IND vs AUS: ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾಗೆ ಭರ್ಜರಿ ಜಯ

TV9 Web
| Updated By: ಝಾಹಿರ್ ಯೂಸುಫ್

Updated on:Oct 08, 2023 | 10:06 PM

India vs Australia, ICC world Cup 2023: ಈ ಹಂತದಲ್ಲಿ ಜೊತೆಗೂಡಿದ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಅದ್ಭುತ ಜೊತೆಯಾಟವಾಡಿದರು. 4ನೇ ವಿಕೆಟ್​ಗೆ 165 ರನ್ ಪೇರಿಸಿದ ಈ ಜೋಡಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಈ ಹಂತದಲ್ಲಿ 85 ರನ್ ಬಾರಿಸಿದ್ದ ವಿರಾಟ್ ಕೊಹ್ಲಿ ಔಟಾದರು.

IND vs AUS: ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾಗೆ ಭರ್ಜರಿ ಜಯ
IND vs AUS

ಏಕದಿನ ವಿಶ್ವಕಪ್​ನ 5ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ  ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡವು ಟೀಮ್ ಇಂಡಿಯಾ ಸ್ಪಿನ್ ದಾಳಿಗೆ ತತ್ತರಿಸಿತು. ಪರಿಣಾಮ 49.3 ಓವರ್​ಗಳಲ್ಲಿ 199 ರನ್​ಗಳಿಸಿ ಆಸ್ಟ್ರೇಲಿಯಾ ಆಲೌಟ್ ಆಯಿತು. 200 ರನ್​ಗಳ ಸುಲಭ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾಗೆ ಆಸೀಸ್ ವೇಗಿಗಳು ಆರಂಭಿಕ ಆಘಾತ ನೀಡಿದರು. ಆರಂಭಿಕರಾದ ಇಶಾನ್ ಕಿಶನ್ (0) ಹಾಗೂ ರೋಹಿತ್ ಶರ್ಮಾ (0) ಶೂನ್ಯಕ್ಕೆ ಔಟಾದರೆ, ಆ ಬಳಿಕ ಶ್ರೇಯಸ್ ಅಯ್ಯರ್ ಕೂಡ ಸೊನ್ನೆ ಸುತ್ತಿ ನಿರ್ಗಮಿಸಿದರು.

ಈ ಹಂತದಲ್ಲಿ ಜೊತೆಗೂಡಿದ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಅದ್ಭುತ ಜೊತೆಯಾಟವಾಡಿದರು. 4ನೇ ವಿಕೆಟ್​ಗೆ 165 ರನ್ ಪೇರಿಸಿದ ಈ ಜೋಡಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಈ ಹಂತದಲ್ಲಿ 85 ರನ್ ಬಾರಿಸಿದ್ದ ವಿರಾಟ್ ಕೊಹ್ಲಿ ಔಟಾದರು. ಇದಾಗ್ಯೂ ಅಜೇಯ 97 ರನ್ ಬಾರಿಸುವ ಮೂಲಕ ಕೆಎಲ್ ರಾಹುಲ್ ಟೀಮ್ ಇಂಡಿಯಾವನ್ನು 41.2 ಓವರ್​ಗಳಲ್ಲಿ ಗುರಿ ಮುಟ್ಟಿಸಿದರು. ಈ ಮೂಲಕ ಟೀಮ್ ಇಂಡಿಯಾ ಏಕದಿನ ವಿಶ್ವಕಪ್​ನ ಮೊದಲ ಪಂದ್ಯದಲ್ಲೇ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ಆಸ್ಟ್ರೇಲಿಯಾ (ಪ್ಲೇಯಿಂಗ್ XI): ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಕ್ಯಾಮರೋನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಝಲ್‌ವುಡ್, ಆ್ಯಡಂ ಝಂಪಾ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್​ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್.

ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಟೀವ್ ಸ್ಮಿತ್, ಅಲೆಕ್ಸ್ ಕ್ಯಾರಿ, ಜೋಶ್ ಇಂಗ್ಲಿಸ್, ಶಾನ್ ಅಬಾಟ್, ಮಾರ್ನಸ್ ಲಾಬುಶೇನ್, ಕ್ಯಾಮೆರೋನ್ ಗ್ರೀನ್, ಜೋಶ್ ಹ್ಯಾಝಲ್‌ವುಡ್, ಟ್ರಾವಿಸ್ ಹೆಡ್, ಮಿಚ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆ್ಯಡಂ ಝಂಪಾ, ಮಿಚೆಲ್ ಸ್ಟಾರ್ಕ್.

LIVE Cricket Score & Updates

The liveblog has ended.
  • 08 Oct 2023 09:52 PM (IST)

    IND vs AUS ICC World Cup 2023 Live Score: ಟೀಮ್ ಇಂಡಿಯಾ ಭರ್ಜರಿ ಜಯ

    ಆಸ್ಟ್ರೇಲಿಯಾ– 199 (49.3)

    ಭಾರತ– 201/4 (41.2)

    ಟೀಮ್ ಇಂಡಿಯಾಗೆ 6 ವಿಕೆಟ್​ಗಳ ಭರ್ಜರಿ ಜಯ.

    ಭಾರತ ತಂಡದ ಗೆಲುವಿ ರೂವಾರಿಗಳು ಕೆಎಲ್ ರಾಹುಲ್ (97) ಹಾಗೂ ವಿರಾಟ್ ಕೊಹ್ಲಿ (85).

      

  • 08 Oct 2023 09:45 PM (IST)

    IND vs AUS ICC World Cup 2023 Live Score: 40 ಓವರ್​ಗಳು ಮುಕ್ತಾಯ

    ಜೋಶ್ ಹ್ಯಾಝಲ್​ವುಡ್ ಎಸೆದ 40ನೇ ಓವರ್​ನ 5ನೇ ಎಸೆತದಲ್ಲಿ ಲಾಂಗ್ ಆಫ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಹಾರ್ದಿಕ್ ಪಾಂಡ್ಯ.

    40 ಓವರ್​ಗಳ ಮುಕ್ತಾಯದ ವೇಳೆಗೆ 182 ರನ್ ಕಲೆಹಾಕಿದ ಟೀಮ್ ಇಂಡಿಯಾ.

    ಕ್ರೀಸ್​ನಲ್ಲಿ ಕೆಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್.

    IND 182/4 (40)

      

  • 08 Oct 2023 09:34 PM (IST)

    IND vs AUS ICC World Cup 2023 Live Score: ಟೀಮ್ ಇಂಡಿಯಾದ 4ನೇ ವಿಕೆಟ್ ಪತನ

    ಜೋಶ್ ಹ್ಯಾಝಲ್​ವುಡ್ ಎಸೆತದಲ್ಲಿ ಫ್ರಂಟ್ ಫೀಲ್ಡರ್​ ಮಾರ್ನಸ್ ಲಾಬುಶೇನ್​ಗೆ ಕ್ಯಾಚ್ ನೀಡಿದ ವಿರಾಟ್ ಕೊಹ್ಲಿ.

    116 ಎಸೆತಗಳಲ್ಲಿ 85 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ವಿರಾಟ್ ಕೊಹ್ಲಿ.

    ಕ್ರೀಸ್​ನಲ್ಲಿ ಕೆಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್.

