Sign In

By signing in or creating an account, you agree with Associated Broadcasting Company's Terms & Conditions and Privacy Policy.

ತವರಿನಲ್ಲಿ 4 ಟೆಸ್ಟ್, 3 ಏಕದಿನ ಮತ್ತು 5 ಟಿ20 ಪಂದ್ಯಗಳನ್ನು ಆಡಲಿದೆ ಟೀಂ ಇಂಡಿಯಾ; ವೇಳಾಪಟ್ಟಿ ಪ್ರಕಟ

Team India's 2025 Home Series Schedule: ಬಿಸಿಸಿಐ 2025ರಲ್ಲಿ ಭಾರತ ತಂಡದ ದೇಶೀಯ ಸರಣಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ವಿರುದ್ಧ ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯಗಳು ನಡೆಯಲಿವೆ. ಅಕ್ಟೋಬರ್ 2 ರಿಂದ ಡಿಸೆಂಬರ್ 19 ರವರೆಗೆ ನಡೆಯುವ ಈ ಸರಣಿಯಲ್ಲಿ, ಹಲವು ಹೊಸ ಮತ್ತು ಸಾಂಪ್ರದಾಯಿಕ ಕ್ರೀಡಾಂಗಣಗಳಲ್ಲಿ ಪಂದ್ಯಗಳು ಆಡಲಿವೆ.

ತವರಿನಲ್ಲಿ 4 ಟೆಸ್ಟ್, 3 ಏಕದಿನ ಮತ್ತು 5 ಟಿ20 ಪಂದ್ಯಗಳನ್ನು ಆಡಲಿದೆ ಟೀಂ ಇಂಡಿಯಾ; ವೇಳಾಪಟ್ಟಿ ಪ್ರಕಟ
Team India
Follow us
ಪೃಥ್ವಿಶಂಕರ
|

Updated on:Apr 02, 2025 | 8:24 PM

ಒಂದೆಡೆ ಭಾರತದಲ್ಲಿ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್​ನ (IPL 2025) ಉತ್ಸಾಹ ಮುಗಿಲು ಮುಟ್ಟಿದ್ದರೆ, ಇನ್ನೊಂದೆಡೆ ಬಿಸಿಸಿಐ (BCCI) ಐಪಿಎಲ್ ಮುಗಿದ ನಂತರ 2025 ರಲ್ಲಿ ಟೀಂ ಇಂಡಿಯಾ (Team India) ತನ್ನ ತವರಿನಲ್ಲಿ ಆಡುವ ಸರಣಿಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಬಿಸಿಸಿಐ ಪ್ರಕಟಿಸಿರುವ ವೇಳಾಪಟ್ಟಿಯ ಪ್ರಕಾರ, ಟೀಂ ಇಂಡಿಯಾ 4 ಟೆಸ್ಟ್, 3 ಏಕದಿನ ಮತ್ತು 5 ಟಿ20 ಪಂದ್ಯಗಳನ್ನು ಆಡಲಿದೆ. ಬುಧವಾರ ಸಂಜೆ ಬಿಸಿಸಿಐ 2025 ರ ದೇಶೀಯ ಸೀಸನ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡಲಿದೆ. ಈ ಸೀಸನ್ ಅಕ್ಟೋಬರ್ 2 ರಿಂದ ಪ್ರಾರಂಭವಾಗಿ ಡಿಸೆಂಬರ್ 19 ರವರೆಗೆ ನಡೆಯಲಿದ್ದು, ಇದರಲ್ಲಿ ಪಂದ್ಯಗಳು ಅನೇಕ ಹೊಸ ಮತ್ತು ಸಾಂಪ್ರದಾಯಿಕ ಮೈದಾನಗಳಲ್ಲಿ ನಡೆಯಲಿವೆ.

ವೆಸ್ಟ್ ಇಂಡೀಸ್ ತಂಡದ ಭಾರತ ಪ್ರವಾಸ

ಭಾರತ ತಂಡದ ದೇಶೀ ಸೀಸನ್ ಟೆಸ್ಟ್ ಸರಣಿಯೊಂದಿಗೆ ಪ್ರಾರಂಭವಾಗಲಿದ್ದು, ಇದರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳು ನಡೆಯಲಿವೆ. ಮೊದಲ ಟೆಸ್ಟ್ ಅಕ್ಟೋಬರ್ 2 ರಿಂದ ಅಕ್ಟೋಬರ್ 6 ರವರೆಗೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಎರಡನೇ ಟೆಸ್ಟ್ ಅಕ್ಟೋಬರ್ 10 ರಿಂದ ಅಕ್ಟೋಬರ್ 14 ರವರೆಗೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ.

