
ಭಾರತ ಎ ಹಾಗೂ ಆಸ್ಟ್ರೇಲಿಯಾ ಎ ತಂಡಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ 4 ದಿನಗಳ 2 ಟೆಸ್ಟ್ ಪಂದ್ಯಗಳ ಸರಣಿ ಇದೇ ಸೆಪ್ಟೆಂಬರ್ 22 ರಿಂದ ಆರಂಭವಾಗಲಿದೆ. ಈ ಸರಣಿಗಾಗಿ ಆಸ್ಟ್ರೇಲಿಯಾ ಎ ತಂಡ ಭಾರತಕ್ಕೆ ಬರಲಿದೆ. ಇದೀಗ ಈ ಎರಡು ಸರಣಿಗಳಿಗೆ ಭಾರತ ಎ ತಂಡಗಳನ್ನು ಪ್ರಕಟಿಸಲಾಗಿದೆ. ಅದರಂತೆ 2 ಬಹುದಿನಗಳ ಸರಣಿಯಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಭಾರತ ಎ ತಂಡವನ್ನು ಮುನ್ನಡೆಸಲಿದ್ದಾರೆ. ಹಾಗೆಯೇ ಏಕದಿನ ಸರಣಿಯಲ್ಲಿ ರುತುರಾಜ್ ಗಾಯಕ್ವಾಡ್ ತಂಡದ ನಾಯಕತ್ವವಹಿಸಿದ್ದರೆ, ದೇವದತ್ ಪಡಿಕ್ಕಲ್ಗೆ ಉಪನಾಯಕತ್ವದ ಜವಾಬ್ದಾರಿ ನೀಡಲಾಗಿದೆ.
ಪುದುಚೇರಿಯಲ್ಲಿ ನಡೆಯಲಿರುವ ಈ ಹೈ ಪ್ರೊಫೈಲ್ ತವರು ಸರಣಿಯು ಎರಡು ಬಹು-ದಿನದ ಪಂದ್ಯಗಳು ಮತ್ತು ಮೂರು ಲಿಸ್ಟ್ ಎ ಪಂದ್ಯಗಳನ್ನು ಒಳಗೊಂಡಿರುತ್ತದೆ. ಮೇಲೆ ಹೇಳಿದಂತೆ ಆಯ್ಕೆದಾರರು ಎರಡೂ ಸ್ವರೂಪಗಳಿಗೆ ವಿಭಿನ್ನ ನಾಯಕರನ್ನು ಆಯ್ಕೆ ಮಾಡಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಬಹು-ದಿನದ ತಂಡವನ್ನು ಮುನ್ನಡೆಸಲಿದರೆ, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ರುತುರಾಜ್ ಗಾಯಕ್ವಾಡ್ ಭಾರತ ಎ ತಂಡವನ್ನು ಮುನ್ನಡೆಸಲಿದ್ದಾರೆ. ಈ ಪ್ರವಾಸವು ಸೆಪ್ಟೆಂಬರ್ 22 ರಂದು ಪ್ರಾರಂಭವಾಗುತ್ತದೆ.
ಬಹುದಿನಗಳ ಸರಣಿಗೆ ಆಯ್ಕೆ ಮಾಡಲಾದ 15 ಸದಸ್ಯರ ತಂಡದಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡಿದ ಆಟಗಾರರು ಇದ್ದಾರೆ. ಅಮನ್ ಮೊಖಡೆ, ಆಯುಷ್ ಪಾಂಡೆ, ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್, ಯಶ್ ರಾಥೋಡ್ ಮತ್ತು ಶೇಖ್ ರಶೀದ್ರಂತಹ ಆಟಗಾರರು ಬ್ಯಾಟಿಂಗ್ ವಿಭಾಗದಲ್ಲಿ ಕಾಣಿಸಿಕೊಂಡರೆ, ಕುಮಾರ್ ಕುಶಾಗ್ರ ಮತ್ತು ಎನ್. ಜಗದೀಶನ್ ವಿಕೆಟ್ ಕೀಪರ್‌ಗಳಾಗಿ ತಂಡದಲ್ಲಿದ್ದಾರೆ. ಹಾಗೆಯೇ ಆಲ್‌ರೌಂಡರ್‌ಗಳಾದ ಶಮ್ಸ್ ಮುಲಾನಿ ಮತ್ತು ತನುಷ್ ಕೋಟ್ಯಾನ್ ಸ್ಪಿನ್ ವಿಭಾಗವನ್ನು ನಿರ್ವಹಿಸಲಿದ್ದಾರೆ. ತುಷಾರ್ ದೇಶಪಾಂಡೆ, ಅನ್ಶುಲ್ ಕಾಂಬೋಜ್, ಪ್ರಫುಲ್ ಹಿಂಗೆ, ನಚಿಕೇತ್ ಭೂತೆ ಮತ್ತು ವಿ. ವೈಶಾಕ್ ಅವರನ್ನು ವೇಗದ ಬೌಲರ್ಗಳಾಗಿ ಆಯ್ಕೆ ಮಾಡಲಾಗಿದೆ.
