IND vs AUS Live Score: ಟೀಮ್ ಇಂಡಿಯಾಗೆ ಸೋಲುಣಿಸಿದ ಆಸ್ಟ್ರೇಲಿಯಾ
India vs Australia Live Score in Kannada: ಭಾರತ-ಆಸ್ಟ್ರೇಲಿಯಾ ನಡುವಣ 3ನೇ ಏಕದಿನ ಪಂದ್ಯ ಶುರುವಾಗಿದೆ. ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಭಾರತದ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 66 ರನ್ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 352 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ಟೀಮ್ ಇಂಡಿಯಾ 49.4 ಓವರ್ಗಳಲ್ಲಿ 286 ರನ್ಗಳಿಗೆ ಸರ್ವಪತನ ಕಂಡಿತು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡ ಸರಣಿಯನ್ನು 1-2 ಅಂತರದಿಂದ ಅಂತ್ಯಗೊಳಿಸಿದೆ. ಅತ್ತ ಕೊನೆಯ ಪಂದ್ಯದ ಸೋಲಿನ ಹೊರತಾಗಿಯೂ ಮೊದಲ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದ್ದ ಭಾರತ ಸರಣಿಯನ್ನು ವಶಪಡಿಸಿಕೊಂಡಿದೆ.
ಈ ಪಂದ್ಯದಿಂದ ಗಾಯದ ಕಾರಣ ಅಕ್ಷರ್ ಪಟೇಲ್ ಹೊರಗುಳಿದಿದ್ದರು. ಹಾಗೆಯೇ ವಿಶ್ರಾಂತಿಯ ಕಾರಣ ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ, ಶಾರ್ದೂಲ್ ಠಾಕೂರ್ ಮತ್ತು ಮೊಹಮ್ಮದ್ ಶಮಿ ಕಣಕ್ಕಿಳಿದಿರಲಿಲ್ಲ. ಹಾಗೆಯೇ ಅನಾರೋಗ್ಯದ ಕಾರಣ ಇಶಾನ್ ಕಿಶನ್ ಹಾಗೂ ರವಿಚಂದ್ರನ್ ಅಶ್ವಿನ್ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಂಡಿರಲಿಲ್ಲ.
ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ಆಸ್ಟ್ರೇಲಿಯಾ (ಪ್ಲೇಯಿಂಗ್ XI): ಮಿಚೆಲ್ ಮಾರ್ಷ್, ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್, ಮಾರ್ನಸ್ ಲಾಬುಶೇನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೋನ್ ಗ್ರೀನ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ತನ್ವೀರ್ ಸಂಘ, ಜೋಶ್ ಹ್ಯಾಝಲ್‌ವುಡ್.
LIVE Cricket Score & Updates
-
IND vs AUS Live Score: ಟೀಮ್ ಇಂಡಿಯಾಗೆ ಸೋಲುಣಿಸಿದ ಆಸ್ಟ್ರೇಲಿಯಾ
286 ರನ್ಗಳಿಗೆ ಭಾರತ ತಂಡ ಆಲೌಟ್.
ಆಸ್ಟ್ರೇಲಿಯಾ ತಂಡಕ್ಕೆ 66 ರನ್ಗಳ ಭರ್ಜರಿ ಜಯ.
AUS 352/7 (50)
IND 286 (49.4)
-
IND vs AUS Live Score: ಕೊನೆಯ 2 ಓವರ್ಗಳು ಬಾಕಿ
ಟೀಮ್ ಇಂಡಿಯಾಗೆ 12 ಎಸೆತಗಳಲ್ಲಿ 73 ರನ್ಗಳ ಅವಶ್ಯಕತೆ.
ಕ್ರೀಸ್ನಲ್ಲಿ ರವೀಂದ್ರ ಜಡೇಜಾ ಹಾಗೂ ಮೊಹಮ್ಮದ್ ಸಿರಾಜ್ ಬ್ಯಾಟಿಂಗ್.
AUS 352/7 (50)
IND 280/8 (48)
-
IND vs AUS Live Score: ಭಾರತ ತಂಡದ 8ನೇ ವಿಕೆಟ್ ಪತನ
ಪ್ಯಾಟ್ ಕಮಿನ್ಸ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನ…ಕ್ಯಾಚ್…ಜಸ್ಪ್ರೀತ್ ಬುಮ್ರಾ ಔಟ್\
11 ಎಸೆತಗಳಲ್ಲಿ 5 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಬುಮ್ರಾ.
ಕ್ರೀಸ್ನಲ್ಲಿ ರವೀಂದ್ರ ಜಡೇಜಾ ಹಾಗೂ ಸಿರಾಜ್ ಬ್ಯಾಟಿಂಗ್.
AUS 352/7 (50)
IND 270/8 (45.3)
IND vs AUS Live Score: ಸೋಲಿನ ಸುಳಿಯಲ್ಲಿ ಟೀಮ್ ಇಂಡಿಯಾ
ಜೋಶ್ ಹ್ಯಾಝಲ್‌ವುಡ್ ಎಸೆತದಲ್ಲಿ ಬೌಲ್ಡ್ ಆದ ಕುಲ್ದೀಪ್ ಯಾದವ್ (2).