    IND 167/4 (37.4)

      

  • 08 Oct 2023 09:24 PM (IST)

    IND vs AUS ICC World Cup 2023 Live Score: ಆಕರ್ಷಕ ಬೌಂಡರಿ

    ಜೋಶ್ ಹ್ಯಾಝಲ್​ವುಡ್ ಎಸೆದ 36ನೇ ಓವರ್​ನ 5ನೇ ಎಸೆತದಲ್ಲಿ ಸ್ಟ್ರೈಟ್ ಡ್ರೈವ್ ಫೋರ್ ಬಾರಿಸಿದ ಕೆಎಲ್ ರಾಹುಲ್.

    ಗೆಲುವಿನತ್ತ ಟೀಮ್ ಇಂಡಿಯಾ. ವಿಕೆಟ್​ಗಾಗಿ ಆಸ್ಟ್ರೇಲಿಯನ್ನರ ಪರದಾಟ.

    ಕ್ರೀಸ್​ನಲ್ಲಿ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.

    IND 159/3 (36)

      

  • 08 Oct 2023 09:18 PM (IST)

    IND vs AUS ICC World Cup 2023 Live Score: 35 ಓವರ್​ಗಳು ಮುಕ್ತಾಯ

    35 ಓವರ್​ಗಳ ಮುಕ್ತಾಯದ ವೇಳೆಗೆ 151 ರನ್ ಕಲೆಹಾಕಿದ ಟೀಮ್ ಇಂಡಿಯಾ.

    ಟೀಮ್ ಇಂಡಿಯಾಗೆ ಗೆಲ್ಲಲು ಇನ್ನು 90 ಎಸೆತಗಳಲ್ಲಿ 49 ರನ್​ಗಳ ಅವಶ್ಯಕತೆ.

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ (80) ಹಾಗೂ ಕೆಎಲ್ ರಾಹುಲ್ (64) ಬ್ಯಾಟಿಂಗ್,

    AUS 199 (49.3)

    IND 151/3 (35)

      

  • 08 Oct 2023 08:55 PM (IST)

    IND vs AUS ICC World Cup 2023 Live Score: 30 ಓವರ್​ಗಳು ಮುಕ್ತಾಯ

    30 ಓವರ್​ಗಳ ಮುಕ್ತಾಯದ ವೇಳೆಗೆ 120 ರನ್ ಕಲೆಹಾಕಿದ ಟೀಮ್ ಇಂಡಿಯಾ.

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ (60) ಹಾಗೂ ಕೆಎಲ್ ರಾಹುಲ್ (55) ಬ್ಯಾಟಿಂಗ್.

    ಟೀಮ್ ಇಂಡಿಯಾಗೆ 120 ಎಸೆತಗಳಲ್ಲಿ 80 ರನ್​ಗಳ ಅವಶ್ಯಕತೆ.

    AUS 199 (49.3)

    IND 120/3 (30)

      ರೋಹಿತ್ ಶರ್ಮಾ (0), ಇಶಾನ್ ಕಿಶನ್ (0) ಹಾಗೂ ಶ್ರೇಯಸ್ ಅಯ್ಯರ್ (0) ಔಟ್.

  • 08 Oct 2023 08:36 PM (IST)

    IND vs AUS ICC World Cup 2023 Live Score: ಅರ್ಧಶತಕ ಪೂರೈಸಿದ ಕೆಎಲ್ ರಾಹುಲ್

    72 ಎಸೆತಗಳಲ್ಲಿ 5 ಫೋರ್​ಗಳೊಂದಿಗೆ ಅರ್ಧಶತಕ ಪೂರೈಸಿದ ಕೆಎಲ್ ರಾಹುಲ್.

    ಟೀಮ್ ಇಂಡಿಯಾ ಉತ್ತಮ ಬ್ಯಾಟಿಂಗ್.

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ (54) ಹಾಗೂ ಕೆಎಲ್ ರಾಹುಲ್ (50) ಬ್ಯಾಟಿಂಗ್.

    IND 106/3 (27.1)

      

  • 08 Oct 2023 08:34 PM (IST)

    IND vs AUS ICC World Cup 2023 Live Score: ಕೊಹ್ಲಿ-ರಾಹುಲ್ ಶತಕದ ಜೊತೆಯಾಟ

    147 ಎಸೆತಗಳಲ್ಲಿ ಶತಕ ಜೊತೆಯಾಟವಾಡಿದ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ.

    ಟೀಮ್ ಇಂಡಿಯಾವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದ ಕೊಹ್ಲಿ-ರಾಹುಲ್ ಜೋಡಿ.

    27 ಓವರ್​ಗಳ ಮುಕ್ತಾಯದ ವೇಳೆಗೆ 105 ರನ್ ಕಲೆಹಾಕಿದ ಟೀಮ್ ಇಂಡಿಯಾ.

    IND 105/3 (27)

      

  • 08 Oct 2023 08:29 PM (IST)

    IND vs AUS ICC World Cup 2023 Live Score: ಕಿಂಗ್ ಕೊಹ್ಲಿ ಅರ್ಧಶತಕ

    ಪ್ಯಾಟ್ ಕಮಿನ್ಸ್ ಎಸೆತದಲ್ಲಿ ಲೆಗ್ ಸೈಡ್​ನತ್ತ ಬಾರಿಸಿ 2 ರನ್ ಓಡಿದ ವಿರಾಟ್ ಕೊಹ್ಲಿ.

    ಈ 2 ರನ್​ಗಳೊಂದಿಗೆ ಅರ್ಧಶತಕ ಪೂರೈಸಿದ ಕಿಂಗ್ ಕೊಹ್ಲಿ. ಇದು ಏಕದಿನ ಕ್ರಿಕೆಟ್​ನಲ್ಲಿ ಕೊಹ್ಲಿಯ 67ನೇ ಅರ್ಧಶತಕ.

    IND 100/3 (25.3)

      

  • 08 Oct 2023 08:26 PM (IST)

    IND vs AUS ICC World Cup 2023 Live Score: 25 ಓವರ್​ಗಳು ಮುಕ್ತಾಯ

    25 ಓವರ್​ಗಳ ಮುಕ್ತಾಯದ ವೇಳೆಗೆ 97 ರನ್ ಕಲೆಹಾಕಿದ ಟೀಮ್ ಇಂಡಿಯಾ.

    ಇನ್ನು ಟೀಮ್ ಇಂಡಿಯಾಗೆ ಗೆಲ್ಲಲು 150 ಎಸೆತಗಳಲ್ಲಿ 103 ರನ್​ಗಳ ಅವಶ್ಯಕತೆ.

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ (48) ಹಾಗೂ ಕೆಎಲ್ ರಾಹುಲ್ (46) ಬ್ಯಾಟಿಂಗ್.

    ಆಸ್ಟ್ರೇಲಿಯಾ- 199 (49.3)

    ಭಾರತ- 97/3 (25)

    ರೋಹಿತ್ ಶರ್ಮಾ (0), ಇಶಾನ್ ಕಿಶನ್ (0) ಹಾಗೂ ಶ್ರೇಯಸ್ ಅಯ್ಯರ್ (0) ಔಟ್.

      

  • 08 Oct 2023 08:04 PM (IST)

    IND vs AUS ICC World Cup 2023 Live Score: 20 ಓವರ್​ಗಳು ಮುಕ್ತಾಯ

    20 ಓವರ್​ಗಳಲ್ಲಿ 80 ರನ್ ಕಲೆಹಾಕಿದ ಟೀಮ್ ಇಂಡಿಯಾ.

    ಇನ್ನು 30 ಓವರ್​ಗಳಲ್ಲಿ 120 ರನ್​ಗಳ ಅವಶ್ಯಕತೆ.

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ (38) ಹಾಗೂ ಕೆಎಲ್ ರಾಹುಲ್ (39) ಬ್ಯಾಟಿಂಗ್.