IND vs SL: ಸತತ 2ನೇ ಪಂದ್ಯದಲ್ಲಿ ಸ್ಮರಣೀಯ ಶತಕ ಬಾರಿಸಿದ ದೇವದತ್ ಪಡಿಕ್ಕಲ್
ಇನ್ನು ಏಕದಿನ ಸರಣಿಗೆ ಘೋಷಿಸಲಾದ ತಂಡದಲ್ಲಿ ಅನುಭವಿ ಮತ್ತು ಸ್ಫೋಟಕ ಆಟಗಾರರು ಸ್ಥಾನ ಪಡೆದಿದ್ದಾರೆ. ರುತುರಾಜ್ ಗಾಯಕ್ವಾಡ್ ನಾಯಕತ್ವದ ಈ ತಂಡದಲ್ಲಿ ದೇವದತ್ ಪಡಿಕ್ಕಲ್, ಪ್ರಿಯಾಂಶ್ ಆರ್ಯ, ರಜತ್ ಪಾಟಿದಾರ್ ಮತ್ತು ನಮನ್ ಧೀರ್ ಅವರಂತಹ ಬ್ಯಾಟ್ಸ್‌ಮನ್‌ಗಳು ಇದ್ದಾರೆ. ಗಾಯದಿಂದಾಗಿ ಕೆಲವು ಸಮಯದಿಂದ ಭಾರತೀಯ ಸೀನಿಯರ್ ತಂಡದಿಂದ ಹೊರಗುಳಿದಿರುವ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ತಂಡದಲ್ಲಿ ಆಯ್ಕೆ ಮಾಡಲಾಗಿದೆ. ಕುಮಾರ್ ಕುಶಾಗ್ರ ಮತ್ತು ಪ್ರಭ್ಸಿಮ್ರಾನ್ ಸಿಂಗ್ ಅವರನ್ನು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್‌ಗಳಾಗಿ ಆಯ್ಕೆ ಮಾಡಲಾಗಿದೆ.
🚨 News 🚨
India A squad announced for home series against Australia A, comprising two multi-day matches and three one-day games in Puducherry.
Details 🔽https://t.co/qv3pB2OLhj pic.twitter.com/svfhQbnEoV
— BCCI (@BCCI) September 9, 2026
ಭಾರತ ಎ ಬಹುದಿನ ಸರಣಿ ತಂಡ: ಅಮನ್ ಮೊಖಾಡೆ, ಆಯುಷ್ ಪಾಂಡೆ, ದೇವದತ್ತ್ ಪಡಿಕ್ಕಲ್ (ನಾಯಕ), ಸಾಯಿ ಸುದರ್ಶನ್ (ಉಪನಾಯಕ), ಯಶ್ ರಾಥೋಡ್, ಶೇಕ್ ರಶೀದ್, ಕುಮಾರ್ ಕುಶಾಗ್ರಾ (ವಿಕೆಟ್ ಕೀಪರ್), ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ತುಷಾರ್ ದೇಶಪಾಂಡೆ, ಅಂಶುಲ್ ಕಾಂಬೋಜ್, ಪ್ರಫುಲ್ ಹಿಂಗೆ, ಎನ್ ಜಗದೀಸನ್ (ವಿಕೆಟ್ ಕೀಪರ್), ನಚಿಕೇತ್ ಭೂತೆ, ವಿ ವೈಶಾಕ್*
ಭಾರತ ಎ ಏಕದಿನ ತಂಡ: ಪ್ರಿಯಾಂಶ್ ಆರ್ಯ, ಸಾಯಿ ಸುದರ್ಶನ್, ದೇವದತ್ತ್ ಪಡಿಕ್ಕಲ್ (ಉಪನಾಯಕ), ರುತುರಾಜ್ ಗಾಯಕ್ವಾಡ್ (ನಾಯಕ), ರಜತ್ ಪಾಟಿದಾರ್, ಕುಮಾರ್ ಕುಶಾಗ್ರಾ (ವಿಕೆಟ್ ಕೀಪರ್), ನಿಶಾಂತ್ ಸಿಂಧು, ವಿಪ್ರಜ್ ನಿಗಮ್, ಅರ್ಶಿನ್ ಕುಲಕರ್ಣಿ, ಅರ್ಷದ್ ಖಾನ್, ನಮನ್ ಧೀರ್, ಹಾರ್ದಿಕ್ ಪಾಂಡ್ಯ*, ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಗುರ್ಜಪ್ನೀತ್ ಸಿಂಗ್, ಯಶ್ ಠಾಕೂರ್.
Published On - 3:48 pm, Wed, 9 September 26