ಟೀಮ್ ಇಂಡಿಯಾದ 7ನೇ ವಿಕೆಟ್ ಪತನ.
49 ಎಸೆತಗಳಲ್ಲಿ 96 ರನ್ಗಳ ಅವಶ್ಯಕತೆ.
AUS 352/7 (50)
IND 257/7 (41.5)
IND vs AUS Live Score: ಟೀಮ್ ಇಂಡಿಯಾದ 6ನೇ ವಿಕೆಟ್ ಪತನ
ಗ್ಲೆನ್ ಮ್ಯಾಕ್ಸ್‌ವೆಲ್ ಎಸೆತದಲ್ಲಿ ಶ್ರೇಯಸ್ ಅಯ್ಯರ್ ಕ್ಲೀನ್ ಬೌಲ್ಡ್.
43 ಎಸೆತಗಳಲ್ಲಿ 48 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಶ್ರೇಯಸ್ ಅಯ್ಯರ್.
ಕ್ರೀಸ್ನಲ್ಲಿ ರವೀಂದ್ರ ಜಡೇಜಾ ಹಾಗೂ ಕುಲ್ದೀಪ್ ಯಾದವ್ ಬ್ಯಾಟಿಂಗ್
IND 249/6 (38.3)
IND vs AUS Live Score: ಟೀಮ್ ಇಂಡಿಯಾದ 5ನೇ ವಿಕೆಟ್ ಪತನ
ಜೋಶ್ ಹ್ಯಾಝಲ್‌ವುಡ್ ಎಸೆತದಲ್ಲಿ ಫ್ರಂಟ್ ಫೀಲ್ಡರ್ಗೆ ಸುಲಭ ಕ್ಯಾಚ್ ನೀಡಿದ ಸೂರ್ಯಕುಮಾರ್ ಯಾದವ್.
7 ಎಸೆತಗಳಲ್ಲಿ 8 ರನ್ಗಳಿಸಿದ ವಿಕೆಟ್ ಒಪ್ಪಿಸಿದ ಸೂರ್ಯಕುಮಾರ್ ಯಾದವ್.
ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ರವೀಂದ್ರ ಜಡೇಜಾ ಬ್ಯಾಟಿಂಗ್.
AUS 352/7 (50)
IND 233/5 (37.2)
IND vs AUS Live Score: ಟೀಮ್ ಇಂಡಿಯಾದ 4ನೇ ವಿಕೆಟ್ ಪತನ
ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನ…ಆಕಾಶದತ್ತ ಚಿಮ್ಮಿದ ಚೆಂಡು ವಿಕೆಟ್ ಕೀಪರ್ ಕೈಗೆ…ಕೆಎಲ್ ರಾಹುಲ್ ಔಟ್.
30 ಎಸೆತಗಳಲ್ಲಿ 26 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಕೆಎಲ್ ರಾಹುಲ್.
IND 223/4 (35.5)
IND vs AUS Live Score: ದ್ವಿಶತಕ ಪೂರೈಸಿದ ಟೀಮ್ ಇಂಡಿಯಾ
ಪ್ಯಾಟ್ ಕಮಿನ್ಸ್ ಎಸೆದ 32ನೇ ಓವರ್ನ ಮೊದಲ ಎಸೆತದಲ್ಲಿ ಅತ್ಯಾಕರ್ಷಕ ಫೋರ್ ಬಾರಿಸಿದ ಕೆಎಲ್ ರಾಹುಲ್.
ಈ ಫೋರ್ನೊಂದಿಗೆ ದ್ವಿಶತಕ ಪೂರೈಸಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಬ್ಯಾಟಿಂಗ್.
IND 203/3 (32)
IND vs AUS Live Score: ಟೀಮ್ ಇಂಡಿಯಾದ 3ನೇ ವಿಕೆಟ್ ಪತನ
ಗ್ಲೆನ್ ಮ್ಯಾಕ್ಸ್‌ವೆಲ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿ ಕ್ಯಾಚ್ ನೀಡಿದ ವಿರಾಟ್ ಕೊಹ್ಲಿ
61 ಎಸೆತಗಳಲ್ಲಿ 56 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಕೊಹ್ಲಿ.
ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಕೆಎಲ್ ರಾಹುಲ್ ಬ್ಯಾಟಿಂಗ್.
IND 171/3 (26.5)
IND vs AUS Live Score: ಅರ್ಧಶತಕ ಪೂರೈಸಿದ ವಿರಾಟ್ ಕೊಹ್ಲಿ
ಜೋಶ್ ಹ್ಯಾಝಲ್‌ವುಡ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಫೋರ್ ಬಾರಿಸುವ ಮೂಲಕ 56 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವಿರಾಟ್ ಕೊಹ್ಲಿ.
ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.
IND 167/2 (25.5)
IND vs AUS Live Score: ಟೀಮ್ ಇಂಡಿಯಾದ 2ನೇ ವಿಕೆಟ್ ಪತನ
ಗ್ಲೆನ್ ಮ್ಯಾಕ್ಸ್‌ವೆಲ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಬಾರಿಸಿದ ರೋಹಿತ್ ಶರ್ಮಾ,,,ಚೆಂಡನ್ನು ಅದ್ಭುವಾಗಿ ಹಿಡಿದ ಮ್ಯಾಕ್ಸ್‌ವೆಲ್.
