IND vs AUS: ಪಿಚ್ನಲ್ಲಿ ಹುಲ್ಲು… ಮೊದಲ ಪಂದ್ಯದಲ್ಲಿ ಭರ್ಜರಿ ಪೈಪೋಟಿ ಖಚಿತ
India vs Australia 1st Test: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮ್ಯಾಚ್ ಪರ್ತ್ನಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಹಸಿರು ಹುಲ್ಲಿನ ಮೇಲ್ಮೈ ಹೊಂದಿರುವ ಪಿಚ್ ಅನ್ನು ಸಿದ್ಧಪಡಿಸಲಾಗಿದ್ದು, ಹೀಗಾಗಿ ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪೈಪೋಟಿಯನ್ನು ಎದುರು ನೋಡಬಹುದು.
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯವು ನವೆಂಬರ್ 22 ರಿಂದ ಶುರುವಾಗಲಿದೆ. ಪರ್ತ್ನ ಒಪ್ಟಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದ ಪಿಚ್ ಕೂಡ ಅನಾವರಣಗೊಂಡಿದೆ. ಈ ಪಿಚ್ನ ಮೇಲ್ಮೈಯು ಹುಲ್ಲಿನಿಂದ ಕೂಡಿದ್ದು, ಹೀಗಾಗಿ ಮೊದಲ ಪಂದ್ಯದಲ್ಲೇ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.
ಏಕೆಂದರೆ ಹುಲ್ಲಿನ ಮೇಲ್ಮೈ ಹೊಂದಿರುವ ಪಿಚ್ ಬೌಲರ್ಗಳಿಗೆ ಸಹಕಾರಿ. ಆದರೆ ಆಸ್ಟ್ರೇಲಿಯಾದಲ್ಲಿ ಕೂಕಬುರಾ ಚೆಂಡಿನಲ್ಲಿ ಟೆಸ್ಟ್ ಪಂದ್ಯಗಳನ್ನಾಡಲಾಗುತ್ತದೆ. ಈ ಚೆಂಡು ಹಳೆಯದಾಗುತ್ತಿದ್ದಂತೆ ಅಥವಾ ಚೆಂಡಿನ ಮೇಲ್ಮೈ ಸವೆಯಲಾರಂಭಿಸಿದರೆ ಬ್ಯಾಟಿಂಗ್ ಕೂಡ ಚೆನ್ನಾಗಿ ಮಾಡಬಹುದು. ಹೀಗಾಗಿಯೇ ಪರ್ತ್ ಟೆಸ್ಟ್ನಲ್ಲಿ ಬೌಲರ್ ಮತ್ತು ಬ್ಯಾಟರ್ಗಳಿಂದ ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಬಹುದು. ಇನ್ನು ಗ್ರಾಸ್ ಪಿಚ್ನ ಬಗ್ಗೆ ಹೇಳುವುದಾದರೆ…
- ♦ಸ್ಥಿರ ಮೇಲ್ಮೈ: ಗ್ರಾಸ್ ಪಿಚ್ ಅಥವಾ ಹಸಿರು ಹುಲ್ಲಿನ ಪಿಚ್ ಸ್ಥಿರತೆಯನ್ನು ಒದಗಿಸಲಿದೆ. ಅಂದರೆ ಪಂದ್ಯದುದ್ದಕ್ಕೂ ಸ್ಥಿರವಾದ ಆಟದ ಮೇಲ್ಮೈಯನ್ನು ಕಾಪಾಡಿಕೊಳ್ಳಲು ಇದು ನಿರ್ಣಾಯಕವಾಗಿದೆ.