ದಕ್ಷಿಣ ಆಫ್ರಿಕಾದ ಭಾರತ ಪ್ರವಾಸ

ವೆಸ್ಟ್ ಇಂಡೀಸ್ ನಂತರ, ಭಾರತ ತಂಡವು ಮೂರು ಸ್ವರೂಪಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿಯಲಿದೆ. ಉಭಯ ತಂಡಗಳ ನಡುವೆ ಟೆಸ್ಟ್, ಏಕದಿನ ಮತ್ತು ಟಿ20 ಸರಣಿಗಳು ನಡೆಯಲ್ಲಿವೆ. ಎರಡೂ ತಂಡಗಳು 2 ಟೆಸ್ಟ್, 3 ಏಕದಿನ ಮತ್ತು 5 ಟಿ20 ಪಂದ್ಯಗಳನ್ನು ಆಡಲಿವೆ.

ದಕ್ಷಿಣ ಆಫ್ರಿಕಾದ ಭಾರತ ಪ್ರವಾಸವು ನವೆಂಬರ್ 14 ರಿಂದ ಟೆಸ್ಟ್ ಸರಣಿಯೊಂದಿಗೆ ಪ್ರಾರಂಭವಾಗಲಿದೆ. ಮೊದಲ ಟೆಸ್ಟ್ ಪಂದ್ಯವು ನವೆಂಬರ್ 14 ರಂದು ದೆಹಲಿಯಲ್ಲಿ ನಡೆಯಲಿದೆ. ಎರಡನೇ ಮತ್ತು ಅಂತಿಮ ಪಂದ್ಯವು ನವೆಂಬರ್ 22 ರಿಂದ ಗುವಾಹಟಿಯಲ್ಲಿ ನಡೆಯಲಿದೆ. ಗುವಾಹಟಿಯಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿರುವುದು ಇದೇ ಮೊದಲು.

ಏಕದಿನ ಸರಣಿ ಯಾವಾಗ?

ಟೆಸ್ಟ್ ಪಂದ್ಯದ ನಂತರ ಎರಡೂ ತಂಡಗಳ ನಡುವೆ ಏಕದಿನ ಸರಣಿ ನಡೆಯಲಿದೆ. ಏಕದಿನ ಸರಣಿಯಲ್ಲಿ 3 ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ ನವೆಂಬರ್ 30 ರಂದು ರಾಂಚಿಯಲ್ಲಿ ನಡೆಯಲಿದೆ. ಎರಡನೇ ಪಂದ್ಯ ಡಿಸೆಂಬರ್ 3 ರಂದು ರಾಯ್‌ಪುರದಲ್ಲಿ ನಡೆಯಲಿದೆ. ಮೂರನೇ ಮತ್ತು ಅಂತಿಮ ಪಂದ್ಯ ಡಿಸೆಂಬರ್ 6 ರಂದು ವೈಜಾಕ್​ನಲ್ಲಿ ನಡೆಯಲಿದೆ.

416 ವಿಕೆಟ್, 13 ಶತಕ ಸಿಡಿಸಿದ್ದ ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ನಿಧನ