57 ಎಸೆತಗಳಲ್ಲಿ 81 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಹಿಟ್ಮ್ಯಾನ್.
AUS 352/7 (50)
IND 144/2 (21)
IND vs AUS Live Score: ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್
ಮಿಚೆಲ್ ಸ್ಟಾರ್ಕ್ ಎಸೆದ 20ನೇ ಓವರ್ನ ಮೂರನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ವಿರಾಟ್ ಕೊಹ್ಲಿ.
20 ಓವರ್ಗಳ ಮುಕ್ತಾಯದ ವೇಳೆಗೆ 135 ರನ್ ಬಾರಿಸಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್.
IND 135/1 (20)
IND vs AUS Live Score: 15 ಓವರ್ಗಳು ಮುಕ್ತಾಯ
15 ಓವರ್ಗಳ ಮುಕ್ತಾಯದ ವೇಳೆಗೆ 91 ರನ್ ಕಲೆಹಾಕಿದ ಟೀಮ್ ಇಂಡಿಯಾ.
ಕ್ರೀಸ್ನಲ್ಲಿ ರೋಹಿತ್ ಶರ್ಮಾ (61) ಹಾಗೂ ವಿರಾಟ್ ಕೊಹ್ಲಿ (11) ಬ್ಯಾಟಿಂಗ್.
ಆಸ್ಟ್ರೇಲಿಯಾ- 352/7 (50)
ಭಾರತ- 91/1 (15)
ವಾಷಿಂಗ್ಟನ್ ಸುಂದರ್ (18) ಔಟ್.
IND vs AUS Live Score: ಟೀಮ್ ಇಂಡಿಯಾ ಮೊದಲ ವಿಕೆಟ್ ಪತನ
ಗ್ಲೆನ್ ಮ್ಯಾಕ್ಸ್‌ವೆಲ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿ ಕ್ಯಾಚ್ ನೀಡಿದ ವಾಷಿಂಗ್ಟನ್ ಸುಂದರ್.
30 ಎಸೆತಗಳಲ್ಲಿ 18 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ವಾಷಿಂಗ್ಟನ್.
ಕ್ರೀಸ್ನಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬ್ಯಾಟಿಂಗ್
IND 74/1 (10.5)
IND vs AUS Live Score: ಅರ್ಧಶತಕ ಪೂರೈಸಿದ ರೋಹಿತ್ ಶರ್ಮಾ
31 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ ಅರ್ಧಶತಕ ಪೂರೈಸಿದ ರೋಹಿತ್ ಶರ್ಮಾ.
ಇದು ಏಕದಿನ ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾ ಅವರ 52ನೇ ಅರ್ಧಶತಕ.
IND 68/0 (9.3)
IND vs AUS Live Score: ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್
ಹ್ಯಾಝಲ್‌ವುಡ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರೋಹಿತ್ ಶರ್ಮಾ.
6 ಓವರ್ಗಳಲ್ಲಿ 43 ರನ್ ಬಾರಿಸಿರುವ ಟೀಮ್ ಇಂಡಿಯಾ.
20 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 34 ರನ್ ಕಲೆಹಾಕಿರುವ ರೋಹಿತ್ ಶರ್ಮಾ.
9 ರನ್ಗಳಿಸಿದ ವಾಷಿಂಗ್ಟನ್ ಸುಂದರ್ ಕಡೆಯಿಂದ ಉತ್ತಮ ಸಾಥ್.
IND 43/0 (6)
IND vs AUS Live Score: ಭರ್ಜರಿ ಸಿಕ್ಸ್ ಸಿಡಿಸಿದ ಹಿಟ್ಮ್ಯಾನ್
ಮಿಚೆಲ್ ಸ್ಟಾರ್ಕ್ ಎಸೆದ ಮೂರನೇ ಓವರ್ನ 2ನೇ ಎಸೆತದಲ್ಲಿ ಫೋರ್ ಬಾರಿಸಿದ ರೋಹಿತ್ ಶರ್ಮಾ ಮರು ಎಸೆತದಲ್ಲೇ ಭರ್ಜರಿ ಸಿಕ್ಸ್ ಸಿಡಿಸಿದರು.
ಕ್ರೀಸ್ನಲ್ಲಿ ವಾಷಿಂಗ್ಟನ್ ಸುಂದರ್ ಹಾಗೂ ರೋಹಿತ್ ಶರ್ಮಾ ಬ್ಯಾಟಿಂಗ್.
IND 18/0 (3)
IND vs AUS Live Score: ಟೀಮ್ ಇಂಡಿಯಾ ಇನಿಂಗ್ಸ್ ಆರಂಭ
ರೋಹಿತ್ ಶರ್ಮಾ ಜೊತೆ ಇನಿಂಗ್ಸ್ ಆರಂಭಿಸಿದ ವಾಷಿಂಗ್ಟನ್ ಸುಂದರ್.
