IND W vs AUS W: ಐತಿಹಾಸಿಕ ಪಿಂಕ್​ ಬಾಲ್​ ಟೆಸ್ಟ್‌; 2ನೇ ದಿನದಾಟ ಅಂತ್ಯ.. ಪ್ರಾಬಲ್ಯ ಮೇರೆದ ಭಾರತ ವನಿತೆಯರ ತಂಡ

IND W vs AUS W: ಆಟವನ್ನು ನಿಲ್ಲಿಸಿದಾಗ, ಭಾರತ ತಂಡ ಐದು ವಿಕೆಟ್ ನಷ್ಟಕ್ಕೆ 276 ರನ್ ಗಳಿಸಿತ್ತು. 12 ರನ್ ಗಳಿಸಿದ ದೀಪ್ತಿ ಶರ್ಮಾ ಮತ್ತು ಟಾನಿಯಾ ಭಾಟಿಯಾ ಅಜೇಯರಾಗುಳಿದಿದ್ದಾರೆ.

IND W vs AUS W: ಐತಿಹಾಸಿಕ ಪಿಂಕ್​ ಬಾಲ್​ ಟೆಸ್ಟ್‌; 2ನೇ ದಿನದಾಟ ಅಂತ್ಯ.. ಪ್ರಾಬಲ್ಯ ಮೇರೆದ ಭಾರತ ವನಿತೆಯರ ತಂಡ
ಶತಕದ ಸಂಭ್ರಮದಲ್ಲಿ ಸ್ಮೃತಿ

ಭಾರತೀಯ ಮಹಿಳಾ ಮತ್ತು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ನಡುವೆ ನಡೆಯುತ್ತಿರುವ ಏಕೈಕ ಹಗಲು-ರಾತ್ರಿ ಟೆಸ್ಟ್‌ನ ಎರಡನೇ ದಿನದ ಆಟವನ್ನು ಪೂರ್ಣಗೊಳಿಸಲಾಗಲಿಲ್ಲ. ಮಿಂಚು ಮತ್ತು ಮಳೆಯಿಂದಾಗಿ ಆಟವನ್ನು ನಿಲ್ಲಿಸಬೇಕಾಯಿತು. ಆಟವನ್ನು ನಿಲ್ಲಿಸಿದಾಗ, ಭಾರತ ತಂಡ ಐದು ವಿಕೆಟ್ ನಷ್ಟಕ್ಕೆ 276 ರನ್ ಗಳಿಸಿತ್ತು. 12 ರನ್ ಗಳಿಸಿದ ದೀಪ್ತಿ ಶರ್ಮಾ ಮತ್ತು ಟಾನಿಯಾ ಭಾಟಿಯಾ ಅಜೇಯರಾಗುಳಿದಿದ್ದಾರೆ.

ಹವಾಮಾನ ಇಲಾಖೆ ಚಂಡಮಾರುತದ ಮುನ್ಸೂಚನೆ ನೀಡಿದ ಕೆಲವೇ ಸಮಯದಲ್ಲಿ ಮಳೆ ಆರಂಭವಾಯಿತು. ಎರಡನೇ ಅವಧಿಯಲ್ಲಿ ಭಾರತವು ಎರಡು ವಿಕೆಟ್ ಕಳೆದುಕೊಂಡಿತು, ಇದರಲ್ಲಿ ನಾಯಕಿ ಮಿಥಾಲಿ ರಾಜ್ (30) ಮತ್ತು ಚೊಚ್ಚಲ ಆಟಗಾರ್ತಿ ಯಾಸ್ತಿಕಾ ಭಾಟಿಯಾ (19) ವಿಕೆಟ್ ಗಳಿದ್ದವು. ಆಸ್ಟ್ರೇಲಿಯಾದ ಸೋಫಿ ಮಾಲಿನಕ್ಸ್ ಇದುವರೆಗೆ ಎರಡು ವಿಕೆಟ್ ಪಡೆದಿದ್ದಾರೆ. ಆಶ್ಲೇ ಗಾರ್ಡ್ನರ್ ಮತ್ತು ಪೆರ್ರಿ ತಲಾ ಒಂದು ವಿಕೆಟ್ ಪಡೆದಿದ್ದಾರೆ.

ಸ್ಮೃತಿ ಮಂಧನಾ ಅದ್ಭುತ ಶತಕ
ಈ ಮೊದಲು, ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ ತನ್ನ ಭರ್ಜರಿ ಟೆಸ್ಟ್ ಶತಕದ ಸಮಯದಲ್ಲಿ ಕೆಲವು ದಾಖಲೆಗಳನ್ನು ಮುರಿದಿದರು. ಇದರ ಜೊತೆಗೆ ಭಾರತ ಭೋಜನ ವಿರಾಮದ ವೇಳೆಗೆ ಮೂರು ವಿಕೆಟ್ ನಷ್ಟಕ್ಕೆ 231 ರನ್ ಗಳಿಸಿತು. ಮಂಧನಾ (25 ವರ್ಷ) ಹಗಲು ರಾತ್ರಿ ಟೆಸ್ಟ್‌ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಹಾಗೂ ಆಸ್ಟ್ರೇಲಿಯಾದ ನೆಲದಲ್ಲಿ ಸಾಂಪ್ರದಾಯಿಕ ಮಾದರಿಯಲ್ಲಿ ಶತಕ ಗಳಿಸಿದ ದೇಶದ ಮೊದಲ ಮಹಿಳಾ ಆಟಗಾರ್ತಿ ಎನಿಸಿಕೊಂಡರು.

ಮಂಧನ ಮತ್ತು ಪೂನಂ ನಡುವೆ ಉತ್ತಮ ಪಾಲುದಾರಿಕೆ
ಮಂಧಾನಾ 216 ಎಸೆತಗಳಲ್ಲಿ 22 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 127 ರನ್ ಗಳಿಸಿದರು ಮತ್ತು ಆಸ್ಟ್ರೇಲಿಯಾ ನೆಲದಲ್ಲಿ ಪೂನಮ್ ರೌತ್ (36) ಎರಡನೇ ವಿಕೆಟ್ಗೆ 102 ರನ್ ಸೇರಿಸಿದರು, ಇದು ಭಾರತದ ದಾಖಲೆಯಾಗಿದೆ. ಮೊದಲು, ಅವರು ಶೆಫಾಲಿ ವರ್ಮಾ ಜೊತೆ ಮೊದಲ ವಿಕೆಟ್ ಜೊತೆಯಾಟದಲ್ಲಿ 93 ರನ್ ಗಳಿಸಿದ್ದರು.

Read Full Article

Click on your DTH Provider to Add TV9 Kannada