
2026 ರ ಟಿ20 ವಿಶ್ವಕಪ್ (T20 World Cup 2026) ಪಂದ್ಯಾವಳಿಯನ್ನು ಗೆಲುವಿನೊಂದಿಗೆ ಆರಂಭಿಸಿರುವ ಟೀಂ ಇಂಡಿಯಾ ಪ್ರಸ್ತುತ ವಿಶ್ರಾಂತಿ ಮೂಡ್ನಲ್ಲಿದೆ. ತನ್ನ ಮೊದಲ ಪಂದ್ಯದಲ್ಲಿ ಅಮೆರಿಕವನ್ನು ಮಣಿಸಿರುವ ಭಾರತ ತಂಡಕ್ಕೆ ಮುಂದಿನ 4 ದಿನಗಳವರೆಗೆ ಯಾವುದೇ ಪಂದ್ಯಗಳಿಲ್ಲ. ಇದು ಕೂಡ ಭಾರತ ತಂಡಕ್ಕೆ ಉಪಯುಕ್ತವಾಗಿದೆ. ಏಕಂದರೆ ತಂಡದ ಕೆಲವು ಆಟಗಾರರು ಅನಾರೋಗ್ಯದಿಂದ ಬಳಲುತ್ತಿದ್ದು, ಅವರು ಚೇತರಿಸಿಕೊಳ್ಳಲು ಸಮಯಾವಕಾಶ ಸಿಕ್ಕಂತ್ತಾಗಿದೆ. ಹಾಗೆಯೇ ಮೊದಲ ಪಂದ್ಯದಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಕೆಲಸವನ್ನು ತಂಡ ಮಾಡಬೇಕಿದೆ. ಇನ್ನು ಸೂರ್ಯಕುಮಾರ್ ಪಡೆ ತನ್ನ ಎರಡನೇ ಪಂದ್ಯದಲ್ಲಿ ನಮೀಬಿಯಾ ತಂಡವನ್ನು ಎದುರಿಸುತ್ತಿದ್ದು, ಈ ತಂಡವನ್ನು ಅಷ್ಟು ಸುಲಭವಾಗಿ ಪರಿಗಣಿಸುವ ತಪ್ಪನ್ನು ಮಾಡುವಂತಿಲ್ಲ.
ಉಭಯ ತಂಡಗಳಿಗೆ ಈ ಪಂದ್ಯಾವಳಿಯಲ್ಲಿ ಇದು ಎರಡನೇ ಪಂದ್ಯವಾಗಿರಲಿದೆ. ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಅಮೆರಿಕವನ್ನು ಸೋಲಿಸಿದ್ದರೆ, ಇತ್ತ ನಮೀಬಿಯಾ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಸೋತಿರುವ ನೆದರ್ಲ್ಯಾಂಡ್ಸ್ ತಂಡವನ್ನು ಫೆಬ್ರವರಿ 10 ರಂದು ಎದುರಿಸಲಿದೆ.
ಭಾರತ ಹಾಗೂ ನಮೀಬಿಯಾ ನಡುವಿನ ಟಿ20 ವಿಶ್ವಕಪ್ ಪಂದ್ಯ ಫೆಬ್ರವರಿ 12 ರಂದು ನಡೆಯಲಿದೆ.
ಭಾರತ ಹಾಗೂ ನಮೀಬಿಯಾ ನಡುವಿನ ಟಿ20 ವಿಶ್ವಕಪ್ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿದೆ.
ಭಾರತ ಹಾಗೂ ನಮೀಬಿಯಾ ನಡುವಿನ ಟಿ20 ವಿಶ್ವಕಪ್ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.
ಟಿ20 ವಿಶ್ವಕಪ್‌ನ ಎಲ್ಲಾ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಟಿವಿಯಲ್ಲಿ ಲಭ್ಯವಿರುತ್ತವೆ. ನೀವು ಜಿಯೋಹಾಟ್‌ಸ್ಟಾರ್ ಅಪ್ಲಿಕೇಶನ್ ಮೂಲಕ ಮೊಬೈಲ್/ಲ್ಯಾಪ್‌ಟಾಪ್ ಮತ್ತು ಟಿವಿಯಲ್ಲಿ ಲೈವ್ ಪಂದ್ಯಗಳನ್ನು ವೀಕ್ಷಿಸಬಹುದು.
T20 World Cup: 20 ತಂಡಗಳು, 55 ಪಂದ್ಯಗಳು, 1 ಟ್ರೋಫಿ; ಟಿ20 ವಿಶ್ವಕಪ್ ವೇಳಾಪಟ್ಟಿ ಹೀಗಿದೆ
ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.
ನಮೀಬಿಯಾ ತಂಡ: ಗೆರ್ಹಾರ್ಡ್ ಎರಾಸ್ಮಸ್ (ನಾಯಕ), ಜೇನ್ ಗ್ರೀನ್, ಬರ್ನಾರ್ಡ್ ಸ್ಕೋಲ್ಟ್ಜ್, ರೂಬೆನ್ ಟ್ರಂಪೆಲ್ಮನ್, ಜೆಜೆ ಸ್ಮಿಟ್, ಜಾನ್ ಫ್ರಿಲಿಂಕ್, ಲೌರೆನ್ ಸ್ಟೀನ್‌ಕ್ಯಾಂಪ್, ಮಲನ್ ಕ್ರುಗರ್, ನಿಕೋಲ್ ಲಾಫ್ಟಿ-ಈಟನ್, ಜ್ಯಾಕ್ ಬ್ರಾಸ್ಸೆಲ್, ಬೆನ್ ಶಿಕೊಂಗೊ, ಜೆಸಿ ಬಾಲ್ಟ್, ಡೈಲನ್ ಲೀಚರ್, WP ಮೈಬರ್ಗ್, ಮ್ಯಾಕ್ಸ್ ಹೀಂಗೊ.
ಮೀಸಲು ಆಟಗಾರ: ಅಲೆಕ್ಸಾಂಡರ್ ವೋಲ್ಶೆಂಕ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