ಮಿಚೆಲ್ ಸ್ಟಾರ್ಕ್ ಎಸೆದ ಮೊದಲ ಓವರ್ನ 2ನೇ ಎಸೆತದಲ್ಲಿ ಫೋರ್ ಬಾರಿಸಿ ರನ್ ಖಾತೆ ತೆರೆದ ರೋಹಿತ್ ಶರ್ಮಾ.
IND 6/0 (1)
IND vs AUS Live Score: ಆಸ್ಟ್ರೇಲಿಯಾ ತಂಡದ ಇನಿಂಗ್ಸ್ ಅಂತ್ಯ
50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 352 ರನ್ ಕಲೆಹಾಕಿದ ಆಸ್ಟ್ರೇಲಿಯಾ.
ಆಸ್ಟ್ರೇಲಿಯಾ ಪರ ಅರ್ಧಶತಕ ಸಿಡಿಸಿ ಮಿಂಚಿದ ಮಿಚೆಲ್ ಮಾರ್ಷ (96), ಮಾರ್ನಸ್ ಲಾಬುಶೇನ್ (72) ಹಾಗೂ ಡೇವಿಡ್ ವಾರ್ನರ್ (52).
ಟೀಮ್ ಇಂಡಿಯಾಗೆ 353 ರನ್ಗಳ ಕಠಿಣ ಗುರಿ ನೀಡಿದ ಆಸೀಸ್ ಪಡೆ.
AUS 352/7 (50)
IND vs AUS Live Score: ಆಸ್ಟ್ರೇಲಿಯಾ ತಂಡದ 7ನೇ ವಿಕೆಟ್ ಪತನ
ಜಸ್ಪ್ರೀತ್ ಬುಮ್ರಾ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ಮಾರ್ನಸ್ ಲಾಬುಶೇನ್.
58 ಎಸೆತಗಳಲ್ಲಿ 72 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಮಾರ್ನಸ್.
AUS 345/7 (49)
IND vs AUS Live Score: 45 ಓವರ್ಗಳು ಮುಕ್ತಾಯ
ಕುಲ್ದೀಪ್ ಯಾದವ್ ಎಸೆತದಲ್ಲಿ ಆಕರ್ಷಕ ಪೋರ್ ಬಾರಿಸಿ ಅರ್ಧಶತಕ ಪೂರೈಸಿದ ಮಾರ್ನಸ್ ಲಾಬುಶೇನ್.
45 ಓವರ್ಗಳ ಮುಕ್ತಾಯದ ವೇಳೆಗೆ 317 ರನ್ ಕಲೆಹಾಕಿದ ಆಸ್ಟ್ರೇಲಿಯಾ.
ಕೊನೆಯ 5 ಓವರ್ಗಳು ಬಾಕಿ.
ಕ್ರೀಸ್ನಲ್ಲಿ ಲಾಬುಶೇನ್ ಹಾಗೂ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್.
AUS 317/6 (45)
IND vs AUS Live Score: ಆಸ್ಟ್ರೇಲಿಯಾ ತಂಡದ 6ನೇ ವಿಕೆಟ್ ಪತನ
ಕುಲ್ದೀಪ್ ಯಾದವ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿ ಕ್ಯಾಚ್ ನೀಡಿದ ಕ್ಯಾಮರೋನ್ ಗ್ರೀನ್.
13 ಎಸೆತಗಳಲ್ಲಿ 9 ರನ್ಗಳಿಸಿ ವಿಕೆಟ್ ಒಪ್ಪಿಸಿದ ಗ್ರೀನ್.
ಕ್ರೀಸ್ನಲ್ಲಿ ಪ್ಯಾಟ್ ಕಮಿನ್ಸ್ ಹಾಗೂ ಮಾರ್ನಸ್ ಲಾಬುಶೇನ್ ಬ್ಯಾಟಿಂಗ್
AUS 299/6 (42.3)
IND vs AUS Live Score: ಆಸ್ಟ್ರೇಲಿಯಾ ತಂಡದ 5ನೇ ವಿಕೆಟ್ ಪತನ
ಜಸ್ಪ್ರೀತ್ ಬುಮ್ರಾ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ಗ್ಲೆನ್ ಮ್ಯಾಕ್ಸ್‌ವೆಲ್.
7 ಎಸೆತಗಳಲ್ಲಿ ಕೇವಲ 5 ರನ್ಗಳಿಸಿ ನಿರ್ಗಮಿಸಿದ ಸ್ಪೋಟಕ ದಾಂಡಿಗ ಮ್ಯಾಕ್ಸ್‌ವೆಲ್.
ಟೀಮ್ ಇಂಡಿಯಾಗೆ ಐದನೇ ಯಶಸ್ಸು.
AUS 281/5 (39)
IND vs AUS Live Score: ಆಸ್ಟ್ರೇಲಿಯಾ ತಂಡದ 4ನೇ ವಿಕೆಟ್ ಪತನ
ಜಸ್ಪ್ರೀತ್ ಬುಮ್ರಾ ಎಸೆತದಲ್ಲಿ ಫ್ರಂಟ್ ಫೀಲ್ಡರ್ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿದ ಅಲೆಕ್ಸ್ ಕ್ಯಾರಿ.
