ಈ ವಿಶ್ವಕಪ್​ನ ಅತಿ ಉದ್ದದ ಸಿಕ್ಸರ್ ಸಿಡಿಸಿದ ಶ್ರೇಯಸ್! ಸೀಟಿನಿಂದ ಎದ್ದು ಓಡಿದ ಧನಶ್ರೀ; ವಿಡಿಯೋ ನೋಡಿ

Shreyas Iyer, ICC World Cup 2023: ಶ್ರೀಲಂಕಾ ವಿರುದ್ಧ ಬಿರುಸಿನ ಅರ್ಧಶತಕ ಗಳಿಸಿದ ಶ್ರೇಯಸ್ ಅಯ್ಯರ್, ಈ ವಿಶ್ವಕಪ್​ನ ಅತ್ಯಂತ ಉದ್ದದ ಸಿಕ್ಸರ್‌ ಸಹ ಬಾರಿಸಿದರು. ಶ್ರೀಲಂಕಾ ವಿರುದ್ಧ ಶ್ರೇಯಸ್ ಅಯ್ಯರ್ 106 ಮೀಟರ್ ಉದ್ದದ ಸಿಕ್ಸರ್ ಬಾರಿಸಿದ್ದರು. ಇದು ಈ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಉದ್ದದ ಸಿಕ್ಸರ್ ಎನಿಸಿಕೊಂಡಿದೆ.

ಈ ವಿಶ್ವಕಪ್​ನ ಅತಿ ಉದ್ದದ ಸಿಕ್ಸರ್ ಸಿಡಿಸಿದ ಶ್ರೇಯಸ್! ಸೀಟಿನಿಂದ ಎದ್ದು ಓಡಿದ ಧನಶ್ರೀ; ವಿಡಿಯೋ ನೋಡಿ
ಶ್ರೇಯಸ್ ಅಯ್ಯರ್ ಸಿಕ್ಸರ್
Follow us
ಪೃಥ್ವಿಶಂಕರ
|

Updated on: Nov 03, 2023 | 2:47 PM

2023ರ ವಿಶ್ವಕಪ್‌ (ICC World Cup 2023), ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್​ಗೆ (Shreyas Iyer) ಸಾಕಷ್ಟು ಏರಿಳಿತಗಳಿಂದ ಕೂಡಿದೆ. ಆದರೆ ಗುರುವಾರ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪ್ರಚಂಡ ಬ್ಯಾಟಿಂಗ್ ಮಾಡಿದ ಅಯ್ಯರ್ ತಮ್ಮ ಹಳೆಯ ಫಾರ್ಮ್​ ಕಂಡುಕೊಂಡಿದ್ದಾರೆ. ಶ್ರೀಲಂಕಾ ವಿರುದ್ಧ (India vs Sri Lanka) ಬಿರುಸಿನ ಅರ್ಧಶತಕ ಗಳಿಸಿದ ಶ್ರೇಯಸ್ ಅಯ್ಯರ್, ಈ ವಿಶ್ವಕಪ್​ನ ಅತ್ಯಂತ ಉದ್ದದ ಸಿಕ್ಸರ್‌ ಸಹ ಬಾರಿಸಿದರು. ಶ್ರೀಲಂಕಾ ವಿರುದ್ಧ ಶ್ರೇಯಸ್ ಅಯ್ಯರ್ 106 ಮೀಟರ್ ಉದ್ದದ ಸಿಕ್ಸರ್ ಬಾರಿಸಿದ್ದರು. ಇದು ಈ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಉದ್ದದ ಸಿಕ್ಸರ್ ಎನಿಸಿಕೊಂಡಿದೆ.