- ♦ಬೌಲರ್ಗಳಿಗೆ ಸ್ವರ್ಗ: ಈ ಪಿಚ್ ವೇಗಿಗಳಿಗೆ ಉತ್ತಮ. ಅದರಲ್ಲೂ ವೇಗದ ಬೌಲರ್ಗಳು ಉತ್ತಮ ಬೌನ್ಸ್ ಮತ್ತು ಸೀಮ್ ಚಲನೆಯನ್ನು ಪಡೆಯಲಿದ್ದಾರೆ. ಹಾಗೆಯೇ ಹುಲ್ಲು ಒಣಗಿದ ಬಳಿಕ ಪಿಚ್ ಸ್ಪಿನ್ನರ್‌ಗಳಿಗೆ ಸಹಕಾರಿಯಾಗಲಿದೆ.
- ♦ತೇವಾಂಶ ಸ್ಥಿರ: ತೇವಾಂಶವನ್ನು ಉಳಿಸಿಕೊಳ್ಳಲು ಹುಲ್ಲಿನ ಪಿಚ್ ಸಹಾಯಕ. ಇದರಿಂದ ಪಿಚ್ ಬೇಗನೆ ಹಾಳಾಗುವುದಿಲ್ಲ. ಹಾಗೆಯೇ ಸಾಕಷ್ಟು ತೇವಾಂಶವನ್ನು ಹೊಂದಿರುವ ಕಾರಣ ಈ ಪಿಚ್ನಲ್ಲಿ ಸ್ಥಿರವಾದ ಆಟವನ್ನು ನಿರೀಕ್ಷಿಸಬಹುದು.
ಇದನ್ನೂ ಓದಿ: IPL 2025: ಎಲ್ಲಾ ತಂಡಗಳ ಟಾರ್ಗೆಟ್ ಜೋಸ್ ಬಟ್ಲರ್..!
ಒಟ್ಟಾರೆಯಾಗಿ, ಗ್ರಾಸ್ ಪಿಚ್ ನ್ಯಾಯಯುತ ಆಟವನ್ನು ಖಚಿತಪಡಿಸಿಕೊಳ್ಳಲು ಮತ್ತು ಆಟದ ಗುಣಮಟ್ಟವನ್ನು ಕಾಪಾಡಿಕೊಳ್ಳಲು ನಿರ್ಣಾಯಕವಾಗಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಗ್ರೌಂಡ್‌ಕೀಪರ್‌ಗಳು ಆಗಾಗ್ಗೆ ಹುಲ್ಲಿನ ಮೇಲ್ವಿಚಾರಣೆಯನ್ನು ಸಹ ಮಾಡಲಿದ್ದಾರೆ. ಹೀಗಾಗಿಯೇ ಪರ್ತ್ನಲ್ಲಿ ಉಭಯ ತಂಡಗಳಿಂದ ಅತ್ಯುತ್ತಮ ಟೆಸ್ಟ್ ಪಂದ್ಯವನ್ನು ನಿರೀಕ್ಷಿಸಬಹುದು.
ಭಾರತ ಮತ್ತು ಆಸ್ಟ್ರೇಲಿಯಾ ಟೆಸ್ಟ್ ಸರಣಿ ವೇಳಾಪಟ್ಟಿ:
ತಂಡಗಳು | ದಿನಾಂಕ | ಸಮಯ | ಸ್ಥಳ |
1ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ | ಶುಕ್ರವಾರ, 22 ನವೆಂಬರ್ 2024 | 7:50 AM | ಪರ್ತ್ |
2ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ (D/N) | ಶುಕ್ರವಾರ, 6 ಡಿಸೆಂಬರ್ 2024 | 9:30 AM | ಅಡಿಲೇಡ್ |
3ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ | ಶನಿವಾರ, 14 ಡಿಸೆಂಬರ್ 2024 | 5:50 AM | ಬ್ರಿಸ್ಬೇನ್ |
4ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ | ಗುರುವಾರ, 26 ಡಿಸೆಂಬರ್ 2024 | 5 AM | ಮೆಲ್ಬೋರ್ನ್ |
5ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ | ಶುಕ್ರವಾರ, 3 ಜನವರಿ 2025 | 5 AM | ಸಿಡ್ನಿ |
Published On - 11:12 am, Wed, 20 November 24