
ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಏಕಪಕ್ಷೀಯ ಗೆಲುವು ದಾಖಲಿಸಿರುವ ಭಾರತ ಮಹಿಳಾ ತಂಡ ಈಗಾಗಲೇ ಟಿ20 ಸರಣಿಯನ್ನು ತನ್ನದಾಗಿಸಿಕೊಂಡಿದೆ. ಹೀಗಾಗಿ ಅಂತಿಮ ಟಿ20 ಪಂದ್ಯವನ್ನು ಗೆದ್ದುಕೊಂಡು ಸರಣಿ ಕ್ಲೀನ್ ಸ್ವೀಪ್ ಮಾಡುವ ಇರಾದೆಯಲ್ಲಿ ಸ್ಮೃತಿ ಮಂಧಾನ ಪಡೆ ಇದೆ. ಇನ್ನು ಹೊಸ ನಾಯಕಿ ಸ್ಮೃತಿ ಮಂಧಾನ ಅವರ ನಾಯಕತ್ವದಲ್ಲಿ ತಂಡ ಉತ್ತಮ ಆರಂಭ ಪಡೆದಿದೆ. ಈ ಸರಣಿಯಲ್ಲಿ ಜಿಂಬಾಬ್ವೆ ತಂಡ ಇದುವರೆಗೆ ಹೆಚ್ಚಿನ ಪ್ರತಿರೋಧ ತೋರಿಸಲು ವಿಫಲವಾಗಿದೆ. ಆದರೆ, ವರ್ಷದ ಕೊನೆಯಲ್ಲಿ ಭಾರತ ಮಹಿಳಾ ತಂಡವು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡು ಎಲ್ಲಾ ಮಾದರಿಗಳ ಪಂದ್ಯಗಳನ್ನು ಆಡಲಿದೆ. ಆ ಪ್ರವಾಸಕ್ಕೂ ಮುನ್ನ ಆಟಗಾರ್ತಿಯರು ಉತ್ತಮ ಲಯವನ್ನು ಕಂಡುಕೊಳ್ಳುವುದು ಮುಖ್ಯವಾಗಿದೆ.
ಮೇಲೆ ಹೇಳಿದಂತೆ ಭಾರತ ತಂಡ ಈಗಾಗಲೇ ಸರಣಿಯನ್ನು ಗೆದ್ದಿರುವುದರಿಂದ, ಅಂತಿಮ ಪಂದ್ಯದಲ್ಲಿ ಹೊಸ ಆಟಗಾರ್ತಿಯರಿಗೆ ಅವಕಾಶ ನೀಡುವ ಸಾಧ್ಯತೆಯಿದೆ. ಜಿ. ಕಮಲಿನಿ, ಜಿಂತಿಮಣಿ ಕಲಿತಾ, ಮಿನ್ನು ಮಣಿ ಮತ್ತು ಪ್ರೇಮಾ ರಾವತ್ ಅವರು ಈ ಸರಣಿಯಲ್ಲಿ ಇನ್ನೂ ಆಡಲು ಅವಕಾಶ ಪಡೆದಿಲ್ಲ. ಅಂತಿಮ ಪಂದ್ಯದಲ್ಲಿ ಇವರಲ್ಲಿ ಕೆಲವರಿಗೆ ಅವಕಾಶ ಸಿಗಬಹುದು. ಇವರಲ್ಲಿ ಬಲಗೈ ವೇಗದ ಬೌಲರ್ ಜಿಂತಿಮಣಿ ಕಲಿತಾ ಅವರು ಮಹಿಳಾ ಪ್ರೀಮಿಯರ್ ಲೀಗ್ನಲ್ಲಿಯೂ ಆಡಿದ್ದಾರೆ. ಆದರೆ, ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿಲ್ಲ. ಅಂತಿಮ ಪಂದ್ಯವು ಅವರಿಗೆ ಆ ಅವಕಾಶ ನೀಡಬಹುದು. ಉಳಿದಂತೆ ಪಂದ್ಯದ ವಿವರ ಹೀಗಿದೆ.
ಭಾರತ-ಜಿಂಬಾಬ್ವೆ ಮಹಿಳಾ ತಂಡಗಳ ನಡುವಿನ 3ನೇ ಟಿ20 ಪಂದ್ಯ ಅಕ್ಟೋಬರ್ 20 ರ ಮಂಗಳವಾರದಂದು ನಡೆಯಲಿದೆ.
ಭಾರತ-ಜಿಂಬಾಬ್ವೆ ಮಹಿಳಾ ತಂಡಗಳ ನಡುವಿನ 3ನೇ ಟಿ20 ಪಂದ್ಯ ರಾಯ್ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.
ಭಾರತ-ಜಿಂಬಾಬ್ವೆ ಮಹಿಳಾ ತಂಡಗಳ ನಡುವಿನ 3ನೇ ಟಿ20 ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.
ಭಾರತ-ಜಿಂಬಾಬ್ವೆ ಮಹಿಳಾ ತಂಡಗಳ ನಡುವಿನ 3ನೇ ಟಿ20 ಪಂದ್ಯದ ನೇರ ಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ವೀಕ್ಷಿಸಬಹುದು.
ಭಾರತ ಮಹಿಳಾ ತಂಡ: ಸ್ಮೃತಿ ಮಂಧಾನ (ನಾಯಕಿ), ಶಫಾಲಿ ವರ್ಮಾ, ಅನುಷ್ಕಾ ಶರ್ಮಾ, ಹರ್ಮನ್ಪ್ರೀತ್ ಕೌರ್, ನಿಕ್ಕಿ ಪ್ರಸಾದ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಅರುಂಧತಿ ರೆಡ್ಡಿ, ಶ್ರೀ ಚರಣಿ, ನಂದಿನಿ ಶರ್ಮಾ, ಕ್ರಾಂತಿ ಗೌಡ್, ಗುಣಲನ್ ಕಮಲಿನಿ, ಪ್ರೇಮಾ ರಾವತ್, ಜಿಂತಿಮಣಿ ಕಲಿತಾ, ಮಿನ್ನು ಮಣಿ.
ಜಿಂಬಾಬ್ವೆ ಮಹಿಳಾ ತಂಡ: ಶಾರ್ನೆ ಮೇಯರ್ಸ್, ಚಿಡ್ಜಾ ಧುರುರು (ವಿಕೆಟ್ ಕೀಪರ್), ಚಿಪೊ ಮುಗೇರಿ-ತಿರಿಪಾನೊ, ಮಾಡೆಸ್ಟರ್ ಮುಪಚಿಕ್ವಾ (ವಿಕೆಟ್ ಕೀಪರ್), ಜೋಸೆಫೀನ್ ನ್ಕೊಮೊ (ನಾಯಕಿ), ನೊಮ್ವೆಲೊ ಸಿಬಾಂಡಾ, ಲೊರಿನ್ ಫಿರಿ, ನ್ಯಾಶಾ ಗ್ವಾಂಝುರಾ, ಫ್ರಾನ್ಸಿಸ್ಕಾ ಚಿಪಾರೆ, ಕೆಲಿಸ್ ನ್ಧ್ಲೋವು, ಮಿಚೆಲ್ ಮಾವುಂಗೈ, ಒಲಿಂಡರ್ ಚಾರೆ, ಕುಡ್ಜೈ ಚಿಗೋರಾ, ಟೆಂಡೈ ಮಕುಶಾ.
Published On - 10:38 pm, Mon, 19 October 26