19 ಎಸೆತಗಳಲ್ಲಿ 11 ರನ್ಗಳಿಸಿ ಔಟಾದ ಅಲೆಕ್ಸ್ ಕ್ಯಾರಿ.
AUS 267/4 (37)
IND vs AUS Live Score: ಟೀಮ್ ಇಂಡಿಯಾಗೆ 3ನೇ ಯಶಸ್ಸು
ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರನಡೆದ ಸ್ಟೀವ್ ಸ್ಮಿತ್.
61 ಎಸೆತಗಳಲ್ಲಿ 74 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಸ್ಮಿತ್.
ಕ್ರೀಸ್ನಲ್ಲಿ ಮಾರ್ನಸ್ ಲಾಬುಶೇನ್ ಹಾಗೂ ಅಲೆಕ್ಸ್ ಕ್ಯಾರಿ ಬ್ಯಾಟಿಂಗ್
AUS 242/3 (31.3)
IND vs AUS Live Score: ಆಸ್ಟ್ರೇಲಿಯಾ ತಂಡದ 2ನೇ ವಿಕೆಟ್ ಪತನ
ಕುಲ್ದೀಪ್ ಯಾದವ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನ…ಫ್ರಂಟ್ ಫೀಲ್ಡರ್ ಪ್ರಸಿದ್ಧ್ ಕೃಷ್ಣಗೆ ಕ್ಯಾಚ್ ನೀಡಿದ ಮಿಚೆಲ್ ಮಾರ್ಷ್.
84 ಎಸೆತಗಳಲ್ಲಿ 96 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಮಿಚೆಲ್ ಮಾರ್ಷ್.
ಕ್ರೀಸ್ನಲ್ಲಿ ಸ್ಟೀವ್ ಸ್ಮಿತ್ ಹಾಗೂ ಮಾರ್ನಸ್ ಲಾಬುಶೇನ್ ಬ್ಯಾಟಿಂಗ್.
AUS 215/2 (28)
IND vs AUS Live Score: ದ್ವಿಶತಕ ಪೂರೈಸಿದ ಆಸ್ಟ್ರೇಲಿಯಾ
27 ಓವರ್ಗಳಲ್ಲಿ ದ್ವಿಶತಕ ಪೂರೈಸಿದ ಆಸ್ಟ್ರೇಲಿಯಾ.
ಮಿಚೆಲ್ ಮಾರ್ಷ್ ಹಾಗೂ ಸ್ಟೀವ್ ಸ್ಮಿತ್ ಕಡೆಯಿಂದ ಭರ್ಜರಿ ಬ್ಯಾಟಿಂಗ್.
ಕೇವಲ 1 ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾದ ಟೀಮ್ ಇಂಡಿಯಾ ಬೌಲರ್ಗಳು.
AUS 202/1 (27)
IND vs AUS Live Score: 25 ಓವರ್ಗಳು ಮುಕ್ತಾಯ
25 ಓವರ್ ಮುಕ್ತಾಯದ ವೇಳೆಗೆ 188 ರನ್ ಕಲೆಹಾಕಿದ ಆಸ್ಟ್ರೇಲಿಯಾ.
44 ಎಸೆತಗಳಲ್ಲಿ 52 ರನ್ ಬಾರಿಸಿದ ಸ್ಟೀವ್ ಸ್ಮಿತ್.
72 ಎಸೆತಗಳಲ್ಲಿ 78 ರನ್ ಬಾರಿಸಿದ ಮಿಚೆಲ್ ಮಾರ್ಷ್.
AUS 188/1 (25)
IND vs AUS Live Score: ಅರ್ಧಶತಕ ಪೂರೈಸಿದ ಸ್ಟೀವ್ ಸ್ಮಿತ್
43 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಸ್ಟೀವ್ ಸ್ಮಿತ್.
ಕ್ರೀಸ್ನಲ್ಲಿ ಸ್ಟೀವ್ ಸ್ಮಿತ್ ಹಾಗೂ ಮಿಚೆಲ್ ಮಾರ್ಷ್.
AUS 187/1 (24.3)
IND vs AUS Live Score: 19 ರನ್ ನೀಡಿದ ಬುಮ್ರಾ
ಜಸ್ಪ್ರೀತ್ ಬುಮ್ರಾ ಓವರ್ನಲ್ಲಿ 19 ರನ್ ಚಚ್ಚಿದ ಮಿಚೆಲ್ ಮಾರ್ಷ್-ಸ್ಮಿತ್.
ಮೊದಲ ಎಸೆತದಲ್ಲಿ 1 ರನ್ ಕಲೆಹಾಕಿದ ಸ್ಮಿತ್.
2ನೇ ಎಸೆತದಲ್ಲಿ ಸಿಕ್ಸ್ ಸಿಡಿಸಿದ ಮಾರ್ಷ್.
3ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ.
ಉಳಿದ ಮೂರು ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಹ್ಯಾಟ್ರಿಕ್ ಬೌಂಡರಿ ಸಿಡಿಸಿದ ಮಿಚೆಲ್ ಮಾರ್ಷ್.
