IND U19 vs ENG U19: ರಾಹುಲ್ ನಂತರ ಇಂಗ್ಲೆಂಡ್ನಲ್ಲಿ ಶತಕ ಸಿಡಿಸಿದ ಆಯುಷ್ ಮ್ಹಾತ್ರೆ
Ayush Mhatre Scores Century in Youth Test vs England: ಬೆಕೆನ್‌ಹ್ಯಾಮ್‌ನಲ್ಲಿ ನಡೆದ ಇಂಗ್ಲೆಂಡ್ ಅಂಡರ್-19 ಮತ್ತು ಭಾರತ ಅಂಡರ್-19 ತಂಡಗಳ ನಡುವಿನ ಯೂತ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಆಯುಷ್ ಮ್ಹಾತ್ರೆ ಅದ್ಭುತ ಶತಕ (102 ರನ್) ಬಾರಿಸಿದ್ದಾರೆ. ಮೊದಲು ಏಕದಿನ ಸರಣಿಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದ ಆಯುಷ್ ಈ ಟೆಸ್ಟ್‌ನಲ್ಲಿ ಅದ್ಭುತವಾಗಿ ಆಡಿದರು. ಇದಕ್ಕೆ ವ್ಯತಿರಿಕ್ತವಾಗಿ, ವೈಭವ್ ಸೂರ್ಯವಂಶಿ ಕೇವಲ 14 ರನ್ ಗಳಿಸಿ ಔಟಾದರು.

ಬೆಕೆನ್‌ಹ್ಯಾಮ್‌ನ ಕೆಂಟ್ ಕೌಂಟಿ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ಅಂಡರ್-19 ಮತ್ತು ಇಂಡಿಯಾ ಅಂಡರ್-19 (IND U19 vs ENG U19) ತಂಡಗಳ ನಡುವಿನ ಎರಡು ಪಂದ್ಯಗಳ ಯೂತ್ ಟೆಸ್ಟ್ ಸರಣಿ (Youth Test Series) ಆರಂಭವಾಗಿದೆ . ಈ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ , ಭಾರತ ತಂಡದ ನಾಯಕ ಆಯುಷ್ ಮ್ಹಾತ್ರೆ (Ayush Mhatre) ಅದ್ಭುತ ಪ್ರದರ್ಶನ ನೀಡಿ ಶತಕ ಬಾರಿಸಿದ್ದಾರೆ. ಎಂದಿನಂತೆ ತಂಡದ ಪರ ವೈಭವ್ ಸೂರ್ಯವಂಶಿ ಹಾಗೂ ಆಯುಷ್ ಮ್ಹಾತ್ರೆ ಇನ್ನಿಂಗ್ಸ್ ಆರಂಭಿಸಿದರು. ಆದರೆ ವೈಭವ್ ಸೂರ್ಯವಂಶಿಗೆ ಈ ಇನ್ನಿಂಗ್ಸ್‌ನಲ್ಲಿ ವಿಶೇಷವಾದದ್ದೇನೂ ಮಾಡಲು ಸಾಧ್ಯವಾಗದೆ ಬೇಗನೆ ಔಟಾದರು. ಆದರೆ ಆಯುಷ್ ಮ್ಹಾತ್ರೆ ತಂಡದ ಇನ್ನಿಂಗ್ಸ್ ನಿಭಾಯಿಸಿದಲ್ಲದೆ ಸ್ಮರಣೀಯ ಇನ್ನಿಂಗ್ಸ್ ಆಡಿದರು.