ಟಿ20 ಸರಣಿ ವೇಳಾಪಟ್ಟಿ

ಏತನ್ಮಧ್ಯೆ, ದಕ್ಷಿಣ ಆಫ್ರಿಕಾದ ಭಾರತ ಪ್ರವಾಸವು ಟಿ20ಐ ಸರಣಿಯೊಂದಿಗೆ ಮುಕ್ತಾಯಗೊಳ್ಳಲಿದೆ. ಡಿಸೆಂಬರ್ 9 ರಿಂದ 19 ರವರೆಗೆ ನಡೆಯಲಿರುವ ಟಿ20ಐ ಸರಣಿಯಲ್ಲಿ ಒಟ್ಟು 5 ಟಿ20ಐ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ ಡಿಸೆಂಬರ್ 9 ರಂದು ಕಟಕ್‌ನಲ್ಲಿ ನಡೆಯಲಿದೆ. ಎರಡನೇ ಪಂದ್ಯ ಡಿಸೆಂಬರ್ 11 ರಂದು ನವದೆಹಲಿಯಲ್ಲಿ ನಡೆಯಲಿದೆ. ಮೂರನೇ ಪಂದ್ಯ ಡಿಸೆಂಬರ್ 14 ರಂದು ಧರ್ಮಶಾಲಾದಲ್ಲಿ ನಡೆಯಲಿದೆ. ನಾಲ್ಕನೇ ಪಂದ್ಯ ಡಿಸೆಂಬರ್ 17 ರಂದು ಲಕ್ನೋದಲ್ಲಿ ನಡೆಯಲಿದೆ. ಐದನೇ ಮತ್ತು ಅಂತಿಮ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:20 pm, Wed, 2 April 25

ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಶಿಲಾದಿತ್ಯ ಬೋಸ್ ಇಡೀ ಪ್ರಕರಣವನ್ನೇ ತಿರುಚುವ ಯತ್ನ ಮಾಡಿದ್ದಾನೆ: ಪ್ರತಾಪ್
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಹಿಂದಿ ಹೇರಿಕೆಯನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ: ಸಿದ್ದರಾಮಯ್ಯ
ಹಿಂದಿ ಹೇರಿಕೆಯನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ: ಸಿದ್ದರಾಮಯ್ಯ
ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ
ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ
ವಿಕಾಸ್ ಮೇಲೆ ನಡೆದ ಹಲ್ಲೆ ನೋಡಿದರೆ ರಕ್ತ ಕುದಿಯುತ್ತದೆ: ಅಶ್ವಿನಿ
ವಿಕಾಸ್ ಮೇಲೆ ನಡೆದ ಹಲ್ಲೆ ನೋಡಿದರೆ ರಕ್ತ ಕುದಿಯುತ್ತದೆ: ಅಶ್ವಿನಿ
ಮಜಾ ಟಾಕೀಸ್ ವೇದಿಕೆ ಮೇಲೆ ಚರ್ಚೆ ಆಯ್ತು ಕುರಿ ಪ್ರತಾಪ್ ಅವರ ಆ ಒಂದು ವಿಡಿಯೋ
ಮಜಾ ಟಾಕೀಸ್ ವೇದಿಕೆ ಮೇಲೆ ಚರ್ಚೆ ಆಯ್ತು ಕುರಿ ಪ್ರತಾಪ್ ಅವರ ಆ ಒಂದು ವಿಡಿಯೋ
ಬಿಜೆಪಿ ಸೇರಿದಂತೆ ಯಾರೂ ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿಲ್ಲ: ಸುರೇಶ್
ಬಿಜೆಪಿ ಸೇರಿದಂತೆ ಯಾರೂ ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿಲ್ಲ: ಸುರೇಶ್
ವಿಂಗ್ ಕಮಾಂಡರ್ ವಿರುದ್ಧ ಎಫ್​ಐಅರ್ ದಾಖಲಾಗಿದೆ: ಪರಮೇಶ್ವರ್
ವಿಂಗ್ ಕಮಾಂಡರ್ ವಿರುದ್ಧ ಎಫ್​ಐಅರ್ ದಾಖಲಾಗಿದೆ: ಪರಮೇಶ್ವರ್
ಆರಡಿ ಎತ್ತರದ ದೈತ್ಯನ ಮೇಲೆ ಹುಡುಗ ಹೇಗೆ ಹಲ್ಲೆ ಮಾಡಿಯಾನು? ರಾಜಣ್ಣ
ಆರಡಿ ಎತ್ತರದ ದೈತ್ಯನ ಮೇಲೆ ಹುಡುಗ ಹೇಗೆ ಹಲ್ಲೆ ಮಾಡಿಯಾನು? ರಾಜಣ್ಣ
IPL 2025: ಮುಂಬೈ ಇಂಡಿಯನ್ಸ್ ಆಟಗಾರರಿಗೆ ಹೀಗೊಂದು ಶಿಕ್ಷೆ
IPL 2025: ಮುಂಬೈ ಇಂಡಿಯನ್ಸ್ ಆಟಗಾರರಿಗೆ ಹೀಗೊಂದು ಶಿಕ್ಷೆ