AUS 176/1 (23)
IND vs AUS Live Score: 20 ಓವರ್ಗಳು ಮುಕ್ತಾಯ
ಆಸ್ಟ್ರೇಲಿಯಾ ತಂಡದಿಂದ ಉತ್ತಮ ಬ್ಯಾಟಿಂಗ್ ಮುಂದುವರಿಕೆ.
56 ಎಸೆತಗಳಲ್ಲಿ 54 ರನ್ ಬಾರಿಸಿದ ಮಿಚೆಲ್ ಮಾರ್ಷ್.
34 ಎಸೆತಗಳಲ್ಲಿ 37 ರನ್ ಕಲೆಹಾಕಿರುವ ಸ್ಟೀವ್ ಸ್ಮಿತ್.
20 ಓವರ್ಗಳ ಮುಕ್ತಾಯದ ವೇಳೆ 1 ವಿಕೆಟ್ ಕಳೆದುಕೊಂಡು 146 ರನ್ ಕಲೆಹಾಕಿರುವ ಆಸ್ಟ್ರೇಲಿಯಾ.
AUS 146/1 (20)
IND vs AUS Live Score: ಆಸ್ಟ್ರೇಲಿಯಾ ತಂಡದ ಭರ್ಜರಿ ಬ್ಯಾಟಿಂಗ್
15 ಓವರ್ ಮುಕ್ತಾಯದ ವೇಳೆಗೆ 120 ರನ್ ಕಲೆಹಾಕಿದ ಆಸ್ಟ್ರೇಲಿಯಾ.
ಏಕೈಕ ವಿಕೆಟ್ ಪಡೆದ ಟೀಮ್ ಇಂಡಿಯಾ.
ಡೇವಿಡ್ ವಾರ್ನರ್ (56) ವಿಕೆಟ್ ಪಡೆದ ಪ್ರಸಿದ್ಧ್ ಕೃಷ್ಣ.
ಕ್ರೀಸ್ನಲ್ಲಿ ಸ್ಟೀವ್ ಸ್ಮಿತ್ ಹಾಗೂ ಮಿಚೆಲ್ ಮಾರ್ಷ್.
AUS 120/1 (15)
IND vs AUS Live Score: ಶತಕ ಪೂರೈಸಿದ ಆಸ್ಟ್ರೇಲಿಯಾ
ರವೀಂದ್ರ ಜಡೇಜಾ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಸ್ಟೀವ್ ಸ್ಮಿತ್.
ಈ ಫೋರ್ನೊಂದಿಗೆ ಶತಕ ಪೂರೈಸಿದ ಆಸ್ಟ್ರೇಲಿಯಾ ತಂಡ.
ಕ್ರೀಸ್ನಲ್ಲಿ ಸ್ಮಿತ್ ಹಾಗೂ ಮಿಚೆಲ್ ಮಾರ್ಷ್ ಬ್ಯಾಟಿಂಗ್.
AUS 103/1 (11.5)
IND vs AUS Live Score: ಟೀಮ್ ಇಂಡಿಯಾಗೆ ಮೊದಲ ಯಶಸ್ಸು
ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ವಿಕೆಟ್ ಕೀಪರ್ ಕೆಎಲ್ ರಾಹುಲ್ಗೆ ಕ್ಯಾಚ್ ನೀಡಿದ ಡೇವಿಡ್ ವಾರ್ನರ್.
ಭಾರತ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟ ಕನ್ನಡಿಗ ಪ್ರಸಿದ್ಧ್ ಕೃಷ್ಣ.
34 ಎಸೆತಗಳಲ್ಲಿ 56 ರನ್ ಬಾರಿಸಿ ನಿರ್ಗಮಿಸಿದ ಡೇವಿಡ್ ವಾರ್ನರ್.
AUS 78/1 (8.1)
IND vs AUS Live Score: ಡೇವಿಡ್ ವಾರ್ನರ್ ಸಿಡಿಲಬ್ಬರ
ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಲೆಗ್ ಸೈಡ್ನತ್ತ ಸಿಕ್ಸ್ ಸಿಡಿಸಿದ ಡೇವಿಡ್ ವಾರ್ನರ್.
ಈ ಸಿಕ್ಸ್ನೊಂದಿಗೆ ಕೇವಲ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವಾರ್ನರ್.
AUS 77/0 (7.5)
Karnataka Breaking News Live: ರಾಜಭವನಕ್ಕೆ ತೆರಳಿ ಶಾಸಕ ನಾರಾಯಣಸ್ವಾಮಿ ವಿರುದ್ಧ ಸಂಸದ ಎಸ್.ಮುನಿಸ್ವಾಮಿ ದೂರು
ಕೋಲಾರದಲ್ಲಿ ಜನತಾ ದರ್ಶನದ ವೇಳೆ ಸಂಸದ ಎಸ್. ಮುನಿಸ್ವಾಮಿ ಮತ್ತು ಶಾಸಕ ನಾರಾಯಣಸ್ವಾಮಿ ಮಧ್ಯೆ ಕಿತ್ತಾಟ ನಡೆದ ವಿಚಾರಕ್ಕೆ ಸಂಬಂಧಿಸಿ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಸಂಸದ ಮುನಿಸ್ವಾಮಿ ದೂರು ನೀಡಿದ್ದಾರೆ. ಶಾಸಕ ನಾರಾಯಣಸ್ವಾಮಿ ವಿರುದ್ಧ ದೂರು ಸಲ್ಲಿಸಿದ್ದಾರೆ. ಮುನಿಸ್ವಾಮಿಗೆ ಛಲವಾದಿ ನಾರಾಯಣಸ್ವಾಮಿ, ಕೇಶವ ಪ್ರಸಾದ್ ಸಾಥ್.