ತಮ್ಮ ಸೀಟಿನಿಂದ ಎದ್ದು ಓಡಿದರು

ವಾಸ್ತವವಾಗಿ ಭಾರತದ ಇನ್ನಿಂಗ್ಸ್​ನ 36ನೇ ಓವರ್​ನಲ್ಲಿ ಅಯ್ಯರ್ ಓವರ್‌ಪಿಚ್ ಚೆಂಡನ್ನು ಲಾಂಗ್ ಆನ್‌ ಮೇಲೆ ಸಿಕ್ಸರ್​ಗಟ್ಟಿದರು. ಆದರೆ ಈ ಸಿಕ್ಸರ್ ನೆರವಾಗಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸೇರಿದಂತೆ ಇತರ ಆಟಗಾರರ ಪತ್ನಿಯರು ಕುಳಿತಿದ್ದ ಕಡೆಗೆ ಹೋಯಿತು. ತಂಡದಿಂದ ಹೊರಗುಳಿದಿದ್ದ ಭಾರತದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಕೂಡ ತಮ್ಮ ಪತ್ನಿ ಧನಶ್ರೀ ವರ್ಮಾ ಅವರೊಂದಿಗೆ ಪಂದ್ಯ ವೀಕ್ಷಿಸಲು ಅಲ್ಲಿಯೇ ಕುಳಿತಿದ್ದರು. ಅಯ್ಯರ್ ಸಿಕ್ಸರ್ ಬಾರಿಸಿದಾಗ ಭಯದಿಂದ ಧನಶ್ರೀ ವರ್ಮಾ ಸೀಟಿನಿಂದ ಎದ್ದರು. ರಿತಿಕಾ ಕೂಡ ತಮ್ಮ ಸೀಟಿನಿಂದ ಎದ್ದು ಓಡಿದರು. ಆದರೆ ಚೆಂಡು ಇವರು ಕುಳಿತಿದ್ದ ಸ್ಟ್ಯಾಂಡ್ ಮೇಲಿನ ಗೋಡೆಗೆ ಬಡಿದು ಕೆಳಗೆ ಬಿದ್ದಿತು.

View this post on Instagram

A post shared by ICC (@icc)

IND vs SL: ಶತಕ ವಂಚಿತ ಗಿಲ್, ಕೊಹ್ಲಿ, ಶ್ರೇಯಸ್; ಲಂಕಾಗೆ 358 ರನ್ ಟಾರ್ಗೆಟ್

106 ಮೀಟರ್ ಉದ್ದದ ಸಿಕ್ಸರ್

ಇದೇ ವಿಶ್ವಕಪ್​ನಲ್ಲಿ 101 ಮೀಟರ್ ಉದ್ದದ ಸಿಕ್ಸರ್ ಸಿಡಿಸಿದ್ದ ಅಯ್ಯರ್, ಅತಿ ಉದ್ದದ ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದರು. ಆದರೆ ಆ ಬಳಿಕ ನೆದರ್ಲೆಂಡ್ ವಿರುದ್ಧ ಸ್ಫೋಟಕ ಶತಕ ಸಿಡಿಸಿದ್ದ ಆಸ್ಟ್ರೇಲಿಯಾ ತಂಡದ ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್​ವೆಲ್ 104 ಮೀಟರ್ ಉದ್ದದ ಸಿಕ್ಸರ್ ಸಿಡಿಸಿ ಈ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದ್ದರು. ಆದರೀಗ ಲಂಕಾ ವಿರುದ್ಧ 106 ಮೀಟರ್ ಉದ್ದದ ಸಿಕ್ಸರ್ ಸಿಡಿಸಿರುವ ಅಯ್ಯರ್, ಮತ್ತೊಮ್ಮೆ ಈ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ.

ಈ ವಿಶ್ವಕಪ್​ನಲ್ಲಿ 216 ರನ್

ಇದು 2023 ರ ವಿಶ್ವಕಪ್‌ನಲ್ಲಿ ಶ್ರೇಯಸ್ ಅಯ್ಯರ್ ಅವರ ಎರಡನೇ ಅರ್ಧಶತಕ ಇನ್ನಿಂಗ್ಸ್ ಆಗಿದೆ. ಇದಕ್ಕೂ ಮೊದಲು ಅವರು ಪಾಕಿಸ್ತಾನದ ವಿರುದ್ಧ ಅಜೇಯ 53 ರನ್ ಸಿಡಿಸಿದ್ದರು. ಒಟ್ಟಾರೆಯಾಗಿ ಅಯ್ಯರ್, ಈ ವಿಶ್ವಕಪ್​ನಲ್ಲಿ 216 ರನ್ ಕಲೆ ಹಾಕಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