IND vs ZIM: ಚೊಚ್ಚಲ ಪಂದ್ಯದಲ್ಲಿ ಶತಕ, ಈಗ ಟೀಂ ಇಂಡಿಯಾ ನಾಯಕ; ಜಿಂಬಾಬ್ವೆ ನೆಲದಲ್ಲಿ ಕನ್ನಡಿಗನ ಕಮಾಲ್

| Updated By: ಪೃಥ್ವಿಶಂಕರ

Updated on: Aug 15, 2022 | 5:18 PM

KL Rahul: ರಾಹುಲ್ ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲೇ ಅದ್ಭುತ ಶತಕವನ್ನು ಗಳಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದರು. ಇದುವರೆಗೆ ಈ ಸಾಧನೆ ಮಾಡಿದ ಏಕೈಕ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಕೂಡ  ಪಾತ್ರರಾಗಿದ್ದಾರೆ.

IND vs ZIM: ಚೊಚ್ಚಲ ಪಂದ್ಯದಲ್ಲಿ ಶತಕ, ಈಗ ಟೀಂ ಇಂಡಿಯಾ ನಾಯಕ; ಜಿಂಬಾಬ್ವೆ ನೆಲದಲ್ಲಿ ಕನ್ನಡಿಗನ ಕಮಾಲ್
Team India
Follow us on

ಇನ್ನು ಮೂರು ದಿನಗಳಲ್ಲಿ ಭಾರತ-ಜಿಂಬಾಬ್ವೆ (India-Zimbabwe) ಮುಖಾಮುಖಿ ಪ್ರಾರಂಭವಾಗುತ್ತದೆ. ಕೆಎಲ್ ರಾಹುಲ್ (KL Rahul) ನಾಯಕತ್ವದಲ್ಲಿ ಭಾರತ ತಂಡ ಜಿಂಬಾಬ್ವೆ ತಲುಪಿದ್ದು, ಆಗಸ್ಟ್ 18 ರಿಂದ ಮೂರು ಏಕದಿನ ಪಂದ್ಯಗಳ ಸರಣಿ ಆರಂಭವಾಗಲಿದೆ. ಈ ಸರಣಿಯೊಂದಿಗೆ 6 ವರ್ಷಗಳ ಕಾಯುವಿಕೆಯೂ ಕೊನೆಗೊಳ್ಳಲಿದೆ. ಭಾರತ ಕೊನೆಯದಾಗಿ 6 ​​ವರ್ಷಗಳ ಹಿಂದೆ 2016 ರಲ್ಲಿ ಜಿಂಬಾಬ್ವೆ ಪ್ರವಾಸ ಮಾಡಿತು. ಅಂದಿನಿಂದ ಎರಡೂ ತಂಡಗಳಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ಅಂತಹ ಪರಿಸ್ಥಿತಿಯಲ್ಲಿ ಈ ಎರಡು ಸರಣಿಗಳಲ್ಲಿ ಯಾವ ಆಟಗಾರರು ಭಾಗವಾಗಿದ್ದಾರೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ.

