ICC World Cup: ಭಾರತದಲ್ಲಿ ಬ್ಯಾಕ್ ಟು ಬ್ಯಾಕ್ 2 ವಿಶ್ವಕಪ್..!

| Updated By: ಝಾಹಿರ್ ಯೂಸುಫ್

Updated on: Jul 27, 2022 | 10:55 AM

Team India: ಭಾರತವು ಕೊನೆಯ ಬಾರಿ 2011 ರಲ್ಲಿ ಪುರುಷ ಏಕದಿನ ವಿಶ್ವಕಪ್​ಗೆ ಆತಿಥ್ಯವಹಿಸಿತ್ತು. ಆ ವೇಳೆ ಟೀಮ್ ಇಂಡಿಯಾ ವಿಶ್ವ ಚಾಂಪಿಯನ್​ ಆಗಿ ಹೊರಹೊಮ್ಮಿದ್ದು ವಿಶೇಷ.

ICC World Cup: ಭಾರತದಲ್ಲಿ ಬ್ಯಾಕ್ ಟು ಬ್ಯಾಕ್ 2 ವಿಶ್ವಕಪ್..!
Team India
Follow us on

ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಮುಂಬರುವ ವರ್ಷಗಳಲ್ಲಿ ಬ್ಯಾಕ್ ಟು ಬ್ಯಾಕ್ ಮನರಂಜನೆಯ ರಸದೌತಣ ಸಿಗಲಿದೆ. ಏಕೆಂದರೆ ಮುಂದಿನ 2 ವಿಶ್ವಕಪ್​ಗಳಿಗೆ (World Cup) ಭಾರತ ಆತಿಥ್ಯವಹಿಸಲಿದೆ. ಈ ಬಾರಿಯ ಟಿ20 ವಿಶ್ವಕಪ್​ ಆಸ್ಟ್ರೇಲಿಯಾದಲ್ಲಿ ನಡೆಯಲಿದ್ದು, ಇದಾದ ಬಳಿಕ ನಡೆಯುವ ಪುರುಷರ ಏಕದಿನ ವಿಶ್ವಕಪ್​ಗೆ ಭಾರತ ಆತಿಥ್ಯವಹಿಸಲಿದೆ. ಇದರ ಬೆನ್ನಲ್ಲೇ ಮಹಿಳಾ ಏಕದಿನ ವಿಶ್ವಕಪ್​ ಕೂಡ ಭಾರತದಲ್ಲೇ ಜರುಗಲಿದೆ. ಅಂದರೆ 2023 ರ ಪುರುಷರ ಏಕದಿನ ವಿಶ್ವಕಪ್​ಗೆ ಭಾರತ ಆತಿಥ್ಯವಹಿಸಲಿದ್ದು, ಇದಾದ ಬಳಿಕ 2025 ರಲ್ಲಿ ಮತ್ತೆ ಮಹಿಳಾ ಏಕದಿನ ವಿಶ್ವಕಪ್​ ಅನ್ನು ಬಿಸಿಸಿಐ ಆಯೋಜಿಸಲಿದೆ. ಇನ್ನು ಇದರ ನಡುವೆ ಐಪಿಎಲ್​ ಸೇರಿದಂತೆ ಪ್ರಮುಖ ಸರಣಿ ಕೂಡ ಭಾರತದಲ್ಲಿ ನಡೆಯಲಿದೆ. ಅಂದರೆ ಮುಂದಿನ ಮೂರು ವರ್ಷ ಭಾರತೀಯ ಕ್ರಿಕೆಟ್​ ಪ್ರೇಮಿಗಳಿಗೆ ಕ್ರಿಕೆಟ್ ಹಬ್ಬ ಎಂದರೆ ತಪ್ಪಾಗಲಾರದು.