    IND 80/3 (20)

    ರೋಹಿತ್ ಶರ್ಮಾ (0)

    ಇಶಾನ್ ಕಿಶಾನ್ (0)

    ಶ್ರೇಯಸ್ ಅಯ್ಯರ್ (0) ಔಟ್.

  • 08 Oct 2023 07:54 PM (IST)

    IND vs AUS ICC World Cup 2023 Live Score: ಕೆಎಲ್ ರಾಹುಲ್ ಉತ್ತಮ ಬ್ಯಾಟಿಂಗ್

    ಆ್ಯಡಂ ಝಂಪಾ ಎಸೆದ 18ನೇ ಓವರ್​ನ 3ನೇ ಎಸೆತದಲ್ಲಿ ಆಕರ್ಷಕ ಫೋರ್ ಬಾರಿಸಿದ ಕೆಎಲ್ ರಾಹುಲ್.

    5ನೇ ಮತ್ತು 6ನೇ ಎಸೆತಗಳಲ್ಲೂ ಕೆಎಲ್ ರಾಹುಲ್ ಬ್ಯಾಟ್​ನಿಂದ ಬ್ಯಾಕ್ ಟು ಬ್ಯಾಕ್ ಫೋರ್​ಗಳು.

    ಕ್ರೀಸ್​ನಲ್ಲಿ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.

    IND 69/3 (18)

     

  • 08 Oct 2023 07:38 PM (IST)

    IND vs AUS ICC World Cup 2023 Live Score: ಕೊಹ್ಲಿ ಕಡೆಯಿಂದ ಆಕರ್ಷಕ ಬೌಂಡರಿ

    ಕ್ಯಾಮರೋನ್ ಗ್ರೀನ್ ಎಸೆದ 15ನೇ ಓವರ್​ನ ಕೊನೆಯ ಎರಡು ಎಸೆತಗಳಲ್ಲಿ ಡೀಪ್ ಮಿಡ್​ ವಿಕೆಟ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ವಿರಾಟ್ ಕೊಹ್ಲಿ.

    15 ಓವರ್​ಗಳ ಮುಕ್ತಾಯದ ವೇಳೆಗೆ 49 ರನ್ ಕಲೆಹಾಕಿದ ಟೀಮ್ ಇಂಡಿಯಾ.

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ (31) ಹಾಗೂ ಕೆಎಲ್ ರಾಹುಲ್ (15) ಬ್ಯಾಟಿಂಗ್.

    IND 49/3 (15)

     

  • 08 Oct 2023 07:23 PM (IST)

    IND vs AUS ICC World Cup 2023 Live Score: 11 ಓವರ್ ಮುಕ್ತಾಯ

    ಪ್ಯಾಟ್ ಕಮಿನ್ಸ್ ಎಸೆದ 11ನೇ ಓವರ್​ನ 4ನೇ ಎಸೆತದಲ್ಲಿ ಆಫ್ ಸೈಡ್​ನತ್ತ ಫೋರ್ ಬಾರಿಸಿದ ಕೆಎಲ್ ರಾಹುಲ್.

    11 ಓವರ್​ಗಳ ಮುಕ್ತಾಯದ ವೇಳೆಗೆ 33 ರನ್ ಕಲೆಹಾಕಿದ ಟೀಮ್ ಇಂಡಿಯಾ.

    ಕ್ರೀಸ್​ನಲ್ಲಿ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ.

    IND 33/3 (11)

     

  • 08 Oct 2023 07:11 PM (IST)

    IND vs AUS ICC World Cup 2023 Live Score: ಕ್ಯಾಚ್ ಕೈಚೆಲ್ಲಿದ ಮಾರ್ಷ್

    ಹ್ಯಾಝಲ್​ವುಡ್ ಎಸೆದ 8ನೇ ಓವರ್​ನ 3ನೇ ಎಸೆತದಲ್ಲಿ ಪುಲ್ ಶಾಟ್ ಬಾರಿಸಲು ಯತ್ನಿಸಿದ ವಿರಾಟ್ ಕೊಹ್ಲಿ. ಮಿಡ್ ವಿಕೆಟ್​ನಿಂದ ಓಡಿ ಬಂದು ಕ್ಯಾಚ್ ಕೈ ಬಿಟ್ಟ ಮಿಚೆಲ್ ಮಾರ್ಷ್. ವಿರಾಟ್ ಕೊಹ್ಲಿಗೆ ಮೊದಲ ಜೀವದಾನ.

    IND 21/3 (8)

     

  • 08 Oct 2023 07:01 PM (IST)

    IND vs AUS ICC World Cup 2023 Live Score: ಆಕರ್ಷಕ ಬೌಂಡರಿ ಬಾರಿಸಿದ ಕೊಹ್ಲಿ

    ಜೋಶ್ ಹ್ಯಾಝಲ್​ವುಡ್ ಎಸೆದ 6ನೇ ಓವರ್​ನ 5ನೇ ಎಸೆತದಲ್ಲಿ ಸ್ಟ್ರೈಟ್ ಡ್ರೈವ್ ಫೋರ್ ಬಾರಿಸಿದ ವಿರಾಟ್ ಕೊಹ್ಲಿ.

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್.

    IND 18/3 (6)

     

  • 08 Oct 2023 06:57 PM (IST)

    IND vs AUS ICC World Cup 2023 Live Score: 5 ಓವರ್​ಗಳು ಮುಕ್ತಾಯ

    ಮೊದಲ 5 ಓವರ್​ಗಳಲ್ಲಿ ಕೇವಲ 12 ರನ್ ಕಲೆಹಾಕಿದ ಟೀಮ್ ಇಂಡಿಯಾ.

    ಕ್ರೀಸ್​ನಲ್ಲಿ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.

    IND 12/3 (5)

    ರೋಹಿತ್ ಶರ್ಮಾ (0)

    ಇಶಾನ್ ಕಿಶಾನ್ (0)

    ಶ್ರೇಯಸ್ ಅಯ್ಯರ್ (0) ಔಟ್.

     

  • 08 Oct 2023 06:52 PM (IST)

    IND vs AUS ICC World Cup 2023 Live Score: ಮೊದಲ ಬೌಂಡರಿ

    ಜೋಶ್ ಹ್ಯಾಝಲ್​ವುಡ್ ಎಸೆದ 4ನೇ ಓವರ್​ನ ಕೊನೆಯ ಎಸೆತದಲ್ಲಿ ಆಫ್​ ಸೈಡ್​ನತ್ತ ಬೌಂಡರಿ ಬಾರಿಸಿದ ಕೆಎಲ್ ರಾಹುಲ್.

    ಮೊದಲ 4 ಓವರ್​ಗಳಲ್ಲಿ ಮೂಡಿಬಂದ ಮೊದಲ ಫೋರ್ ಇದು.

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್

    IND 10/3 (4)

     

  • 08 Oct 2023 06:42 PM (IST)

    IND vs AUS ICC World Cup 2023 Live Score: ಟೀಮ್ ಇಂಡಿಯಾದ 3ನೇ ವಿಕೆಟ್ ಪತನ

    ಜೋಶ್ ಹ್ಯಾಝಲ್​ವುಡ್​ ಎಸೆದ 2ನೇ ಓವರ್​ನ ಕೊನೆಯ ಎಸೆತದಲ್ಲಿ ಫ್ರಂಟ್ ಫೀಲ್ಡರ್​ಗೆ ಕ್ಯಾಚ್ ನೀಡಿದ ಡೇವಿಡ್ ವಾರ್ನರ್.