6 ವರ್ಷಗಳ ಹಿಂದೆಯೂ ಕೊಹ್ಲಿ-ರೋಹಿತ್ ಇರಲಿಲ್ಲ

ಭಾರತ ಕೊನೆಯದಾಗಿ ಜೂನ್ 2016 ರಲ್ಲಿ ಜಿಂಬಾಬ್ವೆ ಪ್ರವಾಸ ಕೈಗೊಂಡಿತ್ತು. ಆಗ ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾದ ನಾಯಕರಾಗಿದ್ದರು. ಅವರ ನಾಯಕತ್ವದಲ್ಲಿ ಭಾರತ ತಂಡವು ಮೂರು ಏಕದಿನ ಮತ್ತು ಮೂರು T20 ಪಂದ್ಯಗಳಿಗೆ ಈ ಪ್ರವಾಸವನ್ನು ಕೈಗೊಂಡಿತು. ಆ ಪ್ರವಾಸಕ್ಕೂ ಈಗಿನ ಪ್ರವಾಸಕ್ಕೂ ಖಂಡಿತ ಸಾಮ್ಯತೆ ಇದೆ. ಆ ವೇಳೆ ಟೀಂ ಇಂಡಿಯಾದ ಪ್ರಮುಖ ಆಟಗಾರರಿಗೂ ವಿಶ್ರಾಂತಿ ನೀಡಲಾಗಿತ್ತು. ನಾಯಕ ಧೋನಿ ಹೊರತುಪಡಿಸಿ ಯಾವುದೇ ಹಿರಿಯ ಆಟಗಾರ ಈ ಪ್ರವಾಸದ ಭಾಗವಾಗಿರಲಿಲ್ಲ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಭುವನೇಶ್ವರ್ ಕುಮಾರ್, ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಅವರಂತಹ ಆಟಗಾರರಿಗೆ ಆ ಪ್ರವಾದಲ್ಲಿ ವಿಶ್ರಾಂತಿ ನೀಡಲಾಗಿತ್ತು.

ಇದನ್ನೂ ಓದಿ
IND vs ZIM: ಏಕದಿನ ಸರಣಿಯಲ್ಲಿ ಭಾರತಕ್ಕೆ ಸವಾಲೊಡ್ಡುವ ಜಿಂಬಾಬ್ವೆ ತಂಡದ ಐವರು ಕ್ರಿಕೆಟಿಗರಿವರು
IND vs ZIM: ಏಕದಿನ ಸರಣಿಗಾಗಿ ಜಿಂಬಾಬ್ವೆಗೆ ಹಾರಿದ ಟೀಂ ಇಂಡಿಯಾ; DSLR ಕ್ಯಾಮರಾ ಖರೀದಿಸಿ ಎಂದ ನೆಟ್ಟಿಗರು
IND vs ZIM: ಜಿಂಬಾಬ್ವೆ ನೆಲದಲ್ಲಿ ಭಾರತದ ಪ್ರದರ್ಶನ ಹೇಗಿದೆ ಗೊತ್ತಾ? ಇದು ಅಂಕಿ ಅಂಶ ಹೇಳಿದ ಸತ್ಯ

ಬುಮ್ರಾ-ಚಾಹಲ್ ಆಗ ಹೊಸ ಮುಖಗಳು

ಆ ಸಮಯದಲ್ಲಿ ತಂಡದಲ್ಲಿ ಸೇರಿಸಲಾದ ಅನೇಕ ಆಟಗಾರರು ಇಂದು ಟೀಂ ಇಂಡಿಯಾದ ಪ್ರಮುಖ ಆಟಗಾರರಾಗಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೊಡ್ಡ ಹೆಸರುಗಳಾಗಿದ್ದಾರೆ. ಉದಾಹರಣೆಗೆ, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಹಾಲ್ ಅವರಂತಹ ಆಟಗಾರರು ತಂಡದಲ್ಲಿ ಪ್ರಮುಖ ಬೌಲರ್​ಗಳಾಗಿದ್ದಾರೆ. ಅಂಬಟಿ ರಾಯುಡು, ಮನೀಶ್ ಪಾಂಡೆ ಮತ್ತು ಕೇದಾರ್ ಜಾಧವ್ ಅವರಂತಹ ಆಟಗಾರರು ಸಹ ಭಾರತ ತಂಡದಲ್ಲಿ ಸಾಕಷ್ಟು ಸಮಯವನ್ನು ಕಳೆದಿದ್ದಾರೆ. ಆದರೆ ಆ ಸಮಯದಲ್ಲಿ ಟೀಮ್ ಇಂಡಿಯಾದಲ್ಲಿ ಹೆಚ್ಚು ವಯಸ್ಸಾಗಿಲ್ಲದ ಮತ್ತು ಆ ಪ್ರವಾಸದ ಭಾಗವಾಗಿದ್ದ ಇನ್ನೂ ಇಬ್ಬರು ಆಟಗಾರರಿದ್ದಾರೆ. ಈ ಇಬ್ಬರೂ ಆಟಗಾರರು ಈಗ ಟೀಮ್ ಇಂಡಿಯಾದ ಪ್ರಸ್ತುತ ಮತ್ತು ಭವಿಷ್ಯದ ಸ್ಟಾರ್ ಆಗಿದ್ದಾರೆ. ಅವರೆಂದರೆ- ಕೆಎಲ್ ರಾಹುಲ್ ಮತ್ತು ಅಕ್ಷರ್ ಪಟೇಲ್.