ಮಂಗಳವಾರ ಬರ್ಮಿಂಗ್‌ಹ್ಯಾಮ್‌ನಲ್ಲಿ ಮುಕ್ತಾಯಗೊಂಡ ಐಸಿಸಿಯ ವಾರ್ಷಿಕ ಸಮ್ಮೇಳನದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಹಿಳಾ ವಿಶ್ವಕಪ್​ನ ಬಿಡ್ ಅನ್ನು ಗೆದ್ದಿದ್ದು, ಒಂದು ದಶಕದ ಬಳಿಕ ಭಾರತ ಮತ್ತೊಮ್ಮೆ ಅಂತಾರಾಷ್ಟ್ರೀಯ ಏಕದಿನ ವಿಶ್ವಕಪ್​ಗಳಿಗೆ ಆತಿಥ್ಯವಹಿಸಲಿದೆ. ಅಂದರೆ ಭಾರತವು ಕೊನೆಯ ಬಾರಿ 2011 ರಲ್ಲಿ ಪುರುಷ ಏಕದಿನ ವಿಶ್ವಕಪ್​ಗೆ ಆತಿಥ್ಯವಹಿಸಿತ್ತು. ಆ ವೇಳೆ ಟೀಮ್ ಇಂಡಿಯಾ ವಿಶ್ವ ಚಾಂಪಿಯನ್​ ಆಗಿ ಹೊರಹೊಮ್ಮಿದ್ದು ವಿಶೇಷ.

ಹಾಗೆಯೇ 2013 ರಲ್ಲಿ ಭಾರತದಲ್ಲಿ ಮಹಿಳಾ ಏಕದಿನ ವಿಶ್ವಕಪ್​ ಜರುಗಿತ್ತು. ಆದರೆ ಈ ವೇಳೆ ಟೀಮ್ ಇಂಡಿಯಾ ಮಹಿಳಾ ಆಟಗಾರ್ತಿಯರಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿರಲಿಲ್ಲ. ಅಲ್ಲದೆ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವೆಸ್ಟ್ ಇಂಡೀಸ್ ತಂಡವನ್ನು 114 ರನ್‌ಗಳಿಂದ ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿತ್ತು.

ಇದನ್ನೂ ಓದಿ
Team India: 7 ತಿಂಗಳಲ್ಲಿ 7 ನಾಯಕರು: ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ
ಸಚಿನ್, ಧೋನಿಗೂ ಸಿಕ್ಕಿಲ್ಲ ಈ ಗೌರವ: ಇಂಗ್ಲೆಂಡ್ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಕ್ರಿಕೆಟಿಗನ ಹೆಸರು..!
Cheteshwar Pujara: ಒಟ್ಟು 997 ರನ್​: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಪೂಜಾರ
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಇದೀಗ 2023 ಮತ್ತು 2025 ರಲ್ಲಿ ಪುರುಷರ ಮತ್ತು ಮಹಿಳಾ ಏಕದಿನ ವಿಶ್ವಕಪ್​ ಅನ್ನು ಬಿಸಿಸಿಐ ಆಯೋಜಿಸಲಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಟೀಮ್ ಇಂಡಿಯಾ ಮತ್ತೆ ವಿಶ್ವ ಚಾಂಪಿಯನ್​ ಪಟ್ಟಕ್ಕೇರಿದರೂ ಅಚ್ಚರಿಪಡಬೇಕಿಲ್ಲ.
ಭಾರತದಲ್ಲಿನ ಮಹಿಳಾ ವಿಶ್ವಕಪ್ ಹೊರತಾಗಿ ಐಸಿಸಿಯ ಇತರ ಮೂರು ಮಹಿಳಾ ಪಂದ್ಯಾವಳಿಗಳ ಆತಿಥೇಯರನ್ನು ಮಂಗಳವಾರ ಪ್ರಕಟಿಸಲಾಗಿದೆ. ಅದರಂತೆ 2024ರಲ್ಲಿ ಮಹಿಳಾ ಟಿ20 ವಿಶ್ವಕಪ್ ಬಾಂಗ್ಲಾದೇಶದಲ್ಲಿ, 2026ರ ಟಿ20 ವಿಶ್ವಕಪ್ ಇಂಗ್ಲೆಂಡ್‌ನಲ್ಲಿ ನಡೆಯಲಿದೆ. ಇನ್ನು 2027ರ ಮಹಿಳಾ ಚಾಂಪಿಯನ್ಸ್ ಟ್ರೋಫಿಯನ್ನು ಶ್ರೀಲಂಕಾ ಆಯೋಜಿಸಲಿದೆ.

ಒಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಐಪಿಎಲ್​ ಜೊತೆಗ ಐಸಿಸಿ ಟೂರ್ನಿಗಳು ನಡೆಯಲಿದ್ದು, ಅದರಂತೆ ಕ್ರಿಕೆಟ್​ ಪ್ರೇಮಿಗಳಿಗೆ ಸತತ ಮನರಂಜನೆಯ ಮಹಾಪೂರವೇ ಸಿಗಲಿದೆ ಎನ್ನಬಹುದು.