IND vs AUS Live Score: ಅರ್ಧಶತಕ ಪೂರೈಸಿದ ಆಸ್ಟ್ರೇಲಿಯಾ
ಪ್ರಸಿದ್ಧ ಕೃಷ್ಣ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಡೇವಿಡ್ ವಾರ್ನರ್.
ಈ ಫೋರ್ನೊಂದಿಗೆ ಅರ್ಧಶತಕ ಪೂರೈಸಿದ ಆಸ್ಟ್ರೇಲಿಯಾ.
AUS 50/0 (6.2)
ಕ್ರೀಸ್ನಲ್ಲಿ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ಬ್ಯಾಟಿಂಗ್.
Karnataka Breaking News Live: ಪ್ರಧಾನಿ ಇದರಲ್ಲಿ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ -ಹೆಚ್ಡಿಕೆ
ನಮ್ಮಲ್ಲಿ ನೀರು ಹಂಚಿಕೆ ಹೇಗೆ ಆಗಬೇಕು ಅಂತ ನಿರ್ಧಾರ ಆಗಬೇಕು. ಪ್ರಧಾನಮಂತ್ರಿ ಇದರಲ್ಲಿ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ ಎಂದು ಹೆಚ್ಡಿ ಕುಮಾರಸ್ವಾಮಿ ಹೇಳಿದರು. ಎರಡೂ ಪಕ್ಷಗಳು ಒಟ್ಟಾಗಿ ಸೇರಿವೆ. ನೀರು ಬಿಡದಂತೆ ಹೋರಾಟ ಮಾಡಬೇಕಿದೆ. ನಮ್ಮ ನಾಯಕ ಯಡಿಯೂರಪ್ಪ ನೇತೃತ್ವದಲ್ಲಿ ಹೋರಾಟ ಮಾಡಬೇಕಿದೆ. ನೀರಿನ ವಿಚಾರದಲ್ಲಿ ಹೇಗೆ ಹೋರಾಟ ಮಾಡಿದ್ದೇವೆ ಕಡತದಲ್ಲಿದೆ. ಅದರ ಮಾಹಿತಿ ಸಂಘ ಸಂಸ್ಥೆಗಳು ಮೊದಲು ಅರಿತುಕೊಳ್ಳಲಿ. ಸರ್ಕಾರ ನಮ್ಮ ನಾಡಿನ ಜನತೆ ರಕ್ಷಣೆಗೆ ಬೆಂಬಲ ಕೊಡಬೇಕು. ನಿಮ್ಮಷ್ಟೇ ಹಕ್ಕು ನಮಗೂ ಇದೆ. ಕಾವೇರಿ, ಮಹದಾಯಿ, ಹೇಮಾವತಿ ರಕ್ಷಣೆಗೆ ನಾವು ಬದ್ಧರಾಗಿರಬೇಕು ಎಂದರು.
IND vs AUS Live Score: ಮಾರ್ಷ್ ಅಬ್ಬರ ಶುರು
ಜಸ್ಪ್ರೀತ್ ಬುಮ್ರಾ ಎಸೆದ 3ನೇ ಓವರ್ನಲ್ಲಿ 14 ರನ್ ಚಚ್ಚಿದ ಮಿಚೆಲ್ ಮಾರ್ಷ್.
ಮೊದಲ ಎಸೆತದಲ್ಲಿ ಫೋರ್.
ನಾಲ್ಕನೇ ಎಸೆತದಲ್ಲಿ ಸಿಕ್ಸ್.
ಐದನೇ ಎಸೆತದಲ್ಲಿ ಮತ್ತೊಂದು ಫೋರ್.
ಕ್ರೀಸ್ನಲ್ಲಿ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ಬ್ಯಾಟಿಂಗ್
AUS 21/0 (3)
IND vs AUS Live Score: ಮೊದಲ ಫೋರ್ ಬಾರಿಸಿದ ಮಾರ್ಷ್
ಜಸ್ಪ್ರೀತ್ ಬುಮ್ರಾ ಎಸೆದ ಮೊದಲ ಓವರ್ನ 5ನೇ ಎಸೆತದಲ್ಲಿ ಆಕರ್ಷಕ ಕವರ್ ಡ್ರೈವ್ ಮೂಲಕ ಮೊದಲ ಫೋರ್ ಬಾರಿಸಿದ ಮಿಚೆಲ್ ಮಾರ್ಷ್.
ಕ್ರೀಸ್ನಲ್ಲಿ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್ ಬ್ಯಾಟಿಂಗ್.
