Team India: ಭಾರತ ತಂಡದ ಮುಂದಿನ ಸರಣಿ ವೇಳಾಪಟ್ಟಿ ಪ್ರಕಟ

| Updated By: ಝಾಹಿರ್ ಯೂಸುಫ್

Updated on: Feb 07, 2024 | 7:33 AM

India vs Zimbabwe: ಭಾರತ ಮತ್ತು ಝಿಂಬಾಬ್ವೆ ನಡುವಣ ಟಿ20 ಸರಣಿ ವೇಳಾಪಟ್ಟಿ ಪ್ರಕಟವಾಗಿದೆ. ಐದು ಪಂದ್ಯಗಳ ಈ ಸರಣಿಗಾಗಿ ಟೀಮ್ ಇಂಡಿಯಾ ಝಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ. ಇದೇ ಮೊದಲ ಬಾರಿಗೆ ಭಾರತ ತಂಡವು ಝಿಂಬಾಬ್ವೆ ವಿರುದ್ಧ 5 ಪಂದ್ಯಗಳ ಸರಣಿ ಆಡಲಿರುವುದು ವಿಶೇಷ. ಇತ್ತ ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಈ ಸರಣಿ ನಡೆಯುತ್ತಿರುವುದರಿಂದ ಪ್ರಮುಖ ಆಟಗಾರರು ಹೊರಗುಳಿಯುವ ಸಾಧ್ಯತೆಯಿದೆ.

Team India: ಭಾರತ ತಂಡದ ಮುಂದಿನ ಸರಣಿ ವೇಳಾಪಟ್ಟಿ ಪ್ರಕಟ
IND vs ZIM
Follow us on

ಭಾರತ ತಂಡದ ಮುಂದಿನ ಸರಣಿ ವೇಳಾಪಟ್ಟಿ ಪ್ರಕಟವಾಗಿದೆ. ಇಂಗ್ಲೆಂಡ್ ವಿರುದ್ಧದ ಸರಣಿ ಬಳಿಕ ಟೀಮ್ ಇಂಡಿಯಾ (Team India) ಆಟಗಾರರು ಐಪಿಎಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಾದ ಬಳಿಕ ಟಿ20 ವಿಶ್ವಕಪ್​ ಜರುಗಲಿದೆ. ಈ ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಭಾರತ ತಂಡವು ಝಿಂಬಾಬ್ವೆ ವಿರುದ್ಧ ಸರಣಿ ಆಡಲಿದೆ. ಭಾರತ ತಂಡವು ಜುಲೈನಲ್ಲಿ ಟಿ20 ಸರಣಿಗಾಗಿ ಝಿಂಬಾಬ್ವೆಗೆ ಪ್ರಯಾಣಿಸಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ತಿಳಿಸಿದೆ.

ಜುಲೈ 6 ರಿಂದ ಶುರುವಾಗಲಿರುವ ಈ ಸರಣಿಯಲ್ಲಿ ಒಟ್ಟು ಐದು ಪಂದ್ಯಗಳನ್ನಾಡಲಾಗುತ್ತದೆ. ಭಾರತ ಇದುವರೆಗೆ ಝಿಂಬಾಬ್ವೆಯಲ್ಲಿ 3 ಟಿ20 ಸರಣಿಗಳನ್ನು ಆಡಿದೆ. 2010, 2015 ಮತ್ತು 2016 ರ ನಂತರ ಇದೀಗ ಮತ್ತೊಮ್ಮೆ ದ್ವಿಪಕ್ಷೀಯ ಸರಣಿಗಾಗಿ ಭಾರತ ತಂಡವು 4ನೇ ಬಾರಿಗೆ ಝಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ.

ಭಾರತ ಮತ್ತು ಝಿಂಬಾಬ್ವೆ ಸರಣಿ ವೇಳಾಪಟ್ಟಿ:

  • ಜುಲೈ 6: ಮೊದಲ ಟಿ20 ಪಂದ್ಯ
  • ಜುಲೈ 7: ಎರಡನೇ ಟಿ20 ಪಂದ್ಯ
  • ಜುಲೈ 10: ಮೂರನೇ ಟಿ20 ಪಂದ್ಯ
  • ಜುಲೈ 13: ನಾಲ್ಕನೇ ಟಿ20 ಪಂದ್ಯ
  • ಜುಲೈ 14: ಐದನೇ ಟಿ20 ಪಂದ್ಯ

ಇದನ್ನೂ ಓದಿ:  ಬಾರಿ ಚಾಂಪಿಯನ್ಸ್​, 3 ಬಾರಿ ರನ್ನರ್ ಅಪ್: ಕಿರಿಯರ ವಿಶ್ವಕಪ್​ನಲ್ಲಿ ಭಾರತದ್ದೇ ಪಾರುಪತ್ಯ

ಟಿ20 ವಿಶ್ವಕಪ್​ ಯಾವಾಗ ಶುರು?

