IND vs AUS Highlights, 2nd T20I: ಆಸ್ಟ್ರೇಲಿಯಾಕ್ಕೆ 4 ವಿಕೆಟ್‌ಗಳ ಸುಲಭ ಜಯ
India vs Australia 2nd T20I Highlights In Kannada: ಮೆಲ್ಬೋರ್ನ್ನಲ್ಲಿ ನಡೆದ 2ನೇ ಟಿ20ಯಲ್ಲಿ ಭಾರತ ಹೀನಾಯ ಸೋಲು ಅನುಭವಿಸಿದೆ. ಆಸ್ಟ್ರೇಲಿಯಾ 4 ವಿಕೆಟ್‌ಗಳ ಸುಲಭ ಜಯ ಸಾಧಿಸಿತು. ಆಸೀಸ್ ಪರ ಮಿಚೆಲ್ ಮಾರ್ಷ್ 46 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರೆ, ಹ್ಯಾಜಲ್‌ವುಡ್ 3 ವಿಕೆಟ್‌ಗಳನ್ನು ಪಡೆದರು. ಆಸ್ಟ್ರೇಲಿಯಾ ಈ ಗೆಲುವಿನೊಂದಿಗೆ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಗೆಲುವಿನ ಆರಂಭವನ್ನು ಪಡೆಯುವಲ್ಲಿ ವಿಫಲವಾಗಿದೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ, ಭಾರತ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿ ಸರಣಿಯ ಮೊದಲ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ, ಆಸ್ಟ್ರೇಲಿಯಾಕ್ಕೆ 125 ರನ್‌ಗಳ ಗುರಿಯನ್ನು ನೀಡಿತ್ತು. ಆಸ್ಟ್ರೇಲಿಯಾ 13.2 ಓವರ್‌ಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು ಈ ಗುರಿಯನ್ನು ತಲುಪಿತು. ಇದರೊಂದಿಗೆ ಆಸ್ಟ್ರೇಲಿಯಾ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಎರಡೂ ತಂಡಗಳ ನಡುವಿನ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಆದ್ದರಿಂದ, ಸರಣಿಯನ್ನು 4 ಪಂದ್ಯಗಳಲ್ಲಿ ನಿರ್ಧರಿಸಲಾಗುತ್ತದೆ.
LIVE Cricket Score & Updates
-
IND vs AUS Live Score: ಆಸ್ಟ್ರೇಲಿಯಾಕ್ಕೆ ಸುಲಭ ಜಯ
ಎರಡನೇ ಟಿ20ನಲ್ಲಿ ಆಸ್ಟ್ರೇಲಿಯಾ ಭಾರತವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿತು. ಆಸ್ಟ್ರೇಲಿಯಾ 13.2 ಓವರ್‌ಗಳಲ್ಲಿ ಆರು ವಿಕೆಟ್‌ಗಳ ನಷ್ಟಕ್ಕೆ 126 ರನ್‌ಗಳ ಗುರಿಯನ್ನು ತಲುಪಿತು. ಈ ಗೆಲುವಿನೊಂದಿಗೆ, ಕಾಂಗರೂಗಳು ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದರು. ಮೊದಲ ಟಿ20ಐ ಮಳೆಯಿಂದಾಗಿ ರದ್ದಾಯಿತು. ಮೂರನೇ ಟಿ20ಐ ಈಗ ನವೆಂಬರ್ 2 ರಂದು ನಡೆಯಲಿದೆ.
-
IND vs AUS Live Score: 100 ರನ್‌ಗಳ ಗಡಿ ದಾಟಿದ ಆಸ್ಟ್ರೇಲಿಯಾ
ಆಸ್ಟ್ರೇಲಿಯಾ 100 ರನ್‌ಗಳ ಗಡಿ ದಾಟಿದೆ. ಕುಲ್ದೀಪ್ ಯಾದವ್ ಅವರ ಓವರ್‌ನಲ್ಲಿ 12 ರನ್‌ಗಳು ಬಂದವು. ಹರ್ಷಿತ್ ರಾಣಾ ಕೂಡ ಕ್ಯಾಚ್ ಕೈಬಿಟ್ಟರು.
-
-
IND vs AUS Live Score: ಮಾರ್ಷ್ ಔಟ್
ಆಸ್ಟ್ರೇಲಿಯಾ ನಾಯಕ ಮಿಚೆಲ್ ಮಾರ್ಷ್ 46 ರನ್ ಗಳಿಸಿ ಔಟಾದರು. ಕುಲ್ದೀಪ್ ಯಾದವ್ ವಿಕೆಟ್ ಪಡೆದರು. ಆದರೆ ಔಟಾಗುವ ಮೊದಲು, ಮಾರ್ಷ್ ಕುಲ್ದೀಪ್ ಯಾದವ್ ಅವರ ಐದು ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಎರಡು ಬೌಂಡರಿಗಳನ್ನು ಬಾರಿಸಿದರು. ಆಸ್ಟ್ರೇಲಿಯಾದ ಸ್ಕೋರ್ ಎಂಟು ಓವರ್‌ಗಳಲ್ಲಿ 87 ರನ್ ಆಗಿದೆ.