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್

    IND 2/3 (2)

    ರೋಹಿತ್ ಶರ್ಮಾ (0)

    ಇಶಾನ್ ಕಿಶಾನ್ (0)

    ಶ್ರೇಯಸ್ ಅಯ್ಯರ್ (0)

  • 08 Oct 2023 06:39 PM (IST)

    IND vs AUS ICC World Cup 2023 Live Score: ಟೀಮ್ ಇಂಡಿಯಾದ 2ನೇ ವಿಕೆಟ್ ಪತನ

    ಜೋಶ್ ಹ್ಯಾಝಲ್​ವುಡ್ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ಹೊರನಡೆದ ರೋಹಿತ್ ಶರ್ಮಾ.

    6 ಎಸೆತಗಳನ್ನು ಎದುರಿಸಿ ಶೂನ್ಯದೊಂದಿಗೆ ಮರಳಿದ ಹಿಟ್​ಮ್ಯಾನ್.

    ಟೀಮ್ ಇಂಡಿಯಾಗೆ ಆರಂಭಿಕ ಆಘಾತ.

    ಕ್ರೀಸ್​ನಲ್ಲಿ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್.

    IND 2/2 (1.3)

      

  • 08 Oct 2023 06:32 PM (IST)

    IND vs AUS ICC World Cup 2023 Live Score: ಟೀಮ್ ಇಂಡಿಯಾದ ಮೊದಲ ವಿಕೆಟ್ ಪತನ

    ಮಿಚೆಲ್ ಸ್ಟಾರ್ಕ್ ಎಸೆದ ಮೊದಲ ಓವರ್​ನ 4ನೇ ಎಸೆತದಲ್ಲಿ ಸ್ಲಿಪ್​ನಲ್ಲಿದ್ದ ಕ್ಯಾಮರೋನ್ ಗ್ರೀನ್​ಗೆ ಕ್ಯಾಚ್ ನೀಡಿದ ಇಶಾನ್ ಕಿಶನ್.

    ಏಕದಿನ ವಿಶ್ವಕಪ್​ನ ಮೊದಲ ಪಂದ್ಯದಲ್ಲೇ ಗೋಲ್ಡನ್ ಡಕ್​ಗೆ ಔಟಾದ ಇಶಾನ್ ಕಿಶನ್.

    ಕ್ರೀಸ್​ನಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.

    IND 2/1 (0.4)

     

  • 08 Oct 2023 06:00 PM (IST)

    IND vs AUS ICC World Cup 2023 Live Score: ಆಸ್ಟ್ರೇಲಿಯಾ ಆಲೌಟ್

    ಮೊಹಮ್ಮದ್ ಸಿರಾಜ್ ಎಸೆದ ಕೊನೆಯ ಓವರ್​ನ 3ನೇ ಎಸೆತದಲ್ಲಿ ಲೆಗ್​ ಸೈಡ್​ನತ್ತ ಬಾರಿಸಿದ ಮಿಚೆಲ್ ಸ್ಟಾರ್ಕ್​. ಬೌಂಡರಿ ಲೈನ್​ನಿಂದ ಓಡಿ ಬಂದು ಅತ್ಯುತ್ತಮ ಕ್ಯಾಚ್ ಹಿಡಿದ ಶ್ರೇಯಸ್ ಅಯ್ಯರ್. 199 ರನ್​ಗಳಿಗೆ ಆಸ್ಟ್ರೇಲಿಯಾ ತಂಡ ಆಲೌಟ್.

    AUS 199 (49.3)

     ಭಾರತ ತಂಡಕ್ಕೆ 200 ರನ್​ಗಳ ಗುರಿ ನೀಡಿದ ಆಸ್ಟ್ರೇಲಿಯಾ.

  • 08 Oct 2023 05:55 PM (IST)

    IND vs AUS ICC World Cup 2023 Live Score: ಕೊನೆಯ ಓವರ್ ಬಾಕಿ

    49 ಓವರ್ ಮುಕ್ತಾಯದ ವೇಳೆಗೆ 195 ರನ್ ಕಲೆಹಾಕಿದ ಆಸ್ಟ್ರೇಲಿಯಾ.

    ಕ್ರೀಸ್​ನಲ್ಲಿ ಮಿಚೆಲ್ ಸ್ಟಾರ್ಕ್ ಹಾಗೂ ಜೋಶ್ ಹ್ಯಾಝಲ್​ವುಡ್ ಬ್ಯಾಟಿಂಗ್.

    50ನೇ ಓವರ್​ ಬೌಲಿಂಗ್ ಮಾಡುತ್ತಿರುವ ಮೊಹಮ್ಮದ್ ಸಿರಾಜ್.

    AUS 195/9 (49)

     

  • 08 Oct 2023 05:52 PM (IST)

    IND vs AUS ICC World Cup 2023 Live Score: ಆಸ್ಟ್ರೇಲಿಯಾದ 9ನೇ ವಿಕೆಟ್ ಪತನ

    ಹಾರ್ದಿಕ್ ಪಾಂಡ್ಯ ಎಸೆದ 49ನೇ ಓವರ್​ನ 2ನೇ ಎಸೆತದಲ್ಲಿ ವಿರಾಟ್ ಕೊಹ್ಲಿಗೆ ಸುಲಭ ಕ್ಯಾಚ್ ನೀಡಿದ ಆ್ಯಡಂ ಝಂಪಾ (6).

    ಆಸ್ಟ್ರೇಲಿಯಾ ತಂಡದ 9ನೇ ವಿಕೆಟ್ ಪತನ.

    ಕ್ರೀಸ್​ನಲ್ಲಿ ಮಿಚೆಲ್ ಸ್ಟಾರ್ಕ್ ಹಾಗೂ ಜೋಶ್ ಹ್ಯಾಝಲ್​ವುಡ್ ಬ್ಯಾಟಿಂಗ್.

    AUS 189/9 (48.2)

     

  • 08 Oct 2023 05:42 PM (IST)

    IND vs AUS ICC World Cup 2023 Live Score: ಸ್ಟಾರ್ಕ್ ಭರ್ಜರಿ ಸಿಕ್ಸ್

    ಬುಮ್ರಾ ಎಸೆದ 47ನೇ ಓವರ್​ನ 2ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಮಿಚೆಲ್ ಸ್ಟಾರ್ಕ್​.

    ಈ ಸಿಕ್ಸ್​ನೊಂದಿಗೆ ಆಸ್ಟ್ರೇಲಿಯಾ ತಂಡದ ಸ್ಕೋರ್ 183 ಕ್ಕೆ ಏರಿಕೆ.

    AUS 183/8 (47)

     

  • 08 Oct 2023 05:39 PM (IST)

    IND vs AUS ICC World Cup 2023 Live Score: ಸ್ಪಿನ್ನರ್​ಗಳ 10 ಓವರ್​ಗಳು ಮುಕ್ತಾಯ

    10 ಓವರ್​ಗಳಲ್ಲಿ 34 ರನ್ ನೀಡಿ 1 ವಿಕೆಟ್ ಕಬಳಿಸಿದ ಅಶ್ವಿನ್.

    10 ಓವರ್​ಗಳಲ್ಲಿ 42 ರನ್ ನೀಡಿ 2 ವಿಕೆಟ್ ಪಡೆದ ಕುಲ್ದೀಪ್ ಯಾದವ್.

    10 ಓವರ್​ಗಳಲ್ಲಿ ಕೇವಲ 28 ರನ್ ನೀಡಿ 3 ವಿಕೆಟ್ ಕಬಳಿಸಿದ ರವೀಂದ್ರ ಜಡೇಜಾ.

