ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಗೆದ್ದ ಭಾರತ ಯುವ ಪಡೆ

ಆಸ್ಟ್ರೇಲಿಯಾ U19 ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ U19 ತಂಡ 103 ರನ್‌ಗಳಿಂದ ಗೆದ್ದು ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ. ಯಶ್‌ವರ್ಧನ್ ಚೌಹಾಣ್ (122) ಶತಕ ಹಾಗೂ ವಿಕೆ ವಿನೀತ್ (87) ಉತ್ತಮ ಆಟದಿಂದ ಭಾರತ 341 ರನ್ ಗಳಿಸಿತು. ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 238 ರನ್‌ಗಳಿಗೆ ಆಲೌಟ್ ಆಯಿತು.

ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಗೆದ್ದ ಭಾರತ ಯುವ ಪಡೆ
ಭಾರತ Vs ಆಸ್ಟ್ರೇಲಿಯಾ ಯುವ ಪಡೆ

Updated on: Sep 21, 2026 | 6:02 PM

ಆಸ್ಟ್ರೇಲಿಯಾ ಅಂಡರ್-19 ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಆತಿಥೇಯ ಭಾರತ ಯುವ ತಂಡ 1ಪ03 ರನ್​​ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಟೀಂ ಇಂಡಿಯಾ 2-0 ಅಂತರದಿಂದ ತನ್ನದಾಗಿಸಿಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಲಕ್ಷಯ್ ರಾಯ್‌ಚಂದಾನಿ ನಾಯಕತ್ವದ ಭಾರತೀಯ ಅಂಡರ್ -19 ತಂಡವು 341 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ತಂಡದ ಪರ ಯಶ್​ವರ್ಧನ್ ಚೌಹಾಣ್ ಅದ್ಭುತ ಶತಕ ಬಾರಿಸಿದರೆ, ವಿಕೆ ವಿನೀತ್ ಕೂಡ ಅರ್ಧಶತಕದ ಕಾಣಿಕೆ ನೀಡಿದರು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 238 ರನ್​ಗಳಿಗೆ ಆಲೌಟ್ ಆಗುವ ಮೂಲಕ 103 ರನ್​​ಗಳಿಂದ ಸೋಲೊಪ್ಪಿಕೊಂಡಿತು.

ಆರ್ಯವೀರ್ ಸೆಹ್ವಾಗ್ ಆರ್ಭಟ

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡ ಕಳಪೆ ಆರಂಭ ಕಂಡಿತು. ನಾಯಕ ಲಕ್ಷಯ್ ರಾಯ್‌ಚಂದಾನಿ ಕೇವಲ 11 ರನ್‌ಗಳಿಗೆ ಸುಸ್ತಾದರು. ಹೀಗಾಗಿ ಟೀಂ ಇಂಡಿಯಾ 46 ರನ್‌ಗಳಿಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಆ ಬಳಿಕ ಜೊತೆಯಾದ ಆರ್ಯವೀರ್ ಸೆಹ್ವಾಗ್ ಮತ್ತು ವಿಕೆ ವಿನೀತ್ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಆರ್ಯವೀರ್ 48 ಎಸೆತಗಳಲ್ಲಿ ಒಂಬತ್ತು ಬೌಂಡರಿ ಸಹಿತ 47 ರನ್ ಬಾರಿಸಿ ಔಟಾದರು.

ಯಶ್​ವರ್ಧನ್ ಶತಕ

ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಅನ್ವಯ್ ದ್ರಾವಿಡ್ ಕೂಡ ದೊಡ್ಡ ಇನ್ನಿಂಗ್ಸ್ ಆಡುವ ನಿರೀಕ್ಷೆಯಿತ್ತು, ಆದರೆ ಅವರು ಎಂಟು ಎಸೆತಗಳಲ್ಲಿ ಕೇವಲ ಒಂಬತ್ತು ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಸತತ ಎರಡನೇ ಪಂದ್ಯದಲ್ಲೂ ಭಾರತ ಪರ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಯಶ್​ವರ್ಧನ್ 100 ಎಸೆತಗಳಲ್ಲಿ 15 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 122 ರನ್ ಗಳಿಸಿದರು. ವಿನೀತ್ ಕೂಡ ಅದ್ಭುತ ಬ್ಯಾಟಿಂಗ್ ಮಾಡಿ 92 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಆರು ಸಿಕ್ಸರ್‌ಗಳ ಸಹಿತ 87 ರನ್ ಗಳಿಸಿದರು. ಅಂತಿಮವಾಗಿ ಭಾರತ 50 ಓವರ್‌ಗಳಲ್ಲಿ ಏಳು ವಿಕೆಟ್‌ಗಳ ನಷ್ಟಕ್ಕೆ 341 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು.

ಯೂತ್ ಏಕದಿನ ಸರಣಿ; ಆಸ್ಟ್ರೇಲಿಯಾ ತಂಡವನ್ನು ಮಣಿಸಿದ ಭಾರತ ಯುವ ಪಡೆ

238 ರನ್​ಗಳಿಗೆ ಆಲೌಟ್

ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡಕ್ಕೂ ಕಳಪೆ ಆರಂಭ ಸಿಕ್ಕಿತು. 29 ರನ್​​ಗಳಾಗುವಷ್ಟರಲ್ಲಿ ತಂಡದ ಮೊದಲೆರಡು ವಿಕೆಟ್​ಗಳು ಪತನಗೊಂಡವು. ಆದಾಗ್ಯೂ ಆ ಬಳಿಕ ಜೊತೆಯಾದ ಮ್ಯಾಥ್ಯೂ ಲಾಫ್ ಹಾಗೂ ನಾಯಕ ಜ್ಯಾಕ್ ಸ್ಜೋಸ್ನೆಕ್ ತಂಡವನ್ನು 70 ರನ್​ಗಳ ಗಡಿ ದಾಟಿಸಿದರು. ಮ್ಯಾಥ್ಯೂ ಲಾಫ್ 42 ರನ್ ಬಾರಿಸಿ ಔಟಾದರೆ, ನಾಯಕನ ಇನ್ನಿಂಗ್ಸ್ 81 ರನ್​​ಗಳಿಗೆ ಅಂತ್ಯವಾಯಿತು. ಬ್ಲೇಕ್ ಕ್ಯಾಟಲ್ 44 ರನ್​ಗಳ ಇನ್ನಿಂಗ್ಸ್ ಆಡಿದರೆ, ಝೆಡ್ ಹೊಲಿಕ್ 33 ರನ್​ಗಳ ಕಾಣಿಕೆ ನೀಡಿದರು. ಉಳಿದವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬರಲಿಲ್ಲ. ಅಂತಿಮವಾಗಿ ಆಸ್ಟ್ರೇಲಿಯಾ 41.1 ಓವರ್​ಗಳಲ್ಲಿ 238 ರನ್​ಗಳಿಗೆ ಆಲೌಟ್ ಆಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:34 pm, Mon, 21 September 26

Loading...
Unable to load recommendations.
Follow Us