-
IND vs AUS Live Score: ಹೆಡ್ ಔಟ್
ಭಾರತಕ್ಕೆ ಮೊದಲ ಬ್ರೇಕ್‌ಥ್ರೂ ಒದಗಿಸಿದವರು ವರುಣ್ ಚಕ್ರವರ್ತಿ. ಮೂರನೇ ಎಸೆತದಲ್ಲಿ ಬೃಹತ್ ಸಿಕ್ಸರ್ ಬಾರಿಸಲು ಪ್ರಯತ್ನಿಸಿದ ಹೆಡ್, ತಿಲಕ್ ವರ್ಮಾಗೆ ಕ್ಯಾಚ್ ನೀಡಿದರು. ಹೆಡ್ 15 ಎಸೆತಗಳಲ್ಲಿ 28 ರನ್ ಗಳಿಸಿ ಔಟಾದರು.
-
IND vs AUS Live Score: ಬುಮ್ರಾ ಓವರ್‌ನಲ್ಲಿ 18 ರನ್
ಜಸ್ಪ್ರೀತ್ ಬುಮ್ರಾ ದುಬಾರಿ ಓವರ್ ಎಸೆದರು. ಅವರ ಓವರ್‌ನಲ್ಲಿ 18 ರನ್ ಬಂದವು. ಆಸ್ಟ್ರೇಲಿಯಾದ ಸ್ಕೋರ್ ಮೂರು ಓವರ್‌ಗಳಲ್ಲಿ 29 ರನ್ ಆಗಿದೆ.
-
-
IND vs AUS Live Score: ಭಾರತ ಆಲೌಟ್
ಭಾರತದ ಇನ್ನಿಂಗ್ಸ್ 125 ರನ್‌ಗಳಿಗೆ ಅಂತ್ಯಗೊಂಡಿದೆ. ಬುಮ್ರಾ ಬ್ಯಾಟಿಂಗ್‌ಗೆ ಬಂದ ಕೂಡಲೇ ರನೌಟ್ ಆದರು. ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಪ್ರದರ್ಶನ ಅತ್ಯಂತ ಕಳಪೆಯಾಗಿತ್ತು. ತಂಡವು ಇನ್ನು ಒಂಬತ್ತು ಎಸೆತಗಳು ಬಾಕಿ ಇರುವಾಗಲೇ ಆಲೌಟ್ ಆಯಿತು. ಈ ಪಂದ್ಯವನ್ನು ಗೆಲ್ಲಲು ಭಾರತ ಅಸಾಧಾರಣ ಬೌಲಿಂಗ್ ಮಾಡಬೇಕಾಗುತ್ತದೆ.
-
IND vs AUS Live Score: ಅಭಿಷೇಕ್ ಔಟ್
ಅಭಿಷೇಕ್ ಶರ್ಮಾ ನಾಥನ್ ಎಲ್ಲಿಸ್ ಅವರ ಅದ್ಭುತ ಯಾರ್ಕರ್‌ಗೆ ವಿಕೆಟ್ ಕಳೆದುಕೊಂಡರು. ಅವರು 37 ಎಸೆತಗಳಲ್ಲಿ 68 ರನ್ ಗಳಿಸಿದರು. ಅವರು 20 ಓವರ್‌ಗಳ ಕಾಲ ಆಡಿದ್ದರೆ, ಭಾರತಕ್ಕೆ ಇನ್ನೂ ಕೆಲವು ರನ್‌ಗಳು ಸಿಗುತ್ತಿದ್ದವು. ಆದರೂ, ಗಮನಾರ್ಹ ಪ್ರದರ್ಶನ.
-
IND vs AUS Live Score: ಅಭಿಷೇಕ್ ಅರ್ಧಶತಕ
ಅಭಿಷೇಕ್ ಶರ್ಮಾ 23 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ವಿಶ್ವದ ನಂ. 1 ಟಿ20 ಬ್ಯಾಟ್ಸ್‌ಮನ್ ಏಷ್ಯಾದಲ್ಲಿ ಮಾತ್ರವಲ್ಲದೆ ಆಸ್ಟ್ರೇಲಿಯಾದ ಪರಿಸ್ಥಿತಿಗಳಲ್ಲಿಯೂ ಸಹ ತಾನು ಅಷ್ಟೇ ಉತ್ತಮವಾಗಿ ಬ್ಯಾಟಿಂಗ್ ಮಾಡಬಲ್ಲೆ ಎಂಬುದನ್ನು ಸಾಭೀತುಪಡಿಸಿದ್ದಾರೆ.
-
IND vs AUS Live Score: ಅಭಿಷೇಕ್ ಅದ್ಭುತ ಬ್ಯಾಟಿಂಗ್
ಮಿಚೆಲ್ ಓವನ್ ಓವರ್ನ ಕೊನೆಯ ಎಸೆತದಲ್ಲಿ ಅಭಿಷೇಕ್ ಶರ್ಮಾ ಬೌಂಡರಿ ಬಾರಿಸಿದರು.ಅಭಿ ಈಗಾಗಲೇ 19 ಎಸೆತಗಳಲ್ಲಿ 46 ರನ್ ಗಳಿಸಿದ್ದಾರೆ.