AUS 5/0 (1)
Karnataka Breaking News Live: ಹಾಡುಹಗಲೇ ಮಾರಕಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ
ಹಾಡುಹಗಲೇ ಮಾರಕಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ ಮಾಡಲಾಗಿದೆ. ಹುಬ್ಬಳ್ಳಿಯ ಸಿಲ್ವರ್ ಟೌನ್‌ನಲ್ಲಿ ಮೌಲಾಲಿ(24) ಎಂಬ ಯುವಕನನ್ನು ಕೊಲೆ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಮರಗಡಿ ಗ್ರಾಮದ ನಿವಾಸಿ ಮೌಲಾಲಿ ಹುಬ್ಬಳ್ಳಿಗೆ ಗಾರೆ ಕೆಲಸ ಮಾಡಲು ಬಂದಿದ್ದ. ನಿರ್ಮಾಣ ಹಂತದಲ್ಲಿರುವ ಮನೆಯಲ್ಲಿಯೇ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
IND vs AUS Live Score: ಆಸ್ಟ್ರೇಲಿಯಾ ಇನಿಂಗ್ಸ್ ಆರಂಭ
ಭಾರತದ ಪರ ಮೊದಲ ಓವರ್: ಜಸ್ಪ್ರೀತ್ ಬುಮ್ರಾ.
ಆಸ್ಟ್ರೇಲಿಯಾ ಆರಂಭಿಕರು: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್.
ಆಸ್ಟ್ರೇಲಿಯಾ ಬ್ಯಾಟಿಂಗ್ ಲೈನಪ್: ಮಿಚೆಲ್ ಮಾರ್ಷ್, ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್, ಮಾರ್ನಸ್ ಲಾಬುಶೇನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೋನ್ ಗ್ರೀನ್, ಪ್ಯಾಟ್ ಕಮ್ಮಿನ್ಸ್ (ನಾಯಕ).
IND vs AUS Live Score: ಭಾರತದ ಆಡುವ ಬಳಗ
A look at our Playing XI for the final ODI 👌👌
Follow the Match ▶️ https://t.co/H0AW9UXI5Y#INDvAUS | @IDFCFIRSTBank pic.twitter.com/KpYibJpfSo
— BCCI (@BCCI) September 27, 2023
ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
Karnataka Breaking News Live: ಸೆ.29ರಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಕರ್ನಾಟಕ ಬಂದ್ -ವಾಟಾಳ್ ನಾಗರಾಜ್
ಸೆ.29ರಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಕರ್ನಾಟಕ ಬಂದ್ ಆಗಲಿದೆ ಎಂದು ಬೆಂಗಳೂರಿನಲ್ಲಿ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದಾರೆ. ಬೆಳಗ್ಗೆ 10ರಿಂದ ಟೌನ್ ಹಾಲ್ನಲ್ಲಿ ಫ್ರೀಡಂ ಪಾರ್ಕ್ ವರೆಗೆ ರ್ಯಾಲಿ ನಡೆಯಲಿದೆ. ಅಂದು ಟೋಲ್, ರೈಲು, ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣ ಬಂದ್ ಆಗಲಿದೆ. ಬಂದ್ 100% ಯಶಸ್ವಿಯಾಗಲಿದೆ. ರಾಜ್ಯಾದ್ಯಂತ ಎಲ್ಲಾ ಸಂಘಟನೆಗಳಿಂದ ಬಂದ್ಗೆ ಬೆಂಬಲ ಸಿಗ್ತಿದೆ. ಸಿದ್ದರಾಮಯ್ಯನವ್ರು ಮಾತ್ರ ಬಾಯಿ ಬಿಡ್ತಿಲ್ಲ. ಚಳುವಳಿಗೆ ವಿರೋಧವಿಲ್ಲ ಶಾಂತಿಯುತವಾಗಿ ಚಳುವಳಿ ಮಾಡಿ ಅಂತಿದ್ದಾರೆ ಎಂದರು.
IND vs AUS Live Score: ಆಸ್ಟ್ರೇಲಿಯಾ ಪ್ಲೇಯಿಂಗ್ ಇಲೆವೆನ್ ಹೀಗಿದೆ
ಆಸ್ಟ್ರೇಲಿಯಾ (ಪ್ಲೇಯಿಂಗ್ XI): ಮಿಚೆಲ್ ಮಾರ್ಷ್, ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್, ಮಾರ್ನಸ್ ಲಾಬುಶೇನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೋನ್ ಗ್ರೀನ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ತನ್ವೀರ್ ಸಂಘ, ಜೋಶ್ ಹ್ಯಾಝಲ್‌ವುಡ್.
IND vs AUS Live Score: ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಹೀಗಿದೆ
ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
IND vs AUS Live Score: ಟಾಸ್ ಗೆದ್ದ ಆಸ್ಟ್ರೇಲಿಯಾ
ಭಾರತ-ಆಸ್ಟ್ರೇಲಿಯಾ ನಡುವಣ 3ನೇ ಏಕದಿನ ಪಂದ್ಯ ಶುರುವಾಗಿದೆ. ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
Published On - Sep 27,2023 1:02 PM