ಈ ಬಾರಿಯ ಟಿ20 ವಿಶ್ವಕಪ್ ಜೂನ್ 1 ರಿಂದ ಶುರುವಾಗಲಿದೆ. ವೆಸ್ಟ್ ಇಂಡೀಸ್ ಹಾಗೂ ಯುಎಸ್​ಎ ಜಂಟಿಯಾಗಿ ಆಯೋಜಿಸುತ್ತಿರುವ ಈ ಟೂರ್ನಿಯ ಫೈನಲ್ ಪಂದ್ಯವು ಜೂನ್ 29 ರಂದು ನಡೆಯಲಿದೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾ ಝಿಂಬಾಬ್ವೆ ವಿರುದ್ಧದ ಸರಣಿಗಾಗಿ ತೆರಳಲಿದೆ.

ಟಿ20 ವಿಶ್ವಕಪ್​ ಲೀಗ್ ಹಂತದ ಪಂದ್ಯಗಳ ವೇಳಾಪಟ್ಟಿ:

ದಿನಾಂಕ ಪಂದ್ಯಗಳು ಸ್ಥಳ
ಜೂನ್ 1 ಯುಎಸ್​ಎ vs ಕೆನಡಾ ಡಲ್ಲಾಸ್
ಜೂನ್ 2 ವೆಸ್ಟ್ ಇಂಡೀಸ್ vs ಪಪುವಾ ನ್ಯೂಗಿನಿಯಾ ಗಯಾನಾ
ಜೂನ್ 2 ನಮೀಬಿಯಾ vs ಒಮಾನ್ ಬಾರ್ಬಡೋಸ್
ಜೂನ್ 3 ಶ್ರೀಲಂಕಾ vs ಸೌತ್ ಆಫ್ರಿಕಾ ನ್ಯೂಯಾರ್ಕ್
ಜೂನ್ 4 ಅಫ್ಘಾನಿಸ್ತಾನ್ vs ಉಗಾಂಡ ಗಯಾನಾ
ಜೂನ್ 4 ಇಂಗ್ಲೆಂಡ್ vs ಸ್ಕಾಟ್ಲೆಂಡ್ ಬಾರ್ಬಡೋಸ್
ಜೂನ್ 5 ಭಾರತ vs ಐರ್ಲೆಂಡ್ ನ್ಯೂಯಾರ್ಕ್
ಜೂನ್ 5 ಪಪುವಾ ನ್ಯೂಗಿನಿಯಾ vs ಉಗಾಂಡ ಗಯಾನಾ
ಜೂನ್ 5 ಆಸ್ಟ್ರೇಲಿಯಾ vs ಒಮಾನ್ ಬಾರ್ಬಡೋಸ್
ಜೂನ್ 6 ಯುಎಸ್​ಎ vs ಪಾಕಿಸ್ತಾನ ಡಲ್ಲಾಸ್
ಜೂನ್ 6 ನಮೀಬಿಯಾ vs ಸ್ಕಾಟ್ಲೆಂಡ್ ಬಾರ್ಬಡೋಸ್
ಜೂನ್ 7 ಕೆನಡಾ vs ಐರ್ಲೆಂಡ್ ನ್ಯೂಯಾರ್ಕ್
ಜೂನ್ 7 ನ್ಯೂಝಿಲೆಂಡ್ vs vs ಅಫ್ಘಾನಿಸ್ತಾನ್ ಗಯಾನಾ
ಜೂನ್ 7 ಶ್ರೀಲಂಕಾ vs ಬಾಂಗ್ಲಾದೇಶ್ ಡಲ್ಲಾಸ್
ಜೂನ್ 8 ನೆದರ್ಲ್ಯಾಂಡ್ಸ್ vs ಸೌತ್ ಆಫ್ರಿಕಾ ನ್ಯೂಯಾರ್ಕ್
ಜೂನ್ 8 ಆಸ್ಟ್ರೇಲಿಯಾ vs ಇಂಗ್ಲೆಂಡ್ ಬಾರ್ಬಡೋಸ್
ಜೂನ್ 8 ವೆಸ್ಟ್ ಇಂಡೀಸ್ vs ಉಗಾಂಡ ಗಯಾನಾ
ಜೂನ್ 9 ಭಾರತ vs ಪಾಕಿಸ್ತಾನ್ ನ್ಯೂಯಾರ್ಕ್
ಜೂನ್ 9 ಒಮಾನ್ vs ಸ್ಕಾಟ್ಲೆಂಡ್ ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 10 ಸೌತ್ ಆಫ್ರಿಕಾ vs ಬಾಂಗ್ಲಾದೇಶ್ ನ್ಯೂಯಾರ್ಕ್