ಆಯುಷ್ ಮ್ಹಾತ್ರೆ ಶತಕ
ಮೊದಲ ಯೂತ್ ಟೆಸ್ಟ್ ಪಂದ್ಯದ ಮೊದಲ ದಿನದಂದು , ಭಾರತ ಅಂಡರ್-19 ತಂಡ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿತು . ನಾಯಕ ಆಯುಷ್ ಮ್ಹಾತ್ರೆ ಜವಾಬ್ದಾರಿಯುವ ಬ್ಯಾಟಿಂಗ್ ಮಾಡಿ ಅದ್ಭುತ ಶತಕ ಗಳಿಸಿದರು. 107 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದ ಆಯುಷ್ ಶತಕವನ್ನು ಪೂರ್ಣಗೊಳಿಸಿದ ಬೆನ್ನಲ್ಲೇ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಆಯುಷ್ ತಮ್ಮ ಇನ್ನಿಂಗ್ಸ್‌ನಲ್ಲಿ 115 ಎಸೆತಗಳನ್ನು ಎದುರಿಸಿ 14 ಬೌಂಡರಿಗಳು ಮತ್ತು 2 ಸಿಕ್ಸರ್‌ಗಳ ಸಹಿತ 102 ರನ್ ಬಾರಿಸಿ ಔಟಾದರು.
ವಾಸ್ತವವಾಗಿ ಇಂಗ್ಲೆಂಡ್ ಪ್ರವಾಸವು ಆಯುಷ್ ಮ್ಹಾತ್ರೆ ಅವರಿಗೆ ಇಲ್ಲಿಯವರೆಗೆ ವಿಶೇಷವಾದದ್ದೇನೂ ಆಗಿರಲಿಲ್ಲ. ಈ ಸರಣಿಗೂ ಮುನ್ನ ನಡೆದಿದ್ದ ಏಕದಿನ ಸರಣಿಯಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದರು . ಏಕದಿನ ಸರಣಿಯಲ್ಲಿ ಒಟ್ಟು 4 ಪಂದ್ಯಗಳನ್ನು ಆಡಿದ್ದ ಆಯುಷ್ ಕೇವಲ 27 ರನ್ ಮಾತ್ರ ಕಲೆಹಾಕಲಷ್ಟೇ ಶಕ್ತರಾಗಿದ್ದರು. ಇಡೀ ಸರಣಿಯಲ್ಲಿ ಅವರ ಗರಿಷ್ಠ ಸ್ಕೋರ್ 21 ರನ್ ಆಗಿತ್ತು. ಅಂದರೆ ಉಳಿದ ಮೂರು ಇನ್ನಿಂಗ್ಸ್‌ಗಳಲ್ಲಿ ಅವರು ಕ್ರಮವಾಗಿ 0 , 5 ಮತ್ತು 1 ರನ್ ಮಾತ್ರ ಬಾರಿಸಿದ್ದರು.
IND vs ENG: 200 ರನ್ ಹೊಡಿತ್ತೀನಿ ಎಂದಿದ್ದ ವೈಭವ್ ಕೊನೆಯ ಪಂದ್ಯದಲ್ಲಿ ಹೊಡೆದಿದ್ದೇಷ್ಟು?
ವೈಭವ್ ವಿಫಲ
ಇದಕ್ಕೂ ಮುನ್ನ ನಡೆದಿದ್ದ ಯೂತ್ ಏಕದಿನ ಸರಣಿಯಲ್ಲಿ ಸಂಚಲನ ಮೂಡಿಸಿದ್ದ ವೈಭವ್ ಸೂರ್ಯವಂಶಿ, ಈ ಪಂದ್ಯದಲ್ಲಿ ಕೇವಲ 14 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಇದು ಈ ಪ್ರವಾಸದಲ್ಲಿ ಅವರ ಅತ್ಯಂತ ಕಡಿಮೆ ಸ್ಕೋರ್ ಆಗಿದೆ. ಇದಕ್ಕೂ ಮೊದಲು, ಅವರು ಈ ಇಂಗ್ಲೆಂಡ್ ಪ್ರವಾಸದಲ್ಲಿ ಆಡಿದ ಎಲ್ಲಾ 5 ಇನ್ನಿಂಗ್ಸ್‌ಗಳಲ್ಲಿ 30 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದರು . ಆದಾಗ್ಯೂ, ನಾಯಕ ಮ್ಹಾತ್ರೆ ಮತ್ತು ಇತರ ಬ್ಯಾಟ್ಸ್‌ಮನ್‌ಗಳ ಶತಕವು ತಂಡವನ್ನು ಬಲವಾದ ಸ್ಥಾನವನ್ನು ತಲುಪಲು ಸಹಾಯ ಮಾಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