-
IND vs AUS Live Score: ಅಕ್ಷರ್ ರನೌಟ್
ಅಕ್ಷರ್ ಪಟೇಲ್ 7 ರನ್ ಗಳಿಸಿ ರನೌಟ್ ಆದರು. ಭಾರತಕ್ಕೆ ಐದನೇ ಹೊಡೆತ.
-
IND vs AUS Live Score: ಪವರ್‌ಪ್ಲೇ ಅಂತ್ಯ
ಪವರ್‌ಪ್ಲೇನಲ್ಲಿ ಭಾರತ 40 ರನ್ ಗಳಿಸಿತು. ನಾಥ್ ಎಲಿಸ್ ಅವರ ಕೊನೆಯ ಎಸೆತದಲ್ಲಿ ಅಭಿಷೇಕ್ ಶರ್ಮಾ ಬೌಂಡರಿ ಹೊಡೆದರು. ಅಭಿಷೇಕ್ ಈಗಾಗಲೇ 11 ಎಸೆತಗಳಲ್ಲಿ 29 ರನ್ ಗಳಿಸಿದ್ದಾರೆ.
-
IND vs AUS Live Score: ಸೂರ್ಯ ಔಟ್
ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಕೂಡ ಔಟಾದರು. ಹ್ಯಾಜಲ್‌ವುಡ್ ಅದ್ಭುತ ಎಸೆತದ ಮೂಲಕ ಅವರನ್ನು ಔಟ್ ಮಾಡಿದರು. ಭಾರತ 32 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿತು.
-
IND vs AUS Live Score: ಸ್ಯಾಮ್ಸನ್ ಔಟ್
ಸಂಜು ಸ್ಯಾಮ್ಸನ್ ಕೂಡ ಕೇವಲ ಎರಡು ರನ್ ಗಳಿಸಿ ನಾಥನ್ ಎಲ್ಲಿಸ್ ಅವರ ಅದ್ಭುತ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು.
-
IND vs AUS Live Score: ಗಿಲ್ ಔಟ್
ಶುಭ್‌ಮನ್ ಗಿಲ್ ಅವರನ್ನು ಔಟ್ ಮಾಡುವ ಮೂಲಕ ಹ್ಯಾಜಲ್‌ವುಡ್ ಭಾರತಕ್ಕೆ ಮೊದಲ ಹೊಡೆತ ನೀಡಿದರು. ಗಿಲ್ 10 ಎಸೆತಗಳಲ್ಲಿ ಕೇವಲ ಐದು ರನ್ ಗಳಿಸಿ ಔಟಾದರು.
-
IND vs AUS Live Score: ಅಭಿಷೇಕ್ ಸಿಕ್ಸರ್
ಅಭಿಷೇಕ್ ಶರ್ಮಾ ಎಂದಿನಂತೆ ವೇಗವಾಗಿ ಆಟ ಆರಂಭಿಸಿದರು. ಅವರು ತಮ್ಮ ಎರಡನೇ ಎಸೆತದಲ್ಲಿ ಬಾರ್ಟ್ಲೆಟ್ ಬೌಲಿಂಗ್‌ನಲ್ಲಿ ಬೌಂಡರಿ ಮತ್ತು ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಎರಡನೇ ಓವರ್‌ನಿಂದ 17 ರನ್‌ಗಳು ಬಂದವು.
-
IND vs AUS Live Score: ಭಾರತ ತಂಡ
ಅಭಿಷೇಕ್ ಶರ್ಮಾ, ಶುಭ್‌ಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ
-
IND vs AUS Live Score: ಆಸ್ಟ್ರೇಲಿಯಾ ತಂಡ
ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್ (ನಾಯಕ), ಜೋಶ್ ಇಂಗ್ಲಿಸ್, ಟಿಮ್ ಡೇವಿಡ್, ಮಿಚೆಲ್ ಓವನ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ಶಾರ್ಟ್, ಕ್ಸೇವಿಯರ್ ಬಾರ್ಟ್ಲೆಟ್, ನಾಥನ್ ಎಲ್ಲಿಸ್, ಮ್ಯಾಟ್ ಕುನ್ಹೆಮನ್, ಜೋಶ್ ಹ್ಯಾಜಲ್‌ವುಡ್
-
IND vs AUS Live Score: ಟಾಸ್ ಗೆದ್ದ ಆಸ್ಟ್ರೇಲಿಯಾ
ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಟಾಸ್ ಸೋತ ನಂತರ, ಸೂರ್ಯಕುಮಾರ್ ಯಾದವ್ ಮೊದಲು ಬ್ಯಾಟಿಂಗ್ ಮಾಡಲು ಬಯಸುವುದಾಗಿ ಹೇಳಿದರು.
Published On - Oct 31,2025 1:18 PM
