ಭಾರತ vs ಆಸ್ಟ್ರೇಲಿಯಾ ಪರ್ತ್ ಟೆಸ್ಟ್ ಸಮಯ: 3 ಸೆಷನ್, 2 ಬ್ರೇಕ್
Border Gavaskar Trophy 2024: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯು ನವೆಂಬರ್ 22 ರಿಂದ ಶುರುವಾಗಲಿದೆ. ಪರ್ತ್ನಲ್ಲಿ ನಡೆಯಲಿರುವ ಮೊದಲ ಪಂದ್ಯಕ್ಕೆ ರೋಹಿತ್ ಶರ್ಮಾ ಅಲಭ್ಯರಾಗಿದ್ದು, ಹೀಗಾಗಿ ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಹುನಿರೀಕ್ಷಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯು ನಾಳೆಯಿಂದ (ನ.22) ಶುರುವಾಗಲಿದೆ. ಪರ್ತ್ನ ಒಪ್ಟಸ್ ಸ್ಟೇಡಿಯಂನಲ್ಲಿ ಜರುಗಲಿರುವ ಈ ಪಂದ್ಯದ ಸೆಷನ್ ಟೈಮಿಂಗ್ಸ್ ಬಿಡುಗಡೆ ಮಾಡಲಾಗಿದ್ದು, ಅದರಂತೆ ಪಂದ್ಯವು ಭಾರತೀಯ ಕಾಲಮಾನ ಬೆಳಿಗ್ಗೆ 7.50 AM ರಿಂದ ಶುರುವಾಗಲಿದೆ.
- 7.50 AM ರಿಂದ 9.50 AM ರವರೆಗೆ ಮೊದಲ ಸೆಷನ್ ನಡೆಯಲಿದೆ.
- 9.50 AM ರಿಂದ 10.30 AM ರವರೆಗೆ ಮಧ್ಯಾಹ್ನದ ಭೋಜನಾ ಬ್ರೇಕ್ ನೀಡಲಾಗಿದೆ.
- 10.30 AM ರಿಂದ 12.30 PM ರವರೆಗೆ ದ್ವಿತೀಯ ಸೆಷನ್ ನಡೆಯಲಿದೆ.
- 12.30 PM ರಿಂದ 12.50 PM ರವರೆಗೆ ಟೀ ಬ್ರೇಕ್ ನೀಡಲಾಗಿದೆ.
- 12.50 PM ರಿಂದ 2.50 PM ರವರೆಗೆ ಮೂರನೇ ಸೆಷನ್ ನಡೆಯಲಿದೆ.
ಇದು ಮೊದಲ ಟೆಸ್ಟ್ ಪಂದ್ಯದ ಸೆಷನ್ ಸಮಯ ಮಾತ್ರ. ದ್ವಿತೀಯ ಟೆಸ್ಟ್ ಪಂದ್ಯವು ಅಡಿಲೇಡ್ನಲ್ಲಿ ನಡೆಯಲಿದ್ದು, ಈ ಪಂದ್ಯವು ಹೊನಲು ಬೆಳಕಿನಲ್ಲಿ ಜರುಗಲಿದೆ. ಅದರಂತೆ ಈ ಮ್ಯಾಚ್ನ ಆರಂಭವು ಭಾರತೀಯ ಕಾಲಮಾನ ಬೆಳಿಗ್ಗೆ 9.30 AM ರಿಂದ ಶುರುವಾಗಲಿದೆ. ಈ ಪಂದ್ಯಗಳಿಗಾಗಿ ಉಭಯ ತಂಡಗಳು ಈ ಕೆಳಗಿನಂತಿವೆ…
ಆಸ್ಟ್ರೇಲಿಯಾ ಟೆಸ್ಟ್ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಟ್ರಾವಿಸ್ ಹೆಡ್, ಉಸ್ಮಾನ್ ಖ್ವಾಜಾ, ನಾಥನ್ ಮೆಕ್‌ಸ್ವೀನಿ, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಝಲ್‌ವುಡ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್.
ಭಾರತ ಮತ್ತು ಆಸ್ಟ್ರೇಲಿಯಾ ಟೆಸ್ಟ್ ಸರಣಿ ವೇಳಾಪಟ್ಟಿ:
ತಂಡಗಳು | ದಿನಾಂಕ | ಸಮಯ | ಸ್ಥಳ |
1ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ | ಶುಕ್ರವಾರ, 22 ನವೆಂಬರ್ 2024 | 7:50 AM | ಪರ್ತ್ |
2ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ (D/N) | ಶುಕ್ರವಾರ, 6 ಡಿಸೆಂಬರ್ 2024 | 9:30 AM | ಅಡಿಲೇಡ್ |
3ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ | ಶನಿವಾರ, 14 ಡಿಸೆಂಬರ್ 2024 | 5:50 AM | ಬ್ರಿಸ್ಬೇನ್ |
4ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ | ಗುರುವಾರ, 26 ಡಿಸೆಂಬರ್ 2024 | 5 AM | ಮೆಲ್ಬೋರ್ನ್ |
5ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ | ಶುಕ್ರವಾರ, 3 ಜನವರಿ 2025 | 5 AM | ಸಿಡ್ನಿ |
Published On - 9:37 am, Thu, 21 November 24