    ಆಸ್ಟ್ರೇಲಿಯಾ- 175/8 (46)

     

  • 08 Oct 2023 05:29 PM (IST)

    IND vs AUS ICC World Cup 2023 Live Score: 44 ಓವರ್​ಗಳು ಮುಕ್ತಾಯ

    44 ಓವರ್​ಗಳ ಮುಕ್ತಾಯದ ವೇಳೆಗೆ 168 ರನ್ ಕಲೆಹಾಕಿದ ಆಸ್ಟ್ರೇಲಿಯಾ.

    8 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಹೊಂದಿರುವ ಟೀಮ್ ಇಂಡಿಯಾ.

    ಕ್ರೀಸ್​ನಲ್ಲಿ ಆ್ಯಡಂ ಝಂಪಾ ಹಾಗೂ ಮಿಚೆಲ್ ಸ್ಟಾರ್ಕ್​ ಬ್ಯಾಟಿಂಗ್.

    AUS 168/8 (44)

      

  • 08 Oct 2023 05:23 PM (IST)

    IND vs AUS ICC World Cup 2023 Live Score: ಆಸ್ಟ್ರೇಲಿಯಾದ 8ನೇ ವಿಕೆಟ್ ಪತನ

    ಜಸ್​ಪ್ರೀತ್ ಬುಮ್ರಾ ಎಸೆದ 43ನೇ ಓವರ್​ನ 2ನೇ ಎಸೆತದಲ್ಲಿ ಸ್ಟ್ರೈಟ್​ ಹಿಟ್ ಹೊಡೆತಕ್ಕೆ ಯತ್ನಿಸಿದ ಪ್ಯಾಟ್ ಕಮಿನ್ಸ್​. ಬೌಂಡರಿ ಲೈನ್​ನಿಂದ ಓಡಿ ಬಂದು ಉತ್ತಮ ಡೈವಿಂಗ್ ಕ್ಯಾಚ್ ಹಿಡಿದ ಶ್ರೇಯಸ್ ಅಯ್ಯರ್. ಆಸ್ಟ್ರೇಲಿಯಾ ತಂಡದ 8ನೇ ವಿಕೆಟ್ ಪತನ.

    AUS 165/8 (42.2)

      

  • 08 Oct 2023 05:14 PM (IST)

    IND vs AUS ICC World Cup 2023 Live Score: ಭರ್ಜರಿ ಸಿಕ್ಸ್ ಸಿಡಿಸಿದ ಕಮಿನ್ಸ್

    ಕುಲ್ದೀಪ್ ಯಾದವ್ ಎಸೆದ 40ನೇ ಓವರ್​ನ 3ನೇ ಎಸೆತದಲ್ಲಿ ಲಾಂಗ್ ಆನ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಪ್ಯಾಟ್ ಕಮಿನ್ಸ್.

    40 ಓವರ್​ಗಳ ಮುಕ್ತಾಯದ ವೇಳೆ 156 ರನ್ ಕಲೆಹಾಕಿದ ಆಸ್ಟ್ರೇಲಿಯಾ.

    ಕ್ರೀಸ್​ನಲ್ಲಿ ಕಮಿನ್ಸ್ ಹಾಗೂ ಸ್ಟಾರ್ಕ್​ ಬ್ಯಾಟಿಂಗ್.

    AUS 156/7 (40)

      

  • 08 Oct 2023 05:00 PM (IST)

    IND vs AUS ICC World Cup 2023 Live Score: ಆಸ್ಟ್ರೇಲಿಯಾದ 7ನೇ ವಿಕೆಟ್ ಪತನ

    ಅಶ್ವಿನ್ ಎಸೆತದಲ್ಲಿ ಸ್ಕ್ವೇರ್​ನತ್ತ ಬಾರಿಸಿದ ಕ್ಯಾಮರೋನ್ ಗ್ರೀನ್…ಚೆಂಡು ನೇರವಾಗಿ ಹಾರ್ದಿಕ್ ಪಾಂಡ್ಯ ಕೈಗೆ…ಔಟ್.

    20 ಎಸೆತಗಳಲ್ಲಿ 8 ರನ್ ಬಾರಿಸಿ ಔಟಾದ ಕ್ಯಾಮರೋನ್ ಗ್ರೀನ್.

    ಕ್ರೀಸ್​ನಲ್ಲಿ ಪ್ಯಾಟ್ ಕಮಿನ್ಸ್ ಹಾಗೂ ಮಿಚೆಲ್ ಸ್ಟಾರ್ಕ್ ಬ್ಯಾಟಿಂಗ್.

    AUS 140/7 (36.2)

      

  • 08 Oct 2023 04:56 PM (IST)

    IND vs AUS ICC World Cup 2023 Live Score: ಟೀಮ್​ ಇಂಡಿಯಾಗೆ 6ನೇ ಯಶಸ್ಸು

    ಕುಲ್ದೀಪ್ ಯಾದವ್ ಎಸೆd 36ನೇ ಓವರ್​ನ 5ನೇ ಎಸೆತದಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಕ್ಲೀನ್ ಬೌಲ್ಡ್​.

    25 ಎಸೆತಗಳಲ್ಲಿ 15 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಮ್ಯಾಕ್ಸ್​ವೆಲ್.

    ಕ್ರೀಸ್​ನಲ್ಲಿ ಕ್ಯಾಮರೋನ್ ಗ್ರೀನ್ ಹಾಗೂ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್.

    AUS 140/6 (35.5)

      

  • 08 Oct 2023 04:52 PM (IST)

    IND vs AUS ICC World Cup 2023 Live Score: 35 ಓವರ್​ಗಳು ಮುಕ್ತಾಯ

    35 ಓವರ್​ಗಳ ಮುಕ್ತಾಯದ ವೇಳೆಗೆ 138 ರನ್​ಗಳನ್ನು ಕಲೆಹಾಕಿದ ಆಸ್ಟ್ರೇಲಿಯಾ.

    5 ವಿಕೆಟ್ ಕಬಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಟೀಮ್ ಇಂಡಿಯಾ.

    ಕ್ರೀಸ್​ನಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ಕ್ಯಾಮರೋನ್ ಗ್ರೀನ್ ಬ್ಯಾಟಿಂಗ್.

    AUS 138/5 (35)

    ಮಿಚೆಲ್ ಮಾರ್ಷ್ (0), ಡೇವಿಡ್ ವಾರ್ನ್​ (41), ಸ್ಟೀವ್ ಸ್ಮಿತ್ (46), ಮಾರ್ನಸ್ ಲಾಬುಶೇನ್ (27), ಅಲೆಕ್ಸ್ ಕ್ಯಾರಿ (0) ಔಟ್.

      

  • 08 Oct 2023 04:38 PM (IST)

    IND vs AUS ICC World Cup 2023 Live Score: ವೆಲ್ಕಂ ಬೌಂಡರಿ

    ಜಡೇಜಾ ಎಸೆದ 32ನೇ ಓವರ್​ನ 5ನೇ ಎಸೆತದಲ್ಲಿ ಆಫ್​ ಸೈಡ್​ನತ್ತ ಫೋರ್ ಬಾರಿಸಿದ ಗ್ಲೆನ್ ಮ್ಯಾಕ್ಸ್​ವೆಲ್.

    32 ಓವರ್​ ಮುಕ್ತಾಯದ ವೇಳೆಗೆ 130 ರನ್ ಕಲೆಹಾಕಿದ ಆಸ್ಟ್ರೇಲಿಯಾ.