ರಾಹುಲ್- ಅಕ್ಷರ್​ಗೆ ಸ್ಮರಣೀಯ ಸರಣಿ

6 ವರ್ಷಗಳಲ್ಲಿ ಹೊಸ ಮುಖದಿಂದ ಇಲ್ಲಿಯವರೆಗೆ ಜಿಂಬಾಬ್ವೆಗೆ ನಾಯಕನಾಗಿ ಹೋಗಿರುವ ಕೆಎಲ್ ರಾಹುಲ್ ಅವರಿಗೆ ಈ ಪ್ರವಾಸವು ತುಂಬಾ ವಿಶೇಷವಾಗಿದೆ. ಅವರು 2016 ರಲ್ಲಿ ಜಿಂಬಾಬ್ವೆ ಪ್ರವಾಸದಿಂದ ODI ಮತ್ತು T20 ಕ್ರಿಕೆಟ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ರಾಹುಲ್ ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲೇ ಅದ್ಭುತ ಶತಕವನ್ನು ಗಳಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದರು. ಇದುವರೆಗೆ ಈ ಸಾಧನೆ ಮಾಡಿದ ಏಕೈಕ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಕೂಡ  ಪಾತ್ರರಾಗಿದ್ದಾರೆ. ಅಂದಿನಿಂದ, ರಾಹುಲ್ 42 ಪಂದ್ಯಗಳಲ್ಲಿ 46 ರ ಸರಾಸರಿಯಲ್ಲಿ 5 ಶತಕ ಮತ್ತು 10 ಅರ್ಧ ಶತಕಗಳೊಂದಿಗೆ 1634 ರನ್ ಗಳಿಸಿದ್ದಾರೆ.

ಅದೇ ಸಮಯದಲ್ಲಿ, ಎಡಗೈ ಸ್ಪಿನ್-ಆಲ್-ರೌಂಡರ್ ಅಕ್ಷರ್ ಪಟೇಲ್ ತಂಡದಲ್ಲಿ ತನ್ನ ಸ್ಥಾನವನ್ನು ಸಂಪೂರ್ಣವಾಗಿ ಭದ್ರಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಅವರು 2016 ರ ಸುಮಾರಿಗೆ ನಿರಂತರವಾಗಿ ODI ತಂಡದ ಭಾಗವಾಗಿದ್ದರು. ಅಕ್ಷರ್ ಇದುವರೆಗೆ 22 ಏಕದಿನ ಪಂದ್ಯಗಳಲ್ಲಿ 28 ವಿಕೆಟ್ ಪಡೆದು 91 ರನ್ ಗಳಿಸಿದ್ದಾರೆ. ಆದಾಗ್ಯೂ, 2017 ರ ನಂತರ ಅವರು ಸುಮಾರು 4 ವರ್ಷಗಳ ಕಾಲ ತಂಡದಿಂದ ಹೊರಗಿದ್ದಿದ್ದು, ಈಗ ತಂಡಕ್ಕೆ ಮರಳಿದ್ದಾರೆ. ಅಕ್ಷರ್ ಇದುವರೆಗೆ 41 ಪಂದ್ಯಗಳಲ್ಲಿ 47 ವಿಕೆಟ್ ಪಡೆದಿದ್ದಾರೆ. ಆದರೆ ಈತ್ತೀಚೆಗೆ ಬ್ಯಾಟಿಂಗ್‌ನಲ್ಲಿ ಅಬ್ಬರಿಸುತ್ತಿರುವ ಅಕ್ಷರ್, ವಿಂಡೀಸ್ ಪ್ರವಾದಲ್ಲಿ ಅರ್ಧಶತಕ ಸೇರಿದಂತೆ 266 ರನ್ ಗಳಿಸಿದ್ದರು.