ಜೂನ್ 11 ಪಾಕಿಸ್ತಾನ vs ಕೆನಡಾ ನ್ಯೂಯಾರ್ಕ್
ಜೂನ್ 11 ಶ್ರೀಲಂಕಾ vs ನೇಪಾಳ ಲಾಡರ್ಹಿಲ್
ಜೂನ್ 11 ಆಸ್ಟ್ರೇಲಿಯಾ vs ನಮೀಬಿಯಾ ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 12 ಯುಎಸ್​ಎ vs ಭಾರತ ನ್ಯೂಯಾರ್ಕ್
ಜೂನ್ 12 ವೆಸ್ಟ್ ಇಂಡೀಸ್ vs ನ್ಯೂಝಿಲೆಂಡ್ ಟ್ರಿನಿಡಾಡ್ ಮತ್ತು ಟೊಬಾಗೊ
ಜೂನ್ 13 ಇಂಗ್ಲೆಂಡ್ vs ಒಮಾನ್ ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 13 ಬಾಂಗ್ಲಾದೇಶ್ vs ನೆದರ್ಲೆಂಡ್ಸ್ ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
ಜೂನ್ 13 ಅಫ್ಘಾನಿಸ್ತಾನ್ vs ಪಪುವಾ ನ್ಯೂಗಿನಿಯಾ ಟ್ರಿನಿಡಾಡ್ ಮತ್ತು ಟೊಬಾಗೊ
ಜೂನ್ 14 ಯುಎಸ್​ಎ vs ಐರ್ಲೆಂಡ್ ಲಾಡರ್ಹಿಲ್
ಜೂನ್ 14 ಸೌತ್ ಆಫ್ರಿಕಾ vs ನೇಪಾಳ ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
ಜೂನ್ 14 ನ್ಯೂಝಿಲೆಂಡ್ vs ಉಗಾಂಡ ಟ್ರಿನಿಡಾಡ್ ಮತ್ತು ಟೊಬಾಗೊ
ಜೂನ್ 15 ಭಾರತ vs ಕೆನಡಾ ಲಾಡರ್ಹಿಲ್
ಜೂನ್ 15 ನಮೀಬಿಯಾ vs ಇಂಗ್ಲೆಂಡ್ ಆಂಟಿಗುವಾ ಮತ್ತು ಬಾರ್ಬುಡಾ
ಜೂನ್ 15 ಆಸ್ಟ್ರೇಲಿಯಾ vs ಸ್ಕಾಟ್ಲೆಂಡ್ ಸೇಂಟ್ ಲೂಸಿಯಾ
ಜೂನ್ 16 ಪಾಕಿಸ್ತಾನ್ vs ಐರ್ಲೆಂಡ್ ಲಾಡರ್ಹಿಲ್
ಜೂನ್ 16 ಬಾಂಗ್ಲಾದೇಶ vs ನೇಪಾಳ ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
ಜೂನ್ 16 ಶ್ರೀಲಂಕಾ vs ನೆದರ್ಲ್ಯಾಂಡ್ಸ್ ಸೇಂಟ್ ಲೂಸಿಯಾ
ಜೂನ್ 17 ನ್ಯೂಝಿಲೆಂಡ್ vs ಪಪುವಾ ನ್ಯೂಗಿನಿಯಾ ಟ್ರಿನಿಡಾಡ್ ಮತ್ತು ಟೊಬಾಗೊ
ಜೂನ್ 17 ವೆಸ್ಟ್ ಇಂಡೀಸ್ vs ಅಫ್ಘಾನಿಸ್ತಾನ್ ಸೇಂಟ್ ಲೂಸಿಯಾ

 

Published On - 7:33 am, Wed, 7 February 24