ್ಟು ಬಿದ್ದಿತ್ತು. ಭಾರತ ಇನ್ನಿಂಗ್ಸ್​ನ ನಾಲ್ಕನೇ ಓವರ್​ನಲ್ಲಿ ವೇಗಿ ಲಹಿರು ಕುಮಾರ ಎಸೆದ ಎರಡನೇ ಎಸೆತ ಬೌನ್ಸರ್ ಆಗಿದ್ದು, ಇಶಾನ್ ಶಾಟ್ ಆಡಲು ಸಾಧ್ಯವಾಗಲಿಲ್ಲ. ಚೆಂಡಿನ ಹೆಚ್ಚಿನ ವೇಗದಿಂದಾಗಿ,ಅದು ಇಶಾನ್ ಹೆಲ್ಮೆಟ್​ಗೆ ಬಡಿಯಿತು. ಇದಾದ ನಂತರ ಭಾರತ ತಂಡದ ಫಿಸಿಯೊ ಅವರನ್ನು ಬಹಳ ಹೊತ್ತು ತಪಾಸಣೆ ಮಾಡುತ್ತಲೇ ಇದ್ದರು. ನಂತರ ಬ್ಯಾಟಿಂಗ್​ಗೆ ಇಳಿದ ಇಶಾನ್​ರನ್ನು ಒಂದು ಓವರ್ ಬಳಿಕ ಲಹಿರು ಕುಮಾರ ಔಟ್ ಮಾಡಿದರು.

ಬಿಸಿಸಿಐ ಹೇಳಿದ್ದೇನು?

ಇಶಾನ್ ಕಿಶನ್ ಅವರನ್ನು ಪಂದ್ಯದ ನಂತರದ ಸ್ಕ್ಯಾನ್‌ಗಾಗಿ ಧರ್ಮಶಾಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿಂದ ಭಾನುವಾರ ಬೆಳಿಗ್ಗೆ ಅವರನ್ನು ಡಿಸ್ಚಾರ್ಜ್ ಮಾಡಲಾಯಿತು. ಆದರೆ, ತಂಡವು ಅವರನ್ನು ಮೂರನೇ ಮತ್ತು ಕೊನೆಯ ಪಂದ್ಯದಲ್ಲಿ ಆಡಿಸುವ ಅಪಾಯವನ್ನು ತೆಗೆದುಕೊಳ್ಳಲು ಸಿದ್ಧವಿಲ್ಲ. ಆದ್ದರಿಂದ ಅವರನ್ನು ಈ ಪಂದ್ಯದಿಂದ ಕೈಬಿಡಲಾಯಿತು. ಮಂಡಳಿಯು ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ತಂಡದ ವೈದ್ಯರೊಂದಿಗೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರ ಸಿಟಿ ಸ್ಕ್ಯಾನ್ ಮಾಡಲಾಗಿದೆ. ಸ್ಕ್ಯಾನ್ ವರದಿಗಳು ಸಾಮಾನ್ಯವಾಗಿದೆ. ಬಿಸಿಸಿಐ ವೈದ್ಯಕೀಯ ತಂಡವು ಕನ್ಕ್ಯುಶನ್ ಲಕ್ಷಣಗಳ ಮೇಲೆ ನಿಗಾ ಇಡುತ್ತದೆ. ಜೊತೆಗೆ ಶ್ರೀಲಂಕಾ ವಿರುದ್ಧದ ಮೂರನೇ ಟಿ20ಐನಿಂದ ಅವರನ್ನು ಹೊರಗಿರಿಸಲಾಗಿದೆ ಎಂದು ಹೇಳಿಕೊಂಡಿದೆ.

ರೋಹಿತ್ ಜೊತೆ ಓಪನಿಂಗ್ ಮಾಡುವವರು ಯಾರು?

ಇಶಾನ್ ಕಿಶನ್ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ಜೊತೆಯಲ್ಲಿ ಟೀಂ ಇಂಡಿಯಾಗೆ ಓಪನಿಂಗ್ ಮಾಡುವವರು ಯಾರು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ತಂಡದ ಬ್ಯಾಕ್‌ಅಪ್ ಆರಂಭಿಕ ಆಟಗಾರ ರಿತುರಾಜ್ ಗಾಯಕ್ವಾಡ್ ಅವರು ಸರಣಿಯ ಆರಂಭದಲ್ಲಿ ಗಾಯಗೊಂಡು ಹೊರಗುಳಿದಿದ್ದಾರೆ. ತದನಂತರ ಮಯಾಂಕ್ ಅಗರ್ವಾಲ್ ಅವರ ಬ್ಯಾಕ್ಅಪ್ ಆಟಗಾರನಾಗಿ ತಂಡದಲ್ಲಿ ಸೇರಿಸಲಾಗಿದೆ. ಆದಾಗ್ಯೂ, ಎರಡನೇ ಟಿ20ಯಲ್ಲಿ 39 ರನ್‌ಗಳ ಯೋಗ್ಯ ಇನ್ನಿಂಗ್ಸ್‌ ಆಡಿದ ಸಂಜು ಸ್ಯಾಮ್ಸನ್‌ರನ್ನು ತಂಡವು ಆರಂಭಿಕರಾಗಿ ಪ್ರಯತ್ನಿಸಬಹುದಾದ್ದರಿಂದ ಮಯಾಂಕ್‌ಗೆ ಅವಕಾಶ ಪಡೆಯುವ ಸಾಧ್ಯತೆಗಳು ಸ್ಲಿಮ್ ಆಗಿ ಕಾಣುತ್ತವೆ.

ಇದನ್ನೂ ಓದಿ:IND vs SL: ಟೀಂ ಇಂಡಿಯಾ ಆಟಗಾರರು ತೆರಳುವ ಬಸ್​ನಲ್ಲಿ ಸಜೀವ ಗುಂಡುಗಳು ಪತ್ತೆ! ಘಟನಾ ಸ್ಥಳದಲ್ಲಿ ಸಂಚಲನ

Published On - 5:13 pm, Sun, 27 February 22