    ಕ್ರೀಸ್​ನಲ್ಲಿ ಮ್ಯಾಕ್ಸ್​ವೆಲ್ ಹಾಗೂ ಕ್ಯಾಮರೋನ್ ಗ್ರೀನ್ ಬ್ಯಾಟಿಂಗ್

    AUS 130/5 (32)

      

  • 08 Oct 2023 04:26 PM (IST)

    IND vs AUS ICC World Cup 2023 Live Score: ಜಡೇಜಾ ಸ್ಪಿನ್ ಮೋಡಿ

    ರವೀಂದ್ರ ಜಡೇಜಾ ಎಸೆದ 30ನೇ ಓವರ್​ನ 4ನೇ ಎಸೆತದಲ್ಲಿ ಅಲೆಕ್ಸ್​ ಕ್ಯಾರಿ ಎಲ್​ಬಿಡಬ್ಲ್ಯೂ…ಔಟ್.

    ಟೀಮ್ ಇಂಡಿಯಾಗೆ ಬ್ಯಾಕ್ ಟು ಬ್ಯಾಕ್ ಯಶಸ್ಸು ತಂದುಕೊಟ್ಟ ಜಡೇಜಾ.

    ಕ್ರೀಸ್​ನಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ಕ್ಯಾಮರೋನ್ ಗ್ರೀನ್ ಬ್ಯಾಟಿಂಗ್.

    AUS 119/5 (29.4)

      

  • 08 Oct 2023 04:21 PM (IST)

    IND vs AUS ICC World Cup 2023 Live Score: ಟೀಮ್​ ಇಂಡಿಯಾಗೆ 4ನೇ ಯಶಸ್ಸು

    ರವೀಂದ್ರ ಜಡೇಜಾ 30ನೇ ಓವರ್​ನ 2ನೇ ಎಸೆತದಲ್ಲಿ  ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದ ಮಾರ್ನಸ್ ಲಾಬುಶೇನ್.

    41 ಎಸೆತಗಳಲ್ಲಿ 27 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಮಾರ್ನಸ್ ಲಾಬುಶೇನ್.

    ಕ್ರೀಸ್​ನಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ಅಲೆಕ್ಸ್ ಕ್ಯಾರಿ ಬ್ಯಾಟಿಂಗ್.

    AUS 119/4 (29.2)

      

  • 08 Oct 2023 04:10 PM (IST)

    IND vs AUS ICC World Cup 2023 Live Score: ಟೀಮ್​ ಇಂಡಿಯಾಗೆ 3ನೇ ಯಶಸ್ಸು

    ರವೀಂದ್ರ ಜಡೇಜಾ ಎಸೆತದಲ್ಲಿ ಸ್ಟೀವ್ ಸ್ಮಿತ್ ಕ್ಲೀನ್ ಬೌಲ್ಡ್​.

    71 ಎಸೆತಗಳಲ್ಲಿ 46 ರನ್​ ಬಾರಿಸಿ ವಿಕೆಟ್ ಒಪ್ಪಿಸಿದ ಸ್ಟೀವ್ ಸ್ಮಿತ್.

    ಟೀಮ್ ಇಂಡಿಯಾ ಮೂರನೇ ಯಶಸ್ಸು ತಂದುಕೊಟ್ಟ ಜಡ್ಡು.

    AUS 110/3 (27.1)

     ಮಿಚೆಲ್ ಮಾರ್ಷ್, ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಔಟ್.

  • 08 Oct 2023 03:56 PM (IST)

    IND vs AUS ICC World Cup 2023 Live Score: 25 ಓವರ್​ಗಳು ಮುಕ್ತಾಯ

    25 ಓವರ್​ಗಳ ಮುಕ್ತಾಯದ ವೇಳೆಗೆ 102 ರನ್ ಕಲೆಹಾಕಿದ ಆಸ್ಟ್ರೇಲಿಯಾ.

    ಕ್ರೀಸ್​ನಲ್ಲಿ ಸ್ಟೀವ್ ಸ್ಮಿತ್ (43) ಹಾಗೂ ಮಾರ್ನಸ್ ಲಾಬುಶೇನ್ (17) ಬ್ಯಾಟಿಂಗ್.

    AUS 102/2 (25)

    ಆರಂಭಿಕರಾದ ಮಿಚೆಲ್ ಮಾರ್ಷ್ (0) ಹಾಗೂ ಡೇವಿಡ್ ವಾರ್ನರ್ (41) ಔಟ್.

  • 08 Oct 2023 03:49 PM (IST)

    IND vs AUS ICC World Cup 2023 Live Score: ಟೀಮ್ ಇಂಡಿಯಾ ಉತ್ತಮ ಬೌಲಿಂಗ್

    ಟೀಮ್ ಇಂಡಿಯಾ ಉತ್ತಮ ಬೌಲಿಂಗ್. ಕೊನೆಯ ಮೂರು ಓವರ್​ಗಳಲ್ಲಿ ಕೇವಲ 8 ರನ್ ನೀಡಿದ ಭಾರತೀಯ ಸ್ಪಿನ್ನರ್​ಗಳು.

    ಕ್ರೀಸ್​ನಲ್ಲಿ ಸ್ಟೀವ್ ಸ್ಮಿತ್ ಹಾಗೂ ಮಾರ್ನಸ್ ಲಾಬುಶೇನ್ ಬ್ಯಾಟಿಂಗ್.

    AUS 93/2 (23)

      

  • 08 Oct 2023 03:36 PM (IST)

    IND vs AUS ICC World Cup 2023 Live Score: 20 ಓವರ್​ಗಳು ಮುಕ್ತಾಯ

    20 ಓವರ್​ಗಳಲ್ಲಿ 85 ರನ್ ಕಲೆಹಾಕಿದ ಆಸ್ಟ್ರೇಲಿಯಾ.

    ಮಿಚೆಲ್ ಮಾರ್ಷ್ (0) ಹಾಗೂ ಡೇವಿಡ್ ವಾರ್ನರ್ (41) ವಿಕೆಟ್ ಪಡೆದಿರುವ ಟೀಮ್ ಇಂಡಿಯಾ.

    ಕ್ರೀಸ್​ನಲ್ಲಿ ಸ್ಟೀವ್ ಸ್ಮಿತ್ (36) ಹಾಗೂ ಮಾರ್ನಸ್ ಲಾಬುಶೇನ್ ಬ್ಯಾಟಿಂಗ್.

    AUS 85/2 (20)

      

  • 08 Oct 2023 03:28 PM (IST)

    IND vs AUS ICC World Cup 2023 Live Score: ಆಸ್ಟ್ರೇಲಿಯಾದ 2ನೇ ವಿಕೆಟ್ ಪತನ

    ಕುಲ್ದೀಪ್ ಯಾದವ್ ಎಸೆದ 17ನೇ ಓವರ್​ನ 3ನೇ ಎಸೆತದಲ್ಲಿ ಬೌಲರ್​ಗೆ ಕ್ಯಾಚ್ ನೀಡಿದ ಡೇವಿಡ್ ವಾರ್ನರ್.

    52 ಎಸೆತಗಳಲ್ಲಿ 41 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ವಾರ್ನರ್.

    ಕ್ರೀಸ್​ನಲ್ಲಿ ಸ್ಟೀಮ್ ಸ್ಮಿತ್ ಹಾಗೂ ಮಾರ್ನಸ್ ಲಾಬುಶೇನ್ ಬ್ಯಾಟಿಂಗ್.

    AUS 74/2 (17)

      

  • 08 Oct 2023 03:13 PM (IST)

    IND vs AUS ICC World Cup 2023 Live Score: 15 ಓವರ್​ ಮುಕ್ತಾಯ

    ಕುಲ್ದೀಪ್ ಯಾದವ್ ಎಸೆದ 15ನೇ ಓವರ್​ನ 4ನೇ ಎಸೆತದಲ್ಲಿ ಬ್ಯಾಕ್​ವರ್ಡ್ ಸ್ಕ್ವೇರ್​ನತ್ತ ಫೋರ್ ಬಾರಿಸಿದ ವಾರ್ನರ್.

    15 ಓವರ್​ಗಳಲ್ಲಿ 71 ರನ್ ಕಲೆಹಾಕಿದ ಆಸ್ಟ್ರೇಲಿಯಾ.

    ಕ್ರೀಸ್​ನಲ್ಲಿ ಡೇವಿಡ್ ವಾರ್ನರ್ (40) ಹಾಗೂ ಸ್ಮಿತ್ (31) ಬ್ಯಾಟಿಂಗ್.

    AUS 71/1 (15)

      

  • 08 Oct 2023 03:09 PM (IST)

    IND vs AUS ICC World Cup 2023 Live Score: ವೆಲ್ಕಂ ಬೌಂಡರಿ

    ಅಶ್ವಿನ್ ಎಸೆದ 14ನೇ ಓವರ್​ನ ಮೊದಲ ಎಸೆತವನ್ನು ಲಾಂಗ್ ಆಫ್​ನತ್ತ ಬಾರಿಸಿದ ಡೇವಿಡ್ ವಾರ್ನರ್…ಫೋರ್.

    ಕ್ರೀಸ್​ನಲ್ಲಿ ಡೇವಿಡ್ ವಾರ್ನರ್ (35) ಹಾಗೂ ಸ್ಟೀವ್ ಸ್ಮಿತ್ (31) ಬ್ಯಾಟಿಂಗ್.

    AUS 66/1 (14)

     

  • 08 Oct 2023 03:06 PM (IST)

    IND vs AUS ICC World Cup 2023 Live Score: ಅರ್ಧಶತಕದ ಜೊತೆಯಾಟ

    2ನೇ ವಿಕೆಟ್​ಗೆ ಅರ್ಧಶತಕದ ಜೊತೆಯಾಟವಾಡಿದ ಡೇವಿಡ್ ವಾರ್ನರ್-ಸ್ಟೀವ್ ಸ್ಮಿತ್.

    13 ಓವರ್​ ಮುಕ್ತಾಯದ ವೇಳೆಗೆ 59 ರನ್​ ಕಲೆಹಾಕಿದ ಆಸ್ಟ್ರೇಲಿಯಾ.

    ವಿಕೆಟ್​ಗಾಗಿ ಟೀಮ್ ಇಂಡಿಯಾ ಬೌಲರ್​ಗಳ ಕಸರತ್ತು.

    AUS 59/1 (13)

    ಮಿಚೆಲ್ ಮಾರ್ಷ್ (0) ಔಟ್.

      

  • 08 Oct 2023 02:56 PM (IST)

    IND vs AUS ICC World Cup 2023 Live Score: ಅರ್ಧಶತಕ ಪೂರೈಸಿದ ಆಸ್ಟ್ರೇಲಿಯಾ

    ಹಾರ್ದಿಕ್ ಪಾಂಡ್ಯ ಎಸೆದ 11ನೇ ಓವರ್​ನ 2ನೇ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ಸ್ಟೀವ್ ಸ್ಮಿತ್.

    5ನೇ ಎಸೆತದಲ್ಲಿ ಲೆಗ್​ ಸೈಡ್​ನತ್ತ ಮೊತ್ತ ಫೋರ್​ ಸಿಡಿಸಿದ ಸ್ಮಿತ್.

    ಈ ಫೋರ್​ನೊಂದಿಗೆ ಅರ್ಧಶತಕ ಪೂರೈಸಿದ ಆಸ್ಟ್ರೇಲಿಯಾ.

    AUS 51/1 (11)

      

  • 08 Oct 2023 02:53 PM (IST)

    IND vs AUS ICC World Cup 2023 Live Score: 10 ಓವರ್​ಗಳು ಮುಕ್ತಾಯ

    ಅಶ್ವಿನ್ ಎಸೆದ 10ನೇ ಓವರ್​ನ 5ನೇ ಎಸೆತವನ್ನು ಸ್ವೀಪ್ ಶಾಟ್​ ಮೂಲಕ ಬೌಂಡರಿಗಟ್ಟಿದ ಡೇವಿಡ್ ವಾರ್ನರ್.

    10 ಓವರ್​ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ ತಂಡದ ಸ್ಕೋರ್ 43.

    ಕ್ರೀಸ್​ನಲ್ಲಿ ಡೇವಿಡ್ ವಾರ್ನರ್ ಹಾಗೂ ಸ್ಮಿತ್ ಬ್ಯಾಟಿಂಗ್.

    AUS 43/1 (10)

     ಮಿಚೆಲ್ ಮಾರ್ಷ್ (0) ವಿಕೆಟ್ ಪಡೆದ ಬುಮ್ರಾ.

  • 08 Oct 2023 02:48 PM (IST)

    IND vs AUS ICC World Cup 2023 Live Score: ಟೀಮ್ ಇಂಡಿಯಾ ಉತ್ತಮ ಬೌಲಿಂಗ್

    9 ಓವರ್​ಗಳಲ್ಲಿ ಕೇವಲ 36 ರನ್ ನೀಡಿದ ಟೀಮ್ ಇಂಡಿಯಾ.

    ಪ್ರತಿ ಓವರ್​ಗೆ 4 ರ ಸರಾಸರಿಯಲ್ಲಿ ರನ್​ ಗಳಿಸಿದ ಆಸ್ಟ್ರೇಲಿಯಾ.

    ಕ್ರೀಸ್​ನಲ್ಲಿ ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಬ್ಯಾಟಿಂಗ್

    AUS 36/1 (9)

      

  • 08 Oct 2023 02:40 PM (IST)

    IND vs AUS ICC World Cup 2023 Live Score: ಹ್ಯಾಟ್ರಿಕ್ ಫೋರ್

    ಹಾರ್ದಿಕ್ ಪಾಂಡ್ಯ ಎಸೆದ 7ನೇ ಓವರ್​ನಲ್ಲಿ ಡೇವಿಡ್ ವಾರ್ನರ್ ಬ್ಯಾಟ್​ನಿಂದ 2 ಫೋರ್ ಹಾಗೂ ಸ್ಟೀವ್ ಸ್ಮಿತ್ ಬ್ಯಾಟ್​ನಿಂದ ಒಂದು ಫೋರ್.

    7ನೇ ಓವರ್​​ನಲ್ಲಿ 13 ರನ್ ಕಲೆಹಾಕಿದ ಆಸ್ಟ್ರೇಲಿಯಾ.

    ಕ್ರೀಸ್​ನಲ್ಲಿ ಸ್ಮಿತ್ ಹಾಗೂ ವಾರ್ನರ್ ಬ್ಯಾಟಿಂಗ್.

    AUS 29/1 (7)

      

  • 08 Oct 2023 02:30 PM (IST)

    IND vs AUS ICC World Cup 2023 Live Score: ಮೊದಲ ಮೇಡನ್ ಓವರ್

    6ನೇ ಓವರ್​ ಅನ್ನು ಮೇಡನ್ ಮಾಡಿದ ಮೊಹಮ್ಮದ್ ಸಿರಾಜ್.

    ಸಿರಾಜ್​ ಎಸೆತಗಳಲ್ಲಿ ಒಂದೇ ಒಂದು ರನ್​ಗಳಿಸಲು ಪರದಾಡಿದ ಸ್ಮಿತ್.

    6 ಓವರ್​ಗಳ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ ತಂಡದ ಸ್ಕೋರ್ 16.

    ಕ್ರೀಸ್​ನಲ್ಲಿ ವಾರ್ನರ್ ಹಾಗೂ ಸ್ಮಿತ್ ಬ್ಯಾಟಿಂಗ್.

    AUS 16/1 (6)

      

  • 08 Oct 2023 02:25 PM (IST)

    IND vs AUS ICC World Cup 2023 Live Score: ಸ್ಮಿತ್ ಬ್ಯಾಟ್​ನಿಂದ ಬ್ಯೂಟಿಫುಲ್ ಶಾಟ್

    ಬುಮ್ರಾ ಎಸೆದ 5ನೇ ಓವರ್​ನ ಮೊದಲ ಎಸೆತದಲ್ಲೇ ಬ್ಯೂಟಿಫುಲ್ ಕವರ್​ ಡ್ರೈವ್ ಬಾರಿಸಿದ ಸ್ಟೀವ್ ಸ್ಮಿತ್…ಫೋರ್.

    ಸ್ಮಿತ್ ಉತ್ತಮ ಬ್ಯಾಟಿಂಗ್-ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ ಡೇವಿಡ್ ವಾರ್ನರ್.

    AUS 16/1 (5)

     ಆರಂಭಿಕ ಆಟಗಾರ ಮಿಚೆಲ್ ಮಾರ್ಷ್ (0) ಔಟ್.

  • 08 Oct 2023 02:20 PM (IST)

    IND vs AUS ICC World Cup 2023 Live Score: ಸ್ಮಿತ್ ಸೂಪರ್ ಶಾಟ್

    ಮೊಹಮ್ಮದ್ ಸಿರಾಜ್ ಎಸೆದ 4ನೇ ಓವರ್​ನ 4ನೇ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ಸ್ಟೀವ್ ಸ್ಮಿತ್.

    ಕ್ರೀಸ್​ನಲ್ಲಿ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಬ್ಯಾಟಿಂಗ್.

    AUS 11/1 (4)

     ಮಿಚೆಲ್ ಮಾರ್ಷ್ (0) ಔಟ್.

  • 08 Oct 2023 02:12 PM (IST)

    IND vs AUS ICC World Cup 2023 Live Score: ಟೀಮ್ ಇಂಡಿಯಾಗೆ ಮೊದಲ ಯಶಸ್ಸು

    ಬುಮ್ರಾ ಎಸೆದ 2ನೇ ಓವರ್​ನ 2ನೇ ಎಸೆತವು ಮಿಚೆಲ್ ಮಾರ್ಷ್​ ಬ್ಯಾಟ್ ಸವರಿ ಸ್ಲಿಪ್​ನತ್ತ…ವಿರಾಟ್ ಕೊಹ್ಲಿ ಅದ್ಭುತ ಡೈವಿಂಗ್ ಕ್ಯಾಚ್…ಮಿಚೆಲ್ ಮಾರ್ಷ್ (0) ಔಟ್.

    ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟ ಬುಮ್ರಾ.

    AUS 5/1 (2.2)

      

  • 08 Oct 2023 02:09 PM (IST)

    IND vs AUS ICC World Cup 2023 Live Score: ಮೊದಲ ಬೌಂಡರಿ

    ಮೊಹಮ್ಮದ್ ಸಿರಾಜ್ ಎಸೆದ 2ನೇ ಓವರ್​ನ ಮೊದಲ ಎಸೆತದಲ್ಲೇ ಆಫ್ ಸೈಡ್​ನತ್ತ ಫೋರ್ ಬಾರಿಸಿದ ಎಡಗೈ ದಾಂಡಿಗ ಡೇವಿಡ್ ವಾರ್ನರ್. ಈ ಫೋರ್​ ಬಳಿಕ ಅತ್ಯುತ್ತಮ ದಾಳಿ ಸಂಘಟಿಸಿದ ಸಿರಾಜ್.

    ಕ್ರೀಸ್​ನಲ್ಲಿ ವಾರ್ನರ್ – ಮಾರ್ಷ್ ಬ್ಯಾಟಿಂಗ್.

    AUS 5/0 (2)

      

  • 08 Oct 2023 02:05 PM (IST)

    IND vs AUS ICC World Cup 2023 Live Score: ಭಾರತ ಉತ್ತಮ ಆರಂಭ

    ಜಸ್​ಪ್ರೀತ್ ಬುಮ್ರಾ ಎಸೆದ ಮೊದಲ ಓವರ್​ನ 2ನೇ ಎಸೆತದಲ್ಲಿ ಒಂದು ರನ್ ಓಡಿ ಸ್ಕೋರ್ ಖಾತೆ ತೆರೆದ ಡೇವಿಡ್ ವಾರ್ನರ್.

    ಮೊದಲ ಓವರ್​ನಲ್ಲಿ ಕೇವಲ 1 ರನ್ ಮಾತ್ರ ನೀಡಿದ ಬುಮ್ರಾ.

    ಕ್ರೀಸ್​ನಲ್ಲಿ ಡೇವಿಡ್ ವಾರ್ನರ್ – ಮಿಚೆಲ್ ಮಾರ್ಷ್ ಬ್ಯಾಟಿಂಗ್.

    AUS 1/0 (1)

      

  • 08 Oct 2023 01:59 PM (IST)

    IND vs AUS ICC World Cup 2023 Live Score: ಆಸ್ಟ್ರೇಲಿಯಾ ಇನಿಂಗ್ಸ್​ ಆರಂಭ

    ಆಸ್ಟ್ರೇಲಿಯಾ ಪರ ಆರಂಭಿಕರು: ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್.

    ಭಾರತದ ಪರ ಮೊದಲ ಓವರ್: ಜಸ್​ಪ್ರೀತ್ ಬುಮ್ರಾ

  • 08 Oct 2023 01:57 PM (IST)

    IND vs AUS ICC World Cup 2023 Live Score: ಕಣಕ್ಕಿಳಿಯುವ ಕಲಿಗಳು

    ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

  • 08 Oct 2023 01:43 PM (IST)

    IND vs AUS ICC World Cup 2023 Live Score: ಭಾರತ ಪ್ಲೇಯಿಂಗ್ 11 ಹೀಗಿದೆ

    ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

  • 08 Oct 2023 01:42 PM (IST)

    IND vs AUS ICC World Cup 2023 Live Score: ಆಸ್ಟ್ರೇಲಿಯಾ ಪ್ಲೇಯಿಂಗ್ 11 ಹೀಗಿದೆ

    ಆಸ್ಟ್ರೇಲಿಯಾ (ಪ್ಲೇಯಿಂಗ್ XI): ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಕ್ಯಾಮರೋನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಝಲ್‌ವುಡ್, ಆ್ಯಡಂ ಝಂಪಾ.

  • 08 Oct 2023 01:42 PM (IST)

    IND vs AUS ICC World Cup 2023 Live Score: ಟಾಸ್ ಗೆದ್ದ ಆಸ್ಟ್ರೇಲಿಯಾ

    ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದ ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

  • Published On - Oct 08,2023 1:33 PM

    Follow us
    ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
    ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
    ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
    ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
    ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
    ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
    ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
    ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
    ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
    ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
    ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
    ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
    ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
    ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
    ‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
    ‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
    ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
    ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
    ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
    ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