IND A vs AUS A: ಬೆಟ್ಟದಂತ ಗುರಿ ಬೆನ್ನಟ್ಟಿ ವಿಶ್ವ ದಾಖಲೆ ಮುರಿದ ಟೀಂ ಇಂಡಿಯಾ

IND A vs AUS A: ಲಕ್ನೋದಲ್ಲಿ ನಡೆದ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ ಎ ತಂಡ ಆಸ್ಟ್ರೇಲಿಯಾ ಎ ವಿರುದ್ಧ 412 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿ 1-0 ಅಂತರದಿಂದ ಸರಣಿ ಗೆದ್ದಿದೆ. ಈ ಮೂಲಕ ಕ್ರಿಕೆಟ್ ಇತಿಹಾಸದಲ್ಲಿ ನಾಲ್ಕನೇ ಇನ್ನಿಂಗ್ಸ್‌ನಲ್ಲಿ 400ಕ್ಕೂ ಹೆಚ್ಚು ರನ್ ಚೇಸ್ ಮಾಡಿದ ಮೊದಲ ತಂಡವೆಂಬ ವಿಶ್ವ ದಾಖಲೆ ನಿರ್ಮಿಸಿದೆ. ಕೆಎಲ್ ರಾಹುಲ್ (176*) ಮತ್ತು ಸಾಯಿ ಸುದರ್ಶನ್ (100) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

IND A vs AUS A: ಬೆಟ್ಟದಂತ ಗುರಿ ಬೆನ್ನಟ್ಟಿ ವಿಶ್ವ ದಾಖಲೆ ಮುರಿದ ಟೀಂ ಇಂಡಿಯಾ
India A

Updated on: Sep 26, 2025 | 8:49 PM

ಲಕ್ನೋದಲ್ಲಿ ನಡೆದ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎ ತಂಡವನ್ನು ಸೋಲಿಸಿದ ಭಾರತ ಎ (Australia A vs India A) ತಂಡ 1-0 ಅಂತರದಲ್ಲಿ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಗಮನಾರ್ಹವಾಗಿ, ಈ ಗೆಲುವಿನೊಂದಿಗೆ ಭಾರತ ಎ ತಂಡ ವಿಶ್ವ ದಾಖಲೆಯನ್ನು ಸಹ ನಿರ್ಮಿಸಿದೆ. ನಾಲ್ಕನೇ ಇನ್ನಿಂಗ್ಸ್​ನಲ್ಲಿ 412 ರನ್​ಗಳ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ 5 ವಿಕೆಟ್​ಗಳಿಂದ ಜಯ ಸಾಧಿಸಿತು. ಈ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಇಷ್ಟು ಬೃಹತ್ ಮೊತ್ತವನ್ನು ಬೆನ್ನಟ್ಟಿ ಗೆದ್ದ ಮೊದಲ ತಂಡವೆಂಬ ವಿಶ್ವ ದಾಖಲೆ ನಿರ್ಮಿಸಿದೆ. ಟೀಂ ಇಂಡಿಯಾವನ್ನು ಬಿಟ್ಟರೆ ಬೇರೆ ಯಾವುದೇ ದೇಶದ ಎ ತಂಡವು 400 ಕ್ಕಿಂತ ಹೆಚ್ಚು ರನ್‌ಗಳ ಗುರಿಯನ್ನು ಬೆನ್ನಟ್ಟಿರಲಿಲ್ಲ. ಆದರೆ ಈಗ ಭಾರತ ಎ ತಂಡವು ಈ ಸಾಧನೆಯನ್ನು ಮಾಡಿದೆ.

ಭಾರತ ಎ ತಂಡದ ವಿಶ್ವ ದಾಖಲೆ

412 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವ ಮೂಲಕ ಭಾರತ ಎ ತಂಡವು ಆಸ್ಟ್ರೇಲಿಯಾ ಎ ತಂಡ ನಿರ್ಮಿಸಿದ್ದ ದಾಖಲೆಯನ್ನು ಮುರಿದಿದೆ. 2022 ರಲ್ಲಿ ಹಂಬಂಟೋಟದಲ್ಲಿ ನಡೆದಿದ್ದ ಪಂದ್ಯದಲ್ಲಿ ಶ್ರೀಲಂಕಾ ಎ ನೀಡಿದ್ದ 367 ರನ್​ಗಳ ಗುರಿಯನ್ನು ಆಸ್ಟ್ರೇಲಿಯಾ ಎ ತಂಡ ಬೆನ್ನಟ್ಟಿ ಗೆಲುವು ಸಾಧಿಸಿತ್ತು.

ಪಂದ್ಯ ಗೆಲ್ಲಿಸಿದ ರಾಹುಲ್, ಸುದರ್ಶನ್

ಭಾರತ ಎ ತಂಡದ ಗೆಲುವಿನಲ್ಲಿ ಕೆಎಲ್ ರಾಹುಲ್ ಮತ್ತು ಸಾಯಿ ಸುದರ್ಶನ್ ಪ್ರಮುಖ ಪಾತ್ರ ವಹಿಸಿದರು. ಕೆಎಲ್ ರಾಹುಲ್ 83.81 ಸ್ಟ್ರೈಕ್ ರೇಟ್‌ನಲ್ಲಿ 16 ಬೌಂಡರಿಗಳು ಮತ್ತು ನಾಲ್ಕು ಸಿಕ್ಸರ್‌ ಸಹಿತ ಅಜೇಯ 176 ರನ್ ಬಾರಿಸಿದರು. ಈ ಇನ್ನಿಂಗ್ಸ್‌ಗಾಗಿ ರಾಹುಲ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಸಹ ಪಡೆದರು. ಇತ್ತ ಸಾಯಿ ಸುದರ್ಶನ್ 172 ಎಸೆತಗಳಲ್ಲಿ 100 ರನ್​ಗಳ ಇನ್ನಿಂಗ್ಸ್ ಕೂಡ ಆಡಿದರು.

ಟೆಸ್ಟ್ ಕ್ರಿಕೆಟ್ ಆಡದಿರಲು ನಿರ್ಧರಿಸಿದ ಶ್ರೇಯಸ್ ಅಯ್ಯರ್; ಕಾರಣ ಕೂಡ ಬಹಿರಂಗ

ಧ್ರುವ್ ಜುರೆಲ್ ಕೂಡ 66 ಎಸೆತಗಳಲ್ಲಿ 56 ರನ್​ಗಳ ಕಾಣಿಕೆ ನೀಡಿದರು. ಭಾರತ ಎ ತಂಡದ ಗೆಲುವಿನತ್ತ ಮುನ್ನಡೆಸಿದ ಈ ಮೂವರು ಆಟಗಾರರು ಈಗ ಅಕ್ಟೋಬರ್ 2 ರಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:47 pm, Fri